ನೀವು ಸಹ ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ ಫೇಕ್ ಆಪ್ ಡೌನ್‌ಲೋಡ್ ಮಾಡಿದ್ದೀರಾ?..ಇಲ್ಲಿ ನೋಡಿ!!

|

ಆಪಲ್‌ ಸಾಧನಗಳಿಗೆ ಹೋಲಿಸಿದರೆ ಆಂಡ್ರಾಯ್ಡ್ ಸಾಧನಗಳ ಕೊರೆತೆ ಎಂದರೆ ಉತ್ತಮ ಆಪ್‌ಗಳು ಯಾವುವು ಎಂಬುದನ್ನು ಹುಡುಕುವುದು. ಆಂಡ್ರಾಯ್ಡ್ ಗೂಗಲ್‌ ಪ್ಲೇ ಸ್ಟೋರ್‌ಗೆ ಡೆವಲಪರ್‌ಗಳು ಆಪ್‌ಗಳನ್ನು ತಯಾರಿಸಿ ಸೇರ್ಪಡೆಗೊಳಿಸುವುದು ತುಂಬಾ ಸುಲಭವಾಗಿರುವುದರಿಂದಾಗಿ, ಈ ಆಪ್‌ಗಳ ರಾಶಿಯಲ್ಲಿ ಫೇಕ್ ಆಪ್‌ಗಳು ಸಹ ಸೇರಿಕೊಳ್ಳುತ್ತವೆ.

ಹಾಗಾಗಿ, ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಕ್ಷಾಂತರ ಆಪ್‌ಗಳ ನಡುವೆ ಇವುಗಳಲ್ಲಿ ಉತ್ತಮವಾದುದನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ತ್ರಾಸದಾಯಕ ಕೆಲಸ. ಒಂದೇ ಹೆಸರಿನ, ನೋಡಲು ಕೂಡ ಒಂದೇ ರೀತಿಯಾಗಿರುವ ಆಪ್‌ಗಳು ಒಂದೇ ದಿನದಲ್ಲಿ ಹುಟ್ಟಿಕೊಳ್ಳುವುದರಿಂದ ಇಲ್ಲಿರುವ ಆಪ್‌ಗಳ ಸಾಚಾತನದ ಬಗ್ಗೆ ನಾವು ಎಷ್ಟು ಎಚ್ಚರಿಕೆ ವಹಿಸಲೇಬೇಕಿದೆ.

ನೀವು ಸಹ ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ ಫೇಕ್ ಆಪ್ ಡೌನ್‌ಲೋಡ್ ಮಾಡಿದ್ದೀರಾ?

ಇಂತಹ ಅಪಾಯಕಾರಿ ಆಪ್‌ಗಳನ್ನು ಗೂಗಲ್‌ ತನ್ನ ಗಮನಕ್ಕೆ ಬಂದಾಗಲೆಲ್ಲಾ ಆಗಾಗ್ಗೆ ತೆಗೆದುಹಾಕುತ್ತದೆ. ಆದರೆ, ಅದು ಎಷ್ಟೇ ಎಚ್ಚರಿಕೆ ವಹಿಸಿದರೂ, ನಕಲಿ ಮತ್ತು ಅಪಾಯಕಾರಿ ಆಪ್‌ಗಳು ಪ್ಲೇ ಸ್ಟೋರ್ ಒಳಗೆ ನುಸುಳಿಬಿಡುತ್ತವೆ. ಹಾಗಾಗಿ. ಪ್ಲೇ ಸ್ಟೋರ್ನಲ್ಲಿ ಯಾವುದೇ ಆಪ್ ಅನ್ನು ಡೌನ್‌ಲೋಡ್ ಮಾಡುವ ಮುನ್ನ ತಿಳಿದಿರಬೇಕಾದ ಅಂಶಗಳನ್ನು ನಾವು ತಿಳಿಯೋಣ.

ಫೇಕ್ ಆಪ್‌ಗಳು ಮೊಬೈಲ್ ಸೇರುವುದು ಹೇಗೆ?

ಫೇಕ್ ಆಪ್‌ಗಳು ಮೊಬೈಲ್ ಸೇರುವುದು ಹೇಗೆ?

ನಮ್ಮ ಮೊಬೈಲ್‌ನ ನಿರ್ವಹಣೆಗೆ ಬೇಕಾದ ಸೆಕ್ಯುರಿಟಿ ಆಪ್‌ಗಳ ರೂಪದಲ್ಲಿಯೇ ಫೇಕ್ ಆಪ್‌ಗಳು ಕೂಡ ಸೇರಿಕೊಳ್ಳುತ್ತವೆ. ಆಯಂಟಿ ವೈರಸ್‌ ರೀತಿಯಲ್ಲಿ, ಕ್ಯಾಚೆ ಕ್ಲಿಯರಿಂಗ್ ರೂಪದಲ್ಲಿ ಫೇಕ್ ಆಪ್‌ಗಳು ಮೊಬೈಲ್ ಬಳಕೆದಾರರನ್ನು ವಂಚಿಸುತ್ತವೆ. ಇಂತಹ ವೈರಸ್ ಆಪ್‌ಗಳು ಗೇಮ್ಸ್ ಮತ್ತು ಶೈಕ್ಷಣಿಕ ಆಪ್‌ಗಳ ರೂಪದಲ್ಲಿಯೂ ತಲೆಮರೆಸಿಕೊಂಡು ಕುಳಿತಿರುತ್ತವೆ.

ಪ್ರಚೋದಿಸುತ್ತಲೇ ಇರುತ್ತವೆ!

ಪ್ರಚೋದಿಸುತ್ತಲೇ ಇರುತ್ತವೆ!

ಇಂಥಹ ನಕಲಿ ಆಪ್‌ ತಯಾರಕರು ಈ ಆಪ್‌ ಅನ್ನು ಹೆಚ್ಚು ಜಾಹಿತಾರುಗೊಳಿಸಿರುತ್ತಾರೆ. ಜಾಹೀರಾತು ಮೂಲಕ ಅಥವಾ ಪಾಪ್‌ ಅಪ್‌ ವಿಂಡೋಗಳ ಮೂಲಕ ಬೇರೆಯೇ ಹಲವು ಆಪ್‌ಗಳನ್ನು ಇನ್‌ಸ್ಟಾಲ್ ಮಾಡುವಂತೆ ಬಳಕೆದಾರರನ್ನು ಪ್ರಚೋದಿಸುತ್ತಲೇ ಇರುತ್ತವೆ. ಇಂತಹುಗಳು ಬಹುತೇಕ ದುರುದ್ದೇಶಪೂರಿತ ಕಿರು ತಂತ್ರಾಂಶಗಳೇ ಆಗಿರುತ್ತವೆ.

ತಂತ್ರಜ್ಞರು ಎಚ್ಚರಿಸಿದ ಆಪ್‌ಗಳು ಯಾವುವು?

ತಂತ್ರಜ್ಞರು ಎಚ್ಚರಿಸಿದ ಆಪ್‌ಗಳು ಯಾವುವು?

ಇತ್ತೀಚೆಗೆ ಸೆಕ್ಯುರಿಟಿ ತಂತ್ರಜ್ಞರು ಎಚ್ಚರಿಸಿದ ಪ್ರಕಾರ, ವೈರಸ್‌ ಕ್ಲೀನರ್, ವೈರಸ್‌ ಬೂಸ್ಟರ್, ಆಯಂಟಿ ವೈರಸ್‌, ಆಪ್‌ ಲಾಕ್‌, ಕ್ಲೀನರ್, ಆಯಂಟಿ ವೈರಸ್‌ ಫ್ರೀ, ವೈರಸ್‌ ರಿಮೂವರ್, ಗೇಮ್‌ ಬಿಲಿಯರ್ಡ್ಸ್, ಚಿಲ್ಡ್ರನ್‌ ಪೊಲೀಸ್‌, ಗೇಮ್‌ ಆಫ್‌ ಕಾರ್ಸ್‌ ಹೀಗೆಲ್ಲ ವಿಭಿನ್ನ ಹೆಸರುಗಳಲ್ಲಿರುವ ಆಪ್‌ಗಳು ನಕಲಿ ಆಪ್‌ಗಳಾಗಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಜನಪ್ರಿಯ ಬ್ರ್ಯಾಂಡ್‌ಗಳು ಬೆಸ್ಟ್!

ಜನಪ್ರಿಯ ಬ್ರ್ಯಾಂಡ್‌ಗಳು ಬೆಸ್ಟ್!

ನಕಲಿ ಆಪ್‌ಗಳು ನಿಮ್ಮ ಮೊಬೈಲ್ ಸೇರದಂತಿರಲು ಹೆಚ್ಚು ಜನಜನಿತವಾದ ಬ್ರ್ಯಾಂಡ್‌ಗಳ ಆಪ್‌ಗಳನ್ನು ಮಾತ್ರವೇ ಬಳಸಸಬೇಕು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಉದಾಹರಣೆಗೆ ಪ್ಲೇ ಸ್ಟೋರ್‌ನಲ್ಲಿ 'ಆಯಂಟಿ ವೈರಸ್‌' ಅಂತ ಹುಡುಕಿದರೆ ನೂರಾರು ಆಪ್‌ಗಳು ಗೋಚರಿಸುತ್ತವೆ. ಆದರೆ, ಕ್ಯಾಸ್ಪ ಸ್ರ್ಕಿ, ಎವಿಜಿ, ಅವಾಸ್ಟ್ ಅತ ಆಪ್‌ಗಳು ಮಾತ್ರ ಒಳ್ಳೆಯವು.

ಒಳ್ಳೆಯ ಆಪ್‌ ಎಂದು ಗುರುತಿಸುವುದು ಹೇಗೆ?

ಒಳ್ಳೆಯ ಆಪ್‌ ಎಂದು ಗುರುತಿಸುವುದು ಹೇಗೆ?

ಮೊದಲು ಆಪ್‌ನ ನಿಖರ ಹೆಸರು ಪರೀಕ್ಷಿಸಿ ಡೆವಲಪರ್‌ ಯಾರೆಂದು ನೋಡಿರಿ. ನಂತರ ಆ ಆಪ್ ಅನ್ನು ಎಷ್ಟು ಜನ ಡೌನ್ಲೋಡ್ ಮಾಡಿದ್ದಾರೆಂದು ನೋಡಿ, ಬಳಕೆದಾರ ರಿವ್ಯೂ ಓದಿ.ಹೆಚ್ಚು ಮಂದಿ ರೇಟಿಂಗ್ಸ್‌ ನೀಡಿದ್ದರೆ ಮತ್ತು ಅದರ ರೇಟಿಂಗ್‌ 4ಕ್ಕಿಂತ ಮೇಲ್ಪಟ್ಟು ಇದ್ದರೆ ಆ ಆಪ್‌ ಅನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು.

Best Mobiles in India

English summary
Fake Android apps in the Play Store are a problem. People create listings designed to look exactly like popular apps. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X