ಒಂದೇ ಕಂಪ್ಯೂಟರ್ ಗೆ ಎರಡು ಮಾನಿಟರ್ ಜೋಡಿಸುವುದು ಹೇಗೆ..?

Written By: Lekhaka

ಈ ಹಿಂದೇ ಒಂದೇ ಕಂಪ್ಯೂಟರ್ ಗೇ ಎರಡು ಮಾನಿಟರ್ ಗಳನ್ನು ಜೋಡಿಸುವುದು ಅತ್ಯಂತ ಖರ್ಚಿನ ವಿಷಯವಾಗಿತ್ತು. ಆದರೆ ಬದಲಾದ ದಿನದಲ್ಲಿ ಎರಡು ಮಾನಿಟರ್ ಜೋಡಿಸುವುದು ಸುಲಭವಾಗಿದ್ದು, ಅತೀ ಕಡಿಮೆ ವೆಚ್ಚದಾಯಕವೂ ಆಗಿದೆ.

ಒಂದೇ ಕಂಪ್ಯೂಟರ್ ಗೆ ಎರಡು ಮಾನಿಟರ್ ಜೋಡಿಸುವುದು ಹೇಗೆ..?

ಈ ಹಿಂದೇ ಎರಡು ಮಾನಿಟರ್ ಗಳನ್ನು ಜೋಡಿಸಲು ಥರ್ಡ ಪಾರ್ಟಿ ಸಾಫ್ಟ್ ವೇರ್ ವೊಂದರ ಅವಶ್ಯಕತೆ ಇತ್ತು. ಆದರೆ ಇಂದು ಆ ಪರಿಸ್ಥಿತಿಯೂ ಬದಲಾಗಿದ್ದು, ವಿಂಡೋಸ್ ಡ್ಯುಯಲ್ ಮಾನಿಟರ್ ಸಫೋರ್ಟ್ ಮಾಡಲಿದೆ.

ಎರಡು ಮಾನಿಟರ್ ಗಳನ್ನು ಕನೆಕ್ಟ್ ಮಾಡಲು ಏನು ಬೇಕು.?

ಮೊದಲಿಗೆ ಎರಡು ಮಾನಿಟರ್ ಬೇಕು, ನಿಮ್ಮ ಇಚ್ಛೆಯಂತೆ ಒಂದೇ ರೆಸಲ್ಯೂಷನ್ ನ ಮಾನಿಟರ್ ಅದರೂ ಬಳಕೆ ಮಾಡಿಕೊಳ್ಳಬಹುದು. ಇಲ್ಲವೇ ಬೇರೆ ಮಾದರಿಯ ಮಾನಿಟರ್ ಅನ್ನು ಬಳಕೆ ಮಾಡಿಕೊಳ್ಳಬಹುದು. ಅದರ ಎರಡು ಸಹ ಆಟೋಮೆಟಿಕ್ ಆಗಿ ರಿಸೈಜ್ ಆಗಲಿದೆ.

ನಂತರ ಎರಡು ಮಾನಿಟರ್ ಗಳಲ್ಲೂ ಬೇರೆ ಬೇರೆ ಮಾದರಿಯ ಕನೆಕ್ಟರ್ ಗಳು ಇದ್ದರೇ ಉತ್ತಮ ಆಗ ಬೇರೆ ಬೇರೆ ಪೋರ್ಟ್ ಗಳಲ್ಲಿ ಸಂಪರ್ಕವನ್ನು ಸಾಧೀಸಬಹುದು. ಇಲ್ಲವಾದರೆ ಮಲ್ಟಿಪಲ್ ಮಾನಿಟರ್ ಕನೆಕ್ಟರ್ ಅನ್ನು ಕೊಂಡುಕೊಳ್ಳುವುದು ಉತ್ತಮ.

ಕಳವಾದ ಮೊಬೈಲ್ ಪತ್ತೆ ಅಸಾಧ್ಯ?..ಪೊಲೀಸರಿಗೆ ದೊಡ್ಡ ತಲೆನೊವಾದ ಚೀನಾ ಡಿವೈಸ್!?

ಮತ್ತೊಂದು ಗ್ರಾಫಿಕ್ಸ್ ಕಾರ್ಡ್, ಮಾನಿಟರ್ ಗಳು ಗ್ರಾಫಿಕ್ ಕಾರ್ಡ್ ಇಲ್ಲವೇ ಮದರ್ ಬೋರ್ಡ್ ಗೆ ಕನೆಕ್ಟ್ ಆಗಿರಲಿದೆ. ಈ ಹಿನ್ನಲೆಯಲ್ಲಿ ಗ್ರಾಫಿಕ್ ಕಾರ್ಡ್ ಎರಡಕ್ಕಿಂತ ಹೆಚ್ಚಿನ ಮಾನಿಟರ್ ಗಲಿಗೆ ಸಪೋರ್ಟ್ ಮಾಡಲಿದೆ. ಮದರ್ ಬೋರ್ಟ್ ಒಂದು ಇಲ್ಲವೇ ಎರಡು ಮಾನಿಟರ್ ಗಳಿಗೆ ಸಫೋರ್ಟ್ ಮಾಡಲಿದೆ.

ವಿಂಡೋಸ್ ನಲ್ಲಿ ಡ್ಯುಯಲ್ ಮಾನಿಟರ್ ಸೆಟಿಂಗ್ ಹೇಗೆ..?

ನೀವು ಎರಡನೇ ಮಾನಿಟರ್ ಕನೆಕ್ಟ್ ಮಾಡಿದ ನಂತರ ವಿಡಿಯೋ ತಾನಾಗಿಯೇ ಎರಡನೇ ಮಾನಿಟರ್ ಅನ್ನು ಡಿಟೆಕ್ಟ್ ಮಾಡಿಕೊಳ್ಳಲಿದೆ. ಅಲ್ಲದೇ ನೀವು ರೈಟ್ ಕ್ಲಿಕ್ ಮಾಡುವ ಮೂಲಕ ಡಿಸ್ ಪ್ಲೇ ಸೆಟಿಂಗ್ಸ್ ನಲ್ಲಿ ಪ್ರೈಮರಿ ಮಾನಿಟರ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಬಹುದಾಗಿದೆ.

ಆಡ್ವಾನ್ಸ್ ಡಿಸ್ ಪ್ಲೇ ಸೆಟಿಂಗ್ಸ್ ನಲ್ಲಿ ನೀವು ಮಾನಿಟರ್ ರೆಸಲ್ಯೂಷನ್ ಅನ್ನು ಸರಿ ಮಾಡಿಕೊಳ್ಳಬಹುದಾಗಿದೆ. ಇಲ್ಲಿ ನಿಮಗೆ ಅನೇಕ ಆಯ್ಕೆಗಳು ಲಭ್ಯವಿರಲಿದೆ.

Read more about:
English summary
A few years back, setting up dual monitor used to be a complicated task and even expensive at times. But today, its not! Check here on how to set up dual monitors for your PC
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot