ಗೂಗಲ್ ಪೇ ಆಪ್ ಬಳಸಿ ಯುಪಿಐ ಪಿನ್ ಚೇಂಜ್ ಮಾಡುವುದು ಹೇಗೆ ಗೊತ್ತೆ?

|

ಪ್ರಸ್ತುತ ಡಿಜಿಟಲ್ ಪಾವತಿ ಹೆಚ್ಚು ಬಳಕೆಯಲ್ಲಿದೆ. ಡಿಜಿಟಲ್ ಪಾವತಿಗಳನ್ನು ಮಾಡುವಾಗ ಯುಪಿಐ (UPI) ಪಿನ್ ಅನ್ನು ಬಳಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಬಳಕೆದಾರರು ಯುಪಿಐ ಪಿನ್ ಸಂಖ್ಯೆಯನ್ನು ಮರೆತು ಬಿಡುವ ಸಾಧ್ಯತೆ ಇರುತ್ತದೆ ಅಥವಾ ತಪ್ಪಾದ ಪಿನ್ ಸಂಖ್ಯೆಯನ್ನು ನಮೂದಿಸುತ್ತಾರೆ. ಹೀಗಾಗಿ ಡಿಜಿಟಲ್ ಪಾವತಿ ಮಾಡುವಲ್ಲಿ ಸಮಸ್ಯೆ ಉಂಟಾಗಬಹುದು. ಮೂರು ಬಾರಿ ತಪ್ಪಾದ ಯುಪಿಐ ಪಿನ್ ನಮೂದಿಸಿದಾಗ ಬಳಕೆದಾರರ ಖಾತೆಯನ್ನು 24 ಗಂಟೆಗಳ ಕಾಲ ನಿರ್ಬಂಧಿಸಲಾಗುತ್ತದೆ.

ವೈಯಕ್ತಿಕ

ಯುಪಿಐ ಪಿನ್ ಮುಂದಿನ 24 ಗಂಟೆಗಳ ಕಾಲ ನಿಮ್ಮ ಡಿಜಿಟಲ್ ವ್ಯಾಲೆಟ್ ಅನ್ನು ನೀವು ಬಳಸಲಾಗುವುದಿಲ್ಲ. ಹೆಚ್ಚುವರಿಯಾಗಿ, UPI ಎಂದರೆ ಏಕೀಕೃತ ಪಾವತಿ ಇಂಟರ್ಫೇಸ್ ಮತ್ತು ಪಿನ್ ಎಂದರೆ ವೈಯಕ್ತಿಕ ಗುರುತಿನ ಸಂಖ್ಯೆ. ಬಳಕೆದಾರರು ಗೂಗಲ್ ಪೇ ಅಪ್ಲಿಕೇಶನ್‌ ಬಳಸಿ ಸಹ ಯುಪಿಐ ಪಿನ್ ಬದಲಾವಣೆ ಮಾಡಬಹುದಾಗಿದೆ. ಹಾಗಾದರೇ ಗೂಗಲ್ ಪೇ ಮೂಲಕ ಯುಪಿಐ ಪಿನ್ ಚೇಂಜ್ ಮಾಡುವುದು ಹೇಗೆ ಎನ್ನುವುದನ್ನು ಮುಂದೆ ತಿಳಿಯೋಣ ಬನ್ನಿರಿ.

ಯುಪಿಐ UPI ಪಿನ್ ಅನ್ನು ನವೀಕರಿಸುವುದು ಹೇಗೆ ಗೊತ್ತಾ?

ಯುಪಿಐ UPI ಪಿನ್ ಅನ್ನು ನವೀಕರಿಸುವುದು ಹೇಗೆ ಗೊತ್ತಾ?

* ಗೂಗಲ್ ಪೇ ಆಪ್ ತೆರೆಯಿರಿ
* ಮೇಲಿನ ಬಲಭಾಗದಲ್ಲಿರುವ ನಿಮ್ಮ ಫೋಟೋವನ್ನು ಟ್ಯಾಪ್ ಮಾಡಿ
* ಬಳಿಕ ನಿಮ್ಮ ಬ್ಯಾಂಕ್ ಖಾತೆಯನ್ನು ಟ್ಯಾಪ್ ಮಾಡಿ
* ನವೀಕರಿಸಲು ಬ್ಯಾಂಕ್ ಖಾತೆಯನ್ನು ಆಯ್ಕೆಮಾಡಿ
* ಫಾರ್ಗೆಟ್ UPI ಪಿನ್ ಆಯ್ಕೆ ಅನ್ನು ಟ್ಯಾಪ್ ಮಾಡಿ
* ನಿಮ್ಮ ಡೆಬಿಟ್ ಕಾರ್ಡ್ ಸಂಖ್ಯೆಯ ಕೊನೆಯ 6 ಅಂಕೆಗಳನ್ನು ಮತ್ತು ಕೊನೆಯ ದಿನಾಂಕವನ್ನು ನಮೂದಿಸಿ
* ಹೊಸ ಯುಪಿಐ (UPI) ಪಿನ್ ರಚಿಸಿ
* ಈಗ ಎಸ್‌ಎಮ್‌ಎಸ್‌ ಮೂಲಕ ಸ್ವೀಕರಿಸಿದ OTP ಅನ್ನು ನಮೂದಿಸಿ.

ಈ ಮುಂದಿನ ಹಂತಗಳನ್ನು ಅನುಸರಿಸಿ:

ಈ ಮುಂದಿನ ಹಂತಗಳನ್ನು ಅನುಸರಿಸಿ:

ಹಂತ 1: ಮೊದಲನೆಯದಾಗಿ, ನೀವು ಫೋನ್‌ನಲ್ಲಿ ಗೂಗಲ್ ಪೇ ಆಪ್ ಅನ್ನು ತೆರೆಯಬೇಕು.

ಹಂತ 2: ಮೇಲಿನ ಬಲಭಾಗದಲ್ಲಿರುವ ನಿಮ್ಮ ಫೋಟೋವನ್ನು ನೀವು ಟ್ಯಾಪ್ ಮಾಡಬೇಕಾಗುತ್ತದೆ.

ಹಂತ 3: ಈಗ ಬ್ಯಾಂಕ್ ಖಾತೆಯನ್ನು ಆಯ್ಕೆಮಾಡಿ.

ಹಂತ 4: ನಂತರ ನೀವು ಡಿಲೀಟ್ ಮಾಡ ಬಯಸುವ ಖಾತೆಯ ಮೇಲೆ ಟ್ಯಾಪ್ ಮಾಡಿ.

ಹಂತ 5: ಈಗ ಬಲಭಾಗದಲ್ಲಿರುವ ನವಿಲು ಅಥವಾ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ.

ಹಂತ 6: ಈಗ ಖಾತೆಯನ್ನು ತೆಗೆದುಹಾಕಿ (Remove) ಆಯ್ಕೆ ಮಾಡಿ.

ಅದೇ ರೀತಿ ಫೋನ್‌ಪೇಯಲ್ಲಿ UPI ಪಿನ್ ಬದಲಾಯಿಸಲು ಹೀಗೆ ಮಾಡಿ:

ಅದೇ ರೀತಿ ಫೋನ್‌ಪೇಯಲ್ಲಿ UPI ಪಿನ್ ಬದಲಾಯಿಸಲು ಹೀಗೆ ಮಾಡಿ:

ಹಂತ 1: ಮೊದಲು, ನೀವು ಪೋನ್‌ಪೇ ಡಿಸ್‌ಪ್ಲೇ ಮೇಲೆ ಬಲ ಮೂಲೆಯಲ್ಲಿ ಇರುವ ಮೆನುವನ್ನು ತೆರೆಯಬೇಕು.
ಹಂತ 2: ನೀವು ಬ್ಯಾಂಕ್‌ ಅಕೌಂಟ್‌ ವಿಭಾಗದ ಮೇಲೆ ಕ್ಲಿಕ್ ಮಾಡಬೇಕು, ನಂತರ ನೀವು ವ್ಯಾಲೆಟ್‌ ಜೊತೆಗೆ ಕನೆಕ್ಟ್‌ ಆಗಿರುವ ಬ್ಯಾಂಕ್‌ ಖಾತೆಗಳನ್ನು ಕಾಣಬಹುದು.
ಹಂತ 3: ಅದರ ನಂತರ, ನೀವು ಪಿನ್ ಬದಲಾಯಿಸಲು ಬಯಸುವ ಬ್ಯಾಂಕ್ ಖಾತೆಯನ್ನು ನೀವು ಆರಿಸಬೇಕಾಗುತ್ತದೆ.
ಹಂತ 4: ನಂತರ, ಪಾಸ್‌ವರ್ಡ್ ಬದಲಾಯಿಸಲು ಅಪ್ಲಿಕೇಶನ್ ನಿಮಗೆ ಅನುಮತಿಸುತ್ತದೆ, ಅಲ್ಲದೆ ಅಲ್ಲಿ ರಿಸೆಟ್‌ ಬಟನ್‌ ಕಂಡುಬರಲಿದೆ.
ಹಂತ 5: ನಂತರ, ನೀವು ರಿಸೆಟ್‌ ಬಟನ್‌ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ಗಳ ಕೊನೆಯ ಅಂಕಿಗಳನ್ನು ನಮೂದಿಸಬೇಕು. ಜೊತೆಎ ವ್ಯಾಲಿಡಿಟಿ ಡೇಟ್ ಅನ್ನು ಸಹ ನಮೂದಿಸಬೇಕು.
ಹಂತ 6: ಇದೀಗ ನಿಮ್ಮ ಬ್ಯಾಂಕಿನಿಂದ ನಿಮ್ಮ ಫೋನ್‌ ನಂಬರ್‌ಗೆ OTP ನಂಬರ್‌ ಬರಲಿದೆ ನಂತರ ನೀವು ಹೊಸ ಪಿನ್ ಜೊತೆಗೆ ಒಟಿಪಿಯನ್ನು ನಮೂದಿಸಬೇಕು. ಹೀಗೆ ಹಂತಹಂತವಾಗಿ ಮಾಹಿತಿಯನ್ನು ಅನುಸರಿಸುವ ಮೂಲಕ ನಿಮ್ಮ ಫೋನ್‌ಪೇ ಯುಪಿಐ ಪಿನ್‌ ಅನ್ನು ನೀವು ಯಶಸ್ವಿಯಾಗಿ ಬದಲಾಯಿಸಬಹುದಾಗಿದೆ.

Best Mobiles in India

English summary
How To Change UPI PIN Using Google Pay: Follow These Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X