ವಾಟ್ಸಪ್‌ನಲ್ಲಿ ಡಿಲೀಟ್ ಮಾಡಿದ ಮೆಸೆಜ್ ಮತ್ತೆ ಓದಬಹುದು!..ಹೇಗೆ ಗೊತ್ತಾ?

|

ವಿಶ್ವದಲ್ಲಿ ಅತೀ ಹೆಚ್ಚು ಸಕ್ರಿಯ ಬಳಕೆದಾರರನ್ನು ಒಳಗೊಂಡಿರುವ ಇನ್‌ಸ್ಟಂಟ್ ಮೆಸೆಜ್ ಆಪ್‌ ವಾಟ್ಸಾಪ್ ಈಗಾಗಲೇ ಬಳಕೆದಾರರಿಗೆ ಉಪಯುಕ್ತ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಅಪ್‌ಡೇಟ್ ಆವೃತ್ತಿಯಲ್ಲಿ ನೂತನ ಫೀಚರ್‌ ಅಳವಡಿಸಿಕೊಳ್ಳುತ್ತಾ ಸಾಗಿರುವ ವಾಟ್ಸಾಪ್ ಬಳಕೆದಾರರ ಖಾಸಗಿ ಮಾಹಿತಿಗೂ ಸುರಕ್ಷತೆ ಒದಗಿಸುವ ಆಯ್ಕೆಗಳನ್ನು ಹೊಂದಿದೆ. ಅಪ್ಪಿತಪ್ಪಿ ಕಳುಹಿಸಿದ ಮೆಸೆಜ್‌ ಡಿಲೀಟ್ ಮಾಡುವ ಆಯ್ಕೆ ಸಹ ನೀಡಿದೆ. ಆದರೆ ಡಿಲೀಟ್ ಆದ ಮೆಸೆಜ್ ಮತ್ತೆ ನೋಡಬಹುದಾಗಿದೆ.

ವಾಟ್ಸಾಪ್‌

ಹೌದು, ಫೇಸ್‌ಬುಕ್ ಮಾಲೀಕತ್ವದ ವಾಟ್ಸಾಪ್‌ ಆಪ್‌ನಲ್ಲಿ ಅಚಾನಕ್ ಆಗಿ ಸೆಂಡ್ ಮಾಡಿದ ಮೆಸೆಜ್ ನಿರ್ದಿಷ್ಟ ಅವಧಿಯಲ್ಲಿ ಡಿಲೀಟ್ ಮಾಡುವ Delete for Everyone ಆಯ್ಕೆ ಬಳಕೆದಾರರಿಗೆ ಅನುಕೂಲಕರವಾಗಿದೆ. ಆದ್ರೆ ಬಹುತೇಕ ಸಂದರ್ಭಗಳಲ್ಲಿ ಮೆಸೆಜ್ ಸ್ವೀಕರಿದ ವ್ಯಕ್ತಿ ನೋಟಿಫೀಕೇಶನ್‌ನಲ್ಲಿಯೇ ಮೆಸೆಜ್ ನೋಡಿರುವ ಸಾಧ್ಯತೆಗಳಿರುತ್ತವೆ. ಅದಾಗ್ಯೂ ಒಮ್ಮೊಮ್ಮೆ ಮೆಸೆಜ್ ನೋಡುವ ಮೊದಲೇ ಸೆಂಡ್ ಮಾಡಿರುವ ವ್ಯಕ್ತಿ ಅವನ್ನು ಡಿಲೀಟ್ ಮಾಡಿದರೇ, ಮೆಸೆಜ್ ಸ್ವೀಕರಿಸಿದ ವ್ಯಕ್ತಿಗೆ ಮೆಸೆಜ್ ಡಿಲೀಟ್ ಆಗಿರುವ ಬಗ್ಗೆ ಮಾಹಿತಿ ಉಳಿಯುತ್ತದೆ ಅಷ್ಟೇ.

