ಎಂಐ ಟಿವಿ ಖರೀದಿಸಿ ಇನ್ಸ್ಟಾಲ್ ಮಾಡುವುದು ಹೇಗೆ ಗೊತ್ತಾ?

By Gizbot Bureau
|

ಭಾರತೀಯ ಸ್ಮಾರ್ಟ್ ಟಿವಿಗಳ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನದಲ್ಲಿರುವುದು ಶಿಯೋಮಿ. ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಈ ಬ್ರ್ಯಾಂಡ್ ದೊಡ್ಡ ಶೇರ್ ಹೊಂದಿದ ಕಾರಣಕ್ಕಾಗಿ ಇದೀಗ ಸ್ಮಾರ್ಟ್ ಟಿವಿಯಲ್ಲೂ ತನ್ನದೇ ಆದ ವಿಶೇಷ ಜಾಗ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗಿದೆ. ಕೈಗೆಟುಕುವ ಬೆಲೆಯಲ್ಲಿ ಸ್ಮಾರ್ಟ್ ಟಿವಿಗಳು ಲಭ್ಯವಾಗುವುದರಿಂದ ಎಂಐ ಟಿವಿಗಳಿಗೆ ಇದೀಗ ಭಾರೀ ಬೇಡಿಕೆ ಇದೆ ಎಂದರೆ ತಪ್ಪಾಗುವುದಿಲ್ಲ.

ಎಂಐ ಟಿವಿ ಇನ್ಸ್ಟಾಲೇಷನ್ ಪ್ರೊಸೆಸ್

ಎಂಐ ಟಿವಿ ಇನ್ಸ್ಟಾಲೇಷನ್ ಪ್ರೊಸೆಸ್

ನೀವು ನಿಗದಿಪಡಿಸುವ ಸಮಯಕ್ಕೆ ಮತ್ತು ನೀವು ಹೇಳುವ ಸ್ಥಳದಲ್ಲಿ ಶಿಯೋಮಿ ಕೈಗೆಟುಕುವ ಬೆಲೆಯಲ್ಲಿ ಮತ್ತು ನಿಮಗೆ ಯಾವುದೇ ಕಿರಿಕಿರಿಯೂ ಆಗದಂತೆ ಬಹಳ ವೇಗವಾಗಿ ಎಂಐ ಟಿವಿ ಇನ್ಸ್ತಾಲೇಷನ್ ನ್ನು ಮಾಡುತ್ತದೆ.ನಿಮ್ಮ ಮನೆಗೆ ಸ್ಮಾರ್ಟ್ ಟಿವಿ ಡೆಲಿವರಿಯಾದ ನಂತರದ 15 ದಿನದೊಳಗೆ ಒಂದು ಬಾರಿ ಉಚಿತ ಸರ್ವೀಸ್ ನೀಡಲಾಗುತ್ತದೆ. ಇನ್ಸ್ಟಾಲೇಷನ್ ಮತ್ತು ಡೆಮೋ ಬೆಳಿಗ್ಗೆ 9ಎಎಂ ನಿಂದ 6 ಪಿಎಂ ಒಳಗೆ ಸೋಮವಾರದಿಂದ ಶನಿವಾರದ ವರೆಗೆ ನೀಡಲಾಗುತ್ತದೆ. ಸಾಮಾನ್ಯವಾಗಿ ಇದು 60 ನಿಮಿಷದ ಸಮಯ ತೆಗೆದುಕೊಳ್ಳುತ್ತದೆ. ಎಂಐ ಟಿವಿಯನ್ನು ಸಂದರ್ಬದಲ್ಲಿ ಫಿಕ್ಸ್ ಮಾಡಿಕೊಡಲಾಗುತ್ತದೆ.

ಎಂಐ ಟಿವಿ ಇನ್ಸ್ಟಾಲೇಷನ್ ಗೆ ಬುಕ್ ಮಾಡುವುದು ಹೇಗೆ?

ಎಂಐ ಟಿವಿ ಇನ್ಸ್ಟಾಲೇಷನ್ ಗೆ ಬುಕ್ ಮಾಡುವುದು ಹೇಗೆ?

