ಫೇಸ್‌ಬುಕ್‌ನಲ್ಲಿ ಕಿರಿಕಿರಿ ಮಾಡುವರನ್ನು 'ಸ್ನೂಜ್' ಮಾಡುವುದು ಹೇಗೆ..?

By Tejaswini P G

  ಸದಾ ತನ್ನ ಹೊಸ ಕಾರ್ ಅಥವಾ ಇತ್ತೀಚಿನ ಪ್ರವಾಸದ ಕುರಿತು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡುತ್ತಾ ಜಂಬ ತೋರಿಸುವ ಪೇಸ್ಬುಕ್ ಫ್ರೆಂಡ್ ನಿಂದ ನೀವು ಬೇಸತ್ತು ಹೋಗಿದ್ದೀರಾ? ಅಥವಾ ಸದಾ ಗೆಟ್-ಟುಗೆದರ್ ಪ್ಲ್ಯಾನ್ ಮಾಡುವ ಫೇಸ್ಬುಕ್ ಗ್ರೂಪ್ ನಿಂದ ರೋಸಿಹೋಗಿದ್ದೀರಾ? ಇವೆಲ್ಲದರಿಂದ ಮುಕ್ತಿ ಬೇಕು ಎಂದು ಅನಿಸುತ್ತಿದೆಯೇ? ಹೌದಾದರೆ ಇಲ್ಲಿದೆ ನಿಮಗೊಂದು ಸಿಹಿ ಸುದ್ದಿ. ಇದರಿಂದ ಮುಕ್ತಿ ಪಡೆಯಲು ನೀವೀಗ ಬಳಸಬಹುದು ಫೇಸ್ಬುಕ್ ನ ಹೊಸ ಸ್ನೂಜ್ ಬಟನ್.

  ಫೇಸ್‌ಬುಕ್‌ನಲ್ಲಿ ಕಿರಿಕಿರಿ ಮಾಡುವರನ್ನು 'ಸ್ನೂಜ್' ಮಾಡುವುದು ಹೇಗೆ..?

  ಫೇಸ್ಬುಕ್ ಇತ್ತೀಚೆಗಷ್ಟೇ ಹೊಸ 'ಸ್ನೂಜ್' ಫೀಚರ್ ಅನ್ನು ಲಾಂಚ್ ಮಾಡಿದ್ದು ಈ ಮೂಲಕ ನಿಮಗೆ ಬೇಕಾದ ಫೇಸ್ಬುಕ್ ಸ್ನೇಹಿತರನ್ನು, ಪೇಜ್ಗಳನ್ನು ಅಥವಾ ಗುಂಪುಗಳನ್ನು ತಾತ್ಕಾಲಿಕವಾಗಿ 'ಮ್ಯೂಟ್' ಮಾಡಬಹುದಾಗಿದೆ. ಇದರ ವಿಶೇಷತೆಯೇನೆಂದರೆ ನೀವು ಸ್ನೂಜ್ ಮಾಡಿರುವುದು ನಿಮ್ಮ ಫೇಸ್ಬುಕ್ ಸ್ನೇಹಿತರಿಗೆ ಗೊತ್ತಾಗುವುದಿಲ್ಲ.

  ಸ್ನೂಜ್ ನ ಅವಧಿ ಮುಗಿದ ನಂತರ ಮತ್ತೆ ಎಲ್ಲವೂ ಸಹಜ ಸ್ಥಿತಿಗೆ ಮರಳುವುದು. ಈಗೀಗ ಜನರು ಫೇಸ್ಬುಕ್ ಅನ್ನು ಒಂದು ಮಾರುಕಟ್ಟೆಯಾಗಿ ಪರಿಗಣಿಸುತ್ತಾರಾದರೂ ನೀವು ನಿಮಗೆ ಬೇಡದ ಪೋಸ್ಟ್ಗಳನ್ನು ನೋಡಲೇಬೇಕೆಂದೇನಿಲ್ಲ. ನಿಮ್ಮ ನ್ಯೂಸ್ಫೀಡ್ನಲ್ಲಿ ಏನೆಲ್ಲಾ ಇರಬೇಕೆಂಬುದನ್ನು ನೀವು ನಿಯಂತ್ರಿಸಬಹುದು!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಫೇಸ್ಬುಕ್ ನ ಸ್ನೂಜ್ ಫೀಚರ್ ಬಳಸುವುದು ಹೇಗೆ?

  ಫೇಸ್ಬುಕ್ ನ ಸ್ನೂಜ್ ಫೀಚರ್ ಬಳಸುವುದು ಬಹಳ ಸರಳ. ನೀವು ನಿಮ್ಮ ಫೇಸ್ಬುಕ್ ನ ಸ್ನೇಹಿತ ರಿಂದ ಅಥವಾ ಯಾವುದಾದರೂ ಪೇಜ್ ನಿಂದ ಪೋಸ್ಟ್ ಅನ್ನು ನಿಮ್ಮ ನ್ಯೂಸ್ಫೀಡ್ ನಲ್ಲಿ ನೋಡಿದಾಗ ಅದರ ಮೇಲ್ಭಾಗದಲ್ಲಿ ಬಲಬದಿಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ. ಆಗ ಬರುವ ಡ್ರಾಪ್ ಡೌನ್ ಮೆನುವಿನಲ್ಲಿ ನೀವು 'ಸ್ನೂಜ್ ಫಾರ್ 30 ಡೇಸ್' ಎಂಬ ಆಯ್ಕೆಯನ್ನು ಕಾಣಬಹುದಾಗಿದೆ. ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ಸ್ನೂಜ್ ಅವಧಿಯನ್ನು ಸಕ್ರಿಯಗೊಳಿಸಿ.

