ಇಂಟರ್ನೆಟ್‌ ಬಳಸುವಾಗ ಜಾಹಿರಾತು ಕಾಣಿಸದಂತೆ ಮಾಡಲು ಹೀಗೆ ಮಾಡಿ!

|

ಸದ್ಯ ಡಿಜಿಟಲ್ ಜಾಹಿರಾತು ಮಾರುಕಟ್ಟೆ ಹೆಚ್ಚು ಲೀಡಿಂಗ್‌ನಲ್ಲಿ ಮುನ್ನುಗ್ಗುತ್ತ ಸಾಗಿದೆ. ಬಳಕೆದಾರರು ಸ್ಮಾರ್ಟ್‌ಫೋನಿನಲ್ಲಿ ಇಂಟರ್ನೆಟ್ ಬಳಕೆ ಮಾಡುವಾಗ/ಸರ್ಚ್ ಮಾಡುವಾಗ ಅಥವಾ ಕೆಲವೊಂದು ಅಪ್ಲಿಕೇಶನ್ ಬಳಕೆ ಮಾಡುವಾಗ ನಡು ನಡುವೆ ಜಾಹಿರಾತುಗಳು ಕಾಣಿಸಿಕೊಳ್ಳುತ್ತವೆ. ನಡು ನಡುವೆ ಕಾಣಿಸಿಕೊಳ್ಳುವ ಜಾಹಿರಾತುಗಳ ಮೇಲೆ ಬಳಕೆದಾರರು ಕೆಲವೊಮ್ಮೆ ಕ್ಲಿಕ್ ಆಗಿ ಬಿಡುತ್ತಾರೆ. ಈ ರೀತಿ ಜಾಹಿರಾತುಗಳು ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಕಿರಿ ಕಿರಿ ಎನಿಸುತ್ತದೆ.

ಪ್ರತಿಯೊಬ್ಬರ

ಪ್ರಸ್ತುತ ಸ್ಮಾರ್ಟ್‌ಫೋನ್ ಪ್ರತಿಯೊಬ್ಬರ ಅಗತ್ಯ ಡಿವೈಸ್‌ಗಳಲ್ಲಿ ಒಂದಾಗಿದೆ. ಅಲ್ಲದೇ ಹಲವು ಆನ್‌ಲೈನ್ ಕೆಲಸಗಳಿಗೆ ಇಂಟರ್ನೆಟ್ ಬಳಕೆ ಸಹ ಮಾಡುತ್ತಿರುತ್ತಾರೆ. ಹೀಗಾಗಿ ಅನೇಕ ಕಂಪನಿಗಳು ತಮ್ಮ ಜಾಹಿರಾತುಗಳನ್ನು ಜನರಿಗೆ ತಲುಪಿಸಲು ಆನ್‌ಲೈನ್ ತಾಣಗಳ ಮೇಲೆಯೇ ಹೆಚ್ಚಾಗಿ ಕಣ್ಣಿಟ್ಟಿವೆ. ಆನ್‌ಲೈನ್‌ ಜಾಹಿರಾತುಗಳು ಚುಟುಕಾಗಿದ್ದರೂ ಗ್ರಾಹಕರನ್ನು ಆಕರ್ಷಿಸುವಂತಿದ್ದು, ನಡು ನಡುವೆ ಗ್ರಾಹಕರನ್ನು ಜಾಹಿರಾತುಗಳು ತ್ವರಿತವಾಗಿ ಕಾಣಿಸಿಕೊಳ್ಳುತ್ತವೆ.

