ಈ ದೀಪಾವಳಿ ಸಂಭ್ರಮವನ್ನು ವಾಟ್ಸ್‌ಆಪ್‌ ಸ್ಟಿಕ್ಕರ್‌ ಜತೆ ಆಚರಿಸಿ..!

|

ಭಾರತ ಈಗ ದೀಪಗಳ ಹಬ್ಬದ ಸಂಭ್ರಮದಲ್ಲಿದೆ. ದೀಪಾವಳಿಯ ಶುಭಾಶಯ ಹೇಳಲು ಎಲ್ಲರೂ ವಿಭಿನ್ನ ಕಾರ್ಯತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಡಿಜಿಟಲ್‌ ಯುಗದಲ್ಲಿ ದೀಪಾವಳಿ ಶುಭಕೋರಲು ವಾಟ್ಸ್‌ಆಪ್‌ ಹೊಸ ಸ್ಟಿಕ್ಕರ್‌ಗಳ ಆಯ್ಕೆಯನ್ನು ನೀಡಿ, ಹೊಸ ದಾರಿ ಮಾಡಿಕೊಟ್ಟಿದೆ.

ಈ ದೀಪಾವಳಿ ಸಂಭ್ರಮವನ್ನು ವಾಟ್ಸ್‌ಆಪ್‌ ಸ್ಟಿಕ್ಕರ್‌ ಜತೆ ಆಚರಿಸಿ..!

ಹೌದು, ಜಗತ್ತಿನ ಜನಪ್ರಿಯ ಇನ್‌ಸ್ಟಾಂಟ್‌ ಮೆಸೇಂಜರ್‌ ವಾಟ್ಸ್‌ಆಪ್‌ ಇತ್ತೀಚೆಗಷ್ಟೇ ಸ್ಟಿಕ್ಕರ್‌ ಫೀಚರ್‌ನ್ನು ನೀಡಿ ಚಾಟಿಂಗ್‌ನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿತ್ತು. ಈ ಫೀಚರ್‌ ಆಂಡ್ರಾಯ್ಡ್‌, iOS ಮತ್ತು ವಾಟ್ಸ್‌ಆಪ್‌ ವೆಬ್‌ನಲ್ಲಿ ಬಳಕೆದಾರರಿಗೆ ದೊರೆಯುತ್ತಿದೆ. ಅದಲ್ಲದೇ ವೈವಿಧ್ಯಮಯ ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್‌ ಮಾಡಲು ವಾಟ್ಸ್‌ಆಪ್‌ ಅವಕಾಶ ನೀಡುತ್ತಿದೆ. ಅದರಂತೆ, ದೀಪಾವಳಿಯ ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್‌ ಮಾಡಿ, ಹೇಗೆ ಶುಭಾಶಯ ಹೇಳುವುದು ಅಂತ ಯೋಚಿಸುತ್ತಿದ್ದೀರಾ..? ಈ ಕೆಳಗಿನ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತದೆ..

ವಾಟ್ಸ್‌ಆಪ್‌ ಅಪ್‌ಡೇಟ್‌ ಮಾಡಿ

ವಾಟ್ಸ್‌ಆಪ್‌ ಅಪ್‌ಡೇಟ್‌ ಮಾಡಿ

ದೀಪಾವಳಿ ಅಥವಾ ಯಾವುದೇ ಸ್ಟಿಕ್ಕರ್ ಕಳಿಸಲು ಮೊದಲು ವಾಟ್ಸ್‌ಆಪ್‌ ಅಪ್‌ಡೇಟ್‌ ಮಾಡಿ. ವಾಟ್ಸ್‌ಆಪ್ ಆವೃತ್ತಿ 2.18 ಮತ್ತು ಅದಕ್ಕಿಂತ ಹೆಚ್ಚಿನ ಆವೃತ್ತಿಗಳಿಗೆ ಮಾತ್ರ ಸ್ಟಿಕ್ಕರ್‌ ಫೀಚರ್‌ ಸಿಗುತ್ತಿದ್ದು, ಅದಕ್ಕಾಗಿ ವಾಟ್ಸ್‌ಆಪ್‌ ಅಪ್‌ಡೇಟ್‌ ಮಾಡಿ.

ಚಾಟ್‌ ವಿಂಡೋ ಒಪನ್‌ ಮಾಡಿ

ಚಾಟ್‌ ವಿಂಡೋ ಒಪನ್‌ ಮಾಡಿ

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸ್‌ಆಪ್‌ ಬಳಸುವ ಗ್ರಾಹಕರು ಮೊದಲು ನೀವು ಸ್ಟಿಕ್ಕರ್‌ ಕಳಿಸುವ ಸಂಪರ್ಕ ಸಂಖ್ಯೆ ಹೋಗಿ ಚಾಟ್‌ ವಿಂಡೋ ಒಪನ್‌ ಮಾಡಿ. ನಂತರ ಚಾಟ್‌ ವಿಂಡೋದಲ್ಲಿ ಕಾಣುವ ಸ್ಮೈಲಿ ಗುರುತನ್ನು ಕ್ಲಿಕ್ ಮಾಡಿ.

ಸ್ಟಿಕ್ಕರ್‌ ಐಕಾನ್‌ ಕ್ಲಿಕ್‌ ಮಾಡಿ

ಸ್ಟಿಕ್ಕರ್‌ ಐಕಾನ್‌ ಕ್ಲಿಕ್‌ ಮಾಡಿ

ಚಾಟ್‌ ವಿಂಡೋ ಒಪನ್‌ ಮಾಡಿ ಸ್ಮೈಲಿ ಐಕಾನ್‌ ಕ್ಲಿಕ್‌ ಮಾಡಿದ ನಂತರ ನಿಮಗೆ ಕೆಳಗಡೆ ಮೂರು ಆಯ್ಕೆಗಳು ಕಾಣುತ್ತವೆ. ಮೊದಲನೆಯದು ಸ್ಮೈಲಿ, ಎರಡನೇಯದು GIF ಮತ್ತು ಮೂರನೇಯದು ಸ್ಟಿಕ್ಕರ್‌ ಆಯ್ಕೆ. ಇದರಲ್ಲಿ ಸ್ಟಿಕ್ಕರ್‌ ಐಕಾನ್‌ ಕ್ಲಿಕ್‌ ಮಾಡಿ.

ಸ್ಟಿಕ್ಕರ್‌ ಸ್ಟೋರ್‌ಗೆ ಹೋಗಿ

ಸ್ಟಿಕ್ಕರ್‌ ಸ್ಟೋರ್‌ಗೆ ಹೋಗಿ

ಚಾಟ್‌ ವಿಂಡೋದಲ್ಲಿರುವ ಸ್ಟಿಕ್ಕರ್‌ ಐಕಾನ್‌ ಕ್ಲಿಕ್‌ ಮಾಡಿದ ನಂತರ ನೀವು ಸ್ಟಿಕ್ಕರ್‌ ಸ್ಟೋರ್‌ಗೆ ಹೋಗಿ ನಿಮಗೆ ಬೇಕಾದ ಸ್ಟಿಕ್ಕರ್‌ ಪ್ಯಾಕ್‌ಗಳು ಅಲ್ಲಿ ಲಭ್ಯವಿದ್ದು, ನಿಮಗೆ ಬೇಕಾದ ಪ್ಯಾಕ್‌ ಕ್ಲಿಕ್‌ ಮಾಡಿ ಡೌನ್‌ಲೋಡ್‌ ಮಾಡಿ.

ಇನ್ನು ಹೆಚ್ಚಿನ ಸ್ಟಿಕ್ಕರ್‌ ಬೇಕಾ..?

ಇನ್ನು ಹೆಚ್ಚಿನ ಸ್ಟಿಕ್ಕರ್‌ ಬೇಕಾ..?

ಸ್ಟಿಕ್ಕರ್‌ ಸ್ಟೋರ್‌ನಲ್ಲಿ ಲಭ್ಯವಿರುವ ಸ್ಟಿಕ್ಕರ್‌ ಪ್ಯಾಕ್‌ಗಳು ಸಾಕಾಗಿಲ್ಲವೆಂದರೆ, ಹೆಚ್ಚಿನ ಸ್ಟಿಕ್ಕರ್‌ ಪಡೆಯುವ ಆಯ್ಕೆಯನ್ನು ವಾಟ್ಸ್‌ಆಪ್‌ ನೀಡುತ್ತಿದೆ. ಸ್ಟಿಕ್ಕರ್‌ ಸ್ಟೋರ್‌ ಪೇಜ್‌ನ ಕೆಳಗಡೆ Get more stickers ಎಂಬ ಆಯ್ಕೆ ನೀಡಿದ್ದು, ಕ್ಲಿಕ್‌ ಮಾಡಿ.

