ಫೇಸ್‌ಬುಕ್ ಸೆಕ್ಯೂರ್ ಮಾಡುವುದು ಹೇಗೆ..? FB ಬಳಕೆದಾರರ ಗಮನಕ್ಕೆ

Written By:

ದಿನದಲ್ಲಿ ಹೆಚ್ಚು ಹೊತ್ತು ಫೇಸ್‌ಬುಕ್ ನಲ್ಲೇ ಕಳೆಯುವವರು ಇಂದು ನಿಮ್ಮ ನಡುವೆ ಇದ್ದಾರೆ. ಅಲ್ಲದೇ ಫೇಸ್‌ಬುಕ್ ನಲ್ಲೇ ಎಲ್ಲಾ ಮಾಹಿತಿಯನ್ನು ಹಂಚಿಕೊಳ್ಳುವುದಲ್ಲದೇ, ಬೇರೆಯಾದರೂ ಅವರ ಫೇಸ್‌ಬುಕ್ ನೋಡಿದರೆ ತೊಂದರೆಗೆ ಸಿಲುಕುತ್ತಾರೆ. ಈ ಹಿನ್ನಲೆಯಲ್ಲಿ ಫೇಸ್‌ಬುಕ್ ಆಕೌಂಟ್ ಅನ್ನು ಸೇಫ್ ಆಗಿ ಇಟ್ಟುಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ.

ಫೇಸ್‌ಬುಕ್ ಸೆಕ್ಯೂರ್ ಮಾಡುವುದು ಹೇಗೆ..? FB ಬಳಕೆದಾರರ ಗಮನಕ್ಕೆ

ಇಂದಿನ ದಿನದಲ್ಲಿ ಫೇಸ್‌ಬುಕ್ ಬಳಕೆಯೂ ಪ್ರತಿ‍ಷ್ಠೆ ವಿಚಾರವಾಗಿದ್ದು, ಹಾಗೇ ಅದನ್ನು ಕಾಪಾಡಿಕೊಳ್ಳುವುದು ದೊಡ್ಡ ಜವಬ್ದಾರಿಯಾಗಿದೆ. ಇಲ್ಲದಾದರೆ ಬೇರೆಯವರು ನಮ್ಮ ಫೇಸ್‌ಬುಕ್ ಆಕೌಂಟ್ ಹ್ಯಾಕ್‌ ಮಾಡಿ ಬೇರೆ ಮಾದರಿಯಲ್ಲಿ ಬಳಕೆ ಮಾಡಿಕೊಂಡು ಅಪಾಯಕ್ಕೆ ಸಿಲುಕಿಸುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ನಿಮ್ಮ ಫೇಸ್‌ಬುಕ್‌ ಅನ್ನು ಸೇಫ್ ಮಾಡಿರಿ.

ಓದಿರಿ: ಬಿಗ್ ಬಜಾರ್ ಮುಂದೆ ಜನಸಾಗರ: ರೂ.4000ಕ್ಕೆ ರೆಡ್‌ಮಿ 5A ಸ್ಮಾರ್ಟ್‌ಫೋನ್ ಮಾರಾಟ..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊಬೈಲ್ ನಂಬರ್ ಲಿಂಕ್ ಮಾಡಿರಿ:

ಮೊಬೈಲ್ ನಂಬರ್ ಲಿಂಕ್ ಮಾಡಿರಿ:

ನಿಮ್ಮ ಫೇಸ್‌ಬುಕ್‌ ಆಕೌಂಟ್‌ಗೆ ನಿಮ್ಮ ಮೊಬೈಲ್‌ ನಂಬರ್‌ ಲಿಂಕ್ ಮಾಡಿರಿ. ಇದರಿಂದ ನಿಮಗೆ ಪಾಸ್‌ವರ್ಡ್‌ ಮರೆತು ಹೋದ ಸಂದರ್ಭದಲ್ಲಿ ಆಕೌಂಟ್ ರಿಕವರಿ ಮಾಡಿಲು ಸುಲಭವಾಗಲಿದೆ. ಖಾತೆ ಹ್ಯಾಕ್‌ ಆದಾಗ ಖಾತೆಯನ್ನು ಮರಳಿ ಹಿಂಪಡೆಯುವುದು ಮೊಬೈಲ್ ನಂಬರ್ ಇದ್ದರೇ ಬಹಳ ಸುಲಭ.

