ಗೂಗಲ್‌ ಕ್ರೋಮ್ ಬ್ರೌಸರ್‌ನಲ್ಲಿ ಡೌನ್‌ಲೋಡ್ location ಬದಲಾಯಿಸುವುದು ಹೇಗೆ?

|

ಪ್ರಸ್ತುತ ನಿಮಗೆ ಯಾವುದೇ ಮಾಹಿತಿ ಬೇಕಿದ್ದರೂ ಗೂಗಲ್‌ನಲ್ಲಿ ಸರ್ಚ್‌ ಮಾಡಿದರೆ ಸಿಗುತ್ತೆ. ಇನ್ನು ಗೂಗಲ್‌ ಕ್ರೋಮ್‌ನಲ್ಲಿ ಯಾವ ಮಾಹಿತಿಯನ್ನು ಬೇಕಿದ್ದರೂ ಸರ್ಚ್‌ ಮಾಡಬಹುದು, ಅಲ್ಲದೆ Google Chrome ಬ್ರೌಸರ್‌ ಮೂಲಕ ಯಾವ ಮಾಹಿತಿಯನ್ನು ಬೇಕಾದರೂ ಡೌನ್‌ಲೋಡ್ ಮಾಡುವುದಕ್ಕೆ ಅವಕಾಶವಿದೆ. ಆದರೆ ಅದು ಡೌನ್‌ಲೋಡ್ ಆದ ನಂತರ ಆಟೋಮ್ಯಾಟಿಕ್‌ ಆಗಿ ಸೇವ್‌ ಆಗಲಿದೆ. ಆದರೆ ನೀವು ಅದನ್ನು ಬೇರೆ ಸ್ಥಳದಲ್ಲಿ ಅಥವಾ ಬೇರೆ ಡೈರೆಕ್ಟರಿಯಲ್ಲಿ ಸೇವ್‌ ಮಾಡಲು ಬಯಸಿದರೆ ಏನು ಮಾಡಬೇಕು ಅನ್ನೊದು ಕೆಲವರಿಗೆ ತಿಳಿದೆ ಇಲ್ಲ? ಇದರ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಗೂಗಲ್‌

ಹೌದು, ಗೂಗಲ್‌ ಕ್ರೋಮ್‌ ಮೂಲಕ ನೀವು ನಿಮ್ಮ ಕಂಪ್ಯೂಟರ್‌ನಲ್ಲಿ ಇಂಟರ್‌ನೆಟ್‌ ಮೂಲಕ ಯಾವುದೇ ,ಆಹಿತಿಯ್ನ ಸರ್ಚ್‌ ಮಾಡಬಹುದು. ಜೊತೆಗೆ ಅಗತ್ಯವೆನಿಸಿದರೆ ಅದನ್ನು ಡೌನ್‌ಲೋಡ್‌ ಸಹ ಮಾಡಿಕೊಳ್ಳಬಹುದಾಗಿದೆ. ಇನ್ನು ಗೂಗಲ್‌ ಕ್ರೋಮ್‌ನಲ್ಲಿ ಸರ್ಚ್‌ ಮಾಡಿದ ಮಾಹಿತಿಯನ್ನು ಡೌನ್ಲೋಡ್‌ ಮಾಡಿದಾಗ ಫೈಲ್‌ ರೂಪದಲ್ಲಿ ಸೇವ್‌ ಆಗಲಿದೆ. ಹಾಗಾದ್ರೆ ನಿಮ್ಮ ಮ್ಯಾಕ್ ಮತ್ತು ವಿಂಡೋಸ್‌ನಲ್ಲಿನ Google Chrome ನಲ್ಲಿ ಡೌನ್‌ಲೋಡ್ ಸ್ಥಳವನ್ನು ಬದಲಾಯಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್‌ಕ್ರೋಮ್