ಒಂದು ವೇಳೆ ನೀವು ಇತ್ತೀಚೆಗಷ್ಟೇ ಎಂಐ ಟಿವಿಯ ಮಾಡೆಲ್ ನ್ನು ಖರೀದಿಸಿದ್ದರೆ ಮತ್ತು ಅದನ್ನು ಇನ್ಸ್ಟಾಲ್ ಮಾಡುವುದಕ್ಕೆ ಕಾಯುತ್ತಿದ್ದರೆ ಎಂಐ.ಕಾಮ್ ನ ಅಧಿಕೃತ ವೆಬ್ ಸೈಟ್ ಮೂಲಕ ಅಪಾಂಯ್ಟ್ ಮೆಂಟ್ ನ್ನು ಬುಕ್ ಮಾಡುವುದಕ್ಕೆ ಅವಕಾಶವಿದೆ. ಈ ಕೆಳಗಿನ ಎಂಐ ಟಿವಿ ಇನ್ಸ್ಟಾಲೇಷನ್ ನ ಹಂತಗಳನ್ನು ಗಮನಿಸಿ ಮತ್ತು ಅತ್ಯುತ್ತಮವಾದ ನೋಟದ ಅನುಭವವನ್ನು ಪಡೆಯಿರಿ.

• ಮೊದಲನೆಯದಾಗಿ ಯಾವುದಾದರೂ ಆಫ್ ಲೈನ್ ಅಥವಾ ಆನ್ ಲೈನ್ ಸ್ಟೋರ್ ಮೂಲಕ ಎಂಐ ಟಿವಿಯನ್ನು ಖರೀದಿಸಿ.

• ಡೆಲಿವರಿಯ ನಂತರ ನೀವು ಇನ್ಸ್ಟಾಲೇಷನ್ ಗಾಗಿ ಈ ಲಿಂಕ್ ಮೂಲಕ ಸಮಯವನ್ನು ನಿಗದಿಗೊಳಿಸಿಕೊಳ್ಳಬೇಕು. (https://mi.hatetowaitapp.com/online/tv)

• ಇನ್ಸ್ಟಾಲೇಷನ್ ಗಾಗಿ ಸರಿಯಾದ ಸಮಯ ಮತ್ತು ದಿನಾಂಕವನ್ನು ಆಯ್ಕೆ ಮಾಡಿ.

• ನೀವು ನಿಗದಿಗೊಳಿಸಿದ ದಿನಕ್ಕೆ ಎಂಐ ಟೀಮ್ ಸೇವಾ ನಿರತರನ್ನು ನಿಮ್ಮ ಮನೆ ಬಾಗಿಲಿಗೆ ಕಳುಹಿಸಿ ಇನ್ಸ್ಟಾಲೇಷನ್ ಸಂಪೂರ್ಣಗೊಳಿಸುತ್ತಾರೆ.

ನೀವು ಗ್ರಾಹಕ ಸೇವಾ ಕೇಂದ್ರವನ್ನು 1800 - 103 - 6286 ಈ ನಂಬರ್ ನಲ್ಲ ಸಂಪರ್ಕಿಸಿ ನಿಮಗಿರುವ ಯಾವುದೇ ಪ್ರಶ್ನೆಗೂ ಉತ್ತರ ಕಂಡುಕೊಳ್ಳಬಹುದು.

ತಿಳಿದಿರಿ:

ತಿಳಿದಿರಿ:

ಎಂಐ ಟಿವಿಯನ್ನು ಖುದ್ದು ನೀವೇ ಇನ್ಸ್ಟಾಲ್ ಮಾಡಲು ಹೋಗಬೇಡಿ. ಹೀಗೆ ಸ್ವತಃ ನೀವೇ ಇನ್ಸ್ಟಾಲ್ ಮಾಡುವುದರಿಂದ ಟಿವಿಗೆ ಹಾನಿಯಾಗುವ ಸಾಧ್ಯತೆ ಇದೆ ಮತ್ತು ಈ ರೀತಿಯ ಹಾನಿಗೆ ಯಾವುದೇ ರೀತಿಯ ವಾರೆಂಟಿ ನೀಡಲಾಗುವುದಿಲ್ಲ.

Best Mobiles in India

Read more about:
English summary
How to Book Appointment for Xiaomi Mi TV Installation: If you have recently bought a Mi TV model and want to get it installed, then you can schedule an appointment via the official Mi.com website. Check out the steps for a Xiaomi Mi TV installation from below so that you can enjoy the viewing experience.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X