ಇನ್‌ಸ್ಟಾಗ್ರಾಮ್‌ನಲ್ಲಿ ಚಾಟ್ ಥೀಮ್ ಬದಲಾಯಿಸಲು ಹೀಗೆ ಮಾಡಿ?

|

ಮೆಟಾ ಒಡೆತನದ ಇನ್‌ಸ್ಟಾಗ್ರಾಮ್‌ ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಎನಿಸಿಕೊಂಡಿದೆ. ಇನ್‌ಸ್ಟಾಗ್ರಾಮ್‌ ಬಳಕೆದಾರರ ನೆಚ್ಚಿನ ಆನ್‌ಲೈನ್ ಫೋಟೋ ಮತ್ತು ವೀಡಿಯೊ ಶೇರಿಂಗ್‌ ಅಪ್ಲಿಕೇಶನ್‌ ಆಗಿ ಗುರುತಿಸಿಕೊಂಡಿದೆ. ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಬಳಕೆದಾರರು ಪೋಸ್ಟ್‌ಗಳನ್ನು ಮಾಡುವಾಗ ಅನೇಕ ಕೆಲಸಗಳನ್ನು ಮಾಡಬಹುದಾಗಿದೆ. ಇದರಲ್ಲಿ ಬಳಕೆದಾರರು ತಮ್ಮ ಆಂಡ್ರಾಯ್ಡ್‌ ಫೋನ್ ಅಥವಾ ಐಫೋನ್‌ನಲ್ಲಿ ಚಾಟ್ ಥೀಮ್ ಮತ್ತು ಉಚ್ಚಾರಣಾ ಕಲರ್‌ ಅನ್ನು ಬದಲಾಯಿಸುವುದು ಕೂಡ ಸೇರಿದೆ.

ಇನ್‌ಸ್ಟಾಗ್ರಾಮ್‌

ಹೌದು, ಇನ್‌ಸ್ಟಾಗ್ರಾಮ್‌ನಲ್ಲಿ ಬಳಕೆದಾರರು ತಮ್ಮ ಅನುಭವಕ್ಕೆ ತಕ್ಕಂತೆ ಚಾಟ್‌ ಥೀಮ್‌ ಅನ್ನು ಬದಲಾಯಿಸಬಹುದು. ಆದರೆ ಚಾಟ್ ಥೀಮ್ ಮತ್ತು ಉಚ್ಚಾರಣಾ ಬಣ್ಣವನ್ನು ಬದಲಾಯಿಸಲು ಬಯಸಿದರೆ ಇನ್‌ಸ್ಟಾಗ್ರಾಮ್‌ನ ಅಪ್ಡೇಟ್‌ ಆವೃತ್ತಿಯನ್ನು ಬಳಸಬೇಕು. ನೀವು ಚಾಟ್‌ ಮಾಡುವಾಗ ನಿಮಗೆ ಬೇಕಿನಿಸಿದ ಕಲರ್‌ ಆಯ್ಕೆಯ ಥೀಮ್‌ ಅನ್ನು ಸೆಟ್‌ ಮಾಡಬಹುದಾಗಿದೆ. ಇನ್ನು ಇನ್‌ಸ್ಟಾಗ್ರಾಮ್‌ ಪ್ರಸ್ತುತ 15 ಥೀಮ್‌ಗಳು ಮತ್ತು 21 ಮೆಸೇಜ್‌ ಬ್ಯಾಕ್‌ಗ್ರೌಂಡ್‌ ಕಲರ್‌ ಆಯ್ಕೆಗಳನ್ನು ನೀಡುತ್ತಿದೆ. ಹಾಗಾದ್ರೆ ಇನ್‌ಸ್ಟಾಗ್ರಾಮ್‌ನಲ್ಲಿ ಚಾಟ್‌ ಥೀಮ್‌ ಬದಲಾಯಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಇನ್‌ಸ್ಟಾಗ್ರಾಮ್‌ನಲ್ಲಿ ಚಾಟ್ ಥೀಮ್ ಅನ್ನು ಬದಲಾಯಿಸುವುದು ಹೇಗೆ?

ಇನ್‌ಸ್ಟಾಗ್ರಾಮ್‌ನಲ್ಲಿ ಚಾಟ್ ಥೀಮ್ ಅನ್ನು ಬದಲಾಯಿಸುವುದು ಹೇಗೆ?

ಹಂತ:1 ಮೊದಲಿಗೆ ಇನ್‌ಸ್ಟಾಗ್ರಾಮ್‌ನ ಹೋಮ್‌ಪೇಜ್‌ ತೆರೆಯಿರಿ.
ಹಂತ:2 ಇದರಲ್ಲಿ, ಸ್ಕ್ರೀನ್‌ ಮೇಲಿನ ಬಲಭಾಗದಲ್ಲಿರುವ ಇನ್‌ಫಾರ್‌ಮೇಶನ್‌ ಐಕಾನ್ ಮೇಲೆ ಕ್ಲಿಕ್ ಮಾಡಿ.
ಹಂತ:3 ಪಾಪ್-ಡೌನ್ ಮೆನುವಿನಲ್ಲಿ, ಸೆಟ್ಟಿಂಗ್ಸ್‌ ಆಯ್ಕೆಮಾಡಿ.
ಹಂತ:4 ಇದೀಗ ಇನ್‌ಸ್ಟಾಗ್ರಾಮ್‌ ಚಾಟ್' ಥೀಮ್‌ಗಳ ಐಕಾನ್ ಕ್ಲಿಕ್ ಮಾಡುವ ಮೂಲಕ ನಿಮ್ಮ ಆಯ್ಕೆಯ ಥೀಮ್ ಅನ್ನು ಆಯ್ಕೆ ಮಾಡಿ.
ಹಂತ:5 ನೀವು ಚಾಟ್‌ನ ಥೀಮ್ ಅನ್ನು ಬದಲಾಯಿಸಿದಾಗ, ಚಾಟ್‌ನಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಅದು ಬದಲಾಗುತ್ತದೆ.
ಹಂತ:6 ನೀವು ಯಾರೊಂದಿಗಾದರೂ ಚಾಟ್ ಮಾಡುತ್ತಿದ್ದರೆ, ಚಾಟ್ ಥೀಮ್ ಅನ್ನು ಬದಲಾಯಿಸಲು ಅವರಿಗೆ ನೋಟೀಪಿಕೇಶನ್‌ ಸಹ ಕಳುಹಿಸಲಾಗುತ್ತದೆ.
ಹಂತ:7 ಇದಲ್ಲದೆ ಚಾಟ್ ಥೀಮ್‌ನ ಕಲರ್‌ಗಾಗಿ, ನೀವು ಸ್ಕ್ರೀನ್‌ ಮೇಲಿನ ಬಲಭಾಗದಲ್ಲಿರುವ ಮೆನುಗೆ ಹೋಗಬೇಕಾಗುತ್ತದೆ.
ಹಂತ:8 ಇದರಲ್ಲಿ ಚಾಟ್ ಸೆಟ್ಟಿಂಗ್‌ಗಳ ಮೇಲೆ ಕ್ಲಿಕ್ ಮಾಡಿದರೆ, ಚಾಟ್ ಥೀಮ್‌ಗಳ ಐಕಾನ್ ಕಾಣಿಸಿಕೊಳ್ಳುತ್ತದೆ.
ಹಂತ:9 ಈಗ ಥೀಮ್‌ಗಳ ಮೇಲೆ ಕ್ಲಿಕ್ ಮಾಡಿ ಮತ್ತು ಕಲರ್‌ ಥೀಮ್ ಆಯ್ಕೆಮಾಡಿ.

ಇನ್‌ಸ್ಟಾಗ್ರಾಮ್‌

ಇದಲ್ಲದೆ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ನಲ್ಲಿ ಟೈಮ್‌ ಲಿಮಿಟ್‌ ಫೀಚರ್ಸ್‌ ಅನ್ನು ಕೂಡ ಹೊಂದಿದೆ. ಇದು ಬಳಕೆದಾರರು ತಮ್ಮ ಅಪ್ಲಿಕೇಶನ್‌ನ ಬಳಕೆಗೆ ದೈನಂದಿನ ಸಮಯದ ಮಿತಿಯನ್ನು ಹೊಂದಿಸಲು ಅನುವು ಮಾಡಿಕೊಡುತ್ತದೆ. ಇದರಲ್ಲಿ 15 ನಿಮಿಷಗಳು, 30 ನಿಮಿಷಗಳು, 45 ನಿಮಿಷಗಳು, ಒಂದು ಗಂಟೆ, ಎರಡು ಗಂಟೆಗಳು ಮತ್ತು ಆಫ್ ಆಯ್ಕೆ ಸೇರಿದಂತೆ ಒಟ್ಟು ಆರು ಆಯ್ಕೆಗಳನ್ನು ನೀಡಿದೆ. ಹಾಗಾದ್ರೆ ನೀವು ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ಡೈಲಿ ಟೈಂ ಲಿಮಿಟ್‌ ಸೆನ್‌ ಮಾಡುವುದು ಹೇಗೆ ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಇನ್‌ಸ್ಟಾಗ್ರಾಮ್‌ನಲ್ಲಿ ಡೈಲಿ ಟೈಂ ಲಿಮಿಟ್‌ ಸೆಟ್‌ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ನಲ್ಲಿ ಡೈಲಿ ಟೈಂ ಲಿಮಿಟ್‌ ಸೆಟ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ.
ಹಂತ:2 ನಂತರ, ಹ್ಯಾಂಬರ್ಗರ್ ಮೆನು ಟ್ಯಾಪ್ ಮಾಡಿ.
ಹಂತ:3 ಇದರಲ್ಲಿ ನಿಮ್ಮ ಆಕ್ಟಿವಿಟಿಯನ್ನು ಟ್ಯಾಪ್ ಮಾಡಿ ಮತ್ತು ನಂತರ ಟೈಮ್ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:4 ಇದೀಗ ಕೆಳಗಿನ ಸ್ಕ್ರೀನ್‌ನಲ್ಲಿ, ಡೈಲಿ ಟೈಂ ಲಿಮಿಟ್‌ ಅನ್ನು ಸೆಟ್‌ ಮಾಡಿ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:5 ಈಗ ನೀವು ಅಪ್ಲಿಕೇಶನ್‌ನಿಂದ ಬೇರ್ಪಡಿಸಲು ಬಯಸುವ ಸಮಯವನ್ನು ಆಯ್ಕೆ ಮಾಡಿ.
ಹಂತ:6 ಇದೀಗ ಡನ್‌ ಆಯ್ಕೆಯನ್ನು ಟ್ಯಾಪ್ ಮಾಡಿ.

Best Mobiles in India

English summary
Meta-owned Instagram is one of the popular online photo-sharing apps used by millions of users worldwide.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X