ಯೂಟ್ಯೂಬ್ ವಿಡಿಯೋ ನೋಡುವಾಗ ಜಾಹಿರಾತುಗಳು ಕಾಣಿಸಬಾರದೇ?..ಹೀಗೆ ಮಾಡಿ!

|

ಪ್ರಸ್ತುತ ಡಿಜಿಟಲ್ ಜಾಹಿರಾತು ಮಾರುಕಟ್ಟೆ ಹೆಚ್ಚು ಮುಂಚೂಣಿಯಲ್ಲಿ ಸಾಗಿದೆ. ಬಳಕೆದಾರರು ಸ್ಮಾರ್ಟ್‌ಫೋನಿನಲ್ಲಿ ಇಂಟರ್ನೆಟ್ ಬಳಕೆ ಮಾಡುವಾಗ (ಏನಾದರೂ ಸರ್ಚ್) ಮಾಡುವಾಗ ಅಥವಾ ಕೆಲವೊಂದು ಅಪ್ಲಿಕೇಶನ್ ಬಳಕೆ ಮಾಡುವಾಗ ಮತ್ತು ಯೂಟ್ಯೂಬ್ ವಿಡಿಯೋ ವೀಕ್ಷಣೆ ಮಾಡುವಾಗ ಮಧ್ಯ ಜಾಹಿರಾತುಗಳು ಕಾಣಿಸಿಕೊಳ್ಳುತ್ತವೆ. ಹೀಗೆ ನಡು ನಡುವೆ ಕಾಣಿಸಿಕೊಳ್ಳುವ ಜಾಹಿರಾತುಗಳ ಮೇಲೆ ಬಳಕೆದಾರರು ಕೆಲವೊಮ್ಮೆ ಅಚಾನಕ್ ಕ್ಲಿಕ್ ಆಗಿ ಬಿಡುತ್ತಾರೆ. ವಿಡಿಯೋ ವೀಕ್ಷಣೆ ಮಾಡುವಾಗ ಈ ರೀತಿ ಜಾಹಿರಾತುಗಳು ಬಳಕೆದಾರರಿಗೆ ಕಿರಿ ಕಿರಿ ಎನಿಸುತ್ತದೆ.

ಅಗತ್ಯ

ಸದ್ಯ ಸ್ಮಾರ್ಟ್‌ಫೋನ್ ಪ್ರತಿಯೊಬ್ಬರ ಅಗತ್ಯ ಡಿವೈಸ್‌ಗಳಲ್ಲಿ ಒಂದಾಗಿದೆ. ಹಾಗೆಯೇ ಪ್ರತಿಯೊಂದು ಆನ್‌ಲೈನ್ ಕೆಲಸಗಳಿಗೆ ಇಂಟರ್ನೆಟ್ ಬಳಕೆ ಸಹ ಮಾಡುತ್ತಿರುತ್ತಾರೆ. ಹಾಗೆಯೇ ಅಗತ್ಯ ಮಾಹಿತಿ ಪಡೆಯಲು ಅಥವಾ ಮನರಂಜನೆಗಾಗಿ ಯೂಟ್ಯೂಬ್ ವಿಡಿಯೋ ವೀಕ್ಷಣೆ ಮಾಡುತ್ತಾರೆ. ಈ ನಿಟ್ಟಿನಲ್ಲಿ ಅನೇಕ ಕಂಪನಿಗಳು ತಮ್ಮ ಜಾಹಿರಾತುಗಳನ್ನು ಜನರಿಗೆ ತಲುಪಿಸಲು, ಯೂಟ್ಯೂಬ್ ಸೇರಿದಂತೆ ಇತರೆ ಸೋಶೀಯಲ್ ತಾಣಗಳ ಮೇಲೆಯೇ ಹೆಚ್ಚಾಗಿ ಕಣ್ಣಿಟ್ಟಿವೆ. ಆನ್‌ಲೈನ್‌ ಜಾಹಿರಾತುಗಳು ನೋಡಲು ಚುಟುಕಾಗಿದ್ದರೂ ಗ್ರಾಹಕರನ್ನು ಸೆಳೆಯುವಂತಿರುತ್ತವೆ, ನಡು ನಡುವೆ ಗ್ರಾಹಕರನ್ನು ಜಾಹಿರಾತುಗಳು ತ್ವರಿತವಾಗಿ ಕಾಣಿಸಿಕೊಳ್ಳುತ್ತವೆ.

ದೂರವಾಗಿಸಬಹುದಾಗಿದೆ

ಸ್ಮಾರ್ಟ್‌ಫೋನ್‌ ಬಳಕೆದಾರರೇ ಸಾಮಾಜಿಕ ತಾಣಗಳ ಬಳಕೆಯಲ್ಲಿ, ಕ್ರೋಮ್‌ ಬ್ರೌಸಿಂಗ್ ವೇಳೆ ಮತ್ತು ಇತರೆ ಇಂಟರ್ನೆಟ್‌ ಆಪ್ಸ್‌ಗಳ ಬಳಕೆಯ ವೇಳೆ ಡಿಸ್‌ಪ್ಲೇ ಆಗುವ ಜಾಹಿರಾತುಗಳನ್ನು ಬ್ಲಾಕ್‌ ಮಾಡಬಹುದಾಗಿದೆ. ಹಾಗೆಯೇ ಯೂಟ್ಯೂಬ್‌ನಲ್ಲಿ ವಿಡಿಯೋ ವೀಕ್ಷಣೆ ಮಾಡುವಾಗ ಮಧ್ಯ ಮಧ್ಯ ಕಾಣಿಸಿಕೊಳ್ಳುವ ಜಾಹಿರಾತುಗಳನ್ನು ಕಾಣಿಸದಂತೆ (ಬ್ಲಾಕ್) ಮಾಡಬಹುದಾಗಿದೆ. ಈ ಮೂಲಕ ಜಾಹಿರಾತುಗಳ ಕಿರಿ ಕಿರಿಯನ್ನು ದೂರವಾಗಿಸಬಹುದಾಗಿದೆ. ಹಾಗಾದರೇ ಸ್ಮಾರ್ಟ್‌ಫೋನಿನಲ್ಲಿ ಯೂಟ್ಯೂಬ್‌ನಲ್ಲಿ ವಿಡಿಯೋ ವೀಕ್ಷಣೆ ಮಾಡುವ ವೇಳೆ ಕಾಣಿಸಿಕೊಳ್ಳುವ ಜಾಹಿರಾತುಗಳನ್ನು ಬ್ಲಾಕ್‌ ಮಾಡುವುದು ಹೇಗೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಜಾಹಿರಾತು ತಡೆ: ವಿಧಾನ 1

ಜಾಹಿರಾತು ತಡೆ: ವಿಧಾನ 1

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ನೀವು ಥರ್ಡ್‌ ಪಾರ್ಟಿಯ ಜಾಹೀರಾತು ಬ್ಲಾಕರ್ ಅಪ್ಲಿಕೇಶನ್ ಅನ್ನು ಸರಳವಾಗಿ ಡೌನ್‌ಲೋಡ್ ಮಾಡಬಹುದು. ಪ್ಲೇ ಸ್ಟೋರ್‌ಗೆ ಹೋಗಿ ಮತ್ತು 'Free Adblocker Browser: Adblock and Private Browser' ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿ. (ಇತರ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ಆಯ್ಕೆಮಾಡಬಹುದು). ಇದು ಮೂಲಭೂತವಾಗಿ ಬ್ರೌಸರ್ ಆಗಿದ್ದು, ಇದನ್ನು ಬಳಸಿಕೊಂಡು ನೀವು ಭೇಟಿ ನೀಡುವ ಯಾವುದೇ ಸೈಟ್‌ನಲ್ಲಿ ಹೆಚ್ಚಿನ ಜಾಹೀರಾತುಗಳನ್ನು ನಿರ್ಬಂಧಿಸಲು ಸಹಾಯ ಮಾಡುತ್ತದೆ. ಈ ಆಪ್‌ನ ಸರ್ಚ್ ಬಾರ್‌ನಲ್ಲಿ ಯೂಟ್ಯೂಬ್ ಟೈಪ್ ಮಾಡಿ ಮತ್ತು ಯಾವುದೇ ಜಾಹೀರಾತುಗಳಿಲ್ಲದೆ ಯೂಟ್ಯೂಬ್ ಅನ್ನು ಬಳಸಲು ಪ್ರಾರಂಭಿಸಿ.

ಜಾಹಿರಾತು ತಡೆ: ವಿಧಾನ 2

ಜಾಹಿರಾತು ತಡೆ: ವಿಧಾನ 2

ಯಾವುದೇ ಜಾಹೀರಾತುಗಳಿಲ್ಲದೆ ಯೂಟ್ಯೂಬ್ ವಿಡಿಯೋ ವೀಕ್ಷಣೆ ಮಾಡಲು ಬಳಕೆದಾರರು ಯೂಟ್ಯೂಬ್ ಪ್ರೀಮಿಯಂ (YouTube Premium) ಖರೀದಿಸಬಹುದು. ಯೂಟ್ಯೂಬ್ ಪ್ರೀಮಿಯಂ ಚಂದಾದಾರಿಕೆಯ ತಿಂಗಳ ಶುಲ್ಕ 129 ರೂ. ಆಗಿದೆ. ಈ ಚಂದಾದಾರಿಕೆಯು ಬಳಕೆದಾರರಿಗೆ ಯೂಟ್ಯೂಬ್ ನಲ್ಲಿ ಜಾಹೀರಾತು ಮುಕ್ತ ವಿಡಿಯೋ ಮತ್ತು ಮ್ಯೂಸಿಕ್ ಆಯ್ಕೆ ನೀಡುತ್ತದೆ. ಹಾಗೆಯೇ ಈ ಚಂದಾದಾರಿಕೆಯಲ್ಲಿ ಸ್ಕ್ರೀನ್ ಲಾಕ್ ಆಗಿರುವಾಗಲೂ ಬಳಕೆದಾರರು ವೀಡಿಯೊಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಇದನ್ನು ಪಿಕ್ಚರ್-ಇನ್-ಪಿಕ್ಚರ್ (ಪಿಐಪಿ) ಮೋಡ್ ಎಂದು ಕರೆಯಲಾಗುತ್ತದೆ, ಇದು ಉಚಿತ ಬಳಕೆದಾರರಿಗೆ ಲಭ್ಯವಿಲ್ಲ. ಹಾಗೆಯೇ ಯೂಟ್ಯೂಬ್ ಮ್ಯೂಸಿಕ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಮತ್ತು ಅಡಚಣೆಗಳಿಲ್ಲದೆ ಹಾಡುಗಳನ್ನು ಆಲಿಸಬಹುದು.

ಪಿಸಿಯಲ್ಲಿ ಯೂಟ್ಯೂಬ್ ಜಾಹೀರಾತುಗಳನ್ನು ಬ್ಲಾಕ್ ಮಾಡುವುದು ಹೇಗೆ?

ಪಿಸಿಯಲ್ಲಿ ಯೂಟ್ಯೂಬ್ ಜಾಹೀರಾತುಗಳನ್ನು ಬ್ಲಾಕ್ ಮಾಡುವುದು ಹೇಗೆ?

PC ಅಥವಾ ಲ್ಯಾಪ್‌ಟಾಪ್‌ನಲ್ಲಿ ಯೂಟ್ಯೂಬ್ ಅನ್ನು ವೀಕ್ಷಿಸುವವರು ಯೂಟ್ಯೂಬ್ ಪ್ರೀಮಿಯಂ ಅನ್ನು ಖರೀದಿಸಬೇಕಾಗಿಲ್ಲ. ಹಾಗೆಯೇ ಕ್ರೋಮ್ ಗಾಗಿ ಆಡ್‌ಬ್ಲಾಕರ್ ವಿಸ್ತರಣೆಯನ್ನು (adblocker extension for Chrome) ಸರಳವಾಗಿ ಇನ್‌ಸ್ಟಾಲ್ ಮಾಡಬಹುದು. ಒಮ್ಮೆ ಇದನ್ನು ಕ್ರೋಮ್‌ ಗೆ ಸೇರಿಸಿದರೆ, ಬಳಕೆದಾರರು ಯಾವುದೇ ಜಾಹೀರಾತುಗಳು ಇಲ್ಲದೇ ಯೂಟ್ಯೂಬ್ ವೀಡಿಯೊಗಳನ್ನು ಆನಂದಿಸಬಹುದು.

Most Read Articles
Best Mobiles in India

English summary
How to Block YouTube ads on Android and PC: Follow These Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X