ವಾಟ್ಸ್ ಆಪ್ ನಲ್ಲಿ ಮಕರ ಸಂಕ್ರಾಂತಿ ಸ್ಟಿಕ್ಕರ್ ಸೆಂಡ್ ಮಾಡುವುದು ಹೇಗೆ?

|

ಫೇಸ್ ಬುಕ್ ಮಾಲೀಕತ್ವದ ವಾಟ್ಸ್ ಆಪ್ ಕಳೆದ ವರ್ಷ ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರಿಗಾಗಿ ಸ್ಟಿಕ್ಕರ್ ಫೀಚರ್ ನ್ನು ಪರಿಚಯಿಸಿತ್ತು. ಬಿಡುಗಡೆಗೊಂಡಾಗಿನಿಂದಲೂ ಈ ಫೀಚರ್ ಹೆಚ್ಚೆಚ್ಚು ಪ್ರಸಿದ್ಧಿಯಾಗುತ್ತಲೇ ಇದೆ. ಬೇರೆಬೇರೆ ಹಬ್ಬಗಳು ಮತ್ತು ಸಂಭ್ರಮಕ್ಕಾಗಿ ವಿಷ್ ಮಾಡುವುದಕ್ಕೆ ಇದೇ ಸ್ಟಿಕ್ಕರ್ ಫೀಚರ್ ನ್ನು ಜನರು ಬಳಸುತ್ತಿದ್ದಾರೆ.ಇದೀಗ ಮಕರ ಸಂಕ್ರಾಂತಿ ಹಬ್ಬದ ಸಡಗರ. ವಾಟ್ಸ್ ಆಪ್ ಕೂಡ ಮಕರ ಸಂಕ್ರಾಂತಿ ಹಬ್ಬದ ಶುಭಾಶಯವನ್ನು ಸ್ಟಿಕ್ಕರ್ ಫೀಚರ್ ಮೂಲಕ ಕಳುಹಿಸುವುದಕ್ಕೆ ಅವಕಾಶ ನೀಡುತ್ತಿದೆ. ನೀವೂ ಕೂಡ ವಾಟ್ಸ್ ಆಪ್ ಸ್ಟಿಕ್ಕರ್ ಫೀಚರ್ ಮೂಲಕ ಶುಭಾಶಯ ಕೋರಲು ಇಚ್ಛಿಸುತ್ತೀರಾದರೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಆಂಡ್ರಾಯ್ಡ್ ಬಳಕೆದಾರರಿಗಾಗಿ:

ಆಂಡ್ರಾಯ್ಡ್ ಬಳಕೆದಾರರಿಗಾಗಿ:

ಹಂತ 1: ಮೊದಲನೆಯದಾಗಿ ವಾಟ್ಸ್ ಆಪ್ ನ್ನು ತೆರೆಯಿರಿ ಮತ್ತು ಸ್ಮೈಲಿ ಐಕಾನ್ ನ್ನು ಕ್ಲಿಕ್ಕಿಸಿ ಲಭ್ಯವಿರುವ ಸ್ಟಿಕ್ಕರ್ ಪ್ಯಾಕ್ ನ್ನು ಆಕ್ಸಿಸ್ ಮಾಡಿ.

ಹಂತ 2: GIF ಬಟನ್ ನ ನಂತರದಲ್ಲಿ ಸ್ಟಿಕ್ಕರ್ ಐಕಾನ್ ಇರುವುದನ್ನು ನೀವು ಗಮನಿಸುತ್ತೀರಿ.

ಹಂತ 3:ಸ್ಟಿಕ್ಕರ್ ಐಕಾನ್ ನ್ನು ಟ್ಯಾಪ್ ಮಾಡುವ ಮೂಲಕ ನೀವು ಸ್ಟಿಕ್ಕರ್ ಸ್ಟೋರ್ ನ್ನು ಆಕ್ಸಿಸ್ ಮಾಡುತ್ತೀರಿ ಮತ್ತು ಇದರಲ್ಲಿ ಹಲವಾರು ರೀತಿಯ ಸ್ಟಿಕ್ಕರ್ ಪ್ಯಾಕ್ ಗಳು ಲಭ್ಯವಿರುತ್ತದೆ.

ಹಂತ 4:

ಹಂತ 4:

ಇದೀಗ ನೀವು ಪೇಜಿನ ಕೆಳಭಾಗಕ್ಕೆ ಸ್ಕ್ರೋಲ್ ಡೌನ್ ಮಾಡಬೇಕು ಮತ್ತು 'Get more stickers' ಆಯ್ಕೆಯನ್ನು ಟ್ಯಾಪ್ ಮಾಡಿ ಹೊಸ ಮಕರ ಸಂಕ್ರಾಂತಿ ಸ್ಟಿಕ್ಕರ್ ಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಹಂತ 5: ಒಮ್ಮೆ ನೀವು ಈ ಆಯ್ಕೆಯನ್ನು ಕ್ಲಿಕ್ಕಿಸಿದಾಗ ಗೂಗಲ್ ಪ್ಲೇ ಸ್ಟೋರ್ ಗೆ ಈ ಆಯ್ಕೆಯು ನಿಮ್ಮನ್ನು ಕರೆದೊಯ್ಯುತ್ತದೆ.