ಇನ್ನು ಗೂಗಲ್‌ಕ್ರೋಮ್‌ನಲ್ಲಿ ಡೌನ್‌ಲೋಡ್‌ ಮಾಡಿದ ಫಯಲ್ ಸೇವ್‌ ಆಗುವ ಸ್ಥಳವನ್ನು Google Chrome ಡೀಫಾಲ್ಟ್ ಡೈರೆಕ್ಟರಿಯನ್ನು ನಿರ್ಧರಿಸುತ್ತದೆ. ಆದರೆ ಕೆಲವೊಮ್ಮೆ ಡೌನ್‌ಲೋಡ್‌ ಮಾಡಿದ ಫೈಲ್‌ ಎಲ್ಲಿದೆ ಅನ್ನೊದು ತಿಳಿಯುವುದೇ ಇಲ್ಲ. ಈ ಕಾರಣಕ್ಕಾಗಿ ಕೆಲವರು ತಮಗೆ ಅವಶ್ಯ ಎನಿಸುವ ಫೊಲ್ಡರ್‌ ಅಥವಾ ಇತರೆ ಡ್ರೈವ್‌ನಲ್ಲಿ ಡೌನ್‌ಲೋಡ್‌ ಫೈಲ್‌ ಸೇವ್‌ ಆಗುವಂತೆ ಸೆಟ್‌ ಮಾಡಿರುತ್ತಾರೆ. ಇದನ್ನು Google Chrome ಸೆಟ್ಟಿಂಗ್ಸ್‌ ಮೂಲಕ‌ ಸುಲಭವಾಗಿ ಬದಲಾಯಿಸಬಹುದಾಗಿದೆ. ಹಾಗಾದ್ರೆ ನಿಮ್ಮ ಮ್ಯಾಕ್ ಮತ್ತು ವಿಂಡೋಸ್‌ನಲ್ಲಿನ Google Chrome ನಲ್ಲಿ ಡೌನ್‌ಲೋಡ್ ಸ್ಥಳವನ್ನು ಬದಲಾಯಿಸುವುದು ಹೇಗೆ ಅನ್ನೊದನ್ನ ಹಂತಹಂತವಾಗಿ ತಿಳಿಯೋಣ ಬನ್ನಿ.

Google Chrome ನಲ್ಲಿ ಡೌನ್‌ಲೋಡ್ location ಬದಲಾಯಿಸುವುದು ಹೇಗೆ?

Google Chrome ನಲ್ಲಿ ಡೌನ್‌ಲೋಡ್ location ಬದಲಾಯಿಸುವುದು ಹೇಗೆ?

ಹಂತ:1 ನೀವು ಯಾವ ಕಂಪ್ಯೂಟರ್ ಅನ್ನು ಬಳಸುತ್ತೀರೋ ಅದರ ವಿಂಡೋಸ್‌ನಲ್ಲಿ Google Chrome ಅನ್ನು ಪ್ರಾರಂಭಿಸಿ.

ಹಂತ:2 ಬ್ರೌಸರ್‌ನ ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ ಮತ್ತು ಸೆಟ್ಟಿಂಗ್ಸ್‌ ಕ್ಲಿಕ್ ಮಾಡಿ.

ಹಂತ:3 ಎಡಭಾಗದ ಪ್ಯಾನಲ್‌ನಲ್ಲಿ Advanced ಕ್ಲಿಕ್ ಮಾಡಿ ಮತ್ತು Downloads ಆಯ್ಕೆ ಮಾಡಿ.

Advanced

ಹಂತ:4 Advanced ಸೆಟ್ಟಿಂಗ್‌ಗಳಿಗೆ ಹೋಗಲು ನೀವು ಸೆಟ್ಟಿಂಗ್‌ಗಳ ಪುಟವನ್ನು ಸ್ಕ್ರಾಲ್ ಮಾಡಬಹುದು.

ಹಂತ:5 ನಂತರ ಇಲ್ಲಿ, ಡೌನ್‌ಲೋಡ್‌ಗಳ ಸ್ಥಳವನ್ನು ಬದಲಾಯಿಸುವ ಆಯ್ಕೆಯನ್ನು ಕಾಣಬಹುದಾಗಿದೆ. ಬಳಕೆದಾರರ ಡೈರೆಕ್ಟರಿಯಲ್ಲಿನ ಡೀಫಾಲ್ಟ್ ಡೌನ್‌ಲೋಡ್‌ಗಳಿಂದ ಸ್ಥಳವನ್ನು ನೀವು ಬಯಸಿದಂತೆ ಬದಲಾಯಿಸಲು Change button ಅನ್ನು ಕ್ಲಿಕ್‌ ಮಾಡಿ.

ಈಗ ನೀವು ಬಯಸಿದಂತೆ ಗೂಗಲ್‌ ಕ್ರೋಮ್‌ನಿಂದ ಡೌನ್‌ಲೋಡ್‌ ಮಾಡಿದ ಫೈಲ್‌ಗಳನ್ನ ಸ್ಥಳವನ್ನು ಬದಲಾಯಿಸಬಹುದಾಗಿದೆ.

Most Read Articles
Best Mobiles in India

English summary
There are times when you download something from the Google Chrome browser and it saves the download automatically, but what if you want to save it at a different location or in a different directory.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X