ಆನ್‌ಲೈನ್‌ನಲ್ಲಿ ಪಾಸ್‌ಪೋರ್ಟ್ ಅಪ್ಲೈ ಮಾಡುವುದು ಹೇಗೆ?

Written By:

ಆನ್‌ಲೈನ್ ರಿಜಿಸ್ಟ್ರೇಶನ್ ಮೂಲಕ ಪಾಸ್‌ಪೋರ್ಟ್/ರಿಇಶ್ಯೂಗಾಗಿ ನಿಮಗೆ ನೋಂದಾವಣೆ ಮಾಡಿಕೊಳ್ಳಬಹುದಾಗಿದೆ. ಪಾಸ್‌ಪೋರ್ಟ್ ಸೇವಾ ಕೇಂದ್ರ (ಪಿಎಸ್‌ಕೆ) ಆನ್‌ಲೈನ್ ಅಪಾಯಿಂಟ್‌ಮೆಂಟ್ ಯೋಜನೆಯನ್ನು ಪ್ರಸ್ತುತಪಡಿಸಿದೆ. ಆನ್‌ಲೈನ್‌ನ ಈ ಸೇವೆಯು ಅಭ್ಯರ್ಥಿಗಳ ಸಮಯವನ್ನು ಉಳಿಸುವುದರ ಜೊತೆಗೆ ಯಾವುದೇ ಜಂಜಾಟವಿಲ್ಲದೆ ಪಾಸ್‌ಪೋರ್ಟ್ ಅನ್ನು ವಿತರಿಸುತ್ತದೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಆನ್‌ಲೈನ್ ಪಾಸ್‌ಪೋರ್ಟ್‌ಗಾಗಿ ಬೆಂಗಳೂರಿನಲ್ಲಿ ಅಪ್ಲೈ ಮಾಡುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪಾಸ್‌ಪೋರ್ಟ್ ಸೇವಾ ಪೋರ್ಟಲ್‌

ಪಾಸ್‌ಪೋರ್ಟ್ ಸೇವಾ ಪೋರ್ಟಲ್‌

#1

ಪಾಸ್‌ಪೋರ್ಟ್ ಸೇವಾ ಪೋರ್ಟಲ್‌ನಲ್ಲಿ ನಿಮ್ಮ ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್ ಅನ್ನು ನೀವು ನೋಂದಾಯಿಸಿಕೊಳ್ಳಬೇಕು. ರಿಜಿಸ್ಟರ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಯೂಸರ್ ಐಡಿ

ಯೂಸರ್ ಐಡಿ

#2

ನಿಮ್ಮ ಯೂಸರ್ ಐಡಿ ಯನ್ನು ರಚಿಸಿಕೊಂಡ ನಂತರ ನಿಮ್ಮ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ಬಳಸಿಕೊಂಡು ಇಲ್ಲಿ ಲಾಗಿನ್ ಆಗಿ

ರಿಇಶ್ಯೂ ಆಫ್ ಪಾಸ್‌ಪೋರ್ಟ್

ರಿಇಶ್ಯೂ ಆಫ್ ಪಾಸ್‌ಪೋರ್ಟ್

#3

ಈ ಹಿಂದೆ ಪಾಸ್‌ವರ್ಡ್ ಪ್ರಕ್ರಿಯೆಯನ್ನು ನೀವು ಮಾಡಿಲ್ಲ ಎಂದಾದಲ್ಲಿ, "ಅಪ್ಲೈ ಫಾರ್ ಫ್ರೆಶ್ ಪಾಸ್‌ಪೋರ್ಟ್" ಅನ್ನು ಆಯ್ಕೆಮಾಡಿಕೊಳ್ಳಬೇಕು. ಇನ್ನು ಪಾಸ್‌ಪೋರ್ಟ್ ಬದಲಾವಣೆಗಾಗಿ ನೀವು ಮರು ಅಪ್ಲೈ ಮಾಡುತ್ತಿದ್ದೀರಿ ಎಂದಾದಲ್ಲಿ "ರಿಇಶ್ಯೂ ಆಫ್ ಪಾಸ್‌ಪೋರ್ಟ್" ಆಯ್ಕೆಮಾಡಿ.