ವಾಟ್ಸಾಪ್‌ಗೆ

ಹೀಗೆ ವಾಟ್ಸಾಪ್‌ಗೆ ಬಂದ ಮೆಸೆಜ್‌ಗಳನ್ನು ಓದುವ ಮೊದಲೇ ಮೆಸೆಜ್ ಸೆಂಡ್ ಮಾಡಿರುವವರು Delete for Everyone ಆಯ್ಕೆಯಿಂದ ಡಿಲೀಟ್ ಮಾಡಿದರೇ, ಮತ್ತೆ ಮೆಸೆಜ್ ನೋಡಬಹುದೇ ಎನ್ನುವ ಪ್ರಶ್ನೇ ಅನೇಕರಲ್ಲಿ ಇರುತ್ತದೆ. ಆದರೆ ಡಿಲೀಟ್ ಮಾಡಿರುವ ಮೆಸೆಜ್ ಮತ್ತೆ ಓದಬಹುದಾಗಿದೆ. ಡಿಲೀಟ್ ಆದ ಮೆಸೆಜ್ ಮತ್ತೆ ಪಡೆಯಲು ವಾಟ್ಸಾಪ್ ಅಧಿಕೃತವಾಗಿ ಯಾವುದೇ ಆಯ್ಕೆ ನೀಡಿಲ್ಲ. ಆದ್ರೆ ಥರ್ಡ್‌ಪಾರ್ಟಿ ಅಪ್ಲಿಕೇಶನ್‌ನಿಂದ ಡಿಲೀಟ್ ಮಾಡಿರುವ ಮೆಸೆಜ್ ಮತ್ತೆ ನೋಡಬಹುದು. ಆ ಬಗ್ಗೆ ತಿಳಿಯಲು ಮುಂದೆ ಓದಿರಿ.

ಥರ್ಡ್‌ಪಾರ್ಟಿ ಆಪ್

ಥರ್ಡ್‌ಪಾರ್ಟಿ ಆಪ್

ವಾಟ್ಸಾಪ್‌ನಲ್ಲಿ ಡಿಲೀಟ್ ಆದ ಮೆಸೆಜ್‌ಗಳನ್ನು ಮತ್ತೆ ನೋಡಬಹುದಾಗಿದೆ. ಅದಕ್ಕಾಗಿ WhatsRemoved + app ಎಂಬ ಥರ್ಡ್‌ಪಾರ್ಟಿ ಅಪ್ಲಿಕೇಶನ್ ಇದೆ. ಈ ಆಪ್‌ ಮೂಲಕ ಡಿಲೀಟ್ ಮಾಡಲಾದ ಎಲ್ಲ ಮೆಸೆಜ್‌ಗಳನ್ನು ಮತ್ತೆ ಓದಬಹುದಾಗಿದೆ. WhatsRemoved + app ಅನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಕಾಣಬಹುದಾಗಿದ್ದು, ಈ ಅಪ್ಲಿಕೇಶನ್ ಅನ್ನು ಐದು ದಶಲಕ್ಷಕ್ಕೂ ಹೆಚ್ಚು ಜನರು ಡೌನ್‌ಲೋಡ್ ಮಾಡಿದ್ದಾರೆ.

ಡಿಲೀಟ್ ಆದ ಮೆಸೆಜ್ ಮತ್ತೆ ಓದಲು WhatsRemoved + app ಆಪ್‌ನಲ್ಲಿ ಈ ಕ್ರಮ ಅನುಸರಿಸಿ:

ಡಿಲೀಟ್ ಆದ ಮೆಸೆಜ್ ಮತ್ತೆ ಓದಲು WhatsRemoved + app ಆಪ್‌ನಲ್ಲಿ ಈ ಕ್ರಮ ಅನುಸರಿಸಿ:

ಹಂತ 1: WhatsRemoved + ಅಪ್ಲಿಕೇಶನ್ ಇನ್‌ಸ್ಟಾಲ್‌ ಮಾಡಿರಿ ಮತ್ತು ತೆರೆಯಿರಿ.

ಹಂತ 2: permissions/ಅನುಮತಿಗಳನ್ನು ನೀಡುವ ಮೂಲಕ ಸೆಟ್‌ಅಪ್‌ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ಹಂತ 3: ನಂತರ ನೋಟಿಫಿಕೇಶನ್‌ಗಳನ್ನು ಪಡೆಯಲು ಮತ್ತು ಬದಲಾವಣೆಗಳನ್ನು ಗುರುತಿಸಲು ಆಯ್ಕೆಗಳ ಬಗ್ಗೆ ಆಯ್ಕೆ ಕೇಳಲಾಗುತ್ತದೆ. ಆಗ ವಾಟ್ಸಾಪ್ ಆಯ್ಕೆಮಾಡಿ ಮುಂದಿನ ಹಂತಕ್ಕೆ ಸಾಗಬೇಕು.

ಹಂತ 4: ಡಿಲೀಟ್ ಮಾಡಲಾದ ಫೈಲ್‌ಗಳನ್ನು ಉಳಿಸಲು ನೀವು ಬಯಸುತ್ತೀರಾ ಎಂದು ನಿಮ್ಮನ್ನು ಕೇಳಲಾಗುತ್ತದೆ. ನಂತರ WhatsRemoved + ಅಪ್ಲಿಕೇಶನ್‌ನಲ್ಲಿ ಡಿಲೀಟ್ ಮಾಡಿದ ಎಲ್ಲಾ ಮೆಸೆಜ್‌ಗಳನ್ನು ಕಾಣಬಹುದಾಗಿದೆ.

Best Mobiles in India

English summary
There is a third-party app which lets you read all the deleted messages.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X