ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ಸ್ಥಿತಿ ತಿಳಿಯುವುದು ಹೇಗೆ ಗೊತ್ತಾ?

|

ಸ್ಮಾರ್ಟ್‌ಫೋನ್‌ ಪವರ್‌ಪುಲ್‌ ಆಗಿ ಕಾರ್ಯನಿರ್ವಹಿಸಲು ಬ್ಯಾಟರಿ ಬೆಂಬಲ ಅತೀ ಅಗತ್ಯ ಇರುತ್ತದೆ. ಇತ್ತೀಚಿಗಿನ ಬಹುತೇಕ ಎಲ್ಲ ಸ್ಮಾರ್ಟ್‌ಫೋನ್‌ಗಳು ಅಧಿಕ ಬ್ಯಾಟರಿ ಸಾಮರ್ಥ್ಯವನ್ನು ಒಳಗೊಂಡಿವೆ. ಅದಾಗ್ಯೂ ನಿರೀಕ್ಷಿಸಿದಷ್ಟು ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ಸಪೋರ್ಟ್‌ ದೊರೆಯುವ ಸಾಧ್ಯತೆ ಕಡಿಮೆ. ಹೀಗಾಗಿ ಬಳಕೆದಾರರು ತಾವು ಬಳಸುವ ಬ್ಯಾಟರಿ ಕಾರ್ಯಕ್ಷಮತೆಯ, ಬ್ಯಾಟರಿ ಲೈಫ್ ಬಗ್ಗೆ ತಿಳಿದುಕೊಳ್ಳವದು ಅಗತ್ಯ ಅನಿಸುತ್ತದೆ.

ಬ್ಯಾಟರಿಯ ಲೈಫ್

ಒನ್‌ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ ಬ್ಯಾಟರಿಯ ಲೈಫ್‌/ಹೆಲ್ತ್ ಸಹ ಪರಿಶೀಲಿಸಬಹುದು. ಇದಕ್ಕಾಗಿ ಒನ್‌ಪ್ಲಸ್‌ ಕಂಪನಿಯು ಒನ್‌ಪ್ಲಸ್‌ ಡಯಾಗ್ನೋಸ್ಟಿಕ್ ಈ ಅಪ್ಲಿಕೇಶನ್ ಹೊಂದಿದೆ. (com.oneplus.healthcheck). ಇದರಲ್ಲಿ ಬ್ಯಾಟರಿಯ ಚಾರ್ಜಿಂಗ್ ಸ್ಥಿತಿ, ಬ್ಯಾಟರಿ ತಾಪಮಾನ, ಬ್ಯಾಟರಿ ಸಾಮರ್ಥ್ಯ, ಬ್ಯಾಟರಿ ಕಾರ್ಯಕ್ಷಮತೆನಂತಹ ಅಗತ್ಯ ಅಂಶಗಳ ಸಂಗ್ರಹವನ್ನು ತೆಗೆದುಕೊಳ್ಳಬಹುದು. ಇನ್ನು ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ಹೆಲ್ತ್/ಲೈಫ್‌ ಪರೀಶಿಲಿಸುವುದು ಹೇಗೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ಸ್ಥಿತಿ ತಿಳಿಯಲು ಹೀಗೆ ಮಾಡಿರಿ:

ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ಸ್ಥಿತಿ ತಿಳಿಯಲು ಹೀಗೆ ಮಾಡಿರಿ:

1. APK ಮಿರರ್‌ನಿಂದ "ಒನ್‌ಪ್ಲಸ್ ಡಯಾಗ್ನೋಸ್ಟಿಕ್" ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.

2. ಡೌನ್‌ಲೋಡ್ ಮಾಡಿದ ನಂತರ, ನೀವು ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್‌ ಮಾಡುವ ಆಯ್ಕೆಯನ್ನು ನೋಡುತ್ತೀರಿ. ಇನ್‌ಸ್ಟಾಲ್‌ ಮೇಲೆ ಕ್ಲಿಕ್ ಮಾಡಿ. (ಒಂದು ವೇಳೆ ಇನ್‌ಸ್ಟಾಲ್‌ ಆಗಲಿಲ್ಲವೆಂದರೇ, ಸೆಟ್ಟಿಂಗ್‌ನಲ್ಲಿ ನೀವು ಇತರ ಅಪ್ಲಿಕೇಶನ್‌ಗಳಿಂದ ಇನ್‌ಸ್ಟಾಲ್‌ ಆಯ್ಕೆಯನ್ನು ಸಕ್ರಿಯಗೊಳಿಸಿ)

ಅಪ್ಲಿಕೇಶನ್

3. ಇನ್‌ಸ್ಟಾಲ್‌ ಆದ ನಂತರ, ಅಪ್ಲಿಕೇಶನ್ ಸರಳ ಮತ್ತು ಸುಲಭವಾಗಿ ಅರ್ಥಮಾಡಿಕೊಳ್ಳುವ ಇಂಟರ್ಫೇಸ್ ಅನ್ನು ನೀಡುತ್ತದೆ. ಅಪ್ಲಿಕೇಶನ್‌ನ ಮುಖ್ಯ ಪರದೆಯು ಸಾಧನದ ಹೆಸರು, ಸಿಪಿಯು, ಮೆಮೊರಿ ಕಾನ್ಫಿಗರೇಶನ್ ಮತ್ತು ಬ್ಯಾಟರಿ ಸಾಮರ್ಥ್ಯವನ್ನು ತೋರಿಸುತ್ತದೆ. ಅದರ ಕೆಳಗೆ ರೆಕಾರ್ಡ್ ಮತ್ತು ಡಿಟೆಕ್ಟ್ ನೌ ಎಂಬ ಎರಡು ಆಯ್ಕೆಗಳಿವೆ.

4. ಬ್ಯಾಟರಿ ಸಾಮರ್ಥ್ಯದ ಕೆಳಗೆ, 'ಬ್ಯಾಟರಿ ಸ್ಥಿತಿಯನ್ನು ವೀಕ್ಷಿಸಿ' ಎಂಬ ಆಯ್ಕೆಯನ್ನು ನೀವು ನೋಡುತ್ತೀರಿ.

ಚಾರ್ಜಿಂಗ್

5. ಈ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ಬ್ಯಾಟರಿ ಸಾಮರ್ಥ್ಯ, ಬ್ಯಾಟರಿ ತಾಪಮಾನ, ಚಾರ್ಜಿಂಗ್ ಮತ್ತು ಡಿಸ್ಚಾರ್ಜ್ ಸ್ಥಿತಿ, ಚಾರ್ಜರ್ ಪ್ರಕಾರ ಮತ್ತು ಬ್ಯಾಟರಿ ಸ್ಥಿತಿಯಂತಹ ವಿವರಗಳೊಂದಿಗೆ ನೀವು ಹೊಸ ಪರದೆಯನ್ನು ನೋಡುತ್ತೀರಿ.

6. ಒನ್‌ಪ್ಲಸ್ 8 ಮತ್ತು ಒನ್‌ಪ್ಲಸ್ 8 ಪ್ರೊ ಫೋನ್‌ಗಳ ವಿಷಯದಲ್ಲಿ, ಈ ಅಪ್ಲಿಕೇಶನ್ ಇನ್ನೂ ಬ್ಯಾಟರಿ ಸ್ಥಿತಿಯನ್ನು ತೋರಿಸುವುದಿಲ್ಲ.

Most Read Articles
Best Mobiles in India

English summary
If you have a OnePlus smartphone then you can easily check the battery state. Here is how.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X