ಪ್ರೊಫೈಲ್ ಚಿತ್ರದ ಅಂದವನ್ನು ಹೆಚ್ಚಿಸುವ ತೀಕ್ಷ್ಣ ವಿಧಾನಗಳು

By Shwetha
|

ಮೊದಲ ನೋಟದಲ್ಲೇ ಪರಿಣಾಮಕಾರಿಯಾಗಿರುವುದರ ಅವಕಾಶವನ್ನು ನಿಮಗೆ ಎಂದಿಗೂ ಪಡೆದುಕೊಳ್ಳಲು ಸಾಧ್ಯವಿಲ್ಲ. ಮೊದಲ ನೋಟದಲ್ಲೇ ಪ್ರಭಾವ ಬೀರುವಂತಹ ಅವಕಾಶಗಳು ಹೆಚ್ಚಿದ್ದು ಎರಡನೇ ಅವಕಾಶದಲ್ಲಿ ಇದನ್ನು ಸಾಧಿಸುತ್ತೇನೆಂದರೆ ಅದು ಅಷ್ಟೊಂದು ಮಹತ್ವತೆಯನ್ನು ಪಡೆಯುವುದಿಲ್ಲ ಎಂಬುದು ನಿಮಗೆ ಗೊತ್ತೇ? ಇಂದಿನ ಅಂರ್ಜಾಲ ಯುಗವು ನಮ್ಮ ಜೀವನದಲ್ಲಿ ಬಹಳಷ್ಟನ್ನು ಬದಲಾಯಿಸದೆ, ಆದರೆ ಕೆಲವೊಂದು ವಿಷಯಗಳು ಅದೇ ಹಳೆಯ ನಿಯಮಗಳನ್ನು ಹಿಂಬಾಲಿಸುತ್ತಾ ಕುಂಟುತ್ತಾ ಸಾಗುತ್ತಿದೆ ಎಂಬುದು ಕೂಡ ಖೇದಕರ.

ಇದರಲ್ಲಿ ಮುಖ್ಯವಾಗಿ ಹೇಳಬೇಕೆಂದರೆ ಸಾಮಾಜಿಕ ಮಾಧ್ಯಮದಲ್ಲಿ ನಾವು ಪ್ರಕಟಿಸುವ ನಮ್ಮ ಪ್ರೊಫೈಲ್ ಚಿತ್ರವಾಗಿದೆ. ಪ್ರೊಫೈಲ್ ಫೋಟೋಗಳು ಸಾಮಾಜಿಕ ಮಾಧ್ಯಮವನ್ನು ಆಕರ್ಷಕಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಫೇಸ್‌ಬುಕ್, ಗೂಗಲ್ ಪ್ಲಸ್, ಲಿಂಕ್‌ಡ್‌ ಇನ್ ಅಥವಾ ಟ್ವಿಟ್ಟರ್‌ನಲ್ಲಿ ಉತ್ತಮವಾದ ಪ್ರೊಫೈಲ್ ಚಿತ್ರವನ್ನು ಹೊಂದುವುದೆಂದರೆ ನಿಮಗೆ ಈಗಾಗಲೇ ಗೊತ್ತಿರುವ ನಿಮ್ಮ ಸಾಮಾಜಿಕ ಮಾಧ್ಯಮದ ಸ್ನೇಹಿತರನ್ನು ಆಕರ್ಷಿಸುವುದು ಎಂದಾಗಿದೆ. ಆದರೆ ನಿಮಗೆ ಪರಿಚಯವೇ ಇಲ್ಲದ ವ್ಯಕ್ತಿಗಳು ಕೂಡ ನಿಮ್ಮ ಪ್ರೊಫೈಲ್ ಚಿತ್ರವನ್ನು ವೀಕ್ಷಿಸಿ ಅವರ ವಲಯಕ್ಕೆ ನಿಮ್ಮನ್ನು ಸೇರಿಸುವುದೋ ಬೇಡವೋ ಎಂಬ ತೀರ್ಮಾನಕ್ಕೆ ಬರುವ ನಿರ್ಧಾರ ಕೂಡ ಇಲ್ಲಿರುತ್ತದೆ ಎಂಬುದನ್ನು ಗಮನಿಸಿದ್ದೀರಾ.

ಹಾಗಿದ್ದರೆ ಇಷ್ಟೆಲ್ಲಾ ತೊಡಕುಗಳನ್ನು ಉಂಟುಮಾಡುತ್ತಿರುವ ನಿಮ್ಮ ಪ್ರೊಫೈಲ್ ಚಿತ್ರವನ್ನು ಇನ್ನಷ್ಟು ಆಕರ್ಷಕ ಮತ್ತು ಮನಮುಟ್ಟುವಂತೆ ಮಾಡುವುದು ಹೇಗೆ ಎಂಬುದನ್ನು ಕುರಿತೇ ಇಂದಿನ ಲೇಖನದಲ್ಲಿ ನಾವು ನಿಮಗಾಗಿ ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದೇವೆ. ಈ ಸಲಹೆಗಳು ಸರಳವಾಗಿದ್ದು ನಿಮ್ಮ ಪ್ರೊಫೈಲ್ ಚಿತ್ರವನ್ನು ಆಕರ್ಷಕಗೊಳಿಸುತ್ತವೆ ಎಂಬುದರಲ್ಲಿ ಸಂದೇಹವೇ ಇಲ್ಲ. ಹಾಗಿದ್ದರೆ ಈ ಸರಳ ಸಲಹೆಗಳನ್ನು ನಿಮ್ಮದಾಗಿಸಿಕೊಳ್ಳಿ ಮತ್ತು ಸಾಮಾಜಿಕ ತಾಣದಲ್ಲಿ ನೀವು ಮಿಂಚಿರಿ.

#1

#1

ಇದೊಂದು ಹೆಚ್ಚು ಪ್ರಮುಖ ಮತ್ತು ಮುಖ್ಯವಾಗಿರುವ ಅಂಶವಾಗಿದೆ. ನಿಮ್ಮ ಬಹಳಷ್ಟು ಸ್ನೇಹಿತರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿನ ಫೋಟೋವನ್ನು ಬಳಸುವುದರ ಬದಲಿಗೆ ಚಿಕ್ಕಂದಿನ ಫೋಟೋವನ್ನೇ ಹೆಚ್ಚು ಬಳಸುತ್ತಿರುತ್ತಾರೆ. ಆದರೆ ಇದಕ್ಕೆ ಬದಲಾಗಿ ನಿಮ್ಮ ಇತ್ತೀಚಿನ ಫೋಟೋವನ್ನು ನೀವು ಬಳಸಿದಿರಿ ಎಂದಾದಲ್ಲಿ ಅದು ನಿಜಕ್ಕೂ ಗ್ರೇಟ್ ಎಂದೆನಿಸುತ್ತದೆ. ನಿಮ್ಮ ಸ್ನೇಹಿತರೂ ಇದೇ ರೀತಿಯ ತಪ್ಪನ್ನು ಎಸಗಿದ್ದಾರೆ ಎಂದಾದಲ್ಲಿ ಅವರಿಗೂ ಈ ಸಲಹೆಯನ್ನು ನೀವು ನೀಡಿ.

#2

#2

ಇದು ಸ್ವಲ್ಪ ಕಷ್ಟವಾದರೂ ಬೀರುವ ಪರಿಣಾಮ ಮಾತ್ರ ಅದ್ಭುತವಾಗಿರುತ್ತದೆ. ನಿಮ್ಮ ಫೋಟೋವನ್ನು ಮತ್ತೊಬ್ಬರು ತೆಗೆದಾಗ ಅಲ್ಲೊಂದು ನೈಜತೆ ಉಂಟಾಗುತ್ತದೆ. ನಿಮ್ಮ ಮುಖದ ಭಾವನೆ ಅದ್ಭುತವಾಗಿ ವ್ಯಕ್ತವಾಗುತ್ತದೆ ಮತ್ತು ನೀವು ಇಷ್ಟರವರೆಗೆ ನೋಡದೇ ಇರುವ ನಿಮ್ಮ ಸುಂದರ ಚಿತ್ರ ಮೂಡಿ ಬರುತ್ತದೆ.

#3

#3

ಸಾಮಾಜಿಕ ಮಾಧ್ಯಮದಲ್ಲಿ ನೀವು ವ್ಯಾಪಾರಿ ಮನೋಭಾವವನ್ನು ಇಟ್ಟುಕೊಂಡು ನಿಮ್ಮ ಪ್ರೊಫೈಲ್ ಚಿತ್ರವನ್ನು ಅಪ್‌ಲೋಡ್ ಮಾಡುತ್ತಿದ್ದೀರಿ ಎಂದಾದಲ್ಲಿ ಅಂದರೆ ನೀವೊಬ್ಬ ವ್ಯವಹಾರಸ್ಥರು, ಸಣ್ಣ ಮಾಲೀಕರು ಎಂದಾದಲ್ಲಿ ಇಲ್ಲಿ ನೀವು ಕೆಲವೊಂದು ಪ್ರಮುಖ ಅಂಶಗಳನ್ನು ಗಮನಿಸಲೇಬೇಕಾಗುತ್ತದೆ. ನಿಮ್ಮ ಫೋಟೋ ಇಲ್ಲಿ ಹುಡುಗಾಟಿಕೆಗೆ ಅನುಕೂಲ ಮಾಡಿಕೊಡುವಂತಿರದೇ ವೃತ್ತಿಪರವಾಗಿರಬೇಕು. ನಿಮ್ಮ ವ್ಯವಹಾರವನ್ನು ಇದು ಪ್ರಚಾರ ಪಡಿಸುವಂತಿರಬೇಕು ಎಂಬುದು ಗಮನದಲ್ಲಿರಲಿ.

#4

#4

ನಿಮ್ಮ ಪ್ರೊಫೈಲ್ ಫೋಟೋ ನೀವು ಯಾರೆಂಬುದನ್ನು ಸ್ಪಷ್ಟವಾಗಿ ತಿಳಿಸುವಂತಿರಬೇಕು. ಆದ್ದರಿಂದ ನಿಮ್ಮ ಮುಖಕ್ಕೆ ಕೇಂದ್ರಿತವಾಗಿಯೇ ಫೋಟೋಗಳನ್ನು ತೆಗೆಯಿರಿ. ನಿಮ್ಮ ಭುಜ ಮತ್ತು ತಲೆಯ ಭಾಗ ಮುಖಕ್ಕಿಂತ ಹೆಚ್ಚಿನ ಪಾಲನ್ನು ತೆಗೆದುಕೊಳ್ಳದಂತೆ ಜಾಗ್ರತೆ ವಹಿಸಿ.

#5

#5

ಪ್ರೊಫೈಲ್ ಫೋಟೋವನ್ನು ತೆಗೆಯುವಾಗ ಪ್ರತಿಯೊಬ್ಬರೂ ಮಾಡುವ ತಪ್ಪೆಂದರೆ ಓವರ್ ಎಕ್ಸ್‌ಪೋಸಿಂಗ್ ಅನ್ನು ನೀಡುವುದಾಗಿದೆ. ನಿಮ್ಮ ಪೋಟೋ ಚೆಲ್ಲಾಟದಿಂದ ಕೂಡಿದ್ದರೆ ಅದು ಆಟಿಕೆಯಂತಾಗುತ್ತದೆ ಆದ್ದರಿಂದ ಎಂದಿಗೂ ಗಂಭೀರತೆಯನ್ನು ಕಾಯ್ದುಕೊಳ್ಳಿ.

#6

#6

ನೀವು ಫೋಟೋವನ್ನು ತೆಗೆಯುವಾಗ ಬೆಳಕಿನ ವ್ಯವಸ್ಥೆಯನ್ನು ಚೆನ್ನಾಗಿ ಮಾಡಿಕೊಳ್ಳಿ. ಏಕೆಂದರೆ ಗಾಢವಾದ ಬೆಳಕು ನಿಮ್ಮ ಫೋಟೋದ ಮೇಲೆ ಪರಿಣಾಮ ಬೀರಿ ಅದರ ನೋಟವನ್ನು ಹಾಳು ಮಾಡಬಹುದು. ಆದ್ದರಿಂದ ಬೆಳಕಿನ ತೀಕ್ಷ್ಣತೆ ಹೆಚ್ಚು ಪ್ರಭಾವಕಾರಿಯಾಗದಂತೆ ಮುಂಜಾಗ್ರತೆಯನ್ನು ವಹಿಸಿ.

#7

#7

ಲೆನ್ಸ್ ಅಥವಾ ಜೂಮ್ ಲೆನ್ಸ್‌ನಲ್ಲಿ ನಿಮಗೆ ಆಯ್ಕೆ ಇದೆ ಎಂದಾದಲ್ಲಿ, ಫೋಕಲ್ ಲೆಂತ್‌ಗೆ ನಿಮ್ಮ ಆಯ್ಕೆ ಇರಲಿ. ಪೋಟ್ರೇಟ್‌ಗಾಗಿ ಹೆಚ್ಚು ಫ್ಲಾಟರಿಂಗ್ ಫೋಕಲ್ ಲೆಂತ್ ಎಂದರೆ 70 ಮತ್ತು 135 ಮಿಲಿಮೀಟರ್‌ಗಳ ನಡುವೆ ಇರಬೇಕು ಎಂದಾಗಿದೆ. ಇದರ ಅಳತೆ ಹೆಚ್ಚಾದಲ್ಲಿ ಮುಖದ ಭಾಗಗಳು ವಿರೂಪವಾಗಿ ಕಾಣಿಸುತ್ತವೆ.

Best Mobiles in India

English summary
This article tells about how to take perfect profile photo for your social media.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X