ವಾಟ್ಸ್‌ಆಪ್‌ನಲ್ಲಿ ಮೆಸೇಜ್ ಶೆಡ್ಯೂಲ್ ಮಾಡಬಹುದು..! ಹೇಗೆ ಗೊತ್ತಾ..?

By Gizbot Bureau
|

ಮಧ್ಯರಾತ್ರಿ ವಾಟ್ಸ್ ಆಪ್ ಮೆಸೇಜ್ ಮಾಡಬೇಕಿತ್ತು. ಯಾರದ್ದೋ ಬರ್ತಡೇ ವಿಷ್ ಕಳುಹಿಸಬೇಕು. ಆದರೆ ಸಿಕ್ಕಾಪಟ್ಟೆ ನಿದ್ದೆ ಬರ್ತಿದೆ. ಮೆಸೇಜ್ 12 ಘಂಟೆಗೆ ಡೆಲಿವರಿ ಆಗೋ ಹಾಗೆ ಸೆಟ್ ಮಾಡಿ ಇಡಲು ಅವಕಾಶವಿದ್ದಿದ್ದರೆ ಎಷ್ಟು ಚೆನ್ನಾಗಿರ್ತಿತ್ತು ಅಂತ ನೀವೇನಾದರೂ ಯೋಚಿಸುತ್ತಿದ್ದರೆ ಅದಕ್ಕೊಂದಿಷ್ಟು ಸರಳ ಮಾರ್ಗಗಳನ್ನು ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ. ಸುಲಭವಾಗಿ ವಾಟ್ಸ್ ಆಪ್ ಮೆಸೇಜ್ ನ್ನು ಪ್ರೀಸೆಟ್ ಮಾಡುವುದು ಹೇಗೆ 4 ಪ್ರಮುಖ ವಿವರಣೆ ಇಲ್ಲಿದೆ ನೋಡಿ.

ವಾಟ್ಸ್ ಆಪ್ ಮೆಸೇಜ್ ಪ್ರೀಸೆಟ್ ಮಾಡಲು ಬೇಕಾಗುವ ಪ್ರಮುಖ ಅಗತ್ಯತೆಗಳು:-
1. ರೂಟೆಡ್ ಆಂಡ್ರಾಯ್ಡ್
2. ವಾಟ್ಸ್ ಆಪ್ ಶೆಡ್ಯೂಲಿಂಗ್ ಅಪ್ಲಿಕೇಷನ್

ಆಂಡ್ರಾಯ್ಡ್ ನಲ್ಲಿ ವಾಟ್ಸ್ ಆಪ್ ಮೆಸೇಜ್ ಗಳನ್ನು ಪ್ರೀಸೆಟ್ ಮಾಡುವ ಹಂತಗಳು :

ಹಂತ 1

ಹಂತ 1

ಮೊದಲಿಗೆ, ವಾಟ್ಸ್ ಆಪ್ ಶೆಡ್ಯೂಲಿಂಗ್ ಆಪ್ ನ್ನು ನಿಮ್ಮ ಆಂಡ್ರಾಯ್ಡ್ ಡಿವೈಸ್ ನಲ್ಲಿ ಡೌನ್ ಲೋಡ್ ಮಾಡಿ ಇನ್ಸ್ಟಾಲ್ ಮಾಡಿ. ( ಆದರೆ, ಈಗಾಗಲೇ ಮೇಲಿನ ಅಗತ್ಯತೆಗಳಲ್ಲಿ ವಿವರಿಸಿರುವಂತೆ ನಿಮ್ಮ ಆಂಡ್ರಾಯ್ಡ್ ಮೊಬೈಲ್ ರೂಟೆಡ್ ಆಗಿರಬೇಕು)

