ಪೆನ್‌ಡ್ರೈವ್ ಮೂಲಕ ಗೂಗಲ್ ಡೆಸ್ಕ್‌ಟಾಪ್ ಒಎಸ್‌ ರನ್‌ ಮಾಡುವುದು ಹೇಗೆ?

By GizBot Bureau
|

ಒಂದು ವೇಳೆ ನೀವು ಗೂಗಲ್ ಓಎಸ್ ನಲ್ಲಿ ಕೆಲಸ ಮಾಡಬೇಕು ಎಂದು ಇಚ್ಛಿಸುತ್ತಿದ್ದರೆ ಅದಕ್ಕಾಗಿ ನೀವು ಕ್ರೋಮ್ ಬುಕ್ ನ ಮಾಲೀಕತ್ವ ಪಡೆಯಬೇಕೆಂದೇನೂ ಇಲ್ಲ. ಈ ಲೇಖನದಲ್ಲಿ ನಾವು ಗೂಗಲ್ ಡೆಸ್ಕ್ ಟಾಪ್ ಓಎಸ್ (ಕ್ರೋಮಿಯಂ ಓಎಸ್) ನ್ನು ಯುಎಸ್ ಬಿ ಡ್ರೈವ್ ಬಳಸಿ ಹೇಗೆ ರನ್ ಮಾಡುವುದು ಎಂಬ ಬಗ್ಗೆ ತಿಳಿಸಿಕೊಡಲಿದ್ದೇವೆ.

ಇದನ್ನು ಸಾಧಿಸಲು ನಿಮಗೆ ಬೇಕಾಗಿರುವುದು ಸಂಪೂರ್ಣ ಫಂಕ್ಷನಲ್ ಆಗಿರುವ ಕಂಪ್ಯೂಟರ್ ಸಿಸ್ಟಮ್ ಜೊತೆಗೆ ಉತ್ತಮ ಕೆಲಸ ನಿರ್ವಹಿಸುವ ಯುಎಸ್ ಬಿ ಪೋರ್ಟ್, ಯುಎಸ್ ಬಿ ಡ್ರೈವ್(ಕನಿಷ್ಠ 4ಜಿಬಿ ಇರಲೇಬೇಕು), ಜಿಪ್ ಫೈಲ್ ಎಕ್ಸ್ ಟ್ರ್ಯಾಕ್ಟರ್ ಮತ್ತು ಇಮೇಜ್ ಬರ್ನಿಂಗ್ ಸಾಫ್ಟ್ ವೇರ್.

ಪೆನ್‌ಡ್ರೈವ್ ಮೂಲಕ ಗೂಗಲ್ ಡೆಸ್ಕ್‌ಟಾಪ್ ಒಎಸ್‌ ರನ್‌ ಮಾಡುವುದು ಹೇಗೆ?

ವಿಂಡೋಸ್ ಬಳಕೆದಾರರು 7-Zip, ಮ್ಯಾಕ್ ಓಎಸ್ ಬಳಕೆದಾರರು Keka, ಲಿನಕ್ಸ್ ಬಳಕೆದಾರರು p7zip ಬಳಸಬಹುದು. ಇಮೇಜ್ ಬರ್ನಿಂಗ್ ಗಾಗಿ Etcher ನ್ನು ಬಳಕೆ ಮಾಡಬಹುದು.

ಈ ವಿಧಾನವು ನೀವು ವಿಂಡೋಸ್, ಲಿನಕ್ಸ್, ಮತ್ತು ಮ್ಯಾಕ್ ಓಎಸ್ ಬಳಸುತ್ತಿದ್ದರೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಹಾಗಂತ ನೀವು ನಿಮ್ಮ ಸದ್ಯದ ಆಪರೇಟಿಂಗ್ ಸಿಸ್ಟಮ್ ನ್ನು ಓವರ್ ರೈಟ್ ಮಾಡುವ ಅಗತ್ಯವಿಲ್ಲ.

Here are the steps:

1.ಆಲ್ಟರ್ ನೇಟಿವ್ ಸೋರ್ಸ್ ಬಳಸಿ (ಅಂದರೆ Arnold The Bat) ಬಿಲ್ಡ್ ಮಾಡಲಾಗಿರುವ ನೂತನ ಕ್ರೋಮಿಯಂ ಓಎಸ್ ನ್ನು ಡೌನ್ ಲೋಡ್ ಮಾಡಿಕೊಳ್ಳಿ. ಯಾಕೆಂದರೆ ಇದಕ್ಕಾಗಿ ಗೂಗಲ್ ನಿಂದ ಇದ್ಯಾವುದನ್ನು ಅಧಿಕೃತವಾಗಿ ಬಿಲ್ಡ್ ಮಾಡಲಾಗಿಲ್ಲ. ಈ ರೀತಿ ಡೌನ್ ಲೋಡ್ ಆಗಿರುವ ಫೈಲ್ ಝಿಪ್ ಫಾರ್ಮೇಟ್ ನಲ್ಲಿ ಇರುತ್ತದೆ.

2. ಫೈಲ್ ಎಕ್ಸ್ ಟ್ರ್ಯಾಕ್ಟರ್ ಬಳಿ ಫೈಲ್ ನ್ನು ಅನ್ ಝಿಪ್ ಮಾಡಿ.

ಪೆನ್‌ಡ್ರೈವ್ ಮೂಲಕ ಗೂಗಲ್ ಡೆಸ್ಕ್‌ಟಾಪ್ ಒಎಸ್‌ ರನ್‌ ಮಾಡುವುದು ಹೇಗೆ?

3.ಸಿಸ್ಟಮ್ ಗೆ ನಿಮ್ಮ ಯುಎಸ್ ಬಿ ಡ್ರೈವ್ ನ್ನು ಪ್ಲಗ್ ಇನ್ ಮಾಡಿ.ಮತ್ತು FAT32 ಎಂದು ಫಾರ್ಮೇಟ್ ಮಾಡಿ (ಅಥವಾ ಮ್ಯಾಕ್ ಓಎಸ್ ಆದರೆ ಹೀಗೆ MS-DOS FAT)

4. ಇಮೇಜ್ ಇನ್ಸ್ಟಾಲ್ ಗಾಗಿ ಇಮೇಜ್ ಬರ್ನಿಂಗ್ ಸಾಫ್ಟ್ ವೇರ್ ನ್ನು ಡೌನ್ ಲೋಡ್ ಮಾಡಿಕೊಳ್ಳಿ.

5. ಯುಎಸ್ ಬಿ ಡ್ರೈವ್ ನಲ್ಲಿರುವ ಇಮೇಜನ್ನು ಇನ್ಸ್ಟಾಲ್/ಬರ್ನ್ ಮಾಡಿ. ಈ ಪ್ರೊಸೆಸ್ ಸಂಪೂರ್ಣಗೊಂಡ ನಂತರ, ನಿಮ್ಮ ಬಳಿ ಬೂಟೇಬಲ್ ಯುಎಸ್ ಬಿ ಡ್ರೈವ್ ಇರುತ್ತದೆ.

6. ಮುಂದಿನ ಹಂತವು ನಿಮ್ಮ ಸಿಸ್ಟಮ್ ನ್ನು ರೀಬೂಟ್ ಮಾಡುವುದಾಗಿರುತ್ತದೆ ಮತ್ತು ನಂತರ ಬೂಟ್ ಆಯ್ಕೆಗಳನ್ನು ಎಂಟರ್ ಮಾಡಿ(OS ನ್ನು ಆಯ್ಕೆ ಮಾಡಿ). ಇದು ನೀವು ನಿಮ್ಮ ಕಂಪ್ಯೂಟರ್ ಯಾವ ಡ್ರೈವ್ ನಿಂದ OS ಬೂಟ್ ಆಗಬೇಕು ಎಂಬುದನ್ನು ಆಯ್ಕೆ ಮಾಡುವುದಾಗಿರುತ್ತದೆ.( ಈ ಕೇಸ್ ನಲ್ಲಿ ನೀವು ಪೆನ್ ಡ್ರೈವ್ ಆಯ್ಕೆ ಮಾಡಬೇಕು)

7. ನಿಮ್ಮ ಪೆನ್ ಡ್ರೈವ್ ನ್ನು ಆಯ್ಕೆ ಮಾಡಿದ ನಂತರ ಎಂಟರ್ ನ್ನು ಪ್ರೆಸ್ ಮಾಡಿ. ಈಗ ನಿಮ್ಮ ಸಿಸ್ಟಮ್ ಯುಎಸ್ ಬಿ ಡ್ರೈವ್ ಬಳಸಿ ಮತ್ತೆ ಬೂಟ್ ಆಗುತ್ತದೆ. ಈಗ ನೀವು ಹೊಸ ಓಎಸ್ ನ್ನು ಬಳಕೆ ಮಾಡಬಹುದು.

ಸೂಚನೆ:ಓಎಸ್ ಇನ್ಸ್ಟಾಲ್ ಮಾಡುವಾಗ, ನಿಮ್ಮ ಪೆನ್ ಡ್ರೈವ್ ಸಂಪೂರ್ಣವಾಗಿ ಇರೇಸ್ ಆಗಿರಬೇಕು.

Best Mobiles in India

English summary
How to run Google’s desktop operating system from your pen drive. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X