ಫೇಸ್‌ಬುಕ್‌ನಲ್ಲಿ ನಿಮ್ಮ ಅಕೌಂಟ್‌ನ್ನು ಇನ್ನಷ್ಟು ಭದ್ರಪಡಿಸಿಕೊಳ್ಳಿ..!

|

ಇತ್ತೀಚೆಗೆ ಸುಮಾರು 50 ಮಿಲಿಯನ್ ಫೇಸ್ ಬುಕ್ ಅಕೌಂಟ್ ಗಳು ಹ್ಯಾಕ್ ಆದ ಬೆನ್ನಲ್ಲೇ, ನಾವು ನಮ್ಮ ಅಕೌಂಟ್ ನ್ನು ಸುಭದ್ರವಾಗಿಡಲು ತೆಗೆದುಕೊಳ್ಳಬೇಕಾಗಿರುವ ಕ್ರಮಗಳನ್ನು ಅನುಸರಿಸುವುದು ಬಹಳ ಒಳ್ಳೆಯದು. ಇದಕ್ಕಾಗಿ ನೀವು ಟು-ಫ್ಯಾಕ್ಟರ್ ಅಥೆಂಟಿಕೇಷನ್ ನ್ನು ನಿಮ್ಮ ಫೇಸ್ ಬುಕ್ ಅಕೌಂಟ್ ಗಳಲ್ಲಿ ಆನ್ ಮಾಡುವುದು ಬಹಳ ಉತ್ತಮ ಮಾರ್ಗ.

ಫೇಸ್‌ಬುಕ್‌ನಲ್ಲಿ ನಿಮ್ಮ ಅಕೌಂಟ್‌ನ್ನು ಇನ್ನಷ್ಟು ಭದ್ರಪಡಿಸಿಕೊಳ್ಳಿ..!

ಟು-ಫ್ಯಾಕ್ಟರ್ ಅಥೆಂಟಿಕೇಷನ್ ಎಂದರೇನು?

ಟು-ಫ್ಯಾಕ್ಟರ್ ಅಥೆಂಟಿಕೇಷನ್ ಎಂದರೇನು?

ಟು-ಫ್ಯಾಕ್ಟರ್ ಅಥೆಂಟಿಕೇಷನ್ ಎಂದರೆ ಇದು ನಿಮ್ಮ ಅಕೌಂಟಿಗೆ ಹೆಚ್ಚುವರಿ ಭದ್ರತಾ ಪದರವನ್ನು ನೀಡುತ್ತದೆ. ಅಂದರೆ ಹ್ಯಾಕರ್ ಗಳ ಪ್ರವೇಶವನ್ನು ದುಪ್ಪಟ್ಟು ತಡೆಯುವ ಸಾಮರ್ಥ್ಯ ಎಂದು ಹೇಳಬಹುದು.

ಟು ಫ್ಯಾಕ್ಟರ್ ಅಥೆಂಟಿಕೇಷನ್ ಆಕ್ಟಿವೇಟ್ ಮಾಡುವುದು ಹೇಗೆ?

ಟು ಫ್ಯಾಕ್ಟರ್ ಅಥೆಂಟಿಕೇಷನ್ ಆಕ್ಟಿವೇಟ್ ಮಾಡುವುದು ಹೇಗೆ?

ಟು ಫ್ಯಾಕ್ಟರ್ ಅಥೆಂಟಿಕೇಷನ್ ನ್ನು ಆಕ್ಟಿವೇಟ್ ಮಾಡಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.

1. ಮೊದಲು ನಿಮ್ಮ ಫೇಸ್ ಬುಕ್ ಅಕೌಂಟಿಗೆ ಲಾಗಿನ್ ಆಗಿ.

2. ಮೇಲ್ಬಾಗದ ಬಲಗಡೆ ಇರುವ ಇನ್ವರ್ಟೆಡ್ ಟ್ರ್ಯಾಗಂಲ್ ನ್ನು ಕ್ಲಿಕ್ಕಿಸಿ ಮತ್ತು ಸೆಟ್ಟಿಂಗ್ಸ್ ಗೆ ತೆರಳಿ.

3. ‘Security and Login' ಆಯ್ಕೆಗೆ ತೆರಳಿ.

4. ‘Security and Login' ಇದರ ಒಳಗೆ ನೀವು ‘Change password' ಮತ್ತು ‘Login with your profile picture' ಎಂಬ ಆಯ್ಕೆಗಳನ್ನು ಗಮನಿಸುತ್ತೀರಿ.ಇದರ ಕೆಳಗೆ ‘Two-factor authentication' ಕೂಡ ಇರುತ್ತದೆ.

5. ‘Use two-factor authentication' ನ್ನು ಕ್ಲಿಕ್ಕಿಸಿ ಅಥವಾ ಟ್ಯಾಪ್ ಮಾಡಿ.

ಇದೀಗ ನಿಮಗೆ ಟು-ಫ್ಯಾಕ್ಟರ್ ಅಥೆಂಟಿಕೇಷನ್ ನ್ನು ಸೆಟ್ ಮಾಡಲು ಎರಡು ಮಾರ್ಗಗಳಿರುತ್ತದೆ. ಮೊದಲನೆಯದು ‘Text message' ಆಯ್ಕೆ ಮತ್ತು ಎರಡನೆಯದು ಅಥೆಂಟಿಕೇಷನ್ ಆಪ್ ಗಳನ್ನು ಉದಾಹರಣೆಗೆ ಗೂಗಲ್ ಅಥೆಂಟಿಕೇಷನ್ ಅಥವಾ ಡುಯೋ ಮೊಬೈಲ್ ಆಪ್ ಗಳನ್ನು ಬಳಸುವುದು.