ಹಂತ 2

ಹಂತ 2

ಒಮ್ಮೆ ಇದು ಮುಗಿದ ನಂತರ, ಆಪ್ ನ್ನು ತೆರೆಯಿರಿ. ಇದು ನಿಮಗೆ ಮುಂದುವರಿಯಬೇಕಾದರೆ ಸೂಪರ್ ಯೂಸರ್ ಪರ್ಮಿಷನ್ ನ್ನು ಕೇಳುತ್ತದೆ. ಸೂಪರ್ ಯ್ಯೂಸರ್ ಆಕ್ಸಿಸ್ ನ್ನು ಒದಗಿಸಿ. ಮುಂದೆ ಪೆನ್ಸಿಲ್ ರೀತಿಯ ಐಕಾ ಒಂದನ್ನು ಕ್ಲಿಕ್ಕಿಸಿ. ಅದು ಪೆಡಿಂಗ್ ಮೆಸೇಜ್ ನ್ನು ಮುಂಭಾಗದಲ್ಲಿ ಅದು ಇರುತ್ತದೆ ಮತ್ತು ಯಾವುದೇ ಒಬ್ಬ ವ್ಯಕ್ತಿ ಅಥವಾ ಗುಂಪಿನ ಕಾಂಟ್ಯಾಕ್ಟ್ ವಿವರವನ್ನು ಆಯ್ಕೆ ಮಾಡಿ ಮತ್ತು ಏನು ಮೆಸೇಜ್ ಕಳಿಸಬೇಕು ಎಂಬುದನ್ನು ಟೈಪ್ ಮಾಡಿ ಎಷ್ಟೊತ್ತಿಗೆ ಮೆಸೇಜ್ ಕಳಿಸಬೇಕು ಎಂಬುದನ್ನು ಸೆಟ್ ಮಾಡಿ.

ಹಂತ 3

ಹಂತ 3

ಈಗ ಅಂತಿಮವಾಗಿ,ಆಡ್ ನ್ನು ಕ್ಲಿಕ್ಕಿಸಿ ಮತ್ತು ನೀವು ಯಾವ ಕಾಂಟ್ಯಾಕ್ಟ್ ಗೆ ಯಾವ ಮೆಸೇಜ್ ಕಳಿಸಬೇಕು ಎಂದಿದ್ದೀರಿ ಅದನ್ನು ಸೇರಿಸಿ. ಆಗ ನಿಮ್ಮ ಈ ಮೆಸೇಜ್ ಪೆಂಡಿಂಗ್ ಮೆಸೇಜ್ ಟ್ಯಾಬ್ ನಲ್ಲಿ ಸೇರಿಕೊಳ್ಳುತ್ತದೆ ನಂತರ ಅದು ನೀವು ಸೆಟ್ ಮಾಡಿದ ಸಮಯಕ್ಕೆ ಸರಿಯಾಗಿ ಡೆಲಿವರ್ ಆಗುತ್ತದೆ.

ಹಂತ 4

ಹಂತ 4

ಅಷ್ಟೇ ನೀವು ವಾಟ್ಸ್ ಆಪ್ ನಲ್ಲಿ ಮೆಸೇಜ್ ನ್ನು ಪ್ರೀಸೆಟ್ ಮಾಡಿ ಆಯಿತು. ನೀವು ಪೆಂಡಿಂಗ್ ಮೆಸೇಜ್ ನ್ನು ಗಮನಿಸಬಹುದು ಮತ್ತು ಅದರಲ್ಲಿ ನೀವು ಸೆಟ್ ಮಾಡಿರುವ ಮೆಸೇಜ್ ಹಾಗೆಯೇ ಇರುತ್ತದೆ. ನೀವು ಆಪ್ ನ್ನು ತೆರೆದ ಕೂಡಲೇ ಅದು ಕಾಣಿಸುತ್ತದೆ.

ನಿಮ್ಮ ಡಿವೈಸ್ ನ್ನು ರೂಟ್ ಮಾಡದೇ ವಾಟ್ಸ್ ಆಪ್ ಮೆಸೇಜ್ ನ್ನು ನಿಗದಿಗೊಳಿಸುವುದು ಹೇಗೆ? 

ನಿಮ್ಮ ಡಿವೈಸ್ ನ್ನು ರೂಟ್ ಮಾಡದೇ ವಾಟ್ಸ್ ಆಪ್ ಮೆಸೇಜ್ ನ್ನು ನಿಗದಿಗೊಳಿಸುವುದು ಹೇಗೆ? 

ಹಂತ 1. ಮೊದಲನೆಯದಾಗಿ, ನಿಮ್ಮ ಆಂಡ್ರಾಯ್ಡ್ ಡಿವೈಸ್ ನಲ್ಲಿ ಶೆಡ್ಯೂಲರ್ ಫಾರ್ ವಾಟ್ಸ್ ಆಪ್ ಆಪ್ಲಿಕೇಷನ್ ನ್ನು ಡೌನ್ ಲೋಡ್ ಮಾಡಿ.

ಹಂತ 2

ಹಂತ 2

ಒಮ್ಮೆ ಇನ್ಸ್ಟಾಲ್ ಆದ ನಂತರ, ಆಪ್ ನ್ನು ತೆರೆಯಿರಿ ಮತ್ತು ಇದು ನಿಮಗೆ ಮೆಸೇಜ್ ಗಳನ್ನು ಪ್ರೀಸೆಟ್ ಮಾಡಲು ಆಕ್ಸಿಸ್ ನ್ನು ಕೇಳುತ್ತದೆ. ಓಕೆ ಯನ್ನು ಟ್ಯಾಪ್ ಮಾಡಿ.

ಹಂತ 3.

ಹಂತ 3.

ಈಗ "+" ಬಟನ್ ನ್ನು ಟ್ಯಾಪ್ ಮಾಡಿ ಶೆಡ್ಯೂಲ್ ನ್ನು ಕ್ರಿಯೇಟ್ ಮಾಡಿ.

ಹಂತ 4.

ಹಂತ 4.

ಈಗ ನೀವು ಯಾರಿಗೆ ಕಳಿಸಬೇಕು ಎಂಬುದನ್ನು ಆಯ್ಕೆ ಮಾಡಿ, ಯಾವ ಸಮಯಕ್ಕೆ ಕಳಿಸಬೇಕು ಎಂಬುದನ್ನು ಸೆಟ್ ಮಾಡಿ, ಫ್ರೀಕ್ವೆನ್ಸಿಯನ್ನು ಸೆಟ್ ಮಾಡಿ ಕೊನೆಯದಾಗಿ ಏನು ಮೆಸೇಜ್ ಕಳಿಸಬೇಕು ಎಂಬುದನ್ನು ಕ್ರಿಯೇಟ್ ಮಾಡಿ.

ಹಂತ 5.

ಹಂತ 5.

ಒಮ್ಮೆ ಇದನ್ನು ಸೃಷ್ಟಿಸಿದ ನಂತರ, ಶೆಡ್ಯೂಲರ್ ಫಾರ್ ವಾಟ್ಸ್ ಆಪ್ ನ ಹೋಮ್ ಸ್ಕ್ರೀನ್ ನಲ್ಲಿ ಶೆಡ್ಯೂಲ್ ಟಾಸ್ಕ್ ನ್ನು ಗಮನಿಸಬಹುದು.

ಅಷ್ಟೇ..ನಿಮ್ಮ ಸೆಟ್ ಮಾಡಿದ ಸಮಯಕ್ಕೆ ಮೆಸೇಜ್ ಡೆಲಿವರ್ ಆಗುತ್ತದೆ.

SQEDit ಯನ್ನು ಬಳಸುವುದು - ಸ್ವಯಂಚಾಲಿತವಾಗಿ ನಿಗದಿಗೊಳಿಸುವ ಅಪ್ಲಿಕೇಷನ್ :

SQEDit ಯನ್ನು ಬಳಸುವುದು - ಸ್ವಯಂಚಾಲಿತವಾಗಿ ನಿಗದಿಗೊಳಿಸುವ ಅಪ್ಲಿಕೇಷನ್ :

SQEDit ಅತ್ಯುತ್ತಮವಾದ ಉಚಿತವಾದ ಮತ್ತು ಸುಲಭವಾಗಿ ಬಳಸಬಹುದಾಗ ಶೆಲ್ಯೂಡಿಂಗ್ ಆಪ್ ಆಗಿದೆ. ಇದು ನಿಮಗೆ ಟೆಕ್ಸ್ಟ್ ಮೆಸೇಜ್/ಎಸ್ಎಂಎಸ್, ಸ್ವಯಂಚಾಲಿತ ಇಮೇಲ್ ಗಳು, ಫೇಸ್ ಬುಕ್ ಪೋಸ್ಟ್ ಗಳನ್ನು ಶೆಡ್ಯೂಲ್ ಮಾಡಲು, ವಾಟ್ಸ್ ಆಪ್ ಮೆಸೇಜ್ ಗಳನ್ನು ಶೆಡ್ಯೂಲ್ ಮಾಡಲು ಮತ್ತು ಕಾಲ್ ರಿಮೈಂಡರ್ ಗಳನ್ನು ಸೆಟ್ ಮಾಡಲು ನೆರವಾಗುತ್ತದೆ.

