ನಿಮ್ಮ ವೆಬ್‌ಸೈಟ್‌ ಹ್ಯಾಕ್‌ ಆಗಬಹುದು..! ಸೆಕ್ಯೂರ್‌ ಮಾಡುವುದು ಹೇಗೆ..?

|

ನಿಮ್ಮ ವೆಬ್ ಸೈಟ್ ನ್ನು ಹ್ಯಾಕ್ ಮಾಡಲು ಕಾರಣಗಳೇ ಇಲ್ಲ ಎಂದು ನೀವು ಅಂದುಕೊಳ್ಳುತ್ತಿರಬಹುದು. ಆದರೆ ಹ್ಯಾಕರ್ ಗಳು ಯಾಕಾಗಿ ನಿಮ್ಮ ವೆಬ್ ಸೈಟ್ ನ್ನು ಹ್ಯಾಕ್ ಮಾಡುತ್ತಾರೆ ಎಂಬುದನ್ನು ಹೇಳಲಾಗುವುದಿಲ್ಲ. ಯಾವ ಸಂದರ್ಬದಲ್ಲಿ ಬೇಕಿದ್ದರೂ ನಿಮ್ಮ ವೆಬ್ ಸೈಟ್ ನಲ್ಲಿರುವ ಸೆನ್ಸಿಟೀವ್ ಡಾಟಾ ಮತ್ತು ಮಹತ್ವದ ದಾಖಲಾತಿಗಳನ್ನು ಅವರು ಕದಿಯಬಹುದು.

ನಿಮ್ಮ ವೆಬ್‌ಸೈಟ್‌ ಹ್ಯಾಕ್‌ ಆಗಬಹುದು..! ಸೆಕ್ಯೂರ್‌ ಮಾಡುವುದು ಹೇಗೆ..?

ಈ ಆನ್ ಲೈಟ್ ಕಳ್ಳರ ಭಯ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಸಂದರ್ಬದಲ್ಲಿ ನಿಮ್ಮ ವೆಬ್ ಸೈಟ್ ನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಖಂಡಿತ ನಿಮಗೆ ಅವಕಾಶವಿದೆ. ಇತ್ತೀಚಿನ ದಿನಗಳಲ್ಲಿ ಆಟೋಮೆಟೆಡ್ ಸ್ಕ್ರಿಪ್ಟ್ ಗಳನ್ನು ಹ್ಯಾಕರ್ ಗಳು ಬಳಸುತ್ತಾರೆ ಮತ್ತು ವೆಬ್ ಸೈಟ್ ಮಾಹಿತಿಗಳನ್ನು ದುರುದ್ದೇಶಪೂರಿತವಾಗಿ ಬಳಸುತ್ತಾರೆ. ಆದರೆ ಇದರಿಂದ ನಿಮ್ಮ ವೆಬ್ ಸೈಟ್ ನ್ನು ಕಾಪಾಡುವುದು ಹೇಗೆ ಎಂಬ ಬಗ್ಗೆ ಕೆಲವು ಮಾಹಿತಿಗಳು ಇಲ್ಲಿವೆ ನೋಡಿ.

HTTPS ಬಳಸಿ

HTTPS ಬಳಸಿ

ಜುಲೈ 2018 ರಿಂದ ಯಾವೆಲ್ಲ ಸೈಟ್ ಗಳು HTTPS ನ್ನು ಬಳಕೆ ಮಾಡುತ್ತಿಲ್ಲ ಎಂಬುದನ್ನು ಗುರುತಿಸಲು ಗೂಗಲ್ ಆರಂಭಿಸಿದೆ ಮತ್ತು ಅದು ಅಸುರಕ್ಷಿತ ಎಂದು ಭಾವಿಸಿದೆ. ಒಂದು ವೇಳೆ ನಿಮ್ಮ ವೆಬ್ ಸೈಟ್ ಗೆ ಇದುವರೆಗೂ ನೀವು ಇದನ್ನು ಬಳಸದೇ ಇದ್ದಲ್ಲಿ ಕೂಡಲೇ ಬಳಕೆ ಮಾಡಲು ಆರಂಭಿಸಿ.

HTTPS ಎಂದರೆ ಏನು?ಇದೊಂದು ಪ್ರೋಟೋಕಾಲ್ ಆಗಿದ್ದು ಸರಿಯಾದ ಸರ್ವರ್ ಜೊತೆ ಬಳಕೆದಾರರು ಸರಿಯಾದ ವೆಬ್ ಸೈಟ್ ಜೊತೆ ಸಂಪರ್ಕದಲ್ಲಿದ್ದಾರೆ ಎಂಬುದನ್ನು ಖಾತ್ರಿಪಡಿಸುತ್ತದೆ ಅಂದರೆ ವೆಬ್ ಸೈಟ್ ಗೆ ಭದ್ರತೆ ಒದಗಿಸುತ್ತದೆ. ಬಳಕೆದಾರರು ವಯಕ್ತಿಕವಾಗಿಸಬೇಕು ಎಂದುಕೊಳ್ಳುವ ಯಾವುದೇ ಮಾಹಿತಿಗಳನ್ನು ಕಲೆಕ್ಟ್ ಮಾಡುವ ಪೇಜ್ ನ್ನು ಬಳಸುವಾಗ HTTPS ನಿಂದಾಗಿ ಭದ್ರತೆ ಸಿಗುತ್ತದೆ. ಲಾಗಿನ್ ಮಾಹಿತಿಯಿಂ ಹಿಡಿದು ಕ್ರೆಡಿಟ್ ಮಾಹಿತಿಗಳೂ ಕೂಡ ಇದರ ಮೂಲಕ ಸೆಕ್ಯೂರ್ ಆಗಿರುತ್ತದೆ. Let's Encrypt, ಸೇವೆಗಳನ್ನು ಬಳಸುವ ಮೂಲಕ ನಿಮ್ಮ ಸಂಪೂರ್ಣ ಸೈಟ್ ಗಳಿಗೆ ಉಚಿತವಾಗಿ HTTPS ನ್ನು ಬಳಕೆ ಮಾಡಬಹುದು.

ಸಾಫ್ಟ್ ವೇರ್ ಅಪ್ ಟು ಡೇಟ್ ಇಟ್ಟುಕೊಳ್ಳಿ 

ಸಾಫ್ಟ್ ವೇರ್ ಅಪ್ ಟು ಡೇಟ್ ಇಟ್ಟುಕೊಳ್ಳಿ 

ಇದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಆದರೆ ನಿಮ್ಮ ಸಾಫ್ಟ್ ವೇರ್ ನ್ನು ಅಪ್ ಟು ಡೇಟ್ ಇಟ್ಟುಕೊಳ್ಳುವುದರಿಂದ ಹೆಚ್ಚು ಸುರಕ್ಷಿತವಾಗಿ ಇರಬಹುದು. ನಿಮ್ಮ ವೆಬ್ ಸೈಟ್ ನಲ್ಲಿ ರನ್ ಆಗುವ ಸಾಫ್ಟ್ ವೇರ್ ನ್ನು ಅಪ್ ಡೇಟ್ ಮಾಡಿಕೊಳ್ಳಿ. ಅದರಲ್ಲಿ ಸಿಎಂಎಸ್ ಮತ್ತು ಸರ್ವರ್ ಆಪರೇಟಿಂಗ್ ಸಿಸ್ಟಮ್ ಕೂಡ ಒಳಗೊಂಡಿರುತ್ತದೆ ಎಂಬುದು ನೆನಪಿರಲಿ.

ಕೆಟ್ಟ ಉದ್ದೇಶಗಳಿಗೆ ಹ್ಯಾಕರ್ ಗಳು ನಿಮ್ಮ ವೆಬ್ ಸೈಟ್ ನ ಒಳನುಗ್ಗುವಿಕೆ ಹೇಗೆ ಎಂಬ ಬಗ್ಗೆ ಪತ್ತೆಗಾರಿಕೆ ಮಾಡುತ್ತಲೇ ಇರುತ್ತಾರೆ. ಅದಕ್ಕೆ ಅವಕಾಶ ಸಿಗಬಾರದು ಎಂದರೆ ನೀವು ನಿಮ್ಮ ವೆಬ್ ಸೈಟ್ ನ್ನು ಅಪ್ ಟು ಡೇಟ್ ಇಟ್ಟುಕೊಳ್ಳಬೇಕು.

ವೆಬ್ ಸೈಟ್ ಸ್ಕ್ಯಾನರ್

ವೆಬ್ ಸೈಟ್ ಸ್ಕ್ಯಾನರ್

ವೆಬ್ ಸೈಟ್ ಸ್ಕ್ಯಾನರ್ ಒಂದು ಸೆಕ್ಯುರಿಟಿ ಟೂಲ್ ಆಗಿದ್ದು ನಿಮ್ಮ ವೆಬ್ ಸೈಟ್ ನ ಬ್ಯಾಕ್ ಗ್ರೌಂಡ್ ನಲ್ಲಿ ರನ್ ಆಗುತ್ತದೆ ಮತ್ತು ದುರುದ್ದೇಶಪೂರಿತ ಎಂಟ್ರಿಗಳನ್ನು ಗುರುತಿಸುತ್ತದೆ. ಬೇರೆಬೇರೆ ರೀತಿಯ ವೆಬ್ ಸೈಟ್ ಸ್ಕ್ಯಾನರ್ ಗಳು ಲಭ್ಯವಿದೆ. ಅದರಲ್ಲಿ ಎಕ್ಸ್ಟರ್ನಲ್, ಇಂಟರ್ನಲ್ ಮಾಲ್ ವೇರ್ ಸ್ಕ್ಯಾನರ್ ಮತ್ತು ಪೆನಟ್ರೇಷನ್ ಸ್ಕ್ಯಾನರ್ ಇತ್ಯಾದಿ. ಇವೆಲ್ಲವೂ ಬೇರೆಬೇರೆ ರೀತಿಯ ತನ್ನದೇ ಶೈಲಿಯ ಕೆಲಸಗಳನ್ನು ನಿರ್ವಹಿಸುತ್ತದೆ.

ಮಾಲ್‌ವೇರ್‌ ರಿಮೂವಲ್ ಸ್ವಯಂಚಾಲಿತಗೊಳಿಸಿ

ಮಾಲ್‌ವೇರ್‌ ರಿಮೂವಲ್ ಸ್ವಯಂಚಾಲಿತಗೊಳಿಸಿ

ಆಟೋಮೆಟೆಡ್ ಮಾಲ್ ವೇರ್ ರಿಮೂವಲ್ ಗಳು ನಿಮ್ಮ ವೆಬ್ ಸೈಟ್ ನ್ನು ಪ್ರೊಟೆಕ್ಟ್ ಮಾಡಲು ಬಹಳ ಮುಖ್ಯವಾಗಿ ಬೇಕು. ಯಾಕೆಂದರೆ ಇದು ಕೂಡಲೇ ಹ್ಯಾಕರ್ ಗಳನ್ನು ಗುರುತಿಸಿ ನಿಮಗೆ ತಿಳಿಸುತ್ತದೆ. ಮಾಲ್ವೇರ್ ನಿಂದ ನಿಮ್ಮ ವೆಬ್ ಸೈಟ್ ಅನ್ನು ರಕ್ಷಿಸುವ ಉತ್ತಮ ಮಾರ್ಗವೆಂದರೆ ಮಾಲ್ವೇರ್ ಅನ್ನು ಗುರುತಿಸುವ ಸ್ವಯಂಚಾಲಿತ ವೆಬ್ ಸೈಟ್ ಸ್ಕ್ಯಾನರ್ ಅನ್ನು ಬಳಸುವುದು ಮತ್ತು ಅದನ್ನು ಪತ್ತೆಹಚ್ಚಿದ ತಕ್ಷಣವೇ ಅದನ್ನು ತೊಡೆದುಹಾಕುವ ಕೆಲಸವನ್ನು ಮಾಡುವುದು.ಇದಲ್ಲದೆ, ಉತ್ತಮ ವೆಬ್ ಸೈಟ್ ಸ್ಕ್ಯಾನಿಂಗ್ ಅಪ್ಲಿಕೇಶನ್ ಬಳಸುವುದು ಒಳ್ಳೆಯದು. ನೀವು ನಿಮ್ಮ ವೆಬ್ ಸೈಟ್ ನಲ್ಲಿ ಪ್ರಮುಖವಾಗಿ ಗುರುತಿಸಬೇಕಾಗಿರುವ ಅಂಶಗಳು.

