Subscribe to Gizbot

ಕಂಪ್ಯೂಟರ್‌ನಲ್ಲಿ ಬಫರಿಂಗ್ ಆಗದೇ ಯೂಟ್ಯೂಬ್ ವೀಡಿಯೊ ನೋಡುವುದು ಹೇಗೆ?

Written By:

ಮನರಂಜನೆಗಾಗಿ ಅಥವಾ ಟೈಪ್‌ಪಾಸ್‌ಗಾಗಿ ಯೂಟ್ಯೂಬ್‌ನಲ್ಲಿ ವೀಡಿಯೊ ನೋಡುವುದೇ ಎಲ್ಲರಿಗೂ ಇಷ್ಟ. ಆದ್ರೆ ಬಹುಸಂಖ್ಯಾತರಿಗೆ ಯೂಟ್ಯೂಬ್‌ನಲ್ಲಿ ವೀಡಿಯೊ ನೋಡುವಾಗ ಕಾಡುವ ಸಮಸ್ಯೆ ಎಂದರೆ ಅದು ವೀಡಿಯೊ ಬಫರಿಂಗ್‌.

ವೀಡಿಯೊ ಹೆಚ್ಚು ಬಫರಿಂಗ್‌ ಆದಂತೆಲ್ಲಾ ಇತ್ತ ಮೊಬೈಲ್‌ ಅಥವಾ ಕಂಪ್ಯೂಟರ್‌ ಇಂಟರ್ನೆಟ್ ಡಾಟಾ ವೇಸ್ಟ್ ಆಗುತ್ತದೆ ಅಲ್ಲದೇ ಸಮಯವು ಹಾಳು. ವೈಫೈನಲ್ಲಿಯೂ ಸಹ ಇದೇ ಸಮಸ್ಯೆ ಹಲವರಿಗೆ ಉಂಟಾಗುತ್ತದೆ. ಕೆಲವೊಮ್ಮೆ ವೀಡಿಯೊ ಟೈಮ್‌ಗಿಂತ ಬಫರಿಂಗ್ ಆಗುವ ಸಮಯವೇ ಹೆಚ್ಚು. ಆದ್ದರಿಂದ ಇಂದಿನ ಲೇಖನದಲ್ಲಿ ಯೂಟ್ಯೂಬ್ ನೋಡುಗರು ವೀಡಿಯೊ ಬಫರಿಂಗ್‌ ಆಗದೇ ವೇಗವಾಗಿ ವೀಡಿಯೊ(Videos) ಪ್ಲೇ ಮಾಡಿ ನೋಡಲು ಕೆಲವು ಟ್ರಿಕ್ಸ್‌ಗಳನ್ನು ಪರಿಚಯಿಸುತ್ತಿದ್ದೇವೆ. ಅದು ಹೇಗೆ ಎಂದು ತಿಳಿಯಲು ಲೇಖನ ಓದಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬಫರ್‌ ಆಗದೇ ವೀಡಿಯೋ ವೇಗ ಹೇಗೆ?

ಬಫರ್‌ ಆಗದೇ ವೀಡಿಯೋ ವೇಗ ಹೇಗೆ?

ಪ್ರಥಮವಾಗಿ ನೀವು ನಿಮ್ಮ ಗೂಗಲ್‌ ಕ್ರೋಮ ಅಥವಾ ಮೊಜಿಲ್ಲಾ ಫೈಯರ್‌ಫಾಕ್ಸ್‌ಗೆ "SmartVideo for YouTube" ವಿಸ್ತರಣೆಯನ್ನು ಡೌನ್‌ಲೊಡ್‌ ಮಾಡಿ ಇನ್‌ಸ್ಟಾಲ್‌ ಮಾಡಿ. ಇನ್‌ಸಾಲ್‌ ಮಾಡಲು ಲಿಂಕ್‌ ಅನ್ನು ಕೊನೆಯ ಸ್ಲೈಡರ್‌ನಲ್ಲಿ ನೀಡಲಾಗಿದೆ. ಅದನ್ನು ಕ್ಲಿಕ್‌ ಮಾಡಿದಾಗ ನಿಮಗೆ ಚಿತ್ರದಲ್ಲಿರುವಂತೆ ವೆಬ್‌ ಪೇಜ್‌ ಓಪನ್ ಆಗುತ್ತದೆ. ವೆಬ್‌ಪೇಜ್‌ನಲ್ಲಿ ಹಸಿರು ಬಟನ್‌ನಲ್ಲಿ ಕಾಣುವ ADDED TO CHROME ಎಂಬಲ್ಲಿ ಕ್ಲಿಕ್‌ ಮಾಡಿ.

ಗ್ಲೋಬಲ್ ಪ್ರಿಫರೇಷನ್‌ ಆಪ್ಶನ್‌ ಮೇಲೆ ಕ್ಲಿಕ್‌ ಮಾಡಿ

ಗ್ಲೋಬಲ್ ಪ್ರಿಫರೇಷನ್‌ ಆಪ್ಶನ್‌ ಮೇಲೆ ಕ್ಲಿಕ್‌ ಮಾಡಿ

"SmartVideo for YouTube" ಇನ್‌ಸ್ಟಾಲ್‌ ಮಾಡಿದ ನಂತರ ಯೂಟ್ಯೂಬ್‌ನಲ್ಲಿ ಯಾವುದಾದರೂ ಒಂದು ವೀಡಿಯೋವನ್ನು ಪ್ಲೇ ಮಾಡಿ. ವೀಡಿಯೋ ಪ್ಲೇ ಮಾಡಿದ ನಂತರ ವೀಡಿಯೋ ಕೆಳಗೆ ಕೆಲವು ಹೊಸ ಆಯ್ಕೆಗಳು ಕಾಣುತ್ತದೆ. ಮೌಸ್‌ ಅನ್ನು ನಿಮ್ಮ ಯೂಟ್ಯೂಬ್‌ ವೀಡಿಯೋ ಮೇಲಿಂದ ಕೆಳಗೆ ಇಳಿಸಿದಾಗ ಆಯ್ಕೆಗಳ ಬಾಕ್ಸ್‌ ಬರುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯೂಟ್ಯೂಬ್ ಬಫರ್ ವೀಡಿಯೊ ಫೋರ್ಸ್‌ ಮಾಡುತ್ತದೆ

ಯೂಟ್ಯೂಬ್ ಬಫರ್ ವೀಡಿಯೊ ಫೋರ್ಸ್‌ ಮಾಡುತ್ತದೆ

ಈ ಹಂತದಲ್ಲಿ ಬಲಭಾಗದಲ್ಲಿ Global Prefereces ಎಂಬಲ್ಲಿ ಕ್ಲಿಕ್ ಮಾಡಿ. ನಂತರ Smart Buffer ಎಂಬ ಆಯ್ಕೆ ಕಾಣುತ್ತದೆ. ಅದನ್ನು ರೈಟ್‌ ಮಾರ್ಕ್‌ ಮಾಡಿ.

ಯೂಟ್ಯೂಬ್ ಬಫರ್ ವೀಡಿಯೊ

ಯೂಟ್ಯೂಬ್ ಬಫರ್ ವೀಡಿಯೊ

ಈಗ ನೀವು ಬಳಸುವ ಯೂಟ್ಯೂಬ್‌ ವೀಡಿಯೋಗಳ ಬಫರ್‌ ಅತಿವೇಗಗೊಳ್ಳುತ್ತದೆ. ಯೂಟ್ಯೂಬ್‌ ಸ್ಟ್ರೀಮಿಂಗ್ ಅತಿವೇಗವಾಗಿ ನೀವು ವೀಡಿಯೋವನ್ನು ಬಫರ್‌ ಇಲ್ಲದಂತೆ ವೇಗವಾಗಿ ನೋಡಬಹುದಾಗಿದೆ.

SmartVideo for YouTube ವಿಸ್ತರಣೆಗಾಗಿ ಲಿಂಕ್‌

SmartVideo for YouTube ವಿಸ್ತರಣೆಗಾಗಿ ಲಿಂಕ್‌

* ಗೂಗಲ್‌ ಕ್ರೋಮ್‌ ಬಳಸುವವರು SmartVideo for YouTube ವಿಸ್ತರಣೆಗಾಗಿ ಇಲ್ಲಿ ಕ್ಲಿಕ್‌ ಮಾಡಿ
* ಮೊಜಿಲ್ಲಾ ಫೈಯರ್‌ಫಾಕ್ಸ್‌ ಬಳಸುವವರು SmartVideo for YouTube ವಿಸ್ತರಣೆಗಾಗಿ ಇಲ್ಲಿ ಕ್ಲಿಕ್‌ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
How to Play YouTube Videos Faster on PC Without Buffering. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot