ಮಿಸ್ ಕಾಲ್ ನೀಡಿ ಫಾಸ್ಟ್ ಟ್ಯಾಗ್ ಬ್ಯಾಲೆನ್ಸ್ ತಿಳಿದುಕೊಳ್ಳಿ

By Gizbot Bureau
|

ಪ್ರಯಾಣ ಆರಂಭಿಸುವುದಕ್ಕೂ ಮುನ್ನ ನಿಮ್ಮ ಫಾಸ್ಟ್ ಟ್ಯಾಗ್ ಖಾತೆಯಲ್ಲಿ ಎಷ್ಟು ಹಣವಿದೆ ಎಂಬುದನ್ನು ಚೆಕ್ ಮಾಡುವುದಕ್ಕೆ NHAI ಹೊಸ ಮಾರ್ಗವನ್ನು ಪರಿಚಯಿಸಿದೆ. NHAI ಪ್ರಿಪೇಯ್ಡ್ ವ್ಯಾಲೆಟ್ ನ ಮೊತ್ತವನ್ನು ಚೆಕ್ ಮಾಡುವುದಕ್ಕೆ ಬಳಕೆದಾರರು ಇದೀಗ 'missed call alert facility' ಯನ್ನು ಹೊಂದಿದ್ದಾರೆ.

ಮಿಸ್ ಕಾಲ್

ಕೇವಲ ಒಂದು ಮಿಸ್ ಕಾಲ್ ನೀಡುವ ಮೂಲಕ ಇದೀಗ ನೀವು ಫಾಸ್ಟ್ ಟ್ಯಾಗ್ ಗೆ ರಿಜಿಸ್ಟರ್ ಮಾಡಿರುವ ಮೊಬೈಲ್ ನಂಬರ್ ಮೂಲಕ NHAI ಪ್ರೀಪೇಯ್ಡ್ ವ್ಯಾಲೆಟ್ ನಲ್ಲಿ ಎಷ್ಟು ಹಣವಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಬಹುದು.ಅದಕ್ಕಾಗಿ ನೀವು +91-8884333331 ನಂಬರ್ ಗೆ ರಿಜಿಸ್ಟರ್ ಮಾಡಿರುವ ಮೊಬೈಲ್ ನಂಬರ್ ನಿಂದ ಮಿಸ್ ಕಾಲ್ ನೀಡಿದರೆ ನಿಮಗೆ ನಿಮ್ಮ ಬ್ಯಾಲೆನ್ಸ್ ಎಷ್ಟು ಎಂಬುದು ತಿಳಿಯಲಿದೆ.

ಉಚಿತ ಸೇವೆ:

ಉಚಿತ ಸೇವೆ:

ಈ ಮಿಸ್ ಕಾಲ್ ಸೇವೆ ಉಚಿತವಾಗಿರುತ್ತದೆ ಮತ್ತು ಹಗಲು-ರಾತ್ರಿ 24/7 ಲಭ್ಯವಿರುವ ಸೇವೆಯಾಗಿರುತ್ತದೆ. ಮೈ ಫಾಸ್ಟ್ ಟ್ಯಾಗ್ ಆಪ್ ಗಾಗಿ ಹೊರತು ಪಡಿಸಿದರೆ ಇದಕ್ಕಾಗಿ ಅಂತರ್ಜಾಲ ಸೇವೆಯ ಅಗತ್ಯವೂ ಇರುವುದಿಲ್ಲ. NHAI ಪ್ರಿಪೇಯ್ಡ್ ವ್ಯಾಲೆಟ್ ಗೆ ಲಿಂಕ್ ಆಗಿರುವ NHAI ಫಾಸ್ಟ್ ಟ್ಯಾಗ್ ಬಳಕೆದಾರರಿಗೆ ಮಾತ್ರವೇ ಈ ಸೌಲಭ್ಯ ಲಭ್ಯವಿರುತ್ತದೆ. ಸದ್ಯಕ್ಕೆ NHAI FASTag ಬ್ಯಾಲೆನ್ಸ್ ಲಿಂಕ್ ಆಗಿರುವ ಎಲ್ಲಾ ಬ್ಯಾಂಕ್ ಖಾತೆಯ ಮಾಹಿತಿಯನ್ನು ಪಡೆಯುವುದಕ್ಕೆ ಅಸಾಧ್ಯವಾಗಿದೆ.

ಲೋ ಬ್ಯಾಲೆನ್ಸ್ ಗೆ ಸಪರೇಟ್ ಎಸ್ಎಂಎಸ್:

ಲೋ ಬ್ಯಾಲೆನ್ಸ್ ಗೆ ಸಪರೇಟ್ ಎಸ್ಎಂಎಸ್:

ಒಂದೇ NHAI ಪ್ರೀಪೇಯ್ಡ್ ವ್ಯಾಲೆಟ್ ಗೆ ಹಲವು ವೆಹಿಕಲ್ ಗಳು ಲಿಂಕ್ ಆಗಿದ್ದಲ್ಲಿ, ಅಸೈನ್ ಆಗಿರುವ ಪ್ರತಿ ವೆಹಿಕಲ್ ಗಳ ಒಟ್ಟು ಬ್ಯಾಲೆನ್ಸ್ ನ ಮೊತ್ತವನ್ನು ಎಸ್ ಎಂಎಸ್ ಮೂಲಕ ತಿಳಿಸಲಾಗುತ್ತದೆ.ನಂತರ ಒಂದು ವೇಳೆ ಯಾವುದೇ ವೆಹಿಕಲ್ಲಿನ ಬ್ಯಾಲೆನ್ಸ್ ಕಡಿಮೆ ಇದ್ದಲ್ಲಿ ರಿಜಿಸ್ಟರ್ ಆಗಿರುವ ಮೊಬೈಲ್ ಗೆ ಸಪರೇಟ್ ಎಸ್ಎಂಎಸ್ ನ್ನು ಕಳುಹಿಸಲಾಗುತ್ತದೆ ಮತ್ತು ಅದರಲ್ಲಿ ಕಡಿಮೆ ಬ್ಯಾಲೆನ್ಸ್ ಇದೆ ಎಂಬ ಮಾಹಿತಿಯನ್ನು ನೀಡಲಾಗುತ್ತದೆ.

2.25 ಲಕ್ಷ ಫಾಸ್ಟ್ ಟ್ಯಾಗ್ ಬಳಕೆದಾರರು :

2.25 ಲಕ್ಷ ಫಾಸ್ಟ್ ಟ್ಯಾಗ್ ಬಳಕೆದಾರರು :

ಬಿಡುಗಡೆಯಾದ ನಂತರ NHAI ಪ್ರಿಪೇಯ್ಡ್ ವ್ಯಾಲೆಟ್ ನಲ್ಲಿ, 2.25 ಲಕ್ಷಕ್ಕೂ ಅಧಿಕ NHAI FASTag ಬಳಕೆದಾರರು ಲಭ್ಯವಿದ್ದು ಮೈ ಫಾಸ್ಟ್ ಟ್ಯಾಗ್ ಆಪ್ ನ್ನು ಬಳಸಿ ಪ್ರಿಪೇಯ್ಡ್ ವ್ಯಾಲೆಟ್ ನ್ನು ಬಳಸುತ್ತಿದ್ದಾರೆ. NHAI FASTag ನ್ನು ಸೇವಿಂಗ್ ಬ್ಯಾಂಕ್ ಖಾತೆಗೆ ಅಥವಾ NHAI ಪ್ರಿಪೇಯ್ಡ್ ವ್ಯಾಲೆಟ್ ಗೆ ಮೈ ಫಾಸ್ಟ್ ಟ್ಯಾಗ್ ಆಪ್ ಬಳಸಿ ಲಿಂಕ್ ಮಾಡಿಕೊಳ್ಳಬಹುದು. NHAI FASTag ಗೆ ಇದೀಗ ಸದ್ಯ 13 ಬ್ಯಾಂಕ್ ಗಳ ಖಾತೆಗಳನ್ನು ಲಿಂಕ್ ಮಾಡುವುದಕ್ಕೆ ಬ್ಯಾಂಕ್ ಗಳು ಅವಕಾಶ ನೀಡಿವೆ. ಫಾಸ್ಟ್ ಟ್ಯಾಗ್ ಆಪ್ ಆಂಡ್ರಾಯ್ಡ್ ಮತ್ತು ಐಓಎಸ್ ಎರಡೂ ಫ್ಲ್ಯಾಟ್ ಫಾರ್ಮ್ ಗಳಲ್ಲೂ ಕೂಡ ಲಭ್ಯವಿದೆ.

Best Mobiles in India

English summary
How To Check FASTag Account Balance Without Internet Connection

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X