ಟು ಸ್ಟೆಪ್ ವೇರಿಫಿಕೇಷನ್:

ಟು ಸ್ಟೆಪ್ ವೇರಿಫಿಕೇಷನ್:

ಟು ಸ್ಟೆಪ್‌ ವೆರಿಫಿಕೇಷನ್‌ ಆಯ್ಕೆಯನ್ನು ಫೇಸ್‌ಬುಕ್‌ ನಲ್ಲಿ ಕಾಣಬಹುದು. ಇದು ನಿಮ್ಮ ಖಾತೆಗೆ ಎರಡು ಹಂತಗಳ ಸುರಕ್ಷತೆ ನೀಡಲಿದೆ. ಫೇಸ್‌ಬುಕ್ ಲಾಗಿನ್‌ ಆಗುವಾಗ ಪಾಸ್‌ವರ್ಡ್‌ ಎಂಟ್ರಿ ಮಾಡಿದ ನಂತರ ನಿಮ್ಮ ಮೊಬೈಲ್‌ಗೆ OTP ಬರುತ್ತೆ ಇದನ್ನು ಲಾಗಿನ್‌ ಪೇಜ್‌ನಲ್ಲಿ ಏಂಡ್ರಿ ಮಾಡಬೇಕು.

Jio-Fi ಪಾಸ್‌ವರ್ಡ್ ಬದಲಾಯಿಸುವುದು ಹೇಗೆ,,?
ಸೆಕ್ಯೂರ್ ಬ್ರೌಸಿಂಗ್ ಮಾಡಿ:

ಸೆಕ್ಯೂರ್ ಬ್ರೌಸಿಂಗ್ ಮಾಡಿ:

ವೆಬ್‌ನಲ್ಲಿ ಫೇಸ್‌ಬುಕ್‌ ಬಳಕೆ ಮಾಡುವವರು ತಮ್ಮ ಅಕೌಂಟ್‌ ಸೆಟ್ಟಿಂಗ್ಸ್ ನಲ್ಲಿ ಸೆಕ್ಯುರಿಟಿ ಹೋಗಿ ಅಲ್ಲಿರುವ ಸೆಕ್ಯೂರ್‌ ಬ್ರೌಸಿಂಗ್ ಆಯ್ಕೆಯಿದ್ದು, ಅದನ್ನು ಆನ್ ಮಾಡಿಕೊಂಡರೆ ನಿಮ್ಮ ಬ್ರೌಸಿಂಗ್ ವಿಧಾನ ಸುಕ್ಷಿತವಾಗಿರಲಿದೆ.

ಎಲ್ಲೇಲ್ಲೋ ಬಳಕೆ ಮಾಡಬೇಡಿ:

ಎಲ್ಲೇಲ್ಲೋ ಬಳಕೆ ಮಾಡಬೇಡಿ:

ಸಿಕ್ಕ ಸಿಕ್ಕ ಕಂಪ್ಯೂಟರ್‌ ಅಥವಾ ಮೊಬೈಲ್‌ನಿಂದ ಫೇಸ್‌ಬುಕ್ ಲಾಗಿನ್‌ ಆಗಬೇಡಿ, ಆದರೂ ನಿಮ್ಮ ಕೆಲಸವಾದ ನಂತರ ಲಾಗ್‌ಔಟ್‌ ಆಗಲು ಮರೆಯದಿರಿ. ಕೆಫೆಗಳ ಕಂಪ್ಯೂಟರ್‌ ಬಳಸುವಾಗ ಎಚ್ಚರಿಕೆಯಿಂದ ಇರಿ. ಎಂದಿಗೂ ನಿಮ್ಮ ಆಕೌಂಟ್ ಅನ್ನು ಲಾಗ್‌ ಇನ್ ಆಗಿರುವ ಆಯ್ಕೆಗೆ ಓಕೆ ನೀಡಬೇಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
how to secure facebook account. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot