ಫೇಸ್‌ಬುಕ್‌ನಲ್ಲಿ ಖಾತೆಯಲ್ಲಿ ಮೊಬೈಲ್‌ ನಂಬರ್‌ ಸೇರಿಸುವುದು ಹೇಗೆ?

By Super
|


ಫೇಸ್‌ಬುಕ್‌ನಲ್ಲಿ ನೀಡಲಾಗಿರುವ ಹಲವಾರು ಫೀಚರ್ಸ್‌ಗಳ ಕುರಿತಾಗಿ ಬಹುತೇಕ ಮಂದಿಗೆ ತಿಳಿದಿರುವುದಿಲ್ಲ. ಅಂದಹಾಗೆ ನಿಮಗೆ ಬೇಕಾದಲ್ಲಿ ನಿಮ್ಮ ಫೇಸ್‌ಬುಕ್‌ ಖಾತೆಯೊಂದಿಗೆ ನಿಮ್ಮ ಇ-ಮೇಲ್‌ ಐಡಿ ಕನೆಕ್ಟ್‌ ಮಾಡಬಹುದಾಗಿದೆ ಇದರಿಂದಾಗಿ ನಿಮ್ಮ ಫೇಸ್‌ ಬುಕ್‌ ಖಾತೆಯಲ್ಲಿ ಯಾವುದೇ ನೋಟಿಫಿಕೇಷನ್‌ ಅಥವಾ ಕಮೆಂಟ್‌ ಬಂದಲ್ಲಿ ನೇರವಾಗಿ ನಿಮ್ಮ ಮೇಲ್‌ಬಾಕ್ಸ್‌ನಲ್ಲಿ ಒಂದು ಮೇಲ್‌ ಬಂದು ಬಿಡುತ್ತದೆ. ಇದಲ್ಲದೆ ನಿಮ್ಮ ಫೇಸ್‌ಬುಕ್‌ ಖಾತೆಯಲ್ಲಿ ನಿಮ್ಮ ಮೊಬೈಲ್‌ ಸಂಖ್ಯೆಯನ್ನೂ ಕೂಡಾ ಸೇರಿಸಬಹುದಾಗಿದೆ. ಈ ಮೂಲಕ ನಿಮ್ಮ ಫೇಸ್‌ಬುಕ್‌ ಪ್ರೊಫೈಲ್‌ನಲ್ಲಿನ ಪ್ರತಿಯೊಂದು ವಿಚಾರವನ್ನು ನಿಮ್ಮ ಮೊಬೈಲ್‌ ಮೂಲಕವೇ ಪಡೆದುಕೊಳ್ಳ ಬಹುದಾಗಿದೆ.

ನಿಮ್ಮ ಪೇಸ್‌ಬುಕ್‌ ಖಾತೆಯಲ್ಲಿ ಮೊಬೈಲ್‌ ಸಂಕ್ಯೆಯನ್ನು ಸೇರಿಸಲು ಈ ಕೆಳಗಿನ ಮಾರ್ಗವನ್ನು ಅನುಸರಿಸಿ.

  • ಫೇಸ್‌ಬುಕ್‌ ಖಾತೆಯಲ್ಲಿ ನಿಮ್ಮ ಫೋನ್‌ ನಂಬರ್‌ ಅಟಾಚ್ ಮಾಡಲು ನಿಮ್ಮ ಪ್ರೊಫೈಲ್‌ನಲ್ಲಿ ಅಕೌಂಟ್‌ ಆಪ್ಷನ್‌ಗೆ ಕ್ಲಿಕ್‌ ಮಾಡಿ.

  • ಅಕೌಂಟ್‌ ಸೆಟ್ಟಿಂಗ್ಸ್‌ನಲ್ಲಿ ಮೊಬೈಲ್‌ ಆಪ್ಷನ್‌ ಆಯ್ಕೆಮಾಡಿಕೊಳ್ಳಿ, ನಂತರ ನಿಮ್ಮ ಎದುರು ನಂಬರ್‌ ಆಡ್‌ ಮಾಡುವಂತೆ ಒಂದು ಬಾಕ್ಸ್‌ ಕಾಣಿಸಿಕೊಳ್ಳುತ್ತದೆ ಅದರಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಸೇರಿಸಿ.
  • ಮೊಬೈಲ್‌ ಸಂಖ್ಯೆ ನೀಡಿದ ಬಳಿಕ ನೀವು ನೀಡಿರುವ ಮೊಬೈಲ್‌ ಸಂಖ್ಯೆಗೆ ಕಂನ್ಫರ್‌ಮೇಷನ್‌ ಕೋಡ್‌ ಬರುತ್ತದೆ. ಕೋಡ್‌ ಸಂಖ್ಯೆಯನ್ನು ಫೇಸ್‌ಬುಕ್‌ನಲ್ಲಿ ತೋರಿಸುತ್ತಿರುವ ಕಂನ್ಫರ್‌ಮೇಷನ್‌ ಬಾಕ್ಸ್‌ನಲ್ಲಿ ಎಂಟರ್‌ ಮಾಡಿ ಕಂನ್ಫರ್ಮ್‌ ಬಟನ್‌ ಕ್ಲಿಕ್‌ಮಾಡಿ.

  • ಕಂನ್ಫರ್ಮ್‌ ಬಟನ್‌ ಕ್ಲಿಕ್‌ ಮಾಡುತ್ತಿದ್ದಂತೆಯೆ ನಿಮ್ಮ ಪೇಸ್‌ಬುಕ್‌ ಖಾತೆಯಲ್ಲಿ ಮೊಬೈಲ್‌ ಸಂಖ್ಯೆ ಧಾಖಲಾಗಿ ಬಿಡುತ್ತದೆ.
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X