ಗೂಗಲ್‌ ಮ್ಯಾಪ್‌ನಲ್ಲಿ ವೇಗದ ಮಿತಿಯನ್ನು ಆಕ್ಟಿವೇಟ್‌ ಮಾಡುವುದು ಹೇಗೆ ?

|

ಗೂಗಲ್‌ನ ಜನಪ್ರಿಯ ಸೇವೆಗಳಲ್ಲಿ ಗೂಗಲ್‌ ಮ್ಯಾಪ್‌ ಅಪ್ಲಿಕೇಶನ್‌ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ತಾವು ಎಲ್ಲಿಗೆ ಪ್ರಯಾಣ ಮಾಡಿದರೂ ಸೂಕ್ತ ಮಾರ್ಗದರ್ಶಕನಾಗಿ ಗೂಗಲ್‌ ಮ್ಯಾಪ್‌ ಕಾರ್ಯನಿರ್ವಹಿಸಲಿದೆ. ಇನ್ನು ಗೂಗಲ್‌ ಮ್ಯಾಪ್‌ಲ್ಲಿರುವ ಸ್ಪೀಡ್‌ ಲಿಮಿಟ್‌ ಫೀಚರ್ಸ್‌ ಕೂಡ ಸಾಕಷ್ಟು ಉಪಯುಕ್ತವಾಗಿದೆ. ಇದರಿಂದ ನೀವು ಪ್ರಯಾಣಿಸುತ್ತಿರುವ ರಸ್ತೆಯಲ್ಲಿ ನೀವು ಪಾಲಿಸಬೇಕಾದ ವೇಗದ ಮಿತಿಯ ಬಗ್ಗೆ ಮಾಹಿತಿ ನೀಡಲಿದೆ. ಒಂದು ವೇಳೆ ವೇಗದ ಮಿತಿ ಮೀರಿದರೆ ನಿಮಗೆ ಎಚ್ಚರಿಕೆಯನ್ನು ಸಹ ನೀಡಲಿದೆ.

ಗೂಗಲ್ ಮ್ಯಾಪ್‌

ಹೌದು, ಗೂಗಲ್ ಮ್ಯಾಪ್‌ನಲ್ಲಿರುವ ಸ್ಪೀಡ್ ಲಿಮಿಟ್ ಫಂಕ್ಷನ್‌ ಬಳಕೆದಾರರು ತಾವು ಚಾಲನೆ ಮಾಡುತ್ತಿರುವ ವೇಗವನ್ನು ತೋರಿಸುತ್ತದೆ. ಅಲ್ಲದೆ ಬಳಕೆದಾರರು ಕಾರಿನ ಸ್ಪೀಡೋಮೀಟರ್‌ನಲ್ಲಿ ತಮ್ಮ ವೇಗವನ್ನು ಪರೀಕ್ಷಿಸಲು ಸಲಹೆ ನೀಡುತ್ತದೆ. ಇನ್ನು ಗೂಗಲ್‌ ಮ್ಯಾಪ್‌ನಲ್ಲಿರುವ ಸ್ಪೀಡೋಮೀಟರ್ ಕೇವಲ ಮಾಹಿತಿ ಬಳಕೆಗಾಗಿ ಮಾತ್ರ ಸಹಾಯಕವಾಗಲಿದೆ. ಏಕೆಂದರೆ ನ್ಯಾವಿಗೇಟ್ ಮಾಡುವಾಗ ಮ್ಯಾಪ್‌ನ ಎಡ ಮೂಲೆಯಲ್ಲಿ ವೇಗದ ಮಿತಿಯನ್ನು ತೋರಿಸಲಾಗುತ್ತದೆ. ಹಾಗಾದ್ರೆ ಗೂಗಲ್‌ ಮ್ಯಾಪ್‌ನಲ್ಲಿ ಸ್ಪೀಡ್‌ಲಿಮಿಟ್‌ ಅನ್ನು ಆಕ್ಟಿವ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಮ್ಯಾಪ್‌

ಗೂಗಲ್‌ ಮ್ಯಾಪ್‌ ಈಗಾಗಲೇ ಆನ್-ಸ್ಕ್ರೀನ್ ಸ್ಪೀಡೋಮೀಟರ್ ಅನ್ನು ಒಳಗೊಂಡಿದೆ. ಇದರೊಂದಿಗೆ ಬಳಕೆದಾರರು ಪ್ರಯಾಣ ಮಾಡುತ್ತಿರುವ ನಗರ ಪ್ರದೇಶಗಳ ವೇಗದ ಮೀತಿಯನ್ನು ಸಹ ಗೂಗಲ್‌ ತೋರಿಸಲಿದೆ. ಹಾಗಂತ ಈ ವೇಗದ ಮಿತಿ ನೀಡುವ ಫಂಕ್ಷನ್‌ ಎಲ್ಲಾ ಪ್ರದೇಶಗಳಲ್ಲಿ ಕೂಡ ಲಭ್ಯವಿಲ್ಲ. ಇನ್ನು ನೀವು ಇರುವ ನಗರ ಪ್ರದೇಶದಲ್ಲಿ ವೇಗದ ಮಿತಿ ಫೀಚರ್ಸ್‌ ಲಭ್ಯವಿದ್ದರೆ, ನೀವು ಅದನ್ನು ಆಕ್ಟಿವ್‌ವೇಟ್‌ ಮಾಡಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.

ಗೂಗಲ್‌ ಮ್ಯಾಪ್‌ನಲ್ಲಿ ವೇಗದ ಮಿತಿಯನ್ನು ಆಕ್ಟಿವೇಟ್‌ ಮಾಡುವುದು ಹೇಗೆ ?

ಗೂಗಲ್‌ ಮ್ಯಾಪ್‌ನಲ್ಲಿ ವೇಗದ ಮಿತಿಯನ್ನು ಆಕ್ಟಿವೇಟ್‌ ಮಾಡುವುದು ಹೇಗೆ ?

ಗೂಗಲ್‌ ಮ್ಯಾಪ್‌ನ ಪ್ರಯಾಣದ ಅವಧಿ ಮತ್ತು ನ್ಯಾವಿಗೇಷನ್ ಕ್ಲೋಸ್‌ ಮಾಡುವ ಆಯ್ಕೆಗಳ ನಡುವೆ ಲೆಫ್ಟ್‌ ಸೈಡ್‌ನಲ್ಲಿ ಗೂಗಲ್ ಮ್ಯಾಪ್‌ ವೇಗದ ಮಿತಿಯನ್ನು ತೋರಿಸಲಿದೆ. ಇನ್ನು ನೀವು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ವೇಗದ ಮಿತಿಯನ್ನು ಆಕ್ಟಿವ್‌ ಮಾಡುವುದಕ್ಕೆ ಹೀಗೆ ಮಾಡಿ.

ಹಂತ:1 ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ ಮ್ಯಾಪ್‌ ತೆರೆಯಿರಿ.
ಹಂತ:2 ನಿಮ್ಮ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ.
ಹಂತ:3 ನಂತರ ಸೆಟ್ಟಿಂಗ್‌ಗಳಿಗೆ ಹೋಗಿ.
ಹಂತ:4 ನ್ಯಾವಿಗೇಷನ್ ಸೆಟ್ಟಿಂಗ್ಸ್‌ಗೆ ಕೆಳಗೆ ಸ್ಕ್ರಾಲ್ ಮಾಡಿ.
ಹಂತ:5 ನಂತರ ಸ್ಪೀಡ್‌ ಲಿಮಿಟಿ ಆನ್ ಅಥವಾ ಆಫ್ ಮಾಡಲು ಸ್ಪೀಡ್ ಲಿಮಿಟ್ಸ್ ಸೆಟ್ಟಿಂಗ್‌ಗೆ ಹೋಗಿ.

ಇದಾದ ನಂತರ ಗೂಗಲ್‌ ಮ್ಯಾಪ್‌ನಲ್ಲಿ ನೀವು ಪ್ರಯಾಣ ಮಾಡುತ್ತಿರುವ ರಸ್ತೆಯಲ್ಲಿ ವೇಗದ ಮಿತಿ ಎಷ್ಟಿದೆ ಅನ್ನೊದನ್ನ ತೋರಿಸಲಾಗುತ್ತದೆ. ಅಲ್ಲದೆ ನಿವು ವೇಗದ ಮಿತಿಯನ್ನು ಮೀರಿದರೆ ಆ ಕ್ಷಣವೇ ಗೂಗಲ್‌ ಮ್ಯಾಪ್‌ ನಿಮಗೆ ಎಚ್ಚರಿಕೆಯನ್ನು ನೀಡಲಿದೆ.

ಗೂಗಲ್‌ ಮ್ಯಾಪ್‌

ಗೂಗಲ್‌ ಮ್ಯಾಪ್‌ನಲ್ಲಿ ನಿಮ್ಮ ವಿಳಾಸವನ್ನು ಕೂಡ ಎಡಟ್‌ ಮಾಡಬಹುದಾಗಿದೆ. ಇದರಿಂದ ನಿಮ್ಮ ಮನೆಯಿಂದ ನೀವು ನಿಮ್ಮ ಕಚೇರಿಗೆ ಹೋಗುವ ಸ್ಥಳವನ್ನು ಗೂಗಲ್‌ ಮ್ಯಾಪ್‌ನಲ್ಲಿ ಇದಲ್ಲದೆ ಪಡೆದುಕೊಳ್ಳು ಸುಲಭವಾಗಲಿದೆ. ಇದಕ್ಕಾಗಿ ನೀವು ಒಂದು ಬಾರಿ ನಿಮ್ಮ ಹೋಮ್‌ ಅಡ್ರೆಸ್‌ ಹಾಗೂ ನಿಮ್ಮ ಕಚೇರಿ ಸ್ಥಳದ ವಿಳಾಸವನ್ನು ನಮೂದಿಸಿದರೆ ಸಾಕು ಅಲ್ಲಿಗೆ ಸಂಬಂಧಿಸಿದ ಮಾರ್ಗವನ್ನು ತೋರಿಸುತ್ತದೆ. ಅಷ್ಟೇ ಅಲ್ಲ ಈ ವಿಳಾಸ ನಿಮ್ಮ ಗೂಗಲ್‌ ಮ್ಯಾಪ್‌ನಲ್ಲಿ ಸೇವ್‌ ಆಗಿರುವುದಲ್ಲದೆ ನಿಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಉಪಯುಕ್ತ ಎನಿಸಲಿದೆ. ಯಾಕಂದ್ರೆ ಕೆಲವೊಮ್ಮೆ ಮನೆ ವಿಳಾಸ ತಪ್ಪಾಗಿ ಬಿಟ್ಟರೆ ಅದೇ ಮಾರ್ಗಕ್ಕೆ ನಿಮ್ಮನ್ನ ಗೂಗಲ್‌ ಮ್ಯಾಪ್‌ ಕರೆದೊಯ್ಯಲಿದೆ. ಇದೇ ಕಾರಣಕ್ಕೆ ಗೂಗಲ್‌ ಮ್ಯಾಪ್‌ನಲ್ಲಿ ಹೋಮ್‌ ಅಡ್ರೆಸ್‌ ಎಡಿಟ್‌ ಮಾಡುವುದು ಮುಖ್ಯ ವೆನಿಸುತ್ತದೆ.

ಗೂಗಲ್‌ ಮ್ಯಾಪ್‌ನಲ್ಲಿ ನಿಮ್ಮ ಮನೆ ಅಡ್ರೆಸ್‌ ಎಡಿಟ್‌ ಮಾಡುವುದು ಹೇಗೆ?

ಗೂಗಲ್‌ ಮ್ಯಾಪ್‌ನಲ್ಲಿ ನಿಮ್ಮ ಮನೆ ಅಡ್ರೆಸ್‌ ಎಡಿಟ್‌ ಮಾಡುವುದು ಹೇಗೆ?

ಹಂತ:1 ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ ಮ್ಯಾಪ್‌ ತೆರೆಯಿರಿ
ಹಂತ:2 ಕೆಳಭಾಗದಲ್ಲಿ ಲಭ್ಯವಿರುವ ಸೇವ್‌ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:3 ನಿಮ್ಮ ಮನೆ ಮತ್ತು ಕೆಲಸದ ವಿಳಾಸ ತೋರಿಸುವ ಲೇಬಲ್‌ಗೆ ಸ್ವೈಪ್ ಮಾಡಿ.
ಹಂತ:4 ಮೂರು ಚುಕ್ಕೆಗಳನ್ನು ಟ್ಯಾಪ್ ಮಾಡಿ ಮತ್ತು ಹೋಮ್‌ ಎಡಿಟ್‌ ಅನ್ನು ಆಯ್ಕೆಮಾಡಿ.
ಹಂತ:5 ನೀವು ಕೆಲಸದ ವಿಳಾಸವನ್ನು ಬದಲಾಯಿಸಲು ಬಯಸಿದರೆ, ಎಡಿಟ್‌ ವರ್ಕ್‌ ಅನ್ನು ಆಯ್ಕೆಮಾಡಿ.
ಹಂತ:6 ಪ್ರಸ್ತುತ ವಿಳಾಸವನ್ನು ತೆರವುಗೊಳಿಸಿ, ನಂತರ ಹೊಸದನ್ನು ಸೇರಿಸಿ.
ಹಂತ:7 ಇದಾದ ನಂತರ ನಿಮ್ಮ ಮನೆ ಅಥವಾ ಕೆಲಸದ ವಿಳಾಸವನ್ನು ಸಹ ನೀವು ಸೇವ್‌ ಅಥವಾ ಡಿಲೀಟ್‌ ಕೂಡ ಮಾಡಬಹುದಾಗಿದೆ.

Most Read Articles
Best Mobiles in India

English summary
Google Maps speed limit function shows users the speed limit of the road they're on and warns them if they are exceeding it.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X