ಹಂತ 6: ಇದೀಗ ನೀವು ವಿವಿಧ ಸ್ಟಿಕ್ಕರ್ ಆಪ್ಸ್ ಗಳನ್ನು ಗಮನಿಸುತ್ತೀರಿ ಮತ್ತು ಈ ಲಿಸ್ಟ್ ನಲ್ಲಿ ನೀವು ಮಕರ ಸಂಕ್ರಾಂತಿಗೆ ಸಂಬಂಧಿಸಿದ ಸ್ಟಿಕ್ಕರ್ ನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.

ಹಂತ 7:ಒಮ್ಮೆ ಡೌನ್ ಲೋಡ್ ಸಂಪೂರ್ಣಗೊಂಡ ನಂತರ ನೀವು ಆಪ್ ನ್ನು ತರೆಯಬೇಕು ಮತ್ತು 'Add to WhatsApp' ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 8: ಈ ಪ್ರೊಸೆಸ್ ಒಮ್ಮೆ ಕಂಪ್ಲೀಟ್ ಆದ ನಂತರ ನೀವು ವಾಟ್ಸ್ ಆಪ್ ನಲ್ಲಿ ಮಕರ ಸಂಕ್ರಾಂತಿ ಸ್ಟಿಕ್ಕರ್ ಗಳನ್ನು ಆಕ್ಸಿಸ್ ಮಾಡಲು ಸಾಧ್ಯವಾಗುತ್ತದೆ. ಮತ್ತು ನಿಮ್ಮ ಕಾಂಟ್ಯಾಕ್ಟ್ ಗೆ ಕಳುಹಿಸುವುದಕ್ಕೆ ಸಾಧ್ಯವಾಗುತ್ತದೆ.

ಐಫೋನ್ ಬಳಕೆದಾರರಿಗಾಗಿ:

ಐಫೋನ್ ಬಳಕೆದಾರರಿಗಾಗಿ:

ಹಂತ 1: ಆಪ್ ಸ್ಟೋರ್ ನಿಂದ ಹೊಸ ಸ್ಟಿಕ್ಕರ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ಯಾವುದೇ ಆಯ್ಕೆ ಐಫೋನ್ ಬಳಕೆದಾರರಿಗೆ ಇರುವುದಿಲ್ಲ ಆದರೆ ನಿಮ್ಮ ಸ್ನೇಹಿತರಿಗೆ ಮಕರ ಸಂಕ್ರಾಂತಿ ವಿಷ್ ಮಾಡುವ ಅವಕಾಶವಿರುತ್ತದೆ.

ಹಂತ 2: ಒಂದು ವೇಳೆ ನಿಮ್ಮ ಬಳಿ ಐಫೋನ್ ಇದ್ದಲ್ಲಿ ಮತ್ತು ನೀವು ಯಾವುದೇ ಮಕರ ಸಂಕ್ರಾಂತಿ ಸ್ಟಿಕ್ಕರ್ ನ್ನು ರಿಸೀವ್ ಮಾಡಿದರೆ, ನೀವು ರಿಸೀವ್ ಮಾಡಿದ ಸ್ಟಿಕ್ಕರ್ ನ್ನು ಫೇವರೆಟ್ ಆಗಿ ಮಾರ್ಕ್ ಮಾಡಿ.

ಹಂತ 3: ಸ್ಟಿಕ್ಕರ್ ನ್ನು ಫೇವರೆಟ್ ಆಗಿ ಮಾರ್ಕ್ ಮಾಡಿದ ನಂತರ ನೀವು ನಿಮ್ಮ ಸ್ನೇಹಿತರಿಗೆ ಇದನ್ನು ಕಳುಹಿಸುವುದಕ್ಕೆ ಸಾಧ್ಯವಾಗುತ್ತದೆ.

ಸ್ಟಿಕ್ಕರ್ ನ್ನು ನಿಮ್ಮ ಫೇವರೆಟ್ ಆಗಿ ಮಾರ್ಕ್ ಮಾಡುವುದಕ್ಕೆ ನೀವು ಸ್ಟಿಕ್ಕರ್ ನ್ನು ಲಾಂಗ್ ಪ್ರೆಸ್ ಮಾಡಿ ಮತ್ತು ಸ್ಟಾರ್ ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 4: ಒಮ್ಮೆ ಇದು ಮುಗಿದ ನಂತರ ಟೆಕ್ಸ್ಟ್ ಬಾರ್ ನಲ್ಲಿರುವ ಸ್ಟಿಕ್ಕರ್ ಆಯ್ಕೆಯನ್ನು ನೀವು ಕ್ಲಿಕ್ ಮಾಡಬೇಕು. ಇದರ ನಂತರ ನೀವು ಸ್ಟಾರ್ ಐಕಾನ್ ನ್ನು ಗಮನಿಸುತ್ತೀರಿ ಮತ್ತು ಇದರ ಒಳಗೆ ನೀವು ಫೇವರಟ್ ಮಾರ್ಕ್ ಮಾಡಿರುವ ಎಲ್ಲಾ ಸ್ಟಿಕ್ಕರ್ ಗಳು ಲಭ್ಯವಿರುತ್ತದೆ.

Best Mobiles in India

English summary
How to send Makar Sankranti stickers on WhatsApp

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X