ಆಪ್‌ನಲ್ಲಿ ಲೊಕೇಷನ್ ಸೇವ್ ಆಗದಂತೆ ಮಾಡುವುದು ಹೇಗೆ...?

By Lekhaka
|

ಇಂದಿನ ದಿನದಲ್ಲಿ ಪ್ಲೇ ಸ್ಟೋರಿನಿಂದ ಆಪ್ ಗಳನ್ನು ಇನ್ ಸ್ಟಾಲ್ ಮಾಡುವ ಸಂದರ್ಭದಲ್ಲಿ ಬಳೆಕೆದಾರರು ಹಲವು ತಪ್ಪು ಗಳನ್ನು ಮಾಡುತ್ತಾರೆ ಎನ್ನಲಾಗಿದೆ. ಆಪ್ ಗಳು ಕೇಳುವ ಎಲ್ಲಾ ಆಯ್ಕೆಗಳಿಗೆ ಪರ್ಮಿಷನ್ ಅನ್ನು ನೀಡುವುದನ್ನೇ ಕೆಲಸ ಮಾಡಿಕೊಂಡಿದ್ದಾರೆ. ಇದನ್ನು ಮಾಡುವುದರಿಂದ ನಿಮ್ಮ ಆಪ್ ಗಳು ಕಾಂಟೆಕ್ಟ್, ಫೋಟೋಗಳು ಮತ್ತು ನಿಮ್ಮ ಲೋಕೇಷನ್ ಗಳನ್ನು ನಿಮಗೆ ತಿಳಿಯದಂತೆ ಬಳಕೆ ಮಾಡಿಕೊಳ್ಳುತ್ತವೆ ಮತ್ತು ಸೇವ್ ಮಾಡಿಕೊಳ್ಳುತ್ತವೆ.

ಆಪ್‌ನಲ್ಲಿ ಲೊಕೇಷನ್ ಸೇವ್ ಆಗದಂತೆ ಮಾಡುವುದು ಹೇಗೆ...?

ಈ ಹಿನ್ನಲೆಯಲ್ಲಿ ಸ್ಮಾರ್ಟ್ ಫೋನ್ ಲೋಕೇಷನ್ ಗಳನ್ನು ಬೇರೆ ಯಾರು ಬಳಕೆ ಮಾಡಿಕೊಳ್ಳಬಾರದು ಎನ್ನುವ ಮಾದರಿಯಲ್ಲಿ ಸೆಟಿಂಗ್ಸ್ ಅನ್ನು ಬದಲಾವಣೆ ಮಾಡಿಕೊಳ್ಳುವುದು ಹೇಗೆ ಎಂಬುದನನ್ನು ತಿಳಿಸಿಕೊಡುವ ಪ್ರಯತ್ನವು ಇದಾಗಿದೆ.

Android ಫೋನಿನಲ್ಲಿ Face Unlock ಫೀಚರ್ ಬಳಸುವುದು ಹೇಗೆ?
ಆಂಡ್ರಾಯ್ಡ್ 9.0 ಪೈನಲ್ಲಿ

ಆಂಡ್ರಾಯ್ಡ್ 9.0 ಪೈನಲ್ಲಿ

ಆಂಡ್ರಾಯ್ಡ್ ಪೈನಲ್ಲಿ ನಿಮ್ಮ ಲೊಕೇಷನ್ ಮಾಹಿತಿಯನ್ನು ಸ್ಟೋರ್ ಮಾಡಿಕೊಳ್ಳಬಾರದು ಎನ್ನುವುದಾದರೆ ನೀವು ಕೊಂಚ ಸೆಟ್ಟಿಂಗ್ಸ್ ಬದಲಾವಣೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಲೋಕೆಷನ್ ಆಕ್ಯೂರೆಸಿಯನ್ನು ಆಫ್ ಅಂಡ್ ಆನ್ ಮಾಡ ಬೇಕಾಗುತ್ತದೆ. ಆನ್ ಮಾಡಿದರೆ ಎಲ್ಲಾ ಮಾಹಿತಿಯೂ ಸಿಗುತ್ತದೆ. ಅದೇ ಮಾದರಿಯಲ್ಲಿ ಆಫ್ ಮಾಡಿದರೆ ಯಾವುದೇ ಮಾಹಿತಿಯೂ ಸ್ಟೋರ್ ಆಗುವುದಿಲ್ಲ ಎನ್ನಲಾಗಿದೆ.

ಆಂಡ್ರಾಯ್ 6.0 ಗಿಂತಲೂ ಮೇಲೆ( ಮಾರ್ಶ್ ಮಲ್ಲೂ ದಿಂದ ಒರಿಯೋ ವರೆಗೆ)

ಆಂಡ್ರಾಯ್ 6.0 ಗಿಂತಲೂ ಮೇಲೆ( ಮಾರ್ಶ್ ಮಲ್ಲೂ ದಿಂದ ಒರಿಯೋ ವರೆಗೆ)

ಈ ಆಂಡ್ರಾಯ್ಡ್ ಗಳಲ್ಲಿ ಮಾಹಿತಿಯೂ ಸ್ಟೋರ್ ಆಗಬಾರದು ಎನ್ನುವುದಾರೆ ಸೆಟ್ಟಿಂಗ್ಸ್ ಮೆನುವಿನಲ್ಲಿ ಲೊಕೇಷನ್ ಸೆಟ್ಟಿಂಗ್ಸ್ ಆಯ್ಕೆಯ ಮೆಲೆ ಕ್ಲಿಕ್ ಮಾಡಬೇಕಾಗಿದೆ. ಮಾಡಿದ ಮೇಲೆ ಅಲ್ಲಿ ನಿಮಗೆ ಆಕ್ಟೀವ್ ಮತ್ತು ಡಿಆಕ್ಟೀವ್ ಆಯ್ಕೆಯೂ ದೊರೆಯಲಿದೆ. ಇದರಲ್ಲಿ ಬೇರೆ ಬೇರೆ ಆಪ್ ಗಳಿಗೆ ಬೇರೆ ಬೇರೆ ಆಯ್ಕೆಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಮುಂದಿನ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು.

ಬೇರೆ ಬೇರೆ ಆಪ್ ಗಳಿಗೆ:

ಬೇರೆ ಬೇರೆ ಆಪ್ ಗಳಿಗೆ:

ಇದಲ್ಲದೇ ಬೇರೆ ಬೇರೆ ಆಪ್ ಗಳಿಗೆ ಬೇರೆ ಬೇರ ಆಯ್ಕೆಗಳನ್ನು ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಳ್ಳಲಾಗಿದೆ. ಬೇಕಾದ ಆಪ್ ಗಳಿಗೆ ಮಾತ್ರವೇ ಸೆಲೆಕ್ಟ್ ಮಾಡಿಕೊಳ್ಳುವ ಅವಕಾಶವು ಇದರಲ್ಲಿ ಇದೆ.

ಆಂಡ್ರಾಯ್ಡ್ 4.3 – 5.1:

ಆಂಡ್ರಾಯ್ಡ್ 4.3 – 5.1:

ಇದಲ್ಲದೇ ಆಂಡ್ರಾಯ್ಡ್ ಹಳೇಯ ಆವೃತ್ತಿಯನ್ನು ನೀವು ಬಳಕೆ ಮಾಡಿಕೊಳ್ಳುತ್ತಿದ್ದರೇ ಇದಕ್ಕಾಗಿ ಲೊಕೇಷನ್ ಸೆಟ್ಟಿಂಗ್ಸ್ ಅನ್ನು ಬದಲಾವಣೆ ಮಾಡಿಕೊಳ್ಳಬೇಕಾಗಿದೆ. ಸೆಟ್ಟಿಂಗ್ಸ್ > ಮೋರ್> ಪರ್ಮಿಷನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕಾಗಿದೆ. ಅಲ್ಲಿ ನಿವು ಲೊಕೇಷನ್ ಆಯ್ಕೆಯನ್ನು ಕಾಣುವಿರಿ ಅಲ್ಲಿ ಪರ್ಮಿಷನ್ ಆಯ್ಕೆಯನ್ನು ಆಫ್ ಮಾಡಿದರೆ ನಿಮ್ಮ ಯಾವುದೇ ಮಾಹಿತಿಯನ್ನು ಯಾವುದೇ ಆಪ್ ಗಳು ಪಡೆದುಕೊಳ್ಳಲು ಸಾಧ್ಯವಿಲ್ಲ.

Best Mobiles in India

English summary
How to stop Android apps from accessing your location. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X