ಕ್ರೋಮ್‌ ಬ್ರೌಸರ್‌ನಲ್ಲಿ ಆಂಡ್ರಾಯ್ಡ್‌ ಆಪ್ ರನ್ ಮಾಡಬಹುದು..! ಹೇಗೆ..?

By Gizbot Bureau
|

2015 ಕ್ಕೂ ಮುನ್ನ ಗೂಗಲ್ ಕ್ರೋಮ್ ಬ್ರೌಸರ್ ನಲ್ಲಿ ಡೆವಲಪರ್ ಗಳು ತಮ್ಮ ಆಂಡ್ರಾಯ್ಡ್ ಆಪ್ ಗಳನ್ನು ಟೆಸ್ಟ್ ಮಾಡಲು ಮತ್ತು ರನ್ ಮಾಡುವ ಉದ್ದೇಶದಿಂದ ಗೂಗಲ್ ಸಂಸ್ಥೆಯು 'App Runtime for Chrome (ARC) project' ನ್ನು ಬಿಡುಗಡೆಗೊಳಿಸಿತು. ಇದರ ಜೊತೆಗೆ ಗೂಗಲ್ ಇನ್ನೊಂದು ಟೂಲ್ ನ್ನು ಬಿಡುಗಡೆಗೊಳಿತ್ತು ಅದುವೇ ARC Welder.

ಇದು ರನ್ ಟೈಮ್ ಮತ್ತು ಎಕ್ಸ್ ಪಾಂಡೆಂಡ್ ಆಪ್ ಸಪೋರ್ಟ್ ಆಗಿತ್ತು. ಈ ಟೂಲ್ ನೇಟಿವ್ ಕ್ಲೈಂಟ್ ನ್ನು ಬಳಸಿಕೊಂಡು ರನ್ ಟೈಮ್ ಇಪ್ಲಿಮೆಂಟೇಷನ್ ನಲ್ಲಿ ರನ್ ಆಗುತ್ತಿತ್ತು. ಇದೊಂದು ಸ್ಯಾಂಡ್ ಬಾಕ್ಸ್ ತಂತ್ರಜ್ಞಾನವಾಗಿದ್ದು ನೇಟಿವ್ ಇಂಟರ್ ಫೇಸ್ ನಲ್ಲಿ ಮತ್ತು ಅದೇ ವೇಗದಲ್ಲಿ ಆಪ್ ನ್ನು ರನ್ ಮಾಡಲು ಕ್ರೋಮ್ ಗೆ ಪ್ಲಗ್ ಇನ್ ಆಗಲು ಇದು ಬೆಂಬಲಿಸುತ್ತದೆ.

ಕ್ರೋಮ್‌ ಬ್ರೌಸರ್‌ನಲ್ಲಿ ಆಂಡ್ರಾಯ್ಡ್‌ ಆಪ್ ರನ್ ಮಾಡಬಹುದು..! ಹೇಗೆ..?

ಇದರ ಪ್ರಾರಂಭಿಕ ಹಂತದಲ್ಲಿ ಕೇವಲ ಡೆವಲಪರ್ ಗಳಿಗೆ ಮಾತ್ರ ಈ ಟೂಲ್ ಲಭ್ಯವಾಗುತ್ತಿತ್ತು. ಆದರೆ ಈಗ ಆಂಡ್ರಾಯ್ಡ್ ಆಪ್ ಗಳನ್ನು ಬ್ರೌಸರ್ ನಲ್ಲಿ ರನ್ ಮಾಡುವ ಉದ್ದೇಶದಿಂದ ಯಾರು ಬೇಕಾದರೂ ಇದನ್ನು ಡೌನ್ ಲೋಡ್ ಮಾಡಿಕೊಳ್ಳಲು ಸಾಧ್ಯವಿದೆ. ಅದು ಹೇಗೆ ಎಂದು ಪ್ರಶ್ನಿಸುತ್ತಿದ್ದೀರಾ. ಹಾಗಾದ್ರೆ ಇಲ್ಲಿ ಅದರ ಹಂತಹಂತವಾದ ವಿವರಣೆ ಇದೆ. ಓದಿ ಫಾಲೋ ಮಾಡಿಕೊಳ್ಳಿ.

ಮೊದಲಿಗೆ ಬೇಕಾಗಿರುವ ಅಗತ್ಯತೆಗಳು:

• ಒಂದು ಸಮಯಕ್ಕೆ ಕೇವಲ ಒಂದು ಆಪ್ ನ್ನು ಮಾತ್ರ ಲೋಡ್ ಮಾಡಲು ಸಾಧ್ಯವಾಗುತ್ತದೆ.

• ಆಪ್ ನ್ನು ಆಧರಿಸಿ, ಮ್ಯಾನುವಲ್ ಆಗಿ ನೀವು ಲೇಔಟ್ ನ್ನು ಸೆಲೆಕ್ಟ್ ಮಾಡಿಕೊಳ್ಳಬೇಕಾಗುತ್ತದೆ.

• ಬಳಕೆದಾರರು ಫೋನ್ ಅಥವಾ ಟ್ಯಾಬ್ಲೆಟ್ ನಲ್ಲಿ ರನ್ ಮಾಡಲು ಇಚ್ಛಿಸುತ್ತಿದ್ದೀರಾ ಎಂಬುದನ್ನು ನಮೂದಿಸಬೇಕಾಗುತ್ತದೆ.

• ನೂತನ ವರ್ಷನ್ ನ ಗೂಗಲ್ ಕ್ರೋಮ್ ಬ್ರೌಸರ್ ನ್ನು ಬಳಕೆದಾರರು ಬಳಸಬೇಕು ( ನಾವಿಲ್ಲಿ ತಿಳಿಸುತ್ತಿರುವು ಕ್ರೋಮ್ 67 ನಲ್ಲ ಟೆಸ್ಟ್ ಮಾಡಲಾಗಿದೆ)

• ಈ ಟೂಲ್ ಆಂಡ್ರಾಯ್ಡ್ 4.4 ನ್ನು ಆಧರಿಸಿದೆ. ಹಾಗಾಗಿ ನೀವು ಟೆಸ್ಟ್ ಮಾಡಲು ಇಚ್ಛಿಸುವ ಆಪ್ ಆಂಡ್ರಾಯ್ಡ್ 4.4 ಮತ್ತು ಅದಕ್ಕಿಂತ ಮೇಲಿನದ್ದರಲ್ಲಿ ಬೆಂಬಲ ಪಡೆಯುತ್ತದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.

ಕ್ರೋಮ್‌ ಬ್ರೌಸರ್‌ನಲ್ಲಿ ಆಂಡ್ರಾಯ್ಡ್‌ ಆಪ್ ರನ್ ಮಾಡಬಹುದು..! ಹೇಗೆ..?

ಅನುಸರಿಸಬೇಕಾಗಿರುವ ಹಂತಗಳು :

1. ನಿಮ್ಮ ಪಿಸಿಯಲ್ಲಿ ಗೂಗಲ್ ಕ್ರೋಮ್ ನ್ನು ತೆರೆಯಿರಿ

2. ಕ್ರೋಮ್ ಗಾಗಿ ಎಆರ್ ಸಿ ವೆಲ್ಡರ್ ಆಪ್ ಎಕ್ಸ್ ಟೆಷನ್ ನ್ನು ಹುಡುಕಾಡಿ

3. ಎಕ್ಸ್ ಟೆಷನ್ ನ್ನು ಇನ್ಸ್ಟಾಲ್ ಮಾಡಿ ಮತ್ತು ಲಾಂಚ್ ಆಪ್ ಬಟನ್ ನ್ನು ಕ್ಲಿಕ್ಕಿಸಿ

4. ಈಗ, ನೀವು ರನ್ ಮಾಡಬೇಕಿರುವ ಆಪ್ ನ ಎಪಿಕೆ ಫೈಲ್ ನ್ನು ನೀವೀಗ ಡೌನ್ ಲೋಡ್ ಮಾಡಬೇಕು

5. 'Choose' button ನ್ನು ಕ್ಲಿಕ್ಕಿಸಿ ನೀವು ಡೌನ್ ಲೋಡ್ ಮಾಡಿರುವ ಎಪಿಕೆ ಫೈಲಿನ ಎಕ್ಸ್ ಟೆಷನ್ ನ್ನು ಸೇರಿಸಿ.

6. 'Orientation' ನ್ನು ಆಯ್ಕೆ ಮಾಡಿ ಮತ್ತು ಆಪ್ ನ 'Form-Factor' ಸೆಟ್ಟಿಂಗ್ಸ್ ನ್ನು ಆಯ್ಕೆ ಮಾಡಿ.

7. ಈಗ ಆಪ್ ನ್ನ ತೆರೆಯಲು 'Test' ಬಟನ್ ನ್ನು ಕ್ಲಿಕ್ಕಿಸಿ

ಸೂಚನೆ: ಎಲ್ಲಾ ಆಂಡ್ರಾಯ್ಡ್ ಆಪ್ ಗಳು ಈ ಟೂಲ್ ನಿಂದ ಸರಿಯಾಗಿ ರನ್ ಆಗುತ್ತದೆ. ನೀವು ಓರಿಯಂಟೇಷನ್ ಮತ್ತು ಫಾರ್ಮ್ ಫ್ಯಾಕ್ಟರ್ ನಂತ ಸೆಟ್ಟಿಂಗ್ಸ್ ನ್ನು ಸರಿಯಾಗಿ ಪ್ಲೇ ಮಾಡಬೇಕಾಗುತ್ತದೆ.

Best Mobiles in India

English summary
How to run Android apps on Google Chrome. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X