ಆಂಡ್ರಾಯ್ಡ್‌

ಸ್ಮಾರ್ಟ್‌ಫೋನ್‌ ಬಳಕೆದಾರರೇ ಸಾಮಾಜಿಕ ತಾಣಗಳ ಬಳಕೆಯಲ್ಲಿ, ಕ್ರೋಮ್‌ ಬ್ರೌಸಿಂಗ್ ವೇಳೆ ಮತ್ತು ಇತರೆ ಇಂಟರ್ನೆಟ್‌ ಆಪ್ಸ್‌ಗಳ ಬಳಕೆಯ ವೇಳೆ ಡಿಸ್‌ಪ್ಲೇ ಆಗುವ ಜಾಹಿರಾತುಗಳನ್ನು ಬ್ಲಾಕ್‌ ಮಾಡಬಹುದಾಗಿದೆ. ಆ ಮೂಲಕ ಜಾಹಿರಾತುಗಳ ಕಿರಿ ಕಿರಿಯನ್ನು ದೂರಾಗಿಸಬಹುದಾಗಿದೆ. ಹಾಗಾದರೇ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನಿನಲ್ಲಿ ಬ್ರೌಸಿಂಗ್ ವೇಳೆ ಕಾಣಿಸಿಕೊಳ್ಳುವ ಜಾಹಿರಾತುಗಳನ್ನು ಬ್ಲಾಕ್‌ ಮಾಡುವುದು ಹೇಗೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಗೂಗಲ್‌ನಲ್ಲಿ ಸೆಟ್ಟಿಂಗ್ ಆಯ್ಕೆ

ಗೂಗಲ್‌ನಲ್ಲಿ ಸೆಟ್ಟಿಂಗ್ ಆಯ್ಕೆ

ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ ಕ್ರೋಮ್‌ ಆಪ್‌ ಮೂಲಕ ಇಂಟರ್ನೆಟ್‌ ಬ್ರೌಸ್‌ ಮಾಡುವಾಗ, ಆರ್ಟಿಕಲ್ ಅಥವಾ ಟೆಕ್ಟ್ಸ್ ಕಂಟೆಂಟ್ ಓದುವಾಗ ಅನೇಕ ಬಾರಿ ನಡು ನಡುವೆ ಜಾಹಿರಾತುಗಳು ಕಾಣಿಸಿಕೊಳ್ಳುತ್ತವೆ. ಅಸಲಿಗೆ ಈ ಜಾಹಿರಾತುಗಳನ್ನು ಗೂಗಲ್ ಕ್ರೋಮ್‌ ಡಿಸ್‌ಪ್ಲೇ ಮಾಡಿರುವುದಿಲ್ಲ. ಆದರೆ ಆ ಜಾಹಿರಾತುಗಳನ್ನು ಬ್ಲಾಕ್ ಮಾಡಲು ಅವಕಾಶವಿದೆ. ಈ ಮುಂದಿನ ಹಂತಗಳನ್ನು ನೋಡೋಣ ಬನ್ನಿರಿ.

ಬ್ರೌಸರ್‌

* ಗೂಗಲ್‌ ಕ್ರೋಮ್‌ ಬ್ರೌಸರ್‌ ಸೆಟ್ಟಿಂಗ್ ತೆರೆಯಿರಿ.
* ನಂತರ ಸೈಟ್‌ ಸೆಟ್ಟಿಂಗ್ ಆಯ್ಕೆಯನ್ನು ಟ್ಯಾಪ್‌ ಮಾಡಿರಿ.
* ಆನಂತರ ಪಾಪ್‌ಅಪ್ಸ್‌ ಮತ್ತು toggle ಸ್ವಿಚ್ ಮಾಡಿರಿ.