‘Text message’ ಆಯ್ಕೆಯನ್ನು ಬಳಸಿ ಹೇಗೆ ಮಾಡುವುದು?

‘Text message’ ಆಯ್ಕೆಯನ್ನು ಬಳಸಿ ಹೇಗೆ ಮಾಡುವುದು?

1. ನೀವು ಯಾವಾಗ ‘Text message' ಆಯ್ಕೆಯನ್ನು ಸೆಲೆಕ್ಟ್ ಮಾಡಿದಿರೋ ಆಗ 6 ಡಿಜಿಟ್ ನ ಕೋಡ್ ನ್ನು ನಿಮ್ಮ ರಿಜಿಸ್ಟ್ರರ್ ಆಗಿರುವ ಮೊಬೈಲ್ ನಂಬರಿಗೆ ಕಳುಹಿಸಿಕೊಡಲಾಗುತ್ತೆ. ಆ ನಂಬರ್ ನ್ನು ನೀವು ಎಂಟರ್ ಮಾಡಿ ವೆರಿಫಿಕೇಷನ್ ನ್ನು ಪೂರ್ಣಗೊಳಿಸಬೇಕಾಗುತ್ತದೆ.

2.ನಿಮ್ಮ ಫೋನ್ ನಂಬರಿಗೆ ತಲುಪಿರುವ ಕೋಡ್ ನ್ನು, ಕೋಡ್ ಎಂಟರ್ ಮಾಡಲು ಇರುವ ಜಾಗದಲ್ಲಿ ಎಂಟರ್ ಮಾಡಿದರೆ ನಿಮ್ಮ ಕೆಲಸ ಆದಂತೆ.

3.ನಿಮಗೆ ಟು-ಫ್ಯಾಕ್ಟರ್ ಅಥೆಂಟಿಕೇಷನ್ ಪೂರ್ಣವಾಗಿರುವ ಖಾತ್ರಿ ಮೆಸೇಜ್ ತಲುಪುತ್ತದೆ.

ಅಥೆಂಟಿಕೇಷನ್ ಆಪ್ ಬಳಸಿ ಹೇಗೆ ಮಾಡುವುದು?

ಅಥೆಂಟಿಕೇಷನ್ ಆಪ್ ಬಳಸಿ ಹೇಗೆ ಮಾಡುವುದು?

1. ಒಂದು ವೇಳೆ ನೀವು ನಿಮ್ಮ ಮೊಬೈಲ್ ನಂಬರ್ ನ್ನು ರಿಜಿಸ್ಟರ್ ಮಾಡಿಲ್ಲದೇ ಇದ್ದಲ್ಲಿ ಅಥವಾ ಮೇಲಿನ ಆಯ್ಕೆಯನ್ನು ನೀವು ಬಳಸಲು ಇಚ್ಛಿಸದೇ ಇದ್ದಲ್ಲಿ ನೀವು ಎರಡನೇ ವಿಧಾನವನ್ನು ಕೂಡ ಬಳಕೆ ಮಾಡಬಹುದು. ಒಂದು ವೇಳೆ ನಿಮ್ಮ ಅಥೆಂಟಿಕೇಷನ್ ಆಪ್ ಇಲ್ಲದೇ ಇದ್ದಲ್ಲಿ ನಾವು ಮೇಲೆ ತಿಳಿಸಿರುವ ಯಾವುದೇ ಒಂದು ಅಥೆಂಟಿಕೇಷನ್ ಆಪ್ ನ್ನು ಇನ್ಸ್ಟಾಲ್ ಮಾಡಿಕೊಳ್ಳಿ.

2.ಈಗ, ಸ್ಕ್ರೀನ್ ನಲ್ಲಿ ಡಿಸ್ಪ್ಲೇ ಆಗುವ QR ಕೋಡನ್ನು ಸ್ಕ್ಯಾನ್ ಮಾಡಿ ಅಥವಾ ಅಥೆಂಟಿಕೇಷನ್ ಆಪ್ ನಲ್ಲಿ ಡಿಸ್ಪ್ಲೇ ಆಗುವ ಕೋಡ್ ನ್ನು ನೀವು ಎಂಟರ್ ಮಾಡಬೇಕು.

3.ನೀವು ಹೊಸ ಕೋಡ್ ಒಂದನ್ನು ನಿಮ್ಮ ಆಪ್ ನಲ್ಲಿ ರಿಸೀವ್ ಮಾಡುತ್ತೀರಿ. ಯಾವಾಗ ಕೇಳಲಾಗುತ್ತದೆಯೋ ಆಗ ಆ ಕೋಡನ್ನು ಎಂಟರ್ ಮಾಡಿ. ಇದೀಗ ಟು-ಫ್ಯಾಕ್ಟರ್ ಅಥೆಂಟಿಕೇಷನ್ ಆಕ್ಟಿವೇಟ್ ಆಗಿರುತ್ತದೆ.

Best Mobiles in India

English summary
How to secure your Facebook account with two-factor authentication. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X