ಜಿಯೋ ಪ್ರೀಪೇಡ್ ಗ್ರಾಹಕರು ಪೋಸ್ಟ್‌ಪೇಡ್ ಗ್ರಾಹಕರಾಗುವುದು ಹೇಗೆ?

|

ಟೆಲಿಕಾಂ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಪೋಸ್ಟ್‌ಪೇಡ್ ಆಫರ್ ಅನ್ನು ಪರಿಚಯಿಸಿರುವ ರಿಲಾಯನ್ಸ್ ಜಿಯೋ ಗ್ರಾಹಕರಿಗೆ ಪೋಸ್ಟ್‌ಪೇಡ್ ಗ್ರಾಹಕರಾಗುವುದು ಹೇಗೆ ಎಂಬುದನ್ನು ತಿಳಿಸಿದೆ. ಇಲ್ಲಿಯವರೆಗೂ ಪ್ರೀಪೇಡ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದ ಜಿಯೋ ಪೋಸ್ಟ್‌ಪೆಡ್ ಮಾರುಕಟ್ಟೆಯಲ್ಲಿ ಹೊಸದೊಂದು ಹೆಜ್ಜೆಯನ್ನು ಇರಿಸಲು ಮುಂದಾಗಿದೆ.

ಈಗಾಗಲೇ 15 ಕೋಟಿಗೂ ಹೆಚ್ಚು ಗ್ರಾಹಕರನ್ನು ಸೆಳೆದಿರುವ ಜಿಯೋ, ಇನ್ಮುಂದೆ ಅವರನ್ನು ತನ್ನಲ್ಲಿಯೇ ಉಳಿಯುವ ಅಲುವಾಗಿ ಪೋಸ್ಟ್ ಪೇಯ್ಡ್ ಬಳಕೆದಾರರನ್ನು ಪ್ರೇರೇಪಿಸಲು ಮುಂದಾಗಿದೆ. ಈಗಿರುವ ಜಿಯೋ ಪ್ರೀಪೇಡ್ ಗ್ರಾಹಕರೇ ಜಿಯೋ ಪೋಸ್ಟ್‌ಪೇಡ್ ಗ್ರಾಹಕರಾಗಲು ಜಿಯೋ ಅನುಮತಿಸಿದೆ ಮತ್ತು ಕಾರ್ಯವನ್ನು ಸರಳಗೊಳಿಸಿದೆ.

ಜಿಯೋ ಪ್ರೀಪೇಡ್ ಗ್ರಾಹಕರು ಪೋಸ್ಟ್‌ಪೇಡ್ ಗ್ರಾಹಕರಾಗುವುದು ಹೇಗೆ?

ಟೆಲಿಕಾಂ ಮಾರುಕಟ್ಟೆಯಲ್ಲಿ ಸದ್ಯ ಜಿಯೋ ನೀಡಿರುವ ಪೋಸ್ಟ್‌ಪೇಡ್ ಆಫರ್ ಕ್ರಾಂತಿಕಾರವಾಗಲಿದೆ ಹೆಜ್ಜೆಯಾಗಿದ್ದು, ಹಾಗಾದರೆ, ಜಿಯೋವಿನ ನೂತನ ಪೋಸ್ಟ್‌ಪೇಡ್ ಆಫರ್ ಹೇಗಿದೆ? ಜಿಯೋವಿನ ಪೋಸ್ಟ್‌ಪೇಡ್ ಆಫರ್‌ನಿಂದ ಗ್ರಾಹಕರಿಗೆ ಏನೆಲ್ಲಾ ಲಾಭಗಳಿವೆ? ಮತ್ತು ಜಿಯೋ ಪ್ರೀಪೇಡ್ ಗ್ರಾಹಕರು ಪೋಸ್ಟ್‌ಪೇಡ್ ಗ್ರಾಹಕರಾಗುವುದು ಹೇಗೆ ಎಂಬುದನ್ನು ಮುಂದೆ ತಿಳಿಯಿರಿ.

ಜಿಯೋ ರೂ.199 ಪ್ಲಾನ್

ಜಿಯೋ ರೂ.199 ಪ್ಲಾನ್

ಜಿಯೋ ಬಳಕೆದಾರರಿಗೆ ರೂ.199ಕ್ಕೆ ತಿಂಗಳ ಪೋಸ್ಟ್‌ಪೃಡ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಬಳಕೆದಾರರನ್ನು ಸೆಳೆಯಲು ಮುಂದಾಗಿದೆ. ಬೇರೆ ಯಾವುದೇ ಟೆಲಿಕಾಂ ಕಂಪನಿಗಳು ಈ ಮಾದರಿಯ ಆಫರ್ ಅನ್ನು ಈ ವರೆಗೂ ನೀಡಿಲ್ಲದೇ ಇರುವುದು ಈ ಅಫರ್‌ನ ವಿಶೇಷತೆಯಾಗಿದೆ.

ಪ್ರತಿ ತಿಂಗಳು 25GB ಡೇಟಾ!!

ಪ್ರತಿ ತಿಂಗಳು 25GB ಡೇಟಾ!!

ಜಿಯೋ ರೂ.199ಕ್ಕೆ ಪೋಸ್ಟ್ ಪೇಯ್ಡ್ ಆಫರ್ ಮೂಲಕ ಬಳಕೆದಾರರಿಗೆ ತಿಂಗಳಿಗೆ 25GB 4G ಡೇಟಾವನ್ನು ಬಳಕೆಗೆ ನೀಡಲಿದೆ. ಪ್ರತಿ ತಿಂಗಳು ಕೇವಲ 199 ರೂಪಾಯಿಗಳಿಗೆ ಈ ಆಫರ್ ಅನ್ನು ಜಿಯೋ ಬಿಡುಗಡೆ ಮಾಡುತ್ತಿರುವುದರಿಂದ, ಜಿಯೋ ಬಳಕೆದಾರರು ಇತರೆ ಟೆಲಿಕಾಂ ಕಂಪನಿಗಿಂತಲೂ ಎರಡು ಪಟ್ಟು ಹೆಚ್ಚು ಲಾಭವನ್ನು ಪಡೆದುಕೊಳ್ಳಬಹುದು.

ಉಚಿತ ಕರೆ, ಉಚಿತ ಎಸ್‌ಎಮ್‌ಎಸ್‌!

ಉಚಿತ ಕರೆ, ಉಚಿತ ಎಸ್‌ಎಮ್‌ಎಸ್‌!

ಈಗಾಗಲೇ ಪ್ರೀ ಪೇಯ್ಡ್ ಬಳಕೆದಾರರಿಗೆ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ನೀಡಿರುವ ಜಿಯೋ, ಕೇವಲ 199 ರೂಪಾಯಿಗಳಿಗೆ ಪೋಸ್ಟ್ ಪೇಯ್ಡ್ ಬಳಕೆದಾರರಿಗೂ ಸಂಪೂರ್ಣ ವಾಗಿ ಉಚಿತ ಕರೆ ಮಾಡುವ ಮತ್ತು ಮೇಸೆಜ್ ಕಳುಹಿಸುವ ಅವಕಾಶವನ್ನು ಮಾಡಿಕೊಟ್ಟಿದೆ.

ಅಂತರಾಷ್ಟ್ರೀಯ ಕರೆಗಳು!!

ಅಂತರಾಷ್ಟ್ರೀಯ ಕರೆಗಳು!!

ಜಿಯೋ ಫೋಸ್ಟ್ ಪೇಯ್ಡ್ ಅನ್ನು ಗ್ರಾಹಕರು ಆಯ್ದುಕೊಳ್ಳಲು ಜಿಯೋವಿನ ಮೊದಲ ಪೋಸ್ಟ್‌ಪೇಡ್ ಆಫರ್ ಹೊಂದಿರುವ ಮತ್ತೊಂದು ಸೇವೆ ಕಾರಣವಾಗಲಿದೆ. ಅಂತರಾಷ್ಟ್ರೀಯ ಕರೆಗಳು ಪ್ರತಿ ನಿಮಿಷಕ್ಕೆ 50 ಪೈಸೆಯಿಂದ ಶುರುವಾಗಲಿದೆ. ಹಾಗಾಗಿ, ಇನ್ನು ಲೋಕಲ್ ಬೆಲೆಯಲ್ಲಿ ಅಂತರಾಷ್ಟ್ರೀಯ ಕರೆಗಳನ್ನು ಮಾಡಬಹುದು.!

Jio Fi ಬಳಸಿ 2G ಮತ್ತು 3G ಗ್ರಾಹಕರು ಕಾಲ್ ಮಾಡುವುದು ಹೇಗೆ?
ಪೋಸ್ಟ್‌ಪೇಡ್ ಗ್ರಾಹಕರಾಗುವುದು ಹೇಗೆ?

ಪೋಸ್ಟ್‌ಪೇಡ್ ಗ್ರಾಹಕರಾಗುವುದು ಹೇಗೆ?

ಹೊಸ ಗ್ರಾಹಕರು ಜಿಯೋ ಪೋಸ್ಟ್‌ಪೇಡ್ ಸಿಮ್ ಅನ್ನು ನೇರವಾಗಿ ಖರೀದಿಸಬಹುದು. ಇನ್ನು ಜಿಯೋ ಪ್ರೀಪೇಡ್ ಗ್ರಾಹಕರು ಜಿಯೋವಿನ ಅಫಿಷಿಯಲ್ ವೆಬ್‌ಸೈಟ್ ತೆರೆದು ಹಲೊ ಜಿಯೋ ಪೋಸ್ಟ್‌ಪೇಡ್ ಆಯ್ದುಕೊಂಡರೆ, ಅಲ್ಲಿ ಗೆಟ್ ನೌ ಎಂಬ ಆಯ್ಕೆ ಕಾಣಿಸುತ್ತದೆ. ನಂತರ ಅದನ್ನು ಕ್ಲಿಕ್ ಮಾಡಿ 'ಪ್ರಿ ಟು ಪೋಸ್ಟ್' ಆಯ್ಕೆ ಮೂಲಕ ಜಿಯೋ ಪ್ರೀಪೇಡ್ ಗ್ರಾಹಕರು ಪೋಸ್ಟ್‌ಪೇಡ್ ಗ್ರಾಹಕರಾಗಬಹುದು. ( http://www.jio.com/postpaid)

ಹೆದರಿದೆ ಟೆಲಿಕಾಂ ಪ್ರಪಂಚ!!

ಹೆದರಿದೆ ಟೆಲಿಕಾಂ ಪ್ರಪಂಚ!!

ಜಿಯೋ ಪೋಸ್ಟ್‌ಪೇಡ್ ಸೇವೆಯನ್ನು ಆರಂಭಿಸುವ ಸುದ್ದಿ ಪ್ರಕಟಿಸಿದ ನಂತರದ ಪ್ರೀಪೇಯ್ಡ್ ಬಳಕೆದಾರರನ್ನು ಕಳೆದುಕೊಂಡ ಏರ್‌ಟೆಲ್‌ ಮತ್ತು ಇತರೆ ಟೆಲಿಕಾಂ ಕಂಪೆನಿಗಳಿಗೆ ಈಗ ಭಯ ಉಂಟಾಗಿದೆ. ಈಗಾಗಲೇ, ಕೋಟ್ಯಾಂತರ ಗ್ರಾಹಕರನ್ನು ಕಳೆದುಕೊಂಡಿರುವ ಈ ಟೆಲಿಕಾಂಗಳಿಗೆ ಇದೇ ಪರಿಸ್ಥಿತಿ ಎದುರಾದರೆ ಮುಚ್ಚುವ ಪರಿಸ್ಥಿತಿ ಸಹ ಬರಬಹುದು.

Best Mobiles in India

English summary
Reliance Jio Prepaid to Postpaid and Postpaid to Prepaid. to know more visit to kannada.gizbot.con

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X