ಕಂಪ್ಯೂಟರ್ ಡೆಸ್ಕ್‌ಟಾಪ್ ಸ್ಕ್ರೀನ್ ರೆಕಾರ್ಡ್ ಮಾಡುವುದು ಹೇಗೆ?

ಕೆಲವರು ನೇರವಾಗಿ ಕ್ಯಾಮೆರಾಗಳನ್ನು ಇಟ್ಟು ವೀಡಿಯೋ ಮಾಡುತ್ತಾರೆ ಆದರೆ ಅದು ಹೆಚ್ಚು ಸ್ಪಷ್ಟವಾಗಿ ಇರುವುದಿಲ್ಲ.! ಇನ್ನು ಕೆಲವರು ಬೇರೆ ಬೇರೆ ಸಾಫ್ಟ್‌ವೇರ್‌ಗಳನ್ನು ಬಳಸುತ್ತಾರೆ.!!

|

ಕಂಪ್ಯೂಟರ್‌ನಲ್ಲಿ ನಿರ್ವಹಿಸುವ ಕೆಲವು ಸೃಜನಶೀಲ ಕಾರ್ಯಗಳನ್ನು ಇತರರಿಗೆ ತಿಳಿಸಲು ಅದನ್ನು ವೀಡಿಯೋ ಮಾಡಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡುವುದು ಹಲವರಿಗೆ ತಿಳಿದಿರಬಹುದು. ಕೆಲವರು ನೇರವಾಗಿ ಕ್ಯಾಮೆರಾಗಳನ್ನು ಇಟ್ಟು ವೀಡಿಯೋ ಮಾಡುತ್ತಾರೆ ಆದರೆ ಅದು ಹೆಚ್ಚು ಸ್ಪಷ್ಟವಾಗಿ ಇರುವುದಿಲ್ಲ.! ಇನ್ನು ಕೆಲವರು ಬೇರೆ ಬೇರೆ ಸಾಫ್ಟ್‌ವೇರ್‌ಗಳನ್ನು ಬಳಸುತ್ತಾರೆ.!!

ಹಾಗಾಗಿ, ಕನ್ನಡ ತಂತ್ರಜ್ಞಾನದ ನಂ 1 ವೆಬ್‌ಸೈಟ್ ಗಿಜ್‌ಬಾಟ್‌ನಲ್ಲಿ ಇಂದು ಕ್ಯಾಮೇರಾವನ್ನು ಬಳಸದೇ ಯೂಟ್ಯೂಬ್ ಸಹಾಯದಿಂದ ಡೆಸ್ಕ್‌ಟಾಪ್‌ನಲ್ಲಿನ ನಿರ್ವಹಿಸುವ ಕಾರ್ಯಗಳನ್ನು ಸುಲಭವಾಗಿ ರೆಕಾರ್ಡ್‌ ಮಾಡುವುದು ಹೇಗೆ ಎಂದು ತಿಳಿಸುತ್ತೇವೆ. ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಗೂಗಲ್‌ ಖಾತೆಯನ್ನು ತೆರೆಯಿರಿ.

ಗೂಗಲ್‌ ಖಾತೆಯನ್ನು ತೆರೆಯಿರಿ.

ಗೂಗಲ್‌ ಖಾತೆ ಇಲ್ಲದಿದ್ದಲ್ಲಿ ಗೂಗಲ್‌ ಖಾತೆಯನ್ನು ತೆರೆಯಿರಿ. ನಂತರ ಗೂಗಲ್‌ ಖಾತೆಯೊಂದಿಗೆ ಯೂಟ್ಯೂಬ್‌ಗೆ ಲಾಗಿನ್‌ ಆಗಿರಿ. ಲಾಗಿನ್ ಆದ ನಂತರ ಯೂಟ್ಯೂಬ್ ಪೇಜ್‌ ಸ್ಕೀನ್‌ ಎಡಭಾಗದಲ್ಲಿರುವ 'Upload' ಬಟನ್‌ ಕ್ಲಿಕ್‌ ಮಾಡಿ. ನಂತರದಲ್ಲಿ ಲೈವ್‌ ಸ್ಟ್ರೀಮಿಂಗ್ ಕೆಳಗೆ "Events" ಎಂಬ ಆಯ್ಕೆ ಇರುತ್ತದೆ ಅದನ್ನು ಆಯ್ಕೆ ಮಾಡಿ. ನೆನಪಿಡಿ. ಯೂಟ್ಯೂಬ್‌ಗೆ ನೀವು ಇದೇ ಮೊದಲು ವೀಡಿಯೋ ಅಪ್‌ಲೋಡ್‌ ಮಾಡುತ್ತಿದ್ದರೆ ಫೋನ್‌ ನಂಬರ್‌ ಪರಿಶೀಲನೆ ಮಾಡಬೇಕಾಗಿರುತ್ತದೆ.

 ಗೂ ಲೈವ್ ಬಟನ್ ಆಯ್ಕೆ ಮಾಡಿ!!

ಗೂ ಲೈವ್ ಬಟನ್ ಆಯ್ಕೆ ಮಾಡಿ!!

ಇವೆಂಟ್ (Event) ಆಯ್ಕೆ ಮಾಡಿ ನಂತರ ನೂತನ ಪೇಜ್ ಓಪನ್‌ ಆಗುತ್ತದೆ. ಆ ಪೇಜ್‌ನಲ್ಲಿ ನೀವು ಡೆಸ್ಕ್‌ಟಾಪ್‌ನಲ್ಲಿ ರೆಕಾರ್ಡ್‌ ಮಾಡಲು ಹೊರಟಿರುವ ವೀಡಿಯೋ ಬಗ್ಗೆ ವಿವರವನ್ನು ಟೈಪ್‌ ಮಾಡಿ. ನಂತರ ಗೂ ಲೈವ್ ಬಟನ್ ( Go Live Button) ಅನ್ನು ಕ್ಲಿಕ್‌ ಮಾಡಿ.

ಗೂ ಲೈವ್ ಬಟನ್ ಆಯ್ಕೆ ಮಾಡಿದ ನಂತರ ವೆಬ್‌ಕ್ಯಾಮ್ ಆಫ್ ಮಾಡಿ.!!

ಗೂ ಲೈವ್ ಬಟನ್ ಆಯ್ಕೆ ಮಾಡಿದ ನಂತರ ವೆಬ್‌ಕ್ಯಾಮ್ ಆಫ್ ಮಾಡಿ.!!

ಗೂ ಲೈವ್ ಬಟನ್ ಆಯ್ಕೆ ಮಾಡಿದ ನಂತರ ನೂತನ ಪೇಜ್ ತೆರೆಯುತ್ತದೆ. ಆ ಪೇಜ್‌ನಲ್ಲಿ ಕ್ಯಾಮೆರಾ ಐಕಾನ್ ಮೇಲೆ ಕ್ಲಿಕ್‌ ಮಾಡಿ ವೆಬ್‌ಕ್ಯಾಮ್ ಟರ್ನ್‌ ಆಫ್‌ ಮಾಡಿ. ಇದೇ ರೀತಿಯಲ್ಲಿ ಮೈಕ್ರೋಫೋನ್ ಐಕಾನ್ ಕ್ಲಿಕ್‌ ಮಾಡಿ ಆಡಿಯೋ ರೆಕಾರ್ಡಿಂಗ್‌ ನಿಲ್ಲಿಸಿ. ಇಲ್ಲವಾದಲ್ಲಿ ಅನಗತ್ಯ ಆಡಿಯೋ ಮತ್ತು ವೀಡಿಯೋ ರೆಕಾರ್ಡ್‌ ಡೆಸ್ಕ್‌ಟಾಪ್‌ ರೆಕಾರ್ಡ್‌ ಅಲ್ಲದೇ ಆಗುತ್ತದೆ.

"Screenshare" ಬಟನ್ ಕ್ಲಿಕ್‌ ಮಾಡಿ

ಕ್ಯಾಮೆರಾ ಐಕಾನ್ ಮತ್ತು ಮೈಕ್ರೋಫೋನ್ ಐಕಾನ್ ನಿಲ್ಲಿಸಿದ ನಂತರ ಪೇಜ್‌ನ ಟೂಲ್‌ಬಾಕ್ಸ್‌ನಲ್ಲಿ "desktop Window" ಆಯ್ಕೆ ಮಾಡಿ. ಇದು ನಿಮ್ಮ ಪ್ರಸ್ತುತ ಡೆಸ್ಕ್‌ಟಾಪ್‌ನಲ್ಲಿ ನೆಡೆಯುವ ಕಾರ್ಯತೋರಿಸುತ್ತದೆ. ವಿಂಡೋ ಆಯ್ಕೆ ಮಾಡಿದ ನಂತರ "Start Screenshare"ಮೇಲೆ ಕ್ಲಿಕ್‌ ಮಾಡಿ. ನಂತರ "Start Broadcast" ಬಟನ್ ಮೇಲೆ ಕ್ಲಿಕ್‌ ಮಾಡಿ.

ಗೂಗಲ್‌ ಡ್ರೈವ್‌ಗೆ ಡೌನ್‌ಲೋಡ್‌ ಮಾಡಿ

ಗೂಗಲ್‌ ಡ್ರೈವ್‌ಗೆ ಡೌನ್‌ಲೋಡ್‌ ಮಾಡಿ

ರೆಕಾರ್ಡ್‌ ಮುಗಿದ ನಂತರ "Stop Screenshare" ಮೇಲೆ ಕ್ಲಿಕ್‌ ಮಾಡಿ.ಯೂಟ್ಯೂಬ್ ವೆಬ್‌ಸೈಟ್‌ಗೆ ಸ್ವಿಚ್‌ ಮಾಡಿ.! ನಿಮ್ಮ ವೀಡಿಯೋ ಯಾರಿಗೂ ಶೇರ್ ಆಗಿರುವುದಿಲ್ಲ. ಅದನ್ನು ಗೂಗಲ್‌ ಡ್ರೈವ್‌ಗೆ ಡೌನ್‌ಲೋಡ್‌ ಮಾಡಿ "Broadcast" ಮೇಲೆ ಟ್ಯಾಪ್ ಮಾಡಿ ಪ್ರಪಂಚಕ್ಕೆ ಹಂಚಿರಿ.

Best Mobiles in India

English summary
you can also create screencast videos inside YouTube without requiring any desktop software? to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X