ಅಗತ್ಯ ಮಾಹಿತಿ

ಅಗತ್ಯ ಮಾಹಿತಿ

#4

ಫಾರ್ಮ್‌ನಲ್ಲಿರುವ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಮತ್ತು ಸಲ್ಲಿಸಿ. ನೀವು ನೀಡುವ ದಾಖಲೆಗಳು ಪಾಸ್‌ಪೋರ್ಟ್‌ನಲ್ಲಿ ಮುದ್ರಿತವಾಗಿರುತ್ತದೆ. ಆದ್ದರಿಂದ ಫಾರ್ಮ್ ತುಂಬುವಾಗ ಆದಷ್ಟು ಜಾಗರೂಕರಾಗಿರಿ ಮತ್ತು ತಪ್ಪುಗಳನ್ನು ಮಾಡದಿರಿ.

ಅಪಾಯಿಂಟ್‌ಮೆಂಟ್

ಅಪಾಯಿಂಟ್‌ಮೆಂಟ್

#5

ನಿಮ್ಮ ಅಪ್ಲಿಕೇಶನ್ ಫಾರ್ಮ್ ಅನ್ನು ಸಲ್ಲಿಸಿದ ನಂತರ, "ಮ್ಯಾನೇಜ್ ಅಪಾಯಿಂಟ್‌ಮೆಂಟ್" ಲಿಂಕ್ ಕ್ಲಿಕ್ ಮಾಡಿ. ಅಪ್ಲಿಕೇಂಟ್ ಹೋಮ್ ಪೇಜ್ ಇದಾಗಿದ್ದು ಅಪಾಯಿಂಟ್‌ಮೆಂಟ್ ಬುಕ್ ಮಾಡಿಕೊಳ್ಳಬಹುದಾಗಿದೆ. ನಿಮ್ಮ ನಿರ್ದಿಷ್ಟ ದಿನಾಂಕಕ್ಕೆ ನಿಮಗೆ ಅಪಾಯಿಂಟ್‌ಮೆಂಟ್ ದೊರಕುತ್ತಿಲ್ಲ ಎಂಬ ಸಂದರ್ಭದಲ್ಲಿ ಪೋರ್ಟಲ್‌ಗೆ ಮರುಭೇಟಿ ನೀಡಿ ಮತ್ತು ಪುನಃ ಅಪಾಯಿಂಟ್‌ಮೆಂಟ್ ಪಡೆದುಕೊಳ್ಳಿ.

ಏಆರ್‌ಎನ್ಉ

ಏಆರ್‌ಎನ್ಉ

#6

ಅಪ್ಲಿಕೇಶನ್ ರೆಫರೆನ್ಸ್ ಸಂಖ್ಯೆ (ಏಆರ್‌ಎನ್ಉ) ಪ್ರಿಂಟ್ ಔಟ್ ಅನ್ನು ನಿಮಗೆ ತೆಗೆದುಕೊಳ್ಳಬಹುದು.

ಅಗತ್ಯ ಡಾಕ್ಯುಮೆಂಟ್‌

ಅಗತ್ಯ ಡಾಕ್ಯುಮೆಂಟ್‌

#7

ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಲಾಗುವ ಎಲ್ಲಾ ಅಗತ್ಯ ಡಾಕ್ಯುಮೆಂಟ್‌ಗಳು ಮತ್ತು ಅಪ್ಲಿಕೇಶನ್ ರೆಫರೆನ್ಸ್ ಸಂಖ್ಯೆಯೊಂದಿಗೆ ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ನೀವು ಭೇಟಿ ನೀಡಬೇಕು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we are giving step by step method on how to apply passport through online. This is simple and easy method for applying passport through online.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot