ಗೂಗಲ್ ಕ್ಯಾಲೆಂಡರ್ ಗೆ ಸೇರಿಸಿ ನಿಮ್ಮ ಫೇಸ್ ಬುಕ್ ಇವೆಂಟ್

By Gizbot Bureau
|

ಗೂಗಲ್ ನ ಪ್ರಮುಖ ಮತ್ತು ಎಲ್ಲರಿಗೂ ತಿಳಿದಿರುವ ಆಪ್ ಆಗಿರುವ ಗೂಗಲ್ ಕ್ಯಾಲೆಂಡರ್ ನ್ನು ನಮ್ಮ ದಿನನಿತ್ಯದ ಅದೆಷ್ಟೋ ಟಾಸ್ಕ್ ಗಳನ್ನು ನಮೂದಿಸಿ ಇಟ್ಟುಕೊಳ್ಳುವುದಕ್ಕಾಗಿ ಬಳಸಿಯೇ ಬಳಸುತ್ತೇವೆ. ನಾವು ಮರೆತುಬಿಡಬಾರದು ಎಂದು ನಮೂದಿಸುವ ಈ ಟಾಸ್ಕ್ ಗಳು ಉದಾಹರಣೆಗೆ ಬರ್ತಡೇ ದಿನಾಂಕಗಳು, ಮೀಟಿಂಗ್ ಸಮಯ ಇತ್ಯಾದಿ ಇತ್ಯಾದಿಗಳಿಗೆಲ್ಲದಕ್ಕೂ ಕೂಡ ಪ್ರಮುಖವಾಗಿ ಗೂಗಲ್ ಕ್ಯಾಲೆಂಡರ್ ನ್ನೇ ಬಳಸಲಾಗುತ್ತದೆ. ಈ ಕ್ಯಾಲೆಂಡರ್ ಗೆ ಫೇಸ್ ಬುಕ್ ಇವೆಂಟ್ ಗಳನ್ನು ಸೇರಿಸಿಕೊಳ್ಳುವ ಅವಕಾಶ ಇದೀಗ ಲಭ್ಯವಿದೆ.

ಗೂಗಲ್ ಕ್ಯಾಲೆಂಡರ್ ಗೆ ಫೇಸ್ ಬುಕ್ ಇವೆಂಟ್ ಗಳನ್ನು ಸೇರಿಸುವುದು ಹೇಗೆ?

ಗೂಗಲ್ ಕ್ಯಾಲೆಂಡರ್ ಗೆ ಫೇಸ್ ಬುಕ್ ಇವೆಂಟ್ ಗಳನ್ನು ಸೇರಿಸುವುದು ಹೇಗೆ?

ಮುಂದಿನ ದಿನಗಳಲ್ಲಿ ನಾವು ಮಾಡಬೇಕಿರುವ ಎಲ್ಲಾ ಟಾಸ್ಕ್ ಗಳನ್ನು ನೆನಪಿಸುವುದಕ್ಕೆ ಕಂಪ್ಯೂಟರ್ ಮುಂದೆ ಅಥವಾ ನಮ್ಮ ಜೇಬಿನಲ್ಲೇ ಸ್ಮಾರ್ಟ್ ಫೋನ್ ನಲ್ಲಿ ಸಹಾಯ ಮಾಡುವ ಆಪ್ ಎಂದರೆ ಅದು ಗೂಗಲ್ ಕ್ಯಾಲೆಂಡರ್. ಆದರೆ ಇದೀಗ ಹಲವರಿಗೆ ಫೇಸ್ ಬುಕ್ ಮೂಲಕವೇ ಅದೆಷ್ಟೊ ಕಾರ್ಯಕ್ರಮಗಳ ಆಮಂತ್ರಣಗಳು ಲಭ್ಯವಾಗುತ್ತದೆ.