  ಈ ಸ್ನೂಜ್ ಅವಧಿಯು 30 ದಿನಗಳ ಕಾಲ ಇರಲಿದ್ದು, ನಂತರ ಆ ಪೇಜ್ ಅಥವಾ ಫೇಸ್ಬುಕ್ ಸ್ನೇಹಿತರು ಮಾಡುವ ಹೊಸ ಪೋಸ್ಟ್ ಗಳು ನಿಮ್ಮ ನ್ಯೂಸ್ಫೀಡ್ ನಲ್ಲಿ ಕಾಣ ಸಿಗುತ್ತದೆ.

  ಸ್ನೂಜ್ ಬಟನ್ ಏಕೆ ಬಳಸಬೇಕು?

  ನೀವು ಯಾವುದಾದರೂ ಪೇಜ್ ಅನ್ನು ಅನ್ಫಾಲೋ ಮಾಡಿದಾಗ ನೀವು ಆ ಪೇಜ್ ಅನ್ನು ಅನ್ಫಾಲೋ ಮಾಡಿದ್ದನ್ನು ಯಾರಾದರೂ ಗಮನಿಬಹುದು. ನೀವು ಯಾರನ್ನಾದರೂ ಅನ್ಫಾಲೋ ಅಥವಾ ಅನ್ಫ್ರೆಂಡ್ ಮಾಡಿದಾಗಲೂ ಅವರ ಗಮನಕ್ಕೆ ಬರಬಹುದು.

  ಈ ಕ್ರಿಯೆಯಿಂದ ಅವರಿಗೆ ಬೇಸರವಾಗಬಹುದು ಮತ್ತು ನೀವು ಅವರನ್ನು ಏಕೆ ಅನ್ಪಾಲೋ ಮಾಡಿದಿರೆಂದು ನೀವು ವಿವರಣೆಯನ್ನೂ ನೀಡಬೇಕಾಗಬಹುದು. ಇಂತಹ ಸಂದರ್ಭಗಳಲ್ಲಿ ಸ್ನೂಜ್ ಉತ್ತಮ ಆಯ್ಕೆಯಾಗುತ್ತದೆ. ನೀವು ಅವರನ್ನು ಸ್ನೂಜ್ ಮಾಡಿದ್ದು ಯಾರಿಗೂ ತಿಳಿಯುವುದಿಲ್ಲ ಮತ್ತು ನೀವು ಅದಕ್ಕೆ ಯಾವ ವಿವರಣೆಯನ್ನೂ ನೀಡಬೇಕಾಗುವುದಿಲ್ಲ. ಇದು ಜೀವನವನ್ನು ಖಂಡಿತ ಸರಳವಾಗಿಸುತ್ತದೆಯಲ್ಲವೇ?!

  ಸಾರಾಂಶ

  ಫೇಸ್ಬುಕ್ ಈ ಮೊದಲು "ಸೀ ಫ್ಯೂವರ್ ಪೋಸ್ಟ್ಸ್ ಲೈಕ್ ದಿಸ್" ಎಂಬ ಆಯ್ಕಯನ್ನು ನೀಡಿತ್ತು. ಆದರೆ ಬಹಳಷ್ಟು ಬಳಕೆದಾರರಿಗೆ ಇದು ಉಪಯುಕ್ತವೆನಿಸಲಿಲ್ಲ. ಇದರ ಕಾರ್ಯವೈಖರಿ ಕುರಿತು ಹಲವರಿಗೆ ಸಂಶಯಗಳು ಮೂಡಿತ್ತು. ಈ ಅಸ್ಪಷ್ಟತೆಯನ್ನು ನಿವಾರಿಸಲೆಂದೇ, ಫೇಸ್ಬುಕ್ ಹೆಚ್ಚು ಸ್ಪಷ್ಟವಾದ ಸ್ನೂಜ್ ಆಯ್ಕೆಯನ್ನು ತನ್ನ ಬಳಕೆದಾರರಿಗೆ ನೀಡಿದೆ.

  ಅಲ್ಲದೆ ನೀವು ಯಾರನ್ನಾದರೂ ಸ್ನೂಜ್ ಮಾಡಿದ್ದರೆ ಅದನ್ನು ನೀವು ನೆನಪಿನಲ್ಲಿಟ್ಟುಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ಸ್ನೂಜ್ ಅವಧಿ ಮುಗಿದ ನಂತರ ಎಲ್ಲವೂ ಸಹಜ ಸ್ಥಿತಿಗೆ ಮರಳಲಿದೆ. ನೀವು ಫೇಸ್ಬುಕ್ ನಲ್ಲಿ ಯಾರನ್ನಾದರೂ ಅವರ ಅರಿವಿಗೆ ಬಾರದಂತೆ ತಾತ್ಕಾಲಿಕವಾಗಿ ನಿರ್ಲಕ್ಷಿಸಲು ಬಯಸಿದರೆ ಏನು ಮಾಡಬೇಕೆಂದು ಈಗ ನಿಮಗೆ ತಿಳಿದಿದೆಯಷ್ಟೇ!!

  ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಫೇಸ್‌ಬುಕ್ ಫಾಲೋವರ್ಸ್ ಹೊಂದಿರುವ 'ಟಾಪ್ 10' ತಾರೆಯರು!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Are you fed up with a Facebook group that keeps on planning for a get-together? Do you want to get rid of it? If yes, then there is good news for you. You can get rid of this frustration by using the Snooze button of Facebook.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more