ಕಂಪ್ಯೂಟರ್‌ ಗೇಮ್‌ಗಳನ್ನು ಸ್ಮಾರ್ಟ್‌ಫೋನ್, ಟಿವಿಗಳಲ್ಲೂ ಆಡಬಹುದು..! ಹೇಗೆ ಗೊತ್ತಾ..?

|

ನೀವು ನಿಮ್ಮ ಪಿಸಿಯನ್ನು ಗೇಮಿಂಗ್ ಗಾಗಿ ಸೆಟ್ ಅಪ್ ಮಾಡುವುದರಲ್ಲಿ ಹೆಚ್ಚು ಉದಾಸೀನರಾಗಿದ್ದೀರಾ? ಅಥವಾ ಪಿಸಿಯಲ್ಲಿ ಇನ್ಸ್ಟಾಲ್ ಮಾಡಿಕೊಂಡರೆ ಮಲಗಿಕೊಂಡು ಸ್ಮಾರ್ಟ್ ಫೋನ್, ಟಿವಿ, ಟ್ಯಾಬ್ ಗಳಲ್ಲಿ ಆಡಿದಂತೆ ಆಡಲು ಸಾಧ್ಯವಾಗುವುದಿಲ್ಲ ಎಂದು ಭಾವಿಸುತ್ತಿದ್ದೀರಾ? ಅಥವಾ ನಿಮ್ಮ ನೆಚ್ಚಿನ ಆಟಕ್ಕಾಗಿ ನೀವು ಲ್ಯಾಪ್ ಟಾಪ್/ ಡೆಸ್ಕ್ ಟಾಪ್ ನ್ನು ಇತರೆಡೆಗೆ ಹಿಡಿದುಕೊಂಡು ಹೋಗಲು ಇಚ್ಛಿಸುತ್ತಿಲ್ಲವೇ?

ಆದರೆ ಇದನ್ನು ಸಾಧಿಸುವುದಕ್ಕೆ ಒಂದು ಮಾರ್ಗವಿದೆ. ಇದು ನಿಮ್ಮ ಚಲನಚಿತ್ರಗಳು, ಹಾಡುಗಳು ಮತ್ತು ವೀಡಿಯೋಗಳಂತೆಯೇ ಕೆಲಸ ಮಾಡುತ್ತದೆ. ಇನ್ನು ಮುಂದೆ ನಿಮ್ಮ ಪಿಸಿ ಗೇಮ್ಸ್ ಗಳನ್ನು ಆಂಡ್ರಾಯ್ಡ್ ನಲ್ಲಿ ಸ್ಟ್ರೀಮ್ ಮಾಡಲು ಸ್ಟೀಮ್ ಲಿಂಕ್ ಆಪ್ ನ್ನು ಬಳಕೆ ಮಾಡಬಹುದು.

ಕಂಪ್ಯೂಟರ್‌ ಗೇಮ್‌ಗಳನ್ನು ಸ್ಮಾರ್ಟ್‌ಫೋನ್, ಟಿವಿಗಳಲ್ಲೂ ಆಡಬಹುದು..!

ಸ್ಟೀಮ್ ಲಿಂಕ್ ಸ್ಟೀಮ್ ನಿಂದ ಡೆವಲಪ್ ಆಗಿರುವ ಅಧಿಕೃತ ಸ್ಟ್ರೀಮಿಂಗ್ ಆಪ್ ಆಗಿದ್ದು, ಇದು ಬಳಕೆದಾರರಿಗೆ ತಮ್ಮ ಪಿಸಿಯ ಸ್ಟೀಮ್ ಲೈಬ್ರರಿಯಲ್ಲಿರುವ ಗೇಮ್ಸ್ ಗಳನ್ನು ಆಂಡ್ರಾಯ್ಡ್ ಡಿವೈಸ್ ಗೆ ಸ್ಟ್ರೀಮ್ ಮಾಡಲು ನೆರವು ನೀಡುತ್ತಿದೆ.( ಆದರೆ ಐಓಎಸ್ ನಲ್ಲಿ ಲಭ್ಯವಾಗುವುದಿಲ್ಲ). ಈ ಆಪ್ ನ್ನು ಸೆಟ್ ಅಪ್ ಮಾಡುವುದು ಹೇಗೆ ಮತ್ತು ಬಳಕೆ ಮಾಡುವುದು ಹೇಗೆ ಎಂಬ ಸ್ಟೆಪ್-ಬೈ-ಸ್ಟೆಪ್ ಹಂತಗಳನ್ನು ನಾವಿಲ್ಲಿ ವಿವರಿಸಿದ್ದೇವೆ.

ಸ್ಟೀಮ್ ಲಿಂಕ್ ನ್ನು ನಿಮ್ಮ ಪಿಸಿ ಮತ್ತು ಆಂಡ್ರಾಯ್ಡ್ ಡಿವೈಸ್ ಗಳಲ್ಲಿ ಸೆಟ್ ಮಾಡುವುದು ಹೇಗೆ?

1.

1.

ಆಪ್ ನ್ನು ನಿಮ್ಮ ಆಂಡ್ರಾಯ್ಡ್ ಡಿವೈಸ್ ನಲ್ಲಿ ಡೌನ್ ಲೋಡ್ ಮಾಡಿ ಮತ್ತು ಇನ್ಸ್ಟಾಲ್ ಮಾಡಿ.

2.

2.

ನಿಮ್ಮ ಪಿಸಿಯಲ್ಲಿ ಸ್ಟೀಮ್ ಆಪ್ ನ್ನು ತೆರೆಯಿರಿ ಮತ್ತು ಸ್ಟೀಮ್ ಐಡಿ ಮತ್ತು ಪಾಸ್ ವರ್ಡ್ ಬಳಸಿ ಲಾಗಿನ್ ಆಗಿ. (ನಿಮ್ಮ ಪಿಸಿಯಲ್ಲಿ ನೀವು ಈಗಾಗಲೇ ಗೇಮ್ ಸ್ಟೀಮ್ ನ್ನು ಬಳಸುತ್ತಿದ್ದೀರಿ ಎಂದು ಭಾವಿಸುತ್ತೇವೆ.)

3.

3.

‘Preference' ವಿಭಾಗಕ್ಕೆ ತೆರಳಿ ಮತ್ತು ‘In-Home Streaming' ಆಯ್ಕೆಯನ್ನು ಸೆಲೆಕ್ಟ್ ಮಾಡಿ.

4. ಈಗ , ‘Enable Streaming' ಚೆಕ್ ಬಾಕ್ಸ್ ನ್ನು ಚೆಕ್ ಮಾಡಿ.

5.

5.

ಒಂದು ವೇಳೆ ನಿಮ್ಮ ಪಿಸಿಯಲ್ಲಿ Nvidia ಗ್ರಾಫಿಕ್ಸ್ ಕಾರ್ಡ್ ಇದ್ದಲ್ಲಿ, ಇದು ನಿಮಗೆ ‘Advanced Host Options' ನ್ನು ಕ್ಲಿಕ್ ಮಾಡಲು ಸಜೆಸ್ಟ್ ಮಾಡುತ್ತದೆ ಮತ್ತು ‘Use NVFBC capture on NVIDIA GPU' ಆಯ್ಕೆಯನ್ನು ಸೆಲೆಕ್ಟ್ ಮಾಡಿ. (ಇದು ನಿಮಗೆ ಸ್ಟ್ರೀಮಿಂಗ್ ನಲ್ಲಿ ಬೆಸ್ಟ್ ಫ್ರೇಮ್ ರೇಟ್ ನೀಡಲು ಸಹಕರಿಸುತ್ತದೆ. )


6.ಈಗ ನೀವು ಸ್ಟೀಮ್ ಲಿಂಕ್ ಆಪ್ ನ್ನು ಸೆಟ್ ಅಪ್ ಮಾಡಬೇಕು.

7.

7.

ನಿಮ್ಮ ಪಿಸಿ ಮತ್ತು ಆಂಡ್ರಾಯ್ಡ್ ಡಿವೈಸ್ ಎರಡೂ ಕೂಡ ಒಂದೇ ವೈ-ಫೈ ನೆಟ್ ವರ್ಕ್ ಗೆ ಕನೆಕ್ಟ್ ಆಗಿದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.

8. ಆಪ್ ನ್ನು ತೆರೆಯಿರಿ. ಪ್ರಾಥಮಿಕವಾಗಿ ಆಪ್ ನಲ್ಲಿ ಕೇಳುವ ಎಲ್ಲಾ ಪಾಪ್ ಅಪ್ ಗಳನ್ನು ಕಂಪ್ಲೀಟ್ ಮಾಡಿ.

9.

9.

ಈಗ ಆಪ್ ನಿಮಗೆ ಕಂಟ್ರೋಲರ್ ನ್ನು ಪೇರ್ ಮಾಡುವಂತೆ ಕೇಳುತ್ತದೆ. ಯಾವಾಗಲೂ ನೀವು ಇದಕ್ಕಾಗಿ ಟಚ್ ಕಂಟ್ರೋಲ್ ನ್ನೇ ಬಳಸುತ್ತಿದ್ದರೂ ಕೂಡ ಪಿಸಿಯಲ್ಲಿ ಗೇಮೇ ಪ್ಲೇ ಮಾಡುವಾಗ ಟಚ್ ಕಂಟ್ರೋಲ್ ಗಳನ್ನು ಬಳಸುವುದು ಅಸಾಧ್ಯವಾಗುತ್ತದೆ.

10.ಸ್ಟೀಮ್ ಲಿಂಕ್ ಸ್ವಯಂಚಾಲಿತವಾಗಿ ನಿಮ್ಮ ಪಿಸಿಯನ್ನು ಸ್ಕ್ಯಾನ್ ಮಾಡುತ್ತದೆ ಮತ್ತು ಪ್ರೊಸೆಸ್ ನ್ನು ಪೂರ್ಣಗೊಳಿಸಲು ಹೆಸರು ಮತ್ತು ಸ್ಪೆಷಲ್ ಪಿನ್ ನ್ನು ಟ್ಯಾಪ್ ಮಾಡಿ.

11.

11.

ಒಮ್ಮೆ ಮುಗಿದ ನಂತರ, ಆಪ್ ನೆಟ್ ವರ್ಕ್ ಟೆಸ್ಟ್ ನ್ನು ರನ್ ಮಾಡುತ್ತದೆ. ಅಲ್ಲಿ ಕನೆಕ್ಷನ್ ಸ್ಪೀಡ್ ಮತ್ತು ಸ್ಟೀಮ್ ಲೆಸ್ ಸ್ಟ್ರೀಮಿಂಗ್ ಗಾಗಿ ಇತರೆ ಅಗತ್ಯತೆಗಳ ಬಗ್ಗೆ ಪರೀಕ್ಷೆ ಮಾಡಲಾಗುತ್ತದೆ. ಸ್ಟೀಮ್ 5GHz ನ ವೈ-ಫೈ ಕನೆಕ್ಷನ್ ನ್ನು ನಿರೀಕ್ಷಿಸುತ್ತದೆ. ಒಂದು ವೇಳೆ ನೀವು 2.4GHz ನಲ್ಲಿ ಆಪ್ ರನ್ ಮಾಡಲು ಇಚ್ಛಿಸಿದರೆ ನಿಮಗೆ ಎರರ್ ಮೆಸೇಜ್ ಕಾಣಿಸುವ ಸಾಧ್ಯತೆ ಇದೆ.

12.

12.

ನೀವು ನಿಮ್ಮ ಸ್ಟ್ರೀಮ್ ಕ್ವಾಲಿಟಿಯನ್ನು ಕೂಡ ಸೆಟ್ಟಿಂಗ್ಸ್ ಆಯ್ಕೆಯನ್ನು ಟ್ಯಾಪ್ ಮಾಡುವ ಮೂಲಕ ಕಂಟ್ರೋಲ್ ಮಾಡಬಹುದು.

13.ಒಮ್ಮೆ ಪೂರ್ತಿ ಮುಗಿದ ನಂತರ, ‘Start Playing' ಆಯ್ಕೆಯನ್ನು ಹಿಟ್ ಮಾಡಿ. ಈ ಬಟನ್ ಒತ್ತುವ ಮೂಲಕ ನೀವು ನಿಮ್ಮ ನೇರವಾಗಿ ಪಿಸಿಯಲ್ಲಿ ನೇರವಾಗಿ ನೀವು ಬಯಸಿದ ಯಾವುದೇ ಆಂಡ್ರಾಯ್ಡ್ ಡಿವೈಸ್ ನ ಗೇಮ್ ನ್ನು ಎಂಜಾಯ್ ಮಾಡಲು ಸಾಧ್ಯವಾಗುತ್ತದೆ.

ಸೂಚನೆ

ಸೂಚನೆ

ನೀವು ಈ ಆಪ್ ನ್ನು ರಿಮೋಟ್ ಡೆಸ್ಕ್ ಟಾಪ್ ಆಪ್ ಆಗಿ ಕೂಡ ಬಳಕೆ ಮಾಡಬಹುದು. ಅದಕ್ಕಾಗಿ ನೀವು ಸೆಟ್ಟಿಂಗ್ಸ್ ನಲ್ಲಿರುವ‘Advance' ಆಯ್ಕೆಯನ್ನು ಬಳಸಬೇಕು ಮತ್ತು ನಾನ್-ಸ್ಟ್ರೀಮ್ ಗೇಮ್ಸ್ ಗಳನ್ನು ನಿಮ್ಮ ಆಂಡ್ರಾಯ್ಡ್ ಡಿವೈಸ್ ಗಳಲ್ಲಿ ಸ್ಟ್ರೀಮ್ ಮಾಡಬೇಕು. ಮೂನ್ ಲೈಟ್, ಕಿನೋಕನ್ಸೋಲ್, ಕೈನಿ ಇತ್ಯಾದಿ ಹಲವಾರು ನಿಮ್ಮ ಪಿಸಿ ಗೇಮ್ಸ್ ಸ್ಟ್ರೀಮ್ ಮಾಡುವ ಆಯ್ಕೆಗಳಿವೆ.

Best Mobiles in India

English summary
How to play PC games on your Android smartphones, tablets and Android-powered televisions. To know more this visit Kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X