ಹಂತ 1. ಮೊದಲಿಗೆ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ನಲ್ಲಿ SQEDit ಆಟೋ ಶೆಡ್ಯೂಲಿಂಗ್ ಅಪ್ಲಿಕೇಷನ್ ನ್ನು ಡೌನ್ ಲೋಡ್ ಮಾಡಿ ಇನ್ಸ್ಟಾಲ್ ಮಾಡಿ.

ಹಂತ 2.

ಹಂತ 2.

ಈಗ ಆಪ್ ನ್ನು ಲಾಂಚ್ ಮಾಡಿ ಮತ್ತು ಈ ಕೆಳಗೆ ತೋರಿಸಿದಂತ ಸ್ಕ್ರೀನ್ ಒಂದನ್ನು ನೀವು ಗಮನಿಸಬಹುದು. ಇಲ್ಲಿ ನೀವು ಒಂದು ಅಕೌಂಟನ್ನು ಸೃಷ್ಟಿಸಬೇಕು. ಅಲ್ಲದೇ ನೀವು ನಿಮ್ಮ ಫೇಸ್ ಬುಕ್ ಅಕೌಂಟ್ ಬಳಸಿ ಕೂಡ ಲಾಗಿನ್ ಆಗಲು ಅವಕಾಶವಿರುತ್ತದೆ.

ಹಂತ 3.

ಹಂತ 3.

ಈಗ ನೀವು ಕೆಳಗೆ ತೋರಿಸಿರುವಂತ ಸ್ಕ್ರೀನ್ ಒಂದನ್ನು ಗಮನಿಸುತ್ತೀರಿ.ಇಲ್ಲಿ ನೀವು ವಾಟ್ಸ್ ಆಪ್ ನ್ನು ಟ್ಯಾಪ್ ಮಾಡಬೇಕು.

ಹಂತ 4.

ಹಂತ 4.

ಈಗ ನೀವು ನಿಮ್ಮ ಕಾಂಟ್ಯಾಕ್ಟ್ ನ್ನು ಆಕ್ಸಿಸ್ ಮಾಡಲು ಸೂಕ್ತ ಅನುಮತಿಗಳನ್ನು ನೀಡಬೇಕಾಗುತ್ತದೆ. ಸರಳವಾಗಿ "Allow" ವನ್ನು ಟ್ಯಾಪ್ ಮಾಡಿ ಮುಂದುವರಿಯಿರಿ.

ಹಂತ 5.

ಹಂತ 5.

ಇಲ್ಲಿ ನೀವು ಮೆಸೇಜ್ ಕಳುಹಿಸಬೇಕಾಗಿರುವ ಸಮಯ ಮತ್ತು ದಿನಾಂಕವನ್ನು ಸೆಟ್ ಮಾಡಬೇಕು ಮತ್ತು ಏನು ಮೆಸೇಜ್ ಕಳುಹಿಸಬೇಕು ಎಂಬುದನ್ನು ಸೆಟ್ ಮಾಡಿ.

ಹಂತ 6.

ಹಂತ 6.

ಒಮ್ಮೆ ಇದನ್ನು ಸೆಟ್ ಮಾಡಿದ ನಂತರ, ನಿಮಗೊಂದು ನೋಟಿಫಿಕೇಷನ್ ಸಿಗುತ್ತದೆ. ಅದರಲ್ಲಿ ನೀವು ಸೆಟ್ ಮಾಡಿದ ಸಮಯಕ್ಕೆ ಇಂತಿಷ್ಟು ಹೊತ್ತಿದೆ ಎಂಬ ವಿವರಣೆ ಇರುತ್ತದೆ. ನಂತರ ಅಲ್ಲಿ "Send" ಬಟನ್ ನ್ನು ಟೈಪ್ ಮಾಡಿ.

