ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ IMEI ಸಂಖ್ಯೆಯನ್ನು ಪರಿಶೀಲಿಸುವುದು ಹೇಗೆ?

|

ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಎಲ್ಲರಿಗೂ ಅವಶ್ಯಕ ಎನಿಸುವ ಮಟ್ಟಿಗೆ ಆವರಿಸಿಕೊಂಡಿದೆ. ಸ್ಮಾರ್ಟ್‌ಫೋನ್‌ ಇಲ್ಲದೆ ಮನೆಯಿಂದ ಬರುವುದೇ ಸಾಧ್ಯವಿಲ್ಲ ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇಂದು ಜಾಗತಿಕವಾಗಿ ಮೂರು ಬಿಲಿಯನ್‌ಗೂ ಹೆಚ್ಚು ಸ್ಮಾರ್ಟ್‌ಫೋನ್‌ ಬಳಕೆದಾರರಿದ್ದಾರೆ. ಅಷ್ಟರ ಮಟ್ಟಿಗೆ ಹಿರಿಯ, ಕಿರಿಯರು ಎನಿಸದೆ ಎಲ್ಲಾ ವಯೋಮಾನದವರು ಕೂಡ ಸ್ಮಾರ್ಟ್‌ಫೋನ್‌ ಬಳಸುತ್ತಿದ್ದಾರೆ. ಇನ್ನು ಪ್ರತಿಯೊಂದು ಸ್ಮಾರ್ಟ್‌ಫೋನ್‌ಗೂ ಪ್ರತ್ಯೇಕ ಮತ್ತು ವಿಶಿಷ್ಟವಾದ 15 ಅಂಕಿಗಳ IMEI ಸಂಖ್ಯೆ ಇರುತ್ತದೆ. ಮೊಬೈಲ್ ಫೋನ್‌ಗಳಲ್ಲಿನ ಈ ಐಎಂಇಐ ಸಂಖ್ಯೆ ಸ್ಮಾರ್ಟ್‌ಫೋನ್‌ಗಳು ಕಳೆದುಹೋದರೆ ಪತ್ತೆ ಹಚ್ಚಲು ಸಹಾಯ ಮಾಡಲಿದೆ.

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ಗಳಲ್ಲಿ IMEI ಸಂಖ್ಯೆ ಎಂಬುದು ಅತ್ಯಂತ ಮಹತ್ವದ್ದು. ಇದನ್ನು ಬಳಸಿ ನೀವು ನಿಮ್ಮ ಕಳೆದುಹೋದ ಮೊಬೈಲ್ ಫೋನನ್ನು ಪತ್ತೆ ಹಚ್ಚಬಹುದು. ಅಲ್ಲದೆ ನಿಮ್ಮ ಮೊಬೈಲ್ ಬಳಸಿ ಇತರರು ಮಾಡಬಾರದ್ದನ್ನು ಮಾಡದಂತೆ ತಡೆಗಟ್ಟಬಹುದು. ಐಎಂಇಐ ಎಂದರೆ ಇಂಟರ್‌ನ್ಯಾಷನಲ್ ಮೊಬೈಲ್ ಇಕ್ವಿಪ್‌ಮೆಂಟ್ ಐಡೆಂಟಿಟಿ (ಮೊಬೈಲ್ ಉಪಕರಣದ ಅಂತಾರಾಷ್ಟ್ರೀಯ ಗುರುತಿನ ಸಂಖ್ಯೆ)ಯಾಗಿದೆ. ಪ್ರತಿಯೊಂದು ಸ್ಮಾರ್ಟ್‌ಫೋನ್‌ನಲ್ಲಿಯೂ ಈ ಸಂಖ್ಯೆ ಇರಲಿದೆ. ಹಾಗಾದ್ರೆ ನಿಮ್ಮ ಫೋನ್‌ನಲ್ಲಿ IMEI ಸಂಖ್ಯೆಯನ್ನು ಪರಿಶೀಳಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಮಾರ್ಟ್‌ಫೋನ್‌

ನೀವು ಬಳಸುತ್ತಿರುವ ಹಾಗೂ ನೀವು ಜೋಪಾನವಾಗಿ ಇಟ್ಟುಕೊಂಡಿರುವ ನಿಮ್ಮ ಸ್ಮಾರ್ಟ್‌ಫೋನ್‌ ಒಂದು ವೇಳೆ ಕಳೆದುಹೋದರೆ ಆಗುವ ದುಃಖ ಅಷ್ಟಿಷ್ಟಲ್ಲ. ನಿಮ್ಮ ಸ್ಮಾರ್ಟ್‌ಫೋನ್‌ ಕಳೆದು ಹೋದಾಗ ನೀವು ಪೊಲೀಸರಿಗೆ ದೂರು ನೀಡಬೇಕಿದ್ದರೂ, ಸ್ಮಾರ್ಟ್‌ಫೋನ್‌ IMEI ಸಂಖ್ಯೆಯನ್ನು ಕೇಳಲಾಗುತ್ತದೆ. ನಿಮ್ಮ ಸೆಲ್ ಆಪರೇಟರ್‌ ಕಂಪೆನಿಗೂ ಮೊಬೈಲ್ ಕಳೆದುಹೋಗಿರುವ ಸಂಗತಿಯನ್ನು ತಿಳಿಸಿದರೆ, ಅವರು ಕೂಡ IMEI ಸಂಖ್ಯೆಯನ್ನು ಕೇಳುತ್ತಾರೆ. ಇದಕ್ಕಾಗಿ ನೀವು ನಿಮ್ಮ ಸ್ಮಾರ್ಟ್‌ಫೋನ್‌ IMEI ಸಂಖ್ಯೆ ಎಷ್ಟು ಎಂದು ತಿಳಿದಿರಲೇಬೇಕು. ಇನ್ನು IMEI ಸಂಖ್ಯೆಯನ್ನು ಕಂಡುಹಿಡಿಯಲು ಮಾರ್ಗಗಳಿವೆ.IMEI ಸಂಖ್ಯೆಯನ್ನು ತಿಳಿಯಲು ಕೆಳಗಿನ ಹಂತಗಳನ್ನ ಅನುಸರಿಸಿ.

ನಿಮ್ಮ ಫೀಚರ್‌ಫೋನ್‌ನಲ್ಲಿ IMEI ಸಂಖ್ಯೆಯನ್ನು ಪರಿಶೀಲಿಸುವುದು ಹೇಗೆ?

ನಿಮ್ಮ ಫೀಚರ್‌ಫೋನ್‌ನಲ್ಲಿ IMEI ಸಂಖ್ಯೆಯನ್ನು ಪರಿಶೀಲಿಸುವುದು ಹೇಗೆ?

USSD ಕೋಡ್ ಅನ್ನು ಬಳಸುವುದರ ಮೂಲಕ ನಿಮ್ಮ ಐಎಂಇಐ ಸಂಖ್ಯೆಯನ್ನು ಪರಿಶೀಲಿಸಲು ಸುಲಭವಾದ ಮಾರ್ಗವಾಗಿದೆ.

ಹಂತ 1: ಮೊದಲು, ನಿಮ್ಮ ಮೊಬೈಲ್ ಸಾಧನದಲ್ಲಿ *#06# ಅನ್ನು ಡಯಲ್ ಮಾಡಿ.

ಹಂತ 2: ಈಗ ಫೋನ್‌ನ ಡಿಸ್‌ಪ್ಲೇಯಲ್ಲಿ IMEI ಸಂಖ್ಯೆಯನ್ನು ನೋಡಬಹುದಾಗಿದೆ.

ಆಂಡ್ರಾಯ್ಡ್ ಫೋನ್‌ನಲ್ಲಿ IMEI ಅನ್ನು ಪರಿಶೀಲಿಸುವುದು ಹೇಗೆ ?

ಆಂಡ್ರಾಯ್ಡ್ ಫೋನ್‌ನಲ್ಲಿ IMEI ಅನ್ನು ಪರಿಶೀಲಿಸುವುದು ಹೇಗೆ ?

ಹಂತ 1: ಸೆಟ್ಟಿಂಗ್ಸ್‌ ಮೆನುಗೆ ಹೋಗಿ.

ಹಂತ 2: ಸೆಟ್ಟಿಂಗ್ಸ