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಹುಡುಕಿ

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಹುಡುಕಿ

ಹೆಚ್ಚಿನ ಸ್ಟಿಕ್ಕರ್‌ಗಾಗಿ Get more stickers ಆಯ್ಕೆ ಕ್ಲಿಕ್‌ ಮಾಡಿದ ತಕ್ಷಣ ನೀವು ಗೂಗಲ್‌ ಪ್ಲೇ ಸ್ಟೋರ್‌ಗೆ ಹೋಗುತ್ತೀರಿ. ಅಲ್ಲಿ ನಿಮಗೆ ಸಾಕಷ್ಟು ಸ್ಟಿಕ್ಕರ್‌ ಪ್ಯಾಕ್‌ಗಳು ದೊರೆಯುತ್ತವೆ. ನಿಮಗೆ ಬೇಕಾದ ಸ್ಟಿಕ್ಕರ್‌ ಪ್ಯಾಕ್‌ ಹುಡುಕಿ.

ದೀಪಾವಳಿ ಸ್ಟಿಕ್ಕರ್‌ ಡೌನ್‌ಲೋಡ್‌ ಮಾಡಿ

ದೀಪಾವಳಿ ಸ್ಟಿಕ್ಕರ್‌ ಡೌನ್‌ಲೋಡ್‌ ಮಾಡಿ

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಪ್ಯಾಕ್‌ಗಳಲ್ಲಿ ದೀಪಾವಳಿ ಸ್ಟಿಕ್ಕರ್‌ಗಳು ನಿಮಗೆ ದೊರೆಯುತ್ತವೆ. ನಿಮಗೆ ಬೇಕಾದ ದೀಪಾವಳಿ ಸ್ಟಿಕ್ಕರ್‌ ಪ್ಯಾಕ್‌ ಡೌನ್‌ಲೋಡ್‌ ಮಾಡಿಕೊಂಡು ಇನ್‌ಸ್ಟಾಲ್‌ ಮಾಡಿ.

ವಾಟ್ಸ್‌ಆಪ್‌ಗೆ ಆಡ್‌ ಮಾಡಿ

ವಾಟ್ಸ್‌ಆಪ್‌ಗೆ ಆಡ್‌ ಮಾಡಿ

ನೀವು ಒಂದು ಸಲ ಸ್ಟಿಕ್ಕರ್‌ ಪ್ಯಾಕ್‌ಗಳನ್ನು ಡೌನ್‌ಲೋಡ್‌ ಮಾಡಿದ ತಕ್ಷಣ ನಿಮಗೆ ಒಂದು ಆಯ್ಕೆ ದೊರೆಯುತ್ತದೆ. ನೀವು ನಿಮ್ಮ ಇಷ್ಟದ ಸ್ಟಿಕ್ಕರ್‌ ಪ್ಯಾಕ್‌ನ್ನು ವಾಟ್ಸ್‌ಆಪ್‌ಗೆ ಸೇರಿಸಲು ಅನುಮತಿಯನ್ನು ಆಪ್‌ ಕೇಳುತ್ತದೆ. ಸ್ಟಿಕ್ಕರ್‌ನ್ನು ವಾಟ್ಸ್‌ಆಪ್‌ಗೆ ಆಡ್ ಮಾಡಿ.

ಈಗ ದೀಪಗಳ ಹಬ್ಬವನ್ನು ಸ್ಟಿಕ್ಕರ್‌ ಜತೆ ಆಚರಿಸಿ

ಈಗ ದೀಪಗಳ ಹಬ್ಬವನ್ನು ಸ್ಟಿಕ್ಕರ್‌ ಜತೆ ಆಚರಿಸಿ

ಡೌನ್‌ಲೋಡ್‌ ಮಾಡಿ ವಾಟ್ಸ್‌ಆಪ್‌ಗೆ ದೀಪಾವಳಿ ಸ್ಟಿಕ್ಕರ್‌ಗಳನ್ನು ಸೇರಿಸಿದ ನಂತರ ನಿಮಗೆ ಇಷ್ಟವಾದವರ ಜತೆ ದೀಪಾವಳಿ ಸಂಭ್ರಮವನ್ನು ಸ್ಟಿಕ್ಕರ್‌ ಮೂಲಕ ಹಂಚಿಕೊಂಡು ಡಿಜಿಟಲ್‌ ದೀಪಗಳ ಹಬ್ಬ ಆಚರಿಸಲು ಮುಂದಾಗಿ.

Best Mobiles in India

English summary
How to send Diwali stickers on WhatsApp. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X