ಅಮೆಜಾನ್ ಇಂಡಿಯಾದಲ್ಲಿ ಯುಪಿಐ ಮೂಲಕ ಹಣ ಪಾವತಿಸುವುದು ಹೇಗೆ?

By Tejaswini P G
|

ಇ-ಕಾಮರ್ಸ್ ದಿಗ್ಗಜರಾದ ಅಮೇಜಾನ್ ತಮ್ಮ ಆಪ್ ನಲ್ಲಿ ಯುನಿಫೈಡ್ ಪೇಯ್ಮೆಂಟ್ ಇಂಟರ್ಫೇಸ್ (ಯುಪಿಐ) ಅನ್ನು ಪೇಯ್ಮೆಂಟ್ ಮೋಡ್ ಗಳ ಪೈಕಿಯಲ್ಲಿ ಒಂದಾಗಿ ಪ್ರಸ್ತುತಪಡಿಸಿದೆ. ಪಾವತಿಯ ಈ ವಿಧಾನ ಕೇವಲ ಮೊಬೈಲ್ ಆಪ್ ನಲ್ಲಿ ಮಾತ್ರ ಲಭ್ಯವಿದ್ದು ಡೆಸ್ಕ್ಟಾಪ್ ಸೈಟ್ಗಳಲ್ಲಿ ಲಭ್ಯವಿಲ್ಲ. ನೀವು ಈ ಇ-ಕಾಮರ್ಸ್ ಪ್ಲ್ಯಾಟ್ಫಾರ್ಮ್ನಲ್ಲಿ ನಡೆಸುವ ವ್ಯವಹಾರದ ಮೊತ್ತ ರೂ 10000 ಅಥವಾ ಅದಕ್ಕಿಂತ ಕಡಿಮೆ ಇದ್ದಲ್ಲಿ ನೀವು ಯುಪಿಐ ಮೂಲಕ ಹಣ ಪಾವತಿಸಬಹುದಾಗಿದೆ. ಈ ಹೆಜ್ಜೆಯೊಂದಿಗೆ ಈ ವಿಚಾರದಲ್ಲಿ ಅಮೇಜಾನ್ ಇಂಡಿಯಾ ತನ್ನ ಪ್ರತಿಸ್ಪರ್ಧಿಗಳಾದ ಫ್ಲಿಪ್ಕಾರ್ಟ್ ಮತ್ತು ಪೇಟಿಯಂ ನೊಂದಿಗೆ ಜೊತೆಯಾಗಿದೆ.

ಅಮೆಜಾನ್ ಇಂಡಿಯಾದಲ್ಲಿ ಯುಪಿಐ ಮೂಲಕ ಹಣ ಪಾವತಿಸುವುದು ಹೇಗೆ?

ಇನ್ನು ಮುಂದೆ ಅಮೇಜಾನ್ ಆಪ್ ನಲ್ಲಿ ಖರೀದಿ ನಡೆಸುವ ಗ್ರಾಹಕರಿಗೆ ಹಣ ಪಾವತಿಸಲು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು ನೆಟ್ ಬ್ಯಾಂಕಿಂಗ್ ಮೊದಲಾದ ಪಾವತಿಯ ವಿಧಾನಗಳೊಂದಿಗೆ ತಮ್ಮ ಯುಪಿಐ ಐಡಿ ಮೂಲಕ ಹಣ ಪಾವತಿಸುವ ಆಯ್ಕೆಯೂ ಲಭ್ಯವಾಗಲಿದೆ. ಸಧ್ಯಕ್ಕೆ ಈ ಆಯ್ಕೆ ಆಂಡ್ರಾಯ್ಡ್ ನಲ್ಲಿ ಮಾತ್ರ ಲಭ್ಯವಿದ್ದು, ಭವಿಷ್ಯದಲ್ಲಿ iOS ನಲ್ಲೂ ಈ ಆಯ್ಕೆ ಲಭ್ಯವಾಗಲಿದೆ.

ಇನ್ನು ರಿಫಂಡ್ ಅಥವಾ ಮರುಪಾವತಿಯ ಬಗ್ಗೆ ಹೇಳುವುದಾದರೆ, ಈ ಪ್ರಕ್ರಿಯೆ ಕಾರ್ಡ್ ಮೂಲಕ ಹಣ ಪಾವತಿಸಿದ್ದಕ್ಕೆ ಸಮಾನವಾಗಿರುತ್ತದೆ. ಇಲ್ಲಿಯೂ ಕೂಡ ಮರುಪಾವತಿಯ ಮೊತ್ತ ಯುಪಿಐ ಐಡಿ ಯೊಂದಿಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಯುನಿಫೈಡ್ ಪೇಯ್ಮೆಂಟ್ ಇಂಟರ್ಫೇಸ್(ಯುಪಿಐ) ಒಂದು ಹಣ ಪಾವತಿಯ ಆಯ್ಕೆಯಾಗಿದ್ದು, ಹಣ ಪಡೆಯುವವರ ಬ್ಯಾಂಕ್ ನ ಮಾಹಿತಿಯನ್ನು ನೀಡದೇ ಎರಡು ಬ್ಯಾಂಕ್ ಖಾತೆಗಳ ಮಧ್ಯೆ ಹಣ ವರ್ಗಾವಣೆ ನಡೆಸಲು ಅನುವು ಮಾಡಿಕೊಡುತ್ತದೆ.

ಅಮೇಜಾನ್ ಇಂಡಿಯಾ ದಲ್ಲಿ ಯುಪಿಐ ಮೂಲಕ ಹಣ ಪಾವತಿಸುವುದು ಹೇಗೆ?

ಹಂತ 1: ನಿಮ್ಮ ಸಾಧನದಲ್ಲಿ ಅಮೇಜಾನ್ ಇಂಡಿಯಾದ ಆಪ್ ನ ಇತ್ತೀಚಿನ ಆವೃತ್ತಿ ಇದೆಯೆಂದು ಖಚಿತಪಡಿಸಿಕೊಳ್ಳಿ. ಖಚಿತಪಡಿಸಿಕೊಳ್ಳಲು ಪ್ಲೇ ಸ್ಟೋರ್ ಗೆ ಹೋಗಿ ಅಮೇಜಾನ್ ಎಂದು ಹುಡುಕಿ. ಅಪ್ಡೇಟ್ ಮಾಡುವ ಆಯ್ಕೆ ಇದ್ದರೆ, ಆಪ್ ಅನ್ನು ಅಪ್ಡೇಟ್ ಮಾಡಿ.

ಹಂತ 2: ರೂ 10000 ಅಥವಾ ಅದಕ್ಕಿಂತ ಕಡಿಮೆ ಬೆಲೆಯ ವಸ್ತುವನ್ನು ಆಯ್ಕೆ ಮಾಡಿ, ಅದನ್ನು ಖರೀದಿಸುವ ಆಯ್ಕೆ ಮೇಲೆ ಕ್ಲಿಕ್ ಮಾಡಿ

ಹಂತ 3: ಚೆಕ್-ಔಟ್ ಸ್ಕ್ರೀನ್ ನಲ್ಲಿ ನೀವು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮತ್ತು ಯುಪಿಐ ಮೊದಲಾದ ಪಾವತಿಯ ವಿಧಾನಗಳನ್ನು ಕಾಣಬಹುದು.

ಹಂತ 4: ನಿಮ್ಮ ಪಾವತಿಯ ವಿಧಾನವಾಗಿ ಯುಪಿಐ ಅನ್ನು ಆಯ್ಕೆ ಮಾಡಿ

ಹಂತ 5: ನೀವು ಯುಪಿಐ ವಿಧಾನವನ್ನು ಆಯ್ಕೆ ಮಾಡಿದ ನಂತರ , ನಿಮ್ಮ ಯುಪಿಐ ಐಡಿ ನಮೂದಿಸುವಂತೆ ಕೇಳಲಾಗುತ್ತದೆ.

ಹಂತ 6: ನಿಮ್ಮ ಯುಪಿಐ ಐಡಿ ಯನ್ನು ದೃಢೀಕರಿಸಿದ ನಂತರ, ಯುಪಿಐ ಗೆ ಸಂಬಂಧಿಸಿದ ಮೊಬೈಲ್ ಪಾವತಿಯ ಆಪ್ಗಳಾದ BHIM ನಂತಹ ಆಪ್ ಗೆ ನಿಮ್ಮನ್ನು ಮರುನಿರ್ದೇಶಿಸಲಾಗುತ್ತದೆ.

ಹಂತ 7: ಹಣ ಪಾವತಿಸಿದ ನಂತರ ನೀವು ನಿಮ್ಮ ಆರ್ಡರ್ ನ ಮಾಹಿತಿಯನ್ನು ನಿಮ್ಮ ಮೊಬೈಲ್ ಆಪ್ ಅಥವಾ ಬ್ರೌಸರ್ನಲ್ಲಿ ನೋಡಬಹುದು. ಅಲ್ಲದೆ, ಆರ್ಡರ್ ಅನ್ನು ಯಶಸ್ವಿಯಾಗಿ ಪೂರ್ತಿಗೊಳಿಸಲು 10 ನಿಮಿಷಗಳೊಳಗಾಗಿ ಹಣ ಪಾವತಿಸಬೇಕು ಎನ್ನುವದನ್ನು ಸದಾ ನೆನಪಿನಲ್ಲಿಡಿ.

ಟೆಲಿಕಾಂ ಮಾರುಕಟ್ಟೆಯ ಟಾಪ್ 10 ಆಫರ್ ಗಳು..!ಟೆಲಿಕಾಂ ಮಾರುಕಟ್ಟೆಯ ಟಾಪ್ 10 ಆಫರ್ ಗಳು..!

Best Mobiles in India

English summary
Amazon has introduced Unified Payment Interface (UPI) as a mode of payment through its app. Check out here on how to pay using UPI on Amazon India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X