ಹಂತ 7.

ಹಂತ 7.

ಈಗ ನೀವು ಯಾವ ಕಾಂಟ್ಯಾಕ್ಟ್ ನಂಬರಿಗೆ ಮೆಸೇಜ್ ಕಳುಹಿಸಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು.

ಇಷ್ಟು ಮಾಡಿದರೆ ಮುಗಿಯಿತು. ನೀವು ನಿಮ್ಮ ವಾಟ್ಸ್ ಆಪ್ ಮೆಸೇಜನ್ನು SQEDit ಆಪ್ಲಿಕೇಷನ್ ಮೂಲಕ ನಿಗದಿತ ಸಮಯಕ್ಕೆ ಕಳುಹಿಸುವಂತೆ ಸೆಟ್ ಮಾಡಿದಂತಾಗುತ್ತದೆ.

ಜಿಬಿವಾಟ್ಸ್ಆಪ್ ಬಳಸಿ

ಜಿಬಿವಾಟ್ಸ್ಆಪ್ ಬಳಸಿ

ಜಿಬಿ ವಾಟ್ಸ್ ಆಪ್ ಒಂದು ಬೆಸ್ಟ್ ವಾಟ್ಸ್ ಆಪ್ ಮೋಡ್ ಆಗಿದೆ. ನಾವಿಲ್ಲಿ ಜಿಬಿ ವಾಟ್ಸ್ ಆಪ್ ಮೂಲಕ ಹೇಗೆ ಮೆಸೇಜ್ ಕಳುಹಿಸುವುದನ್ನು ಪ್ರೀಸೆಟ್ ಮಾಡಬಹುದು ಎಂಬುದನ್ನು ಸರಳವಾಗಿ ತಿಳಿಸಿದ್ದೇವೆ.

ಹಂತ 1. ಮೊದಲನೆಯದಾಗಿ ಜಿಬಿವಾಟ್ಸ್ಆಪ್ ಅಪ್ಲಿಕೇಷನ್ ನ್ನು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ನಲ್ಲಿ ಡೌನ್ ಲೋಡ್ ಮಾಡಿ ಇನ್ಸ್ಟಾಲ್ ಮಾಡಿ.

ಹಂತ 2.

ಹಂತ 2.

ಆಪ್ ನ್ನು ತೆರೆಯಿರಿ ಮತ್ತು ನಿಮ್ಮ ವಾಟ್ಸ್ ಆಪ್ ನಂಬರ್ ಬಳಸಿ ಲಾಗ್ ಇನ್ ಆಗಿ. ಮೇಲ್ಬಾಗದ ಬಲ ಬದಿಯಲ್ಲಿರುವ ‘Message Scheduler' ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 3.

ಹಂತ 3.

ಮುಂದಿನ ಹಂತದಲ್ಲಿ, ನೀವು "+" ಬಟನ್ ನ್ನು ಟ್ಯಾಪ್ ಮಾಡಬೇಕು ಮತ್ತು ನಿಮ್ಮ ಹೊಸ ಶೆಡ್ಯೂಲ್ ನ್ನು ಸೇರಿಸಿ.

ಹಂತ 4.

ಹಂತ 4.

ಈಗ ನೀವು ಎಲ್ಲಾ ವಿವರಗಳನ್ನು ತುಂಬಿಸಬೇಕು ಮತ್ತು ‘Schedule' ಆಯ್ಕೆಯನ್ನು ಟ್ಯಾಪ್ ಮಾಡಿ.

ಇದಿಷ್ಟು ಮಾಡಿದರೆ ನಿಮ್ಮ ಕೆಲಸವಾದಂತೆ! ಇದು ಜಿಬಿವಾಟ್ಸ್ ಆಪ್ ಬಳಸಿ ಆಂಡ್ರಾಯ್ಡ್ ನಲ್ಲಿ ವಾಟ್ಸ್ ಆಪ್ ಮೆಸೇಜ್ ಗಳನ್ನು ಶೆಡ್ಯೂಲ್ ಮಾಡುವ ಸುಲಭ ವಿಧಾನವಾಗಿದೆ.

Best Mobiles in India

English summary
How To Schedule Whatsapp Messages On Android (4 Methods). To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X