ನಿಮ್ಮ ಲ್ಯಾಪ್‌ಟಾಪ್‌ನ ಕಾಳಜಿಯನ್ನು ಹೀಗೆ ಮಾಡಿ

By Shwetha

ನಿಮ್ಮಲ್ಲಿರುವ ಯಾವುದೇ ಇಲೆಕ್ಟ್ರಾನಿಕ್ ವಸ್ತುಗಳು ಚೆನ್ನಾಗಿ ಕಾರ್ಯನಿರ್ವಹಿಸಬೇಕು ಎಂದಾದಲ್ಲಿ ಅದರ ಬಳಕೆ ಮತ್ತು ನಿರ್ವಹಣೆಗೆ ಹೆಚ್ಚಿನ ಗಮನವನ್ನು ವಹಿಸಬೇಕಾಗುತ್ತದೆ. ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಕಂಪ್ಯೂಟರ್‌ಗಳು, ಟಿವಿ ಹೀಗೆ ಪ್ರತಿಯೊಂದರ ಬಳಕೆಯನ್ನು ನೀವು ಚೆನ್ನಾಗಿ ಮಾಡಬೇಕು ಅಥವಾ ಅವುಗಳು ಚೆನ್ನಾಗಿ ಕಾರ್ಯನಿರ್ವಹಿಸಬೇಕು ಎಂದಾದಲ್ಲಿ ಅದರ ಸ್ವಚ್ಛತೆ ಮತ್ತು ಉಪಯೋಗ ಮಾಡುವುದರ ಮೇಲೆ ಹೆಚ್ಚುವರಿ ಗಮನವನ್ನು ನೀಡಬೇಕಾಗುತ್ತದೆ. ಇಂದಿನ ಲೇಖನದಲ್ಲಿ ನಿಮ್ಮ ಲ್ಯಾಪ್‌ಟಾಪ್‌ನ ಸ್ವಚ್ಛತೆ ಮತ್ತು ಬಳಸುವಿಕೆಯ ಮೇಲೆ ನಮ್ಮ ಇಂದಿನ ಲೇಖನ ಗಮನ ಹರಿಸುತ್ತಿದ್ದು ನಿಜಕ್ಕೂ ಇದು ಪ್ರಯೋಜನಕಾರಿಯಾಗಲಿದೆ. ನಿಮ್ಮ ಲ್ಯಾಪ್‌ಟಾಪ್‌ನ ಸ್ವಚ್ಛತೆಯನ್ನು ಹೇಗೆ ಮಾಡುವುದು ಅದನ್ನು ಬಳಸುವುದು ಹೇಗೆ ಸುರಕ್ಷೆ ಹೇಗೆ ಮುಂತಾದ ಅಂಶಗಳನ್ನು ಈ ಲೇಖನ ಒಳಗೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ
ದ್ರವ ಆಹಾರಗಳನ್ನು ಲ್ಯಾಪ್‌ಟಾಪ್‌ನ ಹತ್ತಿರ ಇರಿಸದಿರಿ
  

ದ್ರವ ಆಹಾರಗಳನ್ನು ನಿಮ್ಮ ಲ್ಯಾಪ್‌ಟಾಪ್‌ನ ಬಳಿ ಎಂದಿಗೂ ಇರಿಸದಿರಿ ಎಲ್ಲಿಯಾದರೂ ಈ ಆಹಾರಗಳು ಚೆಲ್ಲಿದವೆಂದರೆ ನಿಮ್ಮ ಲ್ಯಾಪ್‌ಟಾಪ್ ಪತನಗೊಳ್ಳುವುದು ಖಂಡಿತ. ಇದು ನಿಮ್ಮ ಲ್ಯಾಪ್‌ಟಾಪ್‌ನ ಒಳಗಿನ ಭಾಗವನ್ನು ಹಾಳುಗೆಡವುವ ಸಾಧ್ಯತೆ ಹೆಚ್ಚಿದೆ.

ಆಂಟಿ ವೈರಸ್ ಸಾಫ್ಟ್‌ವೇರ್‌
  

ನೀವು ಯಾವುದನ್ನಾದರೂ ಡೌನ್‌ಲೋಡ್ ಮಾಡಿದ್ದೀರಿ ಎಂದಾದಲ್ಲಿ ಅದರಲ್ಲಿ ವೈರಸ್ ಖಂಡಿತ ಇರುತ್ತದೆ. ನಿಮ್ಮ ಲ್ಯಾಪ್‌ಟಾಪ್ ಆಂಟಿವೈರಸ್ ಸಾಫ್ಟ್‌ವೇರ್ ಅನ್ನು ಹೊಂದಿಲ್ಲ ಎಂದಾದಲ್ಲಿ ನಿಮಗೆ ತೊಂದರೆ ಖಂಡಿತ. ಇದು ನಿಮ್ಮ ಸಿಸ್ಟಮ್ ಕಾರ್ಯಾಚರಣೆಯನ್ನು ನಿಧಾನಗೊಳಿಸುತ್ತದೆ.

ಆಹಾರವನ್ನು ಲ್ಯಾಪ್‌ಟಾಪ್‌ನಿಂದ ದೂರವಿರಿಸಿ
  

ನೀವು ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವಾಗ ಆಹಾರಗಳನ್ನು ಸೇವಿಸದಿರಿ. ನೀವು ಸೇವಿಸುವಾಗ ಆಹಾರದ ತುಣುಕುಗಳು ಕೀಬೋರ್ಡ್ ಮೇಲೆ ಬಿದ್ದು ನಿಮ್ಮ ಲ್ಯಾಪ್‌ಟಾಪ್ ಕೀಬೋರ್ಡ್ ಅನ್ನು ಹಾಳುಮಾಡಬಹುದು.

ಶುದ್ಧ ಹಸ್ತದಿಂದ ಲ್ಯಾಪ್‌ಟಾಪ್ ಅನ್ನು ಬಳಸಿ
  

ನಿಮ್ಮ ಕೈ ಶುದ್ಧವಿಲ್ಲ ಎಂದಾದಲ್ಲಿ ಹಸ್ತದಲ್ಲಿರುವ ಕೊಳೆ ನಿಮ್ಮ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ನ ಮೇಲೆ ಉಂಟಾಗಬಹುದು. ಲ್ಯಾಪ್‌ಟಾಪ್ ಅನ್ನು ಬಳಸುವ ಮೊದಲು ನಿಮ್ಮ ಕೈಗಳನ್ನು ಶುದ್ಧವಾಗಿ ತೊಳೆದುಕೊಳ್ಳಿ.

ಎಲ್‌ಸಿಡಿ ಡಿಸ್‌ಪ್ಲೇ ಮಾನಿಟರ್ ಸಂರಕ್ಷಣೆ
  
 

ನಿಮ್ಮ ಲ್ಯಾಪ್‌ಟಾಪ್ ಅನ್ನು ಮುಚ್ಚುವಾಗ, ಇದರೊಳಗೆ ಯಾವುದೇ ಸಣ್ಣ ಐಟಮ್‌ಗಳಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ ಅಂದರೆ ಪೆನ್ಸಿಲ್, ಸಣ್ಣ ಇಯರ್ ಫೋನ್‌ಗಳು ಇತ್ಯಾದಿಗಳು. ಈ ಐಟಮ್‌ಗಳು ಲ್ಯಾಪ್‌ಟಾಪ್ ಒಳಗೆ ಇದ್ದಲ್ಲಿ ಇದು ಮಾನಿಟರ್‌ಗೆ ಹಾನಿಯನ್ನುಂಟುಮಾಡಹುದು.

ಲ್ಯಾಪ್‌ಟಾಪ್‌ ಅನ್ನು ಅದರ ಬೇಸ್‌ನಿಂದ ಹಿಡಿದುಕೊಳ್ಳಿ
  

ಪರದೆಯಿಂದ ಮಾತ್ರವೇ ನಿಮ್ಮ ಲ್ಯಾಪ್‌ಟಾಪ್ ಅನ್ನು ಎತ್ತುತ್ತೀರಿ ಎಂದಾದಲ್ಲಿ ಇದು ನಿಮ್ಮ ಲ್ಯಾಪ್‌ಟಾಪ್‌ಗೆ ಹಾನಿಯನ್ನುಂಟು ಮಾಡಬಹುದು. ಆದ್ದರಿಂದ ಯಾವಾಗಲೂ ಬೇಸ್‌ ಅನ್ನು ಹಿಡಿದುಕೊಂಡೇ ಲ್ಯಾಪ್‌ಟಾಪ್ ಅನ್ನು ಮೇಲೆತ್ತಿ.

ಪವರ್ ಕೋರ್ಡ್ ಅನ್ನು ಎಳೆಯಬೇಡಿ
  

ನೀವು ನಿಮ್ಮ ಲ್ಯಾಪ್‌ಟಾಪ್ ಅನ್ನು ಗೋಡೆಯ ಬೋರ್ಡ್‌ಗೆ ಸಿಕ್ಕಿಸಿದ್ದೀರಿ ಎಂದಾದಲ್ಲಿ ಅದನ್ನು ನೇರವಾಗಿ ಎಳೆಯಲು ಹೋಗಬೇಡಿ. ಇದು ಪವರ್ ಸೋಕೆಟ್‌ಗೆ ಹಾನಿಯನ್ನುಂಟು ಮಾಡಬಹುದು.

ನಿಮ್ಮ ಕುರ್ಚಿಯ ಚಕ್ರಗಳ ಮೇಲೆ ನಿಗಾ ಇರಿಸಿ
  

ನಿಮ್ಮ ಕೋರ್ಡ್‌ಗಳನ್ನು ಯಾವಾಗಲೂ ಸುತ್ತಿಡಿ. ನಿಮ್ಮ ಕುರ್ಚಿಯ ಚಕ್ರಗಳಿಗೆ ಇದು ಸಿಕ್ಕಿಹಾಕಿಕೊಳ್ಳದಂತೆ ಗಮನಹರಿಸಿ.

ಡಿವೈಸ್‌ಗಳನ್ನು ಸರಿಯಾಗಿ ಪ್ಲಗಿನ್ ಮಾಡಿಕೊಳ್ಳಿ
  

ನೀವು ಲ್ಯಾಪ್‌ಟಾಪ್‌ಗೆ ಪೆನ್ ಡ್ರೈವ್, ಕಾರ್ಡ್ ಮೊದಲಾದ ವಸ್ತುಗಳನ್ನು ಲಗತ್ತಿಸುತ್ತೀರಿ ಎಂದಾದಲ್ಲಿ ಅದನ್ನು ಸರಿಯಾದ ಸ್ಥಳದಲ್ಲಿ ಹಾಕುತ್ತಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ರಿಮೂವೇಬಲ್ ಡ್ರೈವ್
  

ಸಿಡಿ ಡ್ರೈವ್‌ಗಳನ್ನು ಬಹು ಸುಲಭವಾಗಿ ನಿಮ್ಮ ಲ್ಯಾಪ್‌ಟಾಪ್‌ನಿಂದ ಹೊರತೆಗೆಯಬಹುದು. ಆದ್ದರಿಂದ ಇದನ್ನು ಬಳಸುವಾಗ ಹೆಚ್ಚಿನ ಜಾಗರೂಕತೆ ವಹಿಸಿ.

ಡ್ರೈವ್‌ಗಳಿಗೆ ಸರಿಯಾಗಿ ಸಿಡಿಯನ್ನು ಹಾಕಿ
  

ನೀವು ನಿಮ್ಮ ಲ್ಯಾಪ್‌ಟಾಪ್‌ಗೆ ಸಿಡಿಯನ್ನು ಹಾಕುವಾಗ ಹೆಚ್ಚು ಜಾಗರೂಕತೆ ವಹಿಸಿ ಮತ್ತು ನಿಗಾ ವಹಿಸಿ.

ಸಿಡಿಗಳನ್ನು ಹಾಕುವಾಗ ಲೇಬಲ್‌ಗಳನ್ನು ಪರಿಶೀಲಿಸಿ
  

ಸಿಡಿಗಳು, ಡಿವಿಡಿಗಳು ಅಥವಾ ಫ್ಲಾಪಿ ಡಿಸ್ಕ್‌ಗಳು ಯಾವುದೇ ಹಾನಿಯಾಗಿರುವ ಲೇಬಲ್‌ಗಳನ್ನು ಹೊಂದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಹೆಚ್ಚಿನ ತಾಪಮಾನ ಬದಲಾವಣೆಗಳಿಗೆ ಲ್ಯಾಪ್‌ಟಾಪ್ ಅನ್ನು ಗುರಿಪಡಿಸದಿರಿ
  

ಚಳಿಗಾಲದಲ್ಲಿ ನಿಮ್ಮ ಲ್ಯಾಪ್‌ಟಾಪ್ ಅನ್ನು ಹೊರಗೆ ತರುವಾಗ, ಮೊದಲಿಗೆ ಕೊಠಡಿಯ ತಾಪಮಾನಕ್ಕೆ ಅದನ್ನು ಹೊಂದಿಸಿ. ಇದು ನಿಮ್ಮ ಲ್ಯಾಪ್‌ಟಾಪ್‌ಗೆ ಉಂಟಾಗುವ ಹೆಚ್ಚಿನ ಹಾನಿಯನ್ನು ತಡೆಗಟ್ಟಬಹುದು.

ನಿಮ್ಮ ಲ್ಯಾಪ್‌ಟಾಪ್ ಅನ್ನು ಕಾರಿನಲ್ಲಿ ಬಿಡಬೇಡಿ
  

ಕಾರಿನೊಳಗೆ ನಿಮ್ಮ ಲ್ಯಾಪ್‌ಟಾಪ್ ಅನ್ನು ಇರಿಸುವುದು ನಿಮ್ಮ ಲ್ಯಾಪ್‌ಟಾಪ್‌ಗೆ ಹೆಚ್ಚಿನ ಹಾನಿಯನ್ನು ತಂದೊಡ್ಡಬಹುದು. ಮತ್ತು ಕಳ್ಳಕಾಕರೂ ಇದನ್ನು ಕದ್ದೊಯ್ಯುವ ಸಾಧ್ಯತೆ ಹೆಚ್ಚಿರುತ್ತದೆ.

ಆಗಾಗ ಸ್ವಚ್ಛಗೊಳಿಸುತ್ತಿರಿ
  

ನಿಮ್ಮ ಲ್ಯಾಪ್‌ಟಾಪ್ ಅನ್ನು ಸ್ವಚ್ಛಗೊಳಿಸಲು ಅದನ್ನು ವೃತ್ತಿಪರ ಲ್ಯಾಪ್‌ಟಾಪ್ ತಜ್ಞರ ಬಳಿ ಕೊಂಡೊಯ್ಯಿರಿ. ನೀವೇ ಇದನ್ನು ಮಾಡಲು ಸಾಧ್ಯ ಎಂದಾದಲ್ಲಿ, ಇದರ ಬಗ್ಗೆ ಹೆಚ್ಚಿನ ಜ್ಞಾನವನ್ನು ಪಡೆದುಕೊಡು ಈ ಕಾರ್ಯದತ್ತ ಮುನ್ನುಗ್ಗಿ. ಹೆಚ್ಚಿನ ಬಿಸಿ ನಿಮ್ಮ ಲ್ಯಾಪ್‌ಟಾಪ್ ಮದರ್ ಬೋರ್ಡ್ ಅನ್ನು ಹಾಳುಗೆಡವಬಹುದು.

ನಿಮ್ಮ ಲ್ಯಾಪ್‌ಟಾಪ್ ಮೇಲೆ ಭಾರದ ವಸ್ತುಗಳನ್ನು ಇರಿಸದಿರಿ
  

ಇದು ಎಲ್‌ಸಿಡಿ ಸ್ಕ್ರೀನ್ ಅನ್ನು ಕೀಬೋರ್ಡ್‌ನತ್ತ ದೂಡಿ, ಅದನ್ನು ಹಾಳುಗೆಡವಬಹುದು. ಆದ್ದರಿಂದ ಪುಸ್ತಕಗಳು, ಭಾರದ ಸಾಮಾಗ್ರಿಗಳನ್ನು ನಿಮ್ಮ ಲ್ಯಾಪ್‌ಟಾಪ್ ಮೇಲೆ ಇರಿಸಬೇಡಿ.

ಲ್ಯಾಪ್‌ಟಾಪ್ ಕೇಸ್ ಉತ್ತಮವಾಗಿರಲಿ
  

ನಿಮ್ಮ ಲ್ಯಾಪ್‌ಟಾಪ್ ಅನ್ನು ಒಯ್ಯುವ ಕೇಸ್ ಯಾವಾಗಲೂ ಉತ್ತಮವಾಗಿರಲಿ. ನಿಮ್ಮ ಲ್ಯಾಪ್‌ಟಾಪ್‌ಗೆ ಈ ಕೇಸ್ ಹೊಂದುವಂತಿರಲಿ ಮತ್ತು ಸರಿಯಾದ ಆಕಾರದಲ್ಲಿರಲಿ.

ಸೂಕ್ತವಾದ ಲ್ಯಾಪ್‌ಟಾಪ್ ಬ್ಯಾಗ್
  

ಲ್ಯಾಪ್‌ಟಾಪ್ ಅನ್ನು ನೀವು ಬ್ಯಾಗಿನಲ್ಲಿರಿಸುವಾಗ ಹೆಚ್ಚಿನ ಜಾಗರೂಕತೆಯನ್ನು ಮಾಡಬೇಕಾಗುತ್ತದೆ. ನಿಮ್ಮ ಲ್ಯಾಪ್‌ಟಾಪ್ ಬ್ಯಾಗ್ ಇದಕ್ಕೆ ಹಾನಿ ಉಂಟಾಗುವುದನ್ನು ತಪ್ಪಿಸುತ್ತದೆ.

ಲ್ಯಾಪ್‌ಟಾಪ್ ಅನ್ನು ಸೂಕ್ತ ಸ್ಥಳದಲ್ಲಿರಿಸಿ
  

ನಿಮ್ಮ ಲ್ಯಾಪ್‌ಟಾಪ್ ಅನ್ನು ಸೂಕ್ತವಾದ ಸ್ಥಳದಲ್ಲಿರಿಸುವುದು ಅತೀ ಮುಖ್ಯವಾಗಿದೆ. ಚೆನ್ನಾಗಿ ಗಾಳಿ ಬೆಳಕು ಇರುವಂತಹ ಸ್ಥಳದಲ್ಲಿ ನಿಮ್ಮ ಲ್ಯಾಪ್‌ಟಾಪ್ ಅನ್ನು ಇರಿಸಿ ಅದರಲ್ಲಿ ಕಾರ್ಯಾಚರಣೆಯನ್ನು ಮಾಡಿ.

ಹಳೆಯ ಟೂತ್ ಬ್ರಶ್ ಅನ್ನು ಬಳಸಿ
  

ಲ್ಯಾಪ್‌ಟಾಪ್‌ನ ಕೀಬೋರ್ಡ್, ಫ್ಯಾನ್ ಸ್ಕ್ರೀನ್ ಅನ್ನು ಸ್ವಚ್ಛಮಾಡಲು ಹಳೆಯ ಟೂತ್ ಬ್ರಶ್ ಅನ್ನು ಬಳಸಿ.

ಚಪ್ಪಟೆಯಾದ ಸ್ಚಚ್ಛ ಸ್ಥಳದಲ್ಲಿ ಲ್ಯಾಪ್‌ಟಾಪ್ ಅನ್ನು ಇರಿಸಿ
  

ಇದು ನಿಮ್ಮ ಲ್ಯಾಪ್‌ಟಾಪ್‌ಗೆ ಉಂಟಾಗುವ ಹಾನಿಯನ್ನು ತಪ್ಪಿಸುತ್ತದೆ. ನೀವು ಲ್ಯಾಪ್‌ಟಾಪ್‌ನೊಂದಿಗೆ ಹೊರಗಡೆ ಇದ್ದೀರಿ ಎಂದಾದಲ್ಲಿ, ಸರಿಯಾದ ಚಪ್ಪಟೆ ಸ್ಥಳದಲ್ಲಿ ನಿಮ್ಮ ಲ್ಯಾಪ್‌ಟಾಪ್ ಅನ್ನು ಇರಿಸಿ.

ನಿಮ್ಮ ಹಾಸಿಗೆಯ ಮೇಲೆ ಲ್ಯಾಪ್‌ಟಾಪ್ ಅನ್ನು ಬಳಸದಿರಿ
  

ಹಾಸಿಗೆಯ ಮೇಲೆ ಲ್ಯಾಪ್‌ಟಾಪ್ ಅನ್ನು ಬಳಸುವುದರಿಂದ ಲ್ಯಾಪ್‌ಟಾಪ್‌ನೊಳಗಡೆ ಇರುವ ಫ್ಯಾನ್‌ಗೆ ಇದು ಹಾನಿಯನ್ನುಂಟು ಮಾಡಬಹುದು. ಹಾಸಿಗೆಯು ಫ್ಯಾನ್‌ಗೆ ತಡೆಯನ್ನು ಉಂಟು ಮಾಡಿ ಫ್ಯಾನ್‌ನ ಕಾರ್ಯನಿರ್ವಹಣೆಯನ್ನು ನಿಲ್ಲಿಸಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

English summary
This article tells about How to Take Care Of Your Laptop In a Easy and Correct way.
Please Wait while comments are loading...

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more