ವೋಟರ್‌ ಐಡಿ ಪಡೆಯುವುದು ಈಗ ಇನ್ನು ಸುಲಭ..! ಆನ್‌ಲೈನ್‌ನಲ್ಲಿಯೇ ವೋಟರ್‌ ಐಡಿಗೆ ಅರ್ಜಿ ಸಲ್ಲಿಸಿ

By Gizbot Bureau
|

ಭಾರತದಲ್ಲಿ 18 ವರ್ಷ ಮೀರಿದ ಯಾರೇ ಆಗಲಿ ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಬಹುದು. ಭಾರತ ಚುನಾವಣಾ ಆಯೋಗ ನೀಡುವ ಈ ಕಾರ್ಡ್‌ನ್ನು ಅಧಿಕೃತ ಗುರುತಿನ ಪುರಾವೆಯಾಗಿ ನಾವು ಬಳಸಬಹುದು. ಸಾಮಾನ್ಯವಾಗಿ ವೋಟರ್‌ ಐಡಿ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದಿಲ್ಲ. ಏಕೆಂದರೆ, ಅದು ಬಹಳ ವಿಳಂಬ ಹಾಗೂ ದೀರ್ಘ ಪ್ರಕ್ರಿಯೆ ಎಂಬುದು ಅವರ ಭಾವನೆ. ಆದರೆ. ಚುನಾವಣಾ ಆಯೋಗ ಈ ಪ್ರಕ್ರಿಯೆಯನ್ನು ಈಗ ಸರಳಗೊಳಿಸಿದ್ದು, ಅಧಿಕೃತ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ನಲ್ಲಿಯೇ ವೋಟರ್‌ ಐಡಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ವೋಟರ್‌ ಐಡಿ ಪಡೆಯುವುದು ಈಗ ಇನ್ನು ಸುಲಭ..!

ಅಷ್ಟೇ ಅಲ್ಲದೇ, ಚುನಾವಣಾ ಆಯೋಗದ ವೆಬ್‌ಸೈಟ್‌ ನಿಮಗೆ ಭಾರತದಲ್ಲಿನ ಚುನಾವಣಾ ಪ್ರಕ್ರಿಯೆಯನ್ನು ತಿಳಿಸುವ ಕೆಲಸ ಮಾಡುತ್ತದೆ. ಜೊತೆಗೆ ಚುನಾವಣಾ ವೇಳಾಪಟ್ಟಿ ಹಾಗೂ ಮುಂದೆ ನಡೆಯುವ ಚುನಾವಣೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ನೀವು ಆನ್‌ಲೈನ್‌ನಲ್ಲಿ ವೋಟರ್‌ ಐಡಿಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಹಂತ 1: ಭಾರತೀಯ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ಗೆ ಅರ್ಜಿದಾರ ಭೇಟಿ ನೀಡಬೇಕು.

ಹಂತ 2: E-Roll ನೊಂದಣಿಯಲ್ಲಿರುವ ಫಾರ್ಮ್‌ಗಳಲ್ಲಿ Form 6 ಅನ್ನು ಆಯ್ಕೆ ಮಾಡಿಕೊಳ್ಳಬೇಕು.

ಹಂತ 3: ರಾಷ್ಟ್ರೀಯ ಸೇವೆಗಳು (National Services) ಟ್ಯಾಬ್‌ನಡಿ ಬರುವ ಹೊಸ ವೋಟರ್‌ ಆಗಿ ನೊಂದಾಯಿಸಿಕೊಳ್ಳಲು ಆನ್‌ಲೈನ್‌ ಅರ್ಜಿ ಸಲ್ಲಿಸಿ ಎಂಬ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಬೇಕು.

ಹಂತ 4: ಸ್ಥಳದ ಆಧಾರದ ಮೇಲೆ ಅರ್ಜಿದಾರನು ತಮ್ಮ ರಾಜ್ಯ ಹಾಗೂ ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು.

ಹಂತ 5: ಈಗ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಅರ್ಜಿಯಲ್ಲಿ ನಮೂದಿಸಿ. (ಅರ್ಜಿದಾರರ ಹೆಸರು, ಲಿಂಗ, ಜನ್ಮ ದಿನಾಂಕ, ಹುಟ್ಟಿದ ಸ್ಥಳ, ವಿಳಾಸ, ತಂದೆ, ತಾಯಿ, ಗಂಡನ ಹೆಸರು ಇತ್ಯಾದಿ..)

ಹಂತ 6: ನಿಮ್ಮ ಭಾವಚಿತ್ರ, ಗುರುತಿನ ಪುರಾವೆ ಹಾಗೂ ವಿಳಾಸದ ಪುರಾವೆಯ ಸ್ಕ್ಯಾನ್‌ ಪ್ರತಿಗಳನ್ನು ಲಗತ್ತಿಸಬೇಕು.

ಹಂತ 7: ಘೋಷಣೆಯ ವಿವರಗಳನ್ನು ಸಲ್ಲಿಸಬೇಕು.

ಹಂತ 8: ಅಂತಿಮವಾಗಿ ಸಬ್‌ಮಿತ್‌ ಆಯ್ಕೆಯನ್ನು ಕ್ಲಿಕ್‌ ಮಾಡಿ.

ನೀವು ಅರ್ಜಿಯನ್ನು ಸಲ್ಲಿಸಿದ ಬಳಿಕ ನೊಂದಾಯಿತ ಇಮೇಲ್‌ಗೆ ಚುನಾವಣಾ ಆಯೋಗದಿಂದ ಲಿಂಕ್‌ ಒಂದು ಬರುತ್ತದೆ. ಆ ಲಿಂಕ್‌ ನಿಮ್ಮನ್ನು ವೋಟರ್‌ ಐಡಿ ಅರ್ಜಿಯನ್ನು ಟ್ರಾಕ್‌ ಮಾಡಲು ಸಹಾಯ ಮಾಡುತ್ತದೆ. ಅರ್ಜಿ ಸಲ್ಲಿಸಿದ ಒಂದು ತಿಂಗಳೊಳಗಾಗಿ ನಿಮಗೆ ವೋಟರ್‌ ಐಡಿ ಬರುತ್ತದೆ.

1. ವೋಟರ್‌ ಐಡಿ ಅರ್ಜಿಗೆ ಯಾವ ದಾಖಲಾತಿ ಅಗತ್ಯವಾಗಿ ಬೇಕು..?

*ಪಾಸ್‌ಪೋರ್ಟ್‌ ಸೈಜ್‌ ಭಾವಚಿತ್ರ

*ಗುರುತಿನ ಪುರಾವೆ (ಜನನ ಪ್ರಮಾಣ ಪತ್ರ, ಪಾಸ್‌ಪೋರ್ಟ್‌, ಚಾಲನಾ ಪರವಾನಗಿ, ಪ್ಯಾನ್‌ ಕಾರ್ಡ್‌, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ)

*ವಿಳಾಸದ ಪುರಾವೆ (ರೇಷನ್‌ ಕಾರ್ಡ್‌, ಪಾಸ್‌ಪೋರ್ಟ್‌, ಚಾಲನಾ ಪರವಾನಗಿ, ವಿದ್ಯುತ್‌ ಬಿಲ್‌)

2. ಯಾರು ಮತದಾರರ ಚೀಟಿಗೆ ಅರ್ಜಿ ಸಲ್ಲಿಸಬಹುದು..?

ಭಾರತದಲ್ಲಿ 18 ವರ್ಷ ಮೀರಿದ ಯಾವುದೇ ವ್ಯಕ್ತಿ ವೋಟರ್‌ ಐಡಿಗಾಗಿ ಅರ್ಜಿ ಸಲ್ಲಿಸಬಹುದು.

3. ವೋಟರ್‌ ಐಡಿಯನ್ನು ಯಾರು ನೀಡುತ್ತಾರೆ..?

ಮತದಾರರ ಗುರುತಿನ ಚೀಟಿಯನ್ನು ಭಾರತ ಚುನಾವಣಾ ಆಯೋಗ ನೀಡುತ್ತದೆ.

4. ಆನ್‌ಲೈನ್‌ನಲ್ಲಿ ವೋಟರ್‌ ಐಡಿಗೆ ಅರ್ಜಿ ಸಲ್ಲಿಸಲು ಯಾವ ಫಾರ್ಮ್‌ ಸಲ್ಲಿಸಬೇಕು..?

ಫಾರ್ಮ್‌ 6 ಅನ್ನು ವೋಟರ್‌ ಐಡಿ ಪಡೆಯಲು ಸಲ್ಲಿಸಬೇಕು.

Best Mobiles in India

English summary
How To Apply For Voter ID Online: Step By Step Details

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X