 ನಿಮ್ಮ ಸರ್ವರ್ ನಲ್ಲಿ ಅನಧಿಕೃತ ಬಳಕೆದಾರರಿಂದ ರಕ್ಷಿಸಲು ಪೋರ್ಟ್ ಗಳನ್ನು ಮಾನಿಟರ್ ಮಾಡಿ.

 ಮಾನಿಟರ್ ಫೈಲ್ ಚೇಂಜಸ್ ಮತ್ತು FTP ಮತ್ತು ನಿಮ್ಮ ವೆಬ್ ಸೈಟ್ ನಲ್ಲಾದ ಬದಲಾವಣೆಯನ್ನು ನೋಟಿಫೈ ಮಾಡುವುದು

 SQL ಇಂಜೆಕ್ಷನ್ ಗಳ ಮೂಲಕ ನಿಮ್ಮ ಡಾಟಾಬೇಸ್ ನ್ನು ಪ್ರೊಟೆಕ್ಟ್ ಮಾಡಿಕೊಳ್ಳಿ ಮತ್ತು cross-site scripting (XSS)ಅಟ್ಯಾಕ್ಸ್.

 ನಿಮ್ಮ ಮಾಹಿತಿಗಳನ್ನು ಭದ್ರವಾಗಿಡಿ ಮತ್ತು ಸರ್ಚ್ ಇಂಜಿನ್ ಗಳ ಬ್ಲಾಕ್ ಲಿಸ್ಟ್ ನಲ್ಲಿ ನಿಮ್ಮ ವೆಬ್ ಸೈಟ್ ಆಫ್ ಆಗಿರುತ್ತದೆ.

2018 ರ ಈ ಸಂದರ್ಬದಲ್ಲಿ ಪ್ರತಿಯೊಂದು ಬ್ಯೂಸಿನೆಸ್ ಕೂಡ ವೆಬ್ ಸೈಟ್ ನ್ನು ಆಧರಿಸಿದೆ. ಹಾಗಾಗಿ ನಿಮ್ಮ ವೆಬ್ ಸೈಟ್ ನ್ನು ಸುರಕ್ಷಿತವಾಗಿಟ್ಟುಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಇಲ್ಲದೇ ಇದ್ದರೆ ಹ್ಯಾಕರ್ ಗಳ ದಾಳಿಯಿಂದಾಗಿ ನಿಮ್ಮ ಬ್ಯುಸಿನೆಸ್ ಮೇಲೆ ಕೆಟ್ಟ ಪರಿಣಾಮ ಉಂಟಾಗಬಹುದು. ಹಾಗಾಗಿ ಆದಷ್ಟು ಸುರಕ್ಷಿತ ಕ್ರಮಗಳನ್ನು ಅನುಸರಿಸಿ ನಿಮ್ಮ ವೆಬ್ ಸೈಟ್ ಗಳನ್ನು ಭದ್ರವಾಗಿ ಇಟ್ಟುಕೊಳ್ಳಿ.

Best Mobiles in India

English summary
How to Secure Your Website in 2018. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X