ವಾಟ್ಸಪ್‌ನಲ್ಲಿ ಬ್ಯಾಂಕಿಂಗ್ ವಂಚನೆಗಳ ಬಗ್ಗೆ ಎಚ್ಚರವಹಿಸಿ: ಈ ಕ್ರಮಗಳನ್ನು ಪಾಲಿಸಿ!

|

ಕೊರೊನಾ ರಣಕೇಕೆಗೆ ಇಡೀ ವಿಶ್ವವೇ ಸ್ಥಬ್ದಗೊಂಡಿದೆ. ಕೋವಿಡ್ ಸಾಂಕ್ರಾಮಿಕ ತಡೆಯಲು ದೇಶದಲ್ಲಿಯೂ ಲಾಕ್‌ಡೌನ್ ಇದೀಗ ಮೂರನೇ ಹಂತದಲ್ಲಿ ಮುಂದುವರೆಸಲಾಗಿದೆ. ಈ ಅವಧಿಯಲ್ಲಿ ಎಲ್ಲರೂ ಮನೆಯಲ್ಲಿಯೇ ಇರುವುದರಿಂದ ಆನ್‌ಲೈನ್ ಬಳಕೆ ಹೆಚ್ಚಾಗಿದೆ. ಜನರು ತಮ್ಮ ಸೇಹಿತರೊಂದಿಗೆ ಸಂಪರ್ಕದಲ್ಲಿರಲು ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಮತ್ತು ಜೂಮ್ ನಂತಹ ಅಪ್ಲಿಕೇಶನ್‌ಗಳನ್ನು ವ್ಯಾಪಕವಾಗಿ ಅವಲಂಬಿಸಿದ್ದಾರೆ. ಆ ಪೈಕಿ ವಾಟ್ಸಾಪ್ ಬಹು ಮುಖ್ಯ ಆಧಾರವಾಗಿದೆ.

ಫೇಸ್‌ಬುಕ್  ಮಾಲೀಕತ್ವ

ಹೌದು, ಫೇಸ್‌ಬುಕ್ ಮಾಲೀಕತ್ವದ ಮೆಸೆಜಿಂಗ್ ಆಪ್ ವಾಟ್ಸಾಪ್ ವಿಶ್ವದಲ್ಲಿಯೇ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಒಳಗೊಂಡಿದೆ. ವಾಟ್ಸಪ್‌ ಮೂಲಕ ಹ್ಯಾಕರ್ಸ್‌ಗಳು ಬಳಕೆದಾರರನ್ನು ವಂಚಿಸುವ ಸಾಧ್ಯತೆಗಳು ಅಧಿಕವಾಗಿವೆ. ಹೀಗಾಗಿ ವಾಟ್ಸಪ್‌ ಬಳಕೆದಾರರು ಅಪರಿಚಿತ ಮೂಲಗಳಿಂದ ಬರುವ ಲಿಂಕ್‌/ಮೆಸೆಜ್‌ಗಳ ಬಗ್ಗೆ ಹುಷಾರಾಗಿರಬೇಕು. ವಾಟ್ಸಪ್‌ OTP ಸ್ಕ್ಯಾಮ್‌ಗಳ ಬಗ್ಗೆ ಎಸ್‌ಬಿಐ ಕಳೆದ ವರ್ಷ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿತ್ತು. ಬ್ಯಾಂಕಿಂಗ್‌ ವಂಚನೆಗಳ ಬಗ್ಗೆ ಈಗಾಗಲೇ ಬಹುತೇಕ ತಿಳಿದುಕೊಂಡಿದ್ದಾರೆ. ಅದಾಗ್ಯೂ ಬ್ಯಾಂಕಿಂಗ್ ವಂಚನೆಗಳ ಸುರಕ್ಷತೆಗಾಗಿ ಈ ಹಂತಗಳನ್ನು ನೆನಪಿಡಿ.

ಬ್ಯಾಂಕ್ ಖಾತೆ

1. ನಿಮ್ಮ ಬ್ಯಾಂಕ್ ಖಾತೆ ವಿವರಗಳು, ಡೆಬಿಟ್ / ಕ್ರೆಡಿಟ್ ಕಾರ್ಡ್ ಪಿನ್‌ಗಳು, ಇಂಟರ್ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್‌ಗಳು, ಸಿವಿವಿ ಕೋಡ್‌ಗಳು ಮುಂತಾದ ಖಾಸಗಿ ಮಾಹಿತಿಯನ್ನು ವಾಟ್ಸಾಪ್‌ನಲ್ಲಿ ಯಾರಿಗೂ ಕಳುಹಿಸಬೇಡಿ.

2. ವಾಟ್ಸಪ್‌ನಲ್ಲಿ ಸ್ವೀಕರಿಸಿರಬಹುದಾದ ಒಟಿಪಿ ಸಂಖ್ಯೆಯನ್ನು ಕೇಳುವ ಯಾವುದೇ ವಾಟ್ಸಾಪ್ ಸಂದೇಶಕ್ಕೆ ಪ್ರತ್ಯುತ್ತರಿಸಬೇಡಿ. ವಹಿವಾಟಿನ ಮೊತ್ತ ಮುಖ್ಯವಲ್ಲ ಆದರೆ ಎಚ್ಚರವಹಿಸಬೇಕು.

ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ.

3. ಅಪರಿಚಿತರು ಕಳುಹಿಸುವ ಯಾವುದೇ ಫೈಲ್‌ಗಳನ್ನು ಡೌನ್‌ಲೋಡ್ ಮಾಡಬೇಡಿ ಅಥವಾ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ.

4. ನಿಮ್ಮ ಫೋನ್ ಕಳೆದುಕೊಂಡರೆ, ನಿಮ್ಮ ವಾಟ್ಸಾಪ್ ಅನ್ನು ಡಿಆಕ್ಟಿವ್ ಮಾಡಿಬಿಡಿ. ಮತ್ತೆ ಹೊಸ ಫೋನಿನಲ್ಲಿ ಲಾಗ್‌ ಇನ್ ಆಗಬಹುದು.

ಮೀಡಿಯಾ ಡೇಟಾವನ್ನು ಅಳಿಸಿ.

5. ಎಲ್ಲಾ ವಾಟ್ಸಾಪ್ ಚಾಟ್‌ಗಳು ಮತ್ತು ಮೀಡಿಯಾ ಡೇಟಾವನ್ನು ಅಳಿಸಿ. ಫೋನ್‌ ಅನ್ನು ಮಾರಾಟ ಮಾಡಲು ಅಥವಾ ಇನ್ನೊಬ್ಬರಿಗೆ ನೀಡಲು ನೀವು ಯೋಜಿಸುತ್ತಿದ್ದರೆ ನಿಮ್ಮ ಫೋನ್ ಅನ್ನು ಫ್ಯಾಕ್ಟರಿ ಸೆಟ್ಟಿಂಗ್‌ನಲ್ಲಿ ರೀಸ್ಟೋರ್ ಮಾಡಿ.

6. ಯಾವುದೇ ಅನುಮಾನಾಸ್ಪದ ವಾಟ್ಸಾಪ್ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ.

ಮೆಸೆಜ್‌ಗಳಿಗೆ ಮರುಳಾಗದಿರಿ

7. ಅಪರಿಚಿತ ಸಂಖ್ಯೆಗಳಿಂದ ಬರುವ ಯಾವುದೇ ಲಿಂಕ್ ಅಥವಾ ಸಂದೇಶಗಳನ್ನು ನಿರ್ಲಕ್ಷಿಸಿ.

8. ವಾಟ್ಸಪ್‌ನಲ್ಲಿ ಬರುವ ಯಾವುದೇ ರೀತಿಯ ವಂಚನೆಯ ಮೆಸೆಜ್‌ಗಳಿಗೆ ಮರುಳಾಗದಿರಿ.

ತೆರೆದ ವೈಫೈ ನೆಟ್‌ವರ್ಕ್

9. ವಾಟ್ಸಾಪ್‌ನಲ್ಲಿ ಸ್ವಯಂಚಾಲಿತ ಡೌನ್‌ಲೋಡ್‌ಗಳನ್ನು ನಿಷ್ಕ್ರಿಯಗೊಳಿಸಿ. ಡೌನ್‌ಲೋಡ್ ಆಗುವುದನ್ನು ನಿಖರವಾಗಿ ನಿಯಂತ್ರಿಸಲು ಮತ್ತು ನಿಮ್ಮ ಡೇಟಾವನ್ನು ಉಳಿಸಲು ಇದು ನಿಮಗೆ ಸಹಾಯ ಮಾಡುತ್ತದೆ.

10. ನೀವು ಸಾರ್ವಜನಿಕ ವೈಫೈ ಅಥವಾ ತೆರೆದ ವೈಫೈ ನೆಟ್‌ವರ್ಕ್‌ನಲ್ಲಿರುವಾಗ ವಾಟ್ಸಾಪ್ ಅನ್ನು ಬಳಸಬೇಡಿ.

Most Read Articles
Best Mobiles in India

English summary
here are a list of things you can do to ensure that you do not fall for any scam, especially banking frauds, on this app.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X