ಈ ಐದು ವಿಷಯಗಳನ್ನು ಇಂಟರ್‌ನೆಟ್ ಬಳಸುವ ಎಲ್ಲರೂ ತಿಳಿಯಲೇಬೇಕು!!

ನಮ್ಮ ಕಾಲದಲ್ಲಿ ಇಂಟರ್‌ನೆಟ್ ಇರಲಿಲ್ಲ ಹಾಗಾಗಿ ನಮಗೆ ಅದರ ಸಹವಾಸವೂ ಬೇಡ ಎಂದು ಹೇಳಿ ಏನಾದರೂ ಆನ್‌ಲೈನ್ ಪ್ರಪಂಚವನ್ನು ನಿರ್ಲಕ್ಷಿಸುವವರು ಹೆಚ್ಚಾಗಿದ್ದಾರೆ.

|

ನಮ್ಮ ಕಾಲದಲ್ಲಿ ಇಂಟರ್‌ನೆಟ್ ಇರಲಿಲ್ಲ ಹಾಗಾಗಿ ನಮಗೆ ಅದರ ಸಹವಾಸವೂ ಬೇಡ ಎಂದು ಹೇಳಿ ಏನಾದರೂ ಆನ್‌ಲೈನ್ ಪ್ರಪಂಚವನ್ನು ನಿರ್ಲಕ್ಷಿಸುವವರು ಹೆಚ್ಚಾಗಿದ್ದಾರೆ. ಆದರೆ, ಡಿಜಿಟಲ್ ಯುಗಕ್ಕೆ ಕಾಲಿಟ್ಟಮೇಲೆ ಇಂಟರ್‌ನೆಟ್ ಪ್ರಪಂಚದ ಬಗ್ಗೆ ನಾನು ತಿಳಿದಿಲ್ಲ ಎನ್ನುವುದು ನಮ್ಮ ಮೂರ್ಖತನದ ಪರಮಾವಧಿ ಎನ್ನುತ್ತಾರೆ ತಜ್ಞರು.!

ಹೌದು, ಇಂದು ಏನೇ ಇದ್ದರೂ ಅದು ಇಂಟರ್‌ನೆಟ್‌ನಲ್ಲಿ ಮಾತ್ರ.! ಇಂಟರ್‌ನೆಟ್ ನಮಗೇನು ಅನ್ನ ಕೊಡುತ್ತಿದೆಯೇ ಎಂದು ಅಸಂಬದ್ದ ಪ್ರಶ್ನೆಗಳನ್ನು ಕೇಳುವುದನ್ನು ಬಿಟ್ಟು ಇಂಟರ್‌ನೆಟ್ ಪ್ರಪಂಚದ ಬಗ್ಗೆ ತಿಳೀದುಕೊಳ್ಳುವುದು ಮುಖ್ಯ. ಏಕೆಂದರೆ, ಇಂಟರ್‌ನೆಟ್ ಇಲ್ಲದಿದ್ದರೂ ಅನ್ನ ಸಿಗಬಹುದು. ಆದರೆ, ಖಂಡಿತವಾಗಿಯೂ ಈ ಆಧುನಿಕ ಯುಗದಲ್ಲಿ ಬದುಕುವುದು ಕಷ್ಟ.!

ಈ ಐದು ವಿಷಯಗಳನ್ನು ಇಂಟರ್‌ನೆಟ್ ಬಳಸುವ ಎಲ್ಲರೂ ತಿಳಿಯಲೇಬೇಕು!!

ಮಾಹಿತಿ, ಸರ್ಕಾರಿ, ಬ್ಯಾಂಕಿಂಗ್ ಹೀಗೆ ಯಾವುದೇ ಕ್ಷೇತ್ರಗಳನ್ನು ತೆಗೆದುಕೊಳ್ಳಿ ಈಗ ಎಲ್ಲಾ ಕಾರ್ಯಗಳು ಆನ್‌ಲೈನಿನಲ್ಲಿಯೇ ನಡೆಯುತ್ತವೆ. ಹಾಗಾಗಿ, ನಾವು ಈ ಡಿಜಿಟಲ್ ಪ್ರಪಂಚದ ಬಗ್ಗೆ ತಿಳಿಯಲೇಬೇಕು. ಅದರಲ್ಲಿ ಪ್ರಮುಖವಾಗಿ ನಿಮ್ಮ ಇಂಟರ್‌ನೆಟ್ ಸುರಕ್ಷತೆ ಬಗ್ಗೆ ತಿಳಿಯಲು ಕನ್ನಡ ಗಿಜ್‌ಬಾಟ್ ನಿಮಗೆ ಸಹಾಯ ಮಾಡುತ್ತದೆ.

 ಪಾಸ್‌ವರ್ಡ್‌!!

ಪಾಸ್‌ವರ್ಡ್‌!!

ಪ್ರತಿಯೋರ್ವರ ಬಳಿಯೂ ಏನಿಲ್ಲವೆಂದರೂ ಹತ್ತು ಪಾಸ್‌ವರ್ಡ್‌ಗಳೂ ಇದ್ದೇ ಇರುತ್ತವೆ. ಈ ಪಾಸ್‌ವರ್ಡ್‌ಗಳು ಡಿಜಿಟಲ್ ಪ್ರಪಂಚದ ಸುರಕ್ಷತೆಯ ಅಂಶಗಳಲ್ಲಿ ಪ್ರಮುಖವಾದವು. ಪಾಸ್‌ವರ್ಡ್‌ಗಳು ಗುಪ್ತ ಅಂಕಿಗಳಾಗಿರುವುದರಿಂದ ಅವುಗಳ ನಿರ್ವಹಣೆ ಬಹಳ ಮುಖ್ಯ.! ಒಂದೇ ಪಾಸ್‌ವರ್ಡ್ ಅನ್ನು ಎರಡು ವೆಬ್‌ಸೈಟ್‌ಗಳಿಗೆ ಬಳಕೆ ಮಾಡಿಕೊಳ್ಳುವುದು, ಸುಲಭವಾಗಿ ನೆನಪಾಗುವಂತಹ ಪಾಸ್‌ವರ್ಡ್ ಬಳಸುವುದು, ಹತ್ತಿರದವರ ಹೆಸರನ್ನೇ ಪಾಸ್‌ವರ್ಡ್‌ ಮಾಡಿಕೊಳ್ಳುವುದು ಡಿಜಿಟಲ್ ಪ್ರಪಂಚದ ಬಹುದೊಡ್ಡ ತಪ್ಪು ಎನ್ನಬಹುದು.!!

ಮಾಹಿತಿ ಹಂಚಿಕೆ!!

ಮಾಹಿತಿ ಹಂಚಿಕೆ!!

ಯಾವುದೇ ಕಾರಣಕ್ಕೂ ನಮ್ಮ ಡಿಜಿಟಲ್ ವೈಯಕ್ತಿಕ ಮಾಹಿತಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಏಕೆಂದರೆ, ನಾವು ಡಿಜಿಟಲ್ ಪ್ರಪಂಚದಲ್ಲಿ ಪಾಸ್‌ವರ್ಡ್ ಮೂಲಕ ಭಧ್ರವಾಗಿದ್ದರೂ ಸಹ ನಮ್ಮ ಡಿಜಿಟಲ್ ವೈಯಕ್ತಿಕ ಮಾಹಿತಿಗಳು ನಮ್ಮ ಭಧ್ರತೆಗೆ ಆತಂಕ ತರಬಹುದು. ಒಂದು ವೇಳೆ ನೀವು ಪಾಸ್‌ವರ್ಡ್‌ ಹಂಚಿಕೊಂಡಲ್ಲಿ, ‘ಫರ್ಗೆಟ್ ಪಾಸ್‌ವರ್ಡ್' ವಿಧಾನದ ಮೂಲಕ ನಮ್ಮ ಖಾತೆಯ ನಿಯಂತ್ರಣ ಪಡೆದುಕೊಳ್ಳಲು ಹ್ಯಾಕರ್‌ಗಳಿಗೆ ಅನುವು ಮಾಡಿಕೊಟ್ಟಂತೆಯೇ ಸರಿ.

ಅಪ್‌ಡೇಟ್!!

ಅಪ್‌ಡೇಟ್!!

ಕಂಪ್ಯೂಟರ್ ಆಗಿರಲಿ ಅಥವಾ ಸ್ಮಾರ್ಟ್‌ಫೋನ್ ಆಗಿರಲಿ ಯಾವಾಗಲೂ ಆ ಸಾಧನಗಳ ಸಾಫ್ಟ್‌ವೇರ್ ಅನ್ನು ಅಪ್‌ಡೇಟ್ ಮಾಡುತ್ತಿರಬೇಕು. ಯಾವುದೇ ಎಲೆಕ್ಟ್ರಾನಿಕ ಸಾಧನಗಳ ಸಾಫ್ಟ್‌ವೇರ್ ಅಪ್‌ಡೇಟ್ ಮಾಡುವುದು, ಆ ಸಾಧನಗಳ ಸುರಕ್ಷತೆಯ ಮೊದಲ ಹೆಜ್ಜೆ ಎಂದು ಟೆಕ್ ತಜ್ಞರು ಹೇಳುತ್ತಾರೆ. ಸಾಫ್ಟ್‌ವೇರ್ ಅಪ್‌ಡೇಟ್ ಮಾಡುವುದರಿಂದ ಹೆಚ್ಚಿನ ಸೇವೆಗಳು ನಮಗೆ ದೊರೆಯುವುದಲ್ಲದೆ, ಹ್ಯಾಕರ್‌ಗಳಿಂದ ರಕ್ಷಣೆ ದೊರೆಯುತ್ತದೆ ಎಂಬುದು ಇದರ ಮತ್ತೊಂದು ಉದ್ದೇಶ.

ಬಳಸುವ ಅಪ್ಲಿಕೇಷನ್‌ಗಳು!!

ಬಳಸುವ ಅಪ್ಲಿಕೇಷನ್‌ಗಳು!!

ಸ್ಮಾರ್ಟ್‌ಫೋನ್ ಬಳಸುವ ಪ್ರತಿಯೋರ್ವನೂ ಕೂಡ ಕನಿಷ್ಟವೆಂದರೂ ಸರಾಸರಿ 2 ಅನವಶ್ಯಕ ಆಪ್‌ಗಳನ್ನು ತನ್ನ ಸ್ಮಾರ್ಟ್‌ಫೋನಿನಲ್ಲಿ ಹೊಂದಿರುತ್ತಾನಂತೆ. ಆದರೆ, ಇದು ವಿಷಯವಲ್ಲ. ಏಕೆಂದರೆ, ಅಪ್ಲಿಕೇಷನ್‌ಗಳನ್ನು ಸಹ ಹ್ಯಾಕ್ ಮಾಡುವ ಸಾಧ್ಯತೆಗಳಿವೆ ಎನ್ನುವುದನ್ನು ಹಲವು ಹಣಕಾಸಿನ ಕಂಪೆನಿಗಳ ಸಾಫ್ಟ್‌ವೇರ್‌ಗಳನ್ನು ವಿಶ್ಲೇಷಿಸಿದಾಗ ಬೆಳಕಿಗೆ ಬಂದಿದೆ. ಈ ಅಪ್ಲಿಕೇಷನ್ ಮೂಲಕ ಸೂಕ್ಷ್ಮವಾದ ಮಾಹಿತಿಯನ್ನು ಕದಿಯಬಹುದಾಗಿದೆ. ಹಾಗಾಗಿ, ಆಪ್‌ ಬಳಸುವಾದ ನೀವು ಎಚ್ಚರ.

Karnataka Election 2018: Chunavana app will find your booth in click - GIZBOT KANNADA
ಪಾಪ್‌–ಅಪ್ ಬ್ಲಾಕರ್‌ಗಳು

ಪಾಪ್‌–ಅಪ್ ಬ್ಲಾಕರ್‌ಗಳು

ಫೈರ್‌ಫಾಕ್ಸ್‌, ಕ್ರೋಮ್‌, ಇಂಟರ್‌ನೆಟ್‌ ಎಕ್ಸ್‌ಪ್ಲೋರರ್, ಸಫಾರಿ ಹೀಗೆ ಪ್ರತಿಯೊಂದು ಬ್ರೌಸರ್‌ಗಳಿಗೂ ಬೇರೆ ಬೇರೆ ಎಕ್ಸ್‌ಟೆನ್ಷನ್‌ಗಳಿವೆ. ಟ್ರಯಲ್ ವರ್ಷನ್‌ನಲ್ಲಿರುವ ಪಾಪ್‌-ಅಪ್ ಬ್ಲಾಕರ್‌ಗಳು ಅನಿಮೇಟೆಡ್ ಮತ್ತು ಫ್ಲೋಟಿಂಗ್‌ ಆಡ್‌ಗಳನ್ನು ತಡೆಯಲಾರವು. ಫ್ಲ್ಯಾಶ್‌ ಆಡ್‌, ಟೈಮರ್‌ ಆಡ್‌, ಡೈಲಾಗ್‌ ಬಾಕ್ಸ್‌ ಆಡ್‌ ಮತ್ತು ಮೆಸೇಜ್‌ ಬಾಕ್ಸ್ ಆಡ್‌ಗಳನ್ನೂ ತಡೆಯಲು ಪರಿಣಾಮಕಾರಿಯಾದ ಟೂಲ್‌ಬಾರ್‌ ಬೇಕು. ಬ್ರೌಸರ್‌ಗಳ ವೇಗವರ್ಧನೆಗೆ ಹಲವು ವೆಬ್‌ ಬೇಸ್ಡ್ ಟೂಲ್‌ಗಳಿವೆ.

Best Mobiles in India

English summary
the Internet continues to represent a tool of great potential in areas as diverse as cost-cutting. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X