ವಾಟ್ಸ್ಆಪ್ ಸ್ಟೇಟಸ್‌ಗಳನ್ನು ಸೇವ್ ಮಾಡಿಕೊಳ್ಳುವ ಟ್ರಿಕ್ಸ್ ನಿಮಗೆ ಗೊತ್ತಾ?

|

ಇತ್ತೀಚಿಗೆ ವಾಟ್ಸ್‌ಆಪ್ ಪರಿಚಯಿಸಿರುವ ನೂತನ ಫೀಚರ್ಸ್‌ಗಳಲ್ಲಿಯೇ ಅತ್ಯಂತ ಹೆಚ್ಚು ಜನಪ್ರಿಯತೆ ಪಡೆದ ಫೀಚರ್ ಎಂದರೆ 'ವಾಟ್ಸ್ಆಪ್ ಸ್ಟೇಟಸ್ಸ್' ಆಯ್ಕೆ. ಬಹುತೇಕ ಎಲ್ಲಾ ವಾಟ್ಸ್ಆಪ್ ಬಳಕೆದಾರರು ಕೂಡ ಬಳಸುತ್ತಿರುವ ಈ ಸ್ಟೇಟಸ್ ಆಯ್ಕೆಯು ದಿನದಿಂದ ದಿನಕ್ಕೆ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಳ್ಳುತ್ತಿರುವುದು ನಿಮಗೆಲ್ಲಾ ತಿಳಿದಿದೆ.

ಇಂತಹ 'ವಾಟ್ಸ್ಆಪ್ ಸ್ಟೇಟಸ್ಸ್' ಆಯ್ಕೆಯಲ್ಲಿ ಬಳಕೆದಾರರಿಗೆ ಒಂದು ತೊಂದರೆ ಎಂದರೆ, ಈ ವಾಟ್ಸ್ಆಪ್ ಸ್ಟೇಟಸ್ ಗಳನ್ನು ಸೇವ್ ಮಾಡಿಕೊಳ್ಳುವ ಅವಕಾಶವನ್ನು 'ವಾಟ್ಸ್ಆಪ್' ಮಾಡಿಕೊಟ್ಟಿಲ್ಲ. ಹಾಗಂತ ಈ ವಾಟ್ಸ್ಆಪ್ ಸ್ಟೇಟಸ್ಸ್'ಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ, ಅವುಗಳನ್ನು ಡೌನ್‌ಲೋಡ್ ಮಾಡಬಹುದು.!

ವಾಟ್ಸ್ಆಪ್ ಸ್ಟೇಟಸ್‌ಗಳನ್ನು ಸೇವ್ ಮಾಡಿಕೊಳ್ಳುವ ಟ್ರಿಕ್ಸ್ ನಿಮಗೆ ಗೊತ್ತಾ?

ಅಯ್ಯೋ ಇದಕ್ಕಾಗಿ ಯಾವುದಾದರೂ ಆಪ್ ಹಾಕಿಕೊಳ್ಳಲೇಬೇಕೆ ಎಂದುಕೊಂಡರೆ, ಅದೂ ಸಹ ಅವಶ್ಯಕತೆ ಇಲ್ಲ.! ಹಾಗಾದರೆ, ನಿಮ್ಮ ಸ್ನೇಹಿತರು ಆಪ್ ಲೋಡ್ ಮಾಡುವ ಸ್ಟೇಟಸ್ ಗಳನ್ನು ಡೌನ್ ಲೋಡ್ ಮಾಡಿಕೊಂಡು ಸೇವ್ ಮಾಡಿಕೊಳ್ಳಬಹುದಾದ ಇತರೆ ವಿಧಾನಗಳು ಯಾವುವು ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ಇಂದಿನ ಲೇಖನದ್ದಾಗಿದೆ.

ಮೊದಲ ವಿಧಾನ:  ಹಂತ 01

ಮೊದಲ ವಿಧಾನ: ಹಂತ 01

ಮೊದಲ ವಿಧಾನದ ಮೂಲಕ ನೀವು ವಾಟ್ಸ್ಆಪ್ ನಲ್ಲಿ ಸುಲಭವಾಗಿ ಸ್ಟೇಟಸ್ ಗಳನ್ನು ಸೇವ್ ಮಾಡಿಕೊಳ್ಳಬಹುದಾಗಿದೆ. ಅದಕ್ಕಾಗಿ ಈ ಹಂತಗಳನ್ನು ಪಾಲಿಸಿ ಹಂತ 01: ಮೈ ಫೈಲ್ಸ್ ಗೆ ಹೋಗಿ> ಡಿವೈಸ್ ಸ್ಟೋರೆಜ್> ವಾಟ್ಸ್ಆಪ್> ಮೀಡಿಯಾ> ಸ್ಟೇಟಸ್ ತೆರೆಯಿರಿ.

ಮೊದಲ ವಿಧಾನ:  ಹಂತ 02

ಮೊದಲ ವಿಧಾನ: ಹಂತ 02

ನಂತರ ನೀವು ಫೋಲ್ಡರ್ ಆನ್ ಹೈಡ್ ಮಾಡಬೇಕು. ಇದಕ್ಕಾಗಿ ಮೋರ್> ಶೋ ಹೈಡನ್ ಫೈಲ್ಸ್ ತೆರೆಯಿರಿ. ನಂತರ ನೀವು ನಿಮ್ಮ ಸ್ಟೇಟಸ್ ಇಮೇಜ್ ಗಳನ್ನು ಗ್ಯಾಲರಿಗೆ ಸೇವ್ ಮಾಡಿಕೊಳ್ಳಬಹುದು. ಹೀಗೆ ಮೊದಲ ವಿಧಾನದಲ್ಲಿ ಸುಲಭವಾಗಿ ಸ್ಟೇಟಸ್ ಗಳನ್ನು ಸೇವ್ ಮಾಡಿಕೊಳ್ಳಬಹುದು.

ಎರಡನೇ ವಿಧಾನ:  ಹಂತ 1:

ಎರಡನೇ ವಿಧಾನ: ಹಂತ 1:

ಈ ವಿಧಾನದಲ್ಲಿ ನೀವು ವಾಟ್ಸ್‌ಆಪ್ ಸ್ಟೇಟಸ್ ಸೇವ್ ಮಾಡಿಕೊಳ್ಳಲು ನೀವು ಆಪ್ ವೊಂದನ್ನು ಇನ್ ಸ್ಟಾಲ್ ಮಾಡಿಕೊಳ್ಳಬೇಕಾಗಿದೆ. ಪ್ಲೇ ಸ್ಟೋರಿನಿಂದ ಸ್ಟೋರ್ ಸೇವರ್ ಫಾರ್ ವಾಟ್ಸ್ಆಪ್ ಆಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಿ.

ಎರಡನೇ ವಿಧಾನ : ಹಂತ 2:

ಎರಡನೇ ವಿಧಾನ : ಹಂತ 2:

ನಂತರ ಆಪ್ ತೆಗೆದು ರಿಸೆಂಟ್ ಸ್ಟೋರಿಸ್ ಅನ್ನು ಓಪನ್ ಮಾಡಿ. ನಂತರ ಡೌನ್ ಲೋಡ್ ಮಾಡಿಕೊಳ್ಳಬೇಕಾದ ವಿಡಿಯೋ/ಫೋಟೋ ಸೆಲೆಕ್ಟ್ ಮಾಡಿಕೊಳ್ಳಿ. ಹಂತ 4: ಬಲಭಾಗದ ಮೂಲೆಯಲ್ಲಿರುವ ಡೌನ್ ಲೋಡ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಮೂರನೇ ವಿಧಾನ?

ಮೂರನೇ ವಿಧಾನ?

ಇದು ಅತ್ಯಂತ ಸುಲಭ ವಿಧಾನವಾಗಿದ್ದು, ಇದಕ್ಕಾಗಿ ನೀವು ನಿಮ್ಮ ಸ್ಮಾರ್ಟ್ ಫೋನಿನಲ್ಲಿ ವಾಟ್ಸ್ಆಪ್ ಸ್ಟೇಟಸ್ ಅನ್ನು ಓಪನ್ ಮಾಡಿಕೊಳ್ಳಿ, ಮಾಡಿದ ನಂತರದಲ್ಲಿ ಫೋನಿನಲ್ಲಿ ಸ್ಕ್ರಿನ್ ಶಾಟ್ ತೆಗೆದುಕೊಳ್ಳಿ. ಈ ಮೂಲಕವು ನೀವು ವಾಟ್ಸ್ಆಪ್ ಸ್ಟೇಟಸ್ ಅನ್ನು ಸೇವ್ ಮಾಡಿಕೊಳ್ಳಬಹುದಾಗಿದೆ. ಇದು ಇನ್ನೂ ಸುಲಭ ಅಲ್ಲವೇ.?

Best Mobiles in India

English summary
Once you tap on the status, it gets downloaded to ".Statuses" folder on Android device.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X