ಸ್ಮಾರ್ಟ್‌ಫೋನ್ ಮತ್ತು ಟೆಕ್ನಾಲಜಿ ಯುಗ ಎಂದೇ ಇಂದು ಪ್ರಪಂಚ ಹೆಸರು ಪಡೆದಿದೆ. ಟೆಕ್ನಾಲಜಿ ಎಷ್ಟೇ ಮುಂದುವರೆದರೂ ಸಹ ಜನರು ಮಾತ್ರ ಇಂದಿಗೂ ಹೆಚ್ಚು ಬ್ಯುಸಿಯಾಗಿದ್ದಾರೆ. ಅವರ ದೈನಂದಿನ ಬ್ಯುಸಿ ಕೆಲಸದಲ್ಲಿ ಸರ್ಕಾರಿ ಕಛೇರಿಗಳಿಗೆ ಹೋಗಿ ವೋಟ್ ಕಾರ್ಡ್ ಮಾಡಿಸಲು ಸಹ ಸಮಯವಿಲ್ಲ. ಅಂತಹವರು ಇಂದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ವೋಟರ್ ಕಾರ್ಡ್ ಪಡೆಯಬಹುದು. ಈಗಾಗಲೇ ಪಡೆದಿರುವ ವೋಟರ್ ಕಾರ್ಡ್‌ನಲ್ಲಿ ಹೆಸರು ತಪ್ಪಿದಲ್ಲಿಯೂ ಸಹ ಅದನ್ನು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅದು ಹೇಗೆ ಎಂದು ಇಂದಿನ ಲೇಖನಲ್ಲಿ ನಿಮಗೆ ತಿಳಿಸಲಿದ್ದೇವೆ.
ಆನ್‌ಲೈನ್‌ನಲ್ಲಿ ವೋಟರ್ ಕಾರ್ಡ್ ಅರ್ಜಿಸಲ್ಲಿಸುವ ವಿಧಾನ
ಕರ್ನಾಟಕದ ಜನತೆ ಮೊದಲಿಗೆ ಅಧಿಕೃತ ವೆಬ್‌ಸೈಟ್ voterreg.kar.nic.in ಭೇಟಿ ಕೊಡಿ. ಅಲ್ಲಿ ಅರ್ಜಿ 6 ಅನ್ನು ಮೊದಲು ಭರ್ತಿ ಮಾಡಬೇಕು.
ಆನ್‌ಲೈನ್‌ನಲ್ಲಿ ವೋಟರ್ ಕಾರ್ಡ್ ಅರ್ಜಿಸಲ್ಲಿಸುವ ವಿಧಾನ
ಆನ್‌ಲೈನ್ ಮೂಲಕ ವೋಟರ್ ಕಾರ್ಡ್ ಅರ್ಜಿ ಸಲ್ಲಿಸುವವರು ಒಮ್ಮೆ ತಮ್ಮ ಇಮೇಲ್ ಮತ್ತು ಮೊಬೈಲ್ ನಂಬರ್ ನೀಡಿ ರಿಜಿಸ್ಟರ್ ಮಾಡಿಸಬೇಕು. ನಂತರ ಆನ್‌ಲೈನ್ ಅರ್ಜಿ ಸಲ್ಲಿಕೆಯಾಗುತ್ತದೆ. ನಂತರ ಹೆಚ್ಚಿನ ವಿವರಗಳಿಗಾಗಿ ವೆಬ್‌ಸೈಟ್ ಅನ್ನು ಅನುಸರಿಸಿ.
ಆನ್‌ಲೈನ್‌ನಲ್ಲಿ ವೋಟರ್ ಕಾರ್ಡ್ ಅರ್ಜಿಸಲ್ಲಿಸುವ ವಿಧಾನ
ವೋಟರ್ ಕಾರ್ಡ್ ಅರ್ಜಿ ಸಲ್ಲಿಸುವವರು ಅರ್ಜಿ ಸಂಖ್ಯೆ 6 ಅನ್ನು ಭರ್ತಿ ಮಾಡಬೇಕು. ಅದರಲ್ಲಿ ನಿಮ್ಮ ಜಿಲ್ಲೆ, ಪಿನ್ ಕೋಡ್, ಸ್ಥಳೀಯ ವಿಳಾಸ, ವಿಧಾನ ಸಭಾ ಕ್ಷೇತ್ರ, ಭಾಷೆ ಮತ್ತು ಇತರೆ ಒಬ್ಬರ ಅರ್ಜಿದಾರರ ವಿವರ ಟೈಪ್ ಮಾಡಿ.
ಆನ್‌ಲೈನ್‌ನಲ್ಲಿ ವೋಟರ್ ಕಾರ್ಡ್ ಅರ್ಜಿಸಲ್ಲಿಸುವ ವಿಧಾನ
ಅರ್ಜಿ ಸಲ್ಲಿಕೆಗಾಗಿ ವೆಬ್‌ಸೈಟ್ ಕೇಳುವ ನಿಮ್ಮ ಭಾವಚಿತ್ರ, ಇತರೆ ದಾಖಲೆಗಳನ್ನು ಪುರಾವೆಗಾಗಿ ಅಪ್‌ಲೋಡ್ ಮಾಡಿ. ಅಲ್ಲದೇ ಅರ್ಜಿಯನ್ನು ನಿಮ್ಮ ಸಹಿ ಸಹಿತ ಅಪ್‌ಲೋಡ್ ಮಾಡಿ.
ಆನ್‌ಲೈನ್‌ನಲ್ಲಿ ವೋಟರ್ ಕಾರ್ಡ್ ಅರ್ಜಿಸಲ್ಲಿಸುವ ವಿಧಾನ
ಒಮ್ಮೆ ಅರ್ಜಿಯನ್ನು ಸಲ್ಲಿಸಿದ ನಂತರ ನಿಮ್ಮ ಅರ್ಜಿಯ ಸ್ಥಿತಿಯನ್ನು (Application status) ಅನ್ನು ಆನ್‌ಲೈನ್‌ನಲ್ಲಿ ನೋಡಬಹುದು. ಅಥವಾ 9243355223 ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಿ ಸಹ ತಿಳಿಯ ಬಹುದಾಗಿದೆ.
ಆನ್‌ಲೈನ್‌ನಲ್ಲಿ ವೋಟರ್ ಕಾರ್ಡ್ ಅರ್ಜಿಸಲ್ಲಿಸುವ ವಿಧಾನ
www.ceo.karnataka.kar.nic.in ವೆಬ್‌ಸೈಟ್‌ಗೆ ಓಪನ್ ಮಾಡಿಯೂ ಸಹ ಅಲ್ಲಿ Registration Online ಬಟನ್ ಕ್ಲಿಕ್ ಮಾಡಿ ವೋಟರ್ ಕಾರ್ಡ್ ಅರ್ಜಿ ಸಲ್ಲಿಸಬಹುದಾಗಿದೆ.
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.