ಜಾಹಿರಾತು/ಆಡ್ ಬ್ಲಾಕರ್ ಅಪ್ಲಿಕೇಶನ್

ಜಾಹಿರಾತು/ಆಡ್ ಬ್ಲಾಕರ್ ಅಪ್ಲಿಕೇಶನ್

ಇಂಟರ್ನೆಟ್‌ ಬಳಕೆಯ ವೇಳೆ ಜಾಹಿರಾತು ಕಿರಿ ಕಿರಿ ತಡೆಯಲು ಸ್ಮಾರ್ಟ್‌ಫೋನ್‌ನಲ್ಲಿ ಆಡ್ ಬ್ಲಾಕರ್ ಆಪ್ ಬಳಕೆ ಮಾಡಬಹುದಾಗಿದೆ. ಇದು ಸ್ಮಾರ್ಟ್‌ಫೋನ್‌ ಜಾಹಿರಾತುಗಳನ್ನು, ಇಂಟರ್ನೆಟ್ ಬಳಕೆಯ ವೇಳೆಯ ಜಾಹಿರಾತುಗಳನ್ನು ಮತ್ತು ಸರ್ಚ್ ಇಂಜಿನ್ ಆಪ್‌ಗಳಲ್ಲಿ ಬ್ರೌಸ್ ಮಾಡುವಾಗ ಕಾಣಿಸುವ ಜಾಹಿರಾತುಗಳನ್ನು ತಡೆಯಲಿದೆ. ಆಂಡ್ರಾಯ್ಡ್ ಫೋನಿನಲ್ಲಿ ad-blocker APK ಪ್ಲಸ್‌ ಆಪ್‌ ಅನ್ನು ಇನ್‌ಸ್ಟಾಲ್‌ ಮಾಡಬಹುದಾಗಿದೆ.

ಆಡ್‌ಬ್ಲಾಕರ್ ಪ್ಲಸ್‌ ಅಪ್ಲಿಕೇಶನ್

ಆಡ್‌ಬ್ಲಾಕರ್ ಪ್ಲಸ್‌ ಅಪ್ಲಿಕೇಶನ್

* ಆಡ್‌ಬ್ಲಾಕರ್ ಪ್ಲಸ್‌ ಆಪ್‌ ಅನ್ನು ಬ್ರೌಸರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬೇಕು.

* ಫೈಲ್ ಮ್ಯಾನೇಜರ್ ಆಪ್‌ ತೆರೆದು ಆಡ್‌ಬ್ಲಾಕರ್ ಪ್ಲಸ್‌ ಆಪ್‌ನ APK ಫೈಲ್ ನೋಡಿ.

ಫೈಲ್‌

* ಆಡ್‌ಬ್ಲಾಕರ್ ಪ್ಲಸ್‌ ಆಪ್‌ APK ಫೈಲ್‌ ಇನ್‌ಸ್ಟಾಲ್ ಮಾಡಿರಿ.

* ಆನಂತರ ಆಪ್ ತೆರೆದು ಓಕೆ ಆಯ್ಕೆ ಸೆಲೆಕ್ಟ್ ಮಾಡಿರಿ.

ಇತರೆ ಆಡ್ ಬ್ಲಾಕರ್ ಅಪ್ಲಿಕೇಶನ್‌ಗಳು

ಇತರೆ ಆಡ್ ಬ್ಲಾಕರ್ ಅಪ್ಲಿಕೇಶನ್‌ಗಳು

ಇತರೆ ಆಡ್ ಬ್ಲಾಕರ್ ಆಪ್ಸ್ ಸ್ಮಾರ್ಟ್‌ಫೋನ್‌ ಇಂಟರ್ನೆಟ್‌ ಬಳಕೆ ಮಾಡುವಾಗ ನಡು ನಡುವೆ ಕಾಣಿಸುವ ಜಾಹಿರಾತುಗಳ ಕಿರಿ ಕಿರಿಯನ್ನು ದೂರಾಗಿಸಲು ಆಡ್‌ಬ್ಲಾಕರ್ ಪ್ಲಸ್‌ ಆಪ್‌ ಬಳಸಬಹುದಾಗಿದೆ.

ಆಡ್‌ಲಾಕ್

ಇದರೊಂದಿಗೆ ಆಡ್‌ಗಾರ್ಡ್‌ (AdGuard) , ಆಡ್‌ಲಾಕ್ (AdLock) ಮತ್ತು ಆಡ್‌ಅವೇ (AdAway) ಅಪ್ಲಿಕೇಶನ್‌ಗಳು ಸಹ ನೆಟ್‌ ಬ್ರೌಸ್‌ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಜಾಹಿರಾತು ತಡೆಗೆ ನೆರವಾಗಲಿವೆ.

Best Mobiles in India

English summary
How To Block Ads On Smartphone Follow These Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X