ಹಾಗಾಗಿ ಫೇಸ್ ಬುಕ್ ಇವೆಂಟ್ ಗಳನ್ನು ಗೂಗಲ್ ಕ್ಯಾಲೆಂಡರ್ ಗೆ ಸೇರಿಸುವ ಅನಿವಾರ್ಯತೆ ಹಲವರಿಗೆ ಎದುರಾಗಿರುತ್ತದೆ. ಇದೀಗ ಹೆಚ್ಚು ಸಮಯ ಹಾಳು ಮಾಡದೇ ಈ ಕೆಲಸವನ್ನು ಮಾಡುವುದಕ್ಕೆ ಸಾಧ್ಯವಾಗುತ್ತದೆ. ಆ ಬಗೆಗಿನ ಹಂತಹಂತವಾದ ಮಾಹಿತಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

• ಗೂಗಲ್ ಕ್ಯಾಲೆಂಡರ್ ಗೆ ಫೇಸ್ ಬುಕ್ ಇವೆಂಟ್ ನ್ನು ಸೇರಿಸುವುದಕ್ಕಾಗಿ ಮೊದಲಿಗೆ ನಾವೇನು ಮಾಡಬೇಕೆಂದರೆ ಈ ಕಾರಣಕ್ಕಾಗಿಯೇ ಅಭಿವೃದ್ಧಿ ಪಡಿಸಲಾಗಿರುವ ಎಕ್ಸ್ ಟೆನ್ಶನ್ ನ ಲಾಭವನ್ನು ಪಡೆಯಬೇಕು.

• ನಾವು ಗೂಗಲ್ ಕ್ಯಾಲೆಂಡರ್ ಗಾಗಿ ಚೆಕ್ಕರ್ ಪ್ಲಸ್ ನ್ನು ರೆಫರ್ ಮಾಡುತ್ತೇವೆ. ಈ ಲಿಂಕ್ ಸಹಾಯದಿಂದ ನಾವು ಗೂಗಲ್ ಕ್ರೋಮ್ ಬ್ರೌಸರ್ ಗೆ ಈ ಎಕ್ಸ್ ಟೆನ್ಸನ್ ನ್ನು ಸೇರಿಸಬಹುದು.

https://chrome.google.com/webstore/detail/checker-plus-for-google-c/hkhggnncdpfibdhinjiegagmopldibha

• ಕ್ರೋಮ್ ಗೆ ಒಮ್ಮೆ ಎಕ್ಸ್ ಟೆನ್ಶನ್ ನ್ನು ಸೇರಿಸಿದ ನಂತರ, ನಾವು ಫೇಸ್ ಬುಕ್ ಇವೆಂಟ್ ನ್ನು ಗೂಗಲ್ ಕ್ಯಾಲೆಂಡರ್ ಗೆ ಸೇರಿಸುವ ಕೆಲಸ ಪ್ರಾರಂಭಿಸಬೇಕು. ಅದಕ್ಕಾಗಿ ಬ್ರೌಸರ್ ನ್ನು ತೆರೆಯಿರಿ ಮತ್ತು ಫೇಸ್ ಬುಕ್ ಅಕೌಂಟ್ ಗೆ ಲಾಗಿನ್ ಆಗಿ.

• ಒಮ್ಮೆ ಲಾಗಿನ್ ಆದ ನಂತರ ಇವೆಂಟ್ಸ್ ಆಯ್ಕೆಯನ್ನು ಕ್ಲಿಕ್ಕಿಸಿ ಮತ್ತು ಫೇಸ್ ಬುಕ್ ಹೋಮ್ ಪೇಜಿನ ಎಕ್ಸ್ ಪ್ಲೋರ್ ಸೆಕ್ಷನ್ ನ ಎಡಭಾಗದಲ್ಲಿ ಅದು ಇರುತ್ತದೆ.

• ಪೇಸ್ ಬುಕ್ ನಲ್ಲಿ ನಿಮಗೆ ಆಮಂತ್ರಣ ಬಂದಿರುವ ಎಲ್ಲಾ ಇವೆಂಟ್ ಗಳು ಅಂದರೆ ನೀವು ಕನ್ಫರ್ಮ್ ಮಾಡಿರುವ ಎಲ್ಲಾ ಇವೆಂಟ್ ಗಳನ್ನು ಇದು ತೋರಿಸುತ್ತದೆ.ನೀವೇ ಸ್ವತಃ ಕ್ರಿಯೇಟ್ ಮಾಡಿರುವ ಇವೆಂಟ್ ಗಳು ಇದರಲ್ಲಿ ಇರುತ್ತದೆ.

• ಇಲ್ಲಿಂದ ನೀವು ಗೂಗಲ್ ಕ್ಯಾಲೆಂಡರ್ ಗೆ ಸೇರಿಸಲು ಇಚ್ಛಿಸುವ ಫೇಸ್ ಬುಕ್ ಇವೆಂಟ್ ನ್ನು ಕ್ಲಿಕ್ಕಿಸಬೇಕು.

• ನಂತರ ಸರಳವಾಗಿ ಗೂಗಲ್ ಕ್ಯಾಲೆಂಡರ್ ಎಕ್ಸ್ ಟೆನ್ಶನ್ ಐಕಾನ್ ಗಾಗಿ

ಚೆಕ್ಕರ್ ಪ್ಲಸ್ ನ್ನು ಕ್ಲಿಕ್ಕಿಸಿ

ಚೆಕ್ಕರ್ ಪ್ಲಸ್ ನ್ನು ಕ್ಲಿಕ್ಕಿಸಿ

• ಇದು ಕ್ಯಾಲೆಂಡರ್ ಜೊತೆಗೆ ವಿಂಡೋವನ್ನು ತೆರೆಯುತ್ತದೆ ಮತ್ತು ಸೆಲೆಕ್ಟ್ ಮಾಡಿರುವ ಫೇಸ್ ಬುಕ್ ಇವೆಂಟ್ ನ ಡಾಟಾ ಒಳಗೊಂಡಿರುವ ವಿಂಡೋ ಪಾಪ್ ಅಪ್ ಆಗುತ್ತದೆ.

• ಅಲ್ಲಿ ನೀವು ಹೆಸರು ಅಥವಾ ಇವೆಂಟ್ ನ ಟೈಟಲ್, ದಿನಾಂಕ ಮತ್ತು ಡ್ರಾಪ್ ಡೌನ್ ಮೆನುವನ್ನು ಕಾಣಬಹುದು. ಅದರಲ್ಲಿ ನಿಮ್ಮ ಗೂಗಲ್ ಅಕೌಂಟ್ ನ ಕ್ಯಾಲೆಂಡರ್ ಅಥವಾ ಇತರೆ ನಿಮ್ಮ ಅಕೌಂಟ್ ಜೊತೆಗೆ ಅಸೋಸಿಯೇಟ್ ಆಗಿರುವ ಕ್ಯಾಲೆಂಟ್ ಗಳು ತೆರೆಯುತ್ತದೆ. ನೀವು ಯಾವ ಕ್ಯಾಲೆಂಡರ್ ಗೆ ಸೇರಿಸಲು ಇಚ್ಛಿಸುತ್ತೀರೋ ಅದನ್ನು ಆಯ್ಕೆ ಮಾಡಬೇಕು.

• ಗೂಗಲ್ ಕ್ಯಾಲೆಂಡರ್ ನ್ನು ಆಯ್ಕೆ ಮಾಡಿದರೆ ಸ್ವಯಂಚಾಲಿತವಾಗಿ ನಿಮ್ಮ ಇವೆಂಟ್ ಗೂಗಲ್ ಕ್ಯಾಲೆಂಡರ್ ನಲ್ಲಿ ಸೇವ್ ಆಗುತ್ತದೆ.

ಗೂಗಲ್ ಕ್ಯಾಲೆಂಡರ್

ಗೂಗಲ್ ಕ್ಯಾಲೆಂಡರ್

ಗೂಗಲ್ ಕ್ಯಾಲೆಂಡರ್ ಬಗ್ಗೆ ನಿಮಗೆ ಏನನ್ನಿಸುತ್ತದೆ ಎಂಬುದನ್ನು ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

Best Mobiles in India

English summary
How To Add Facebook Events To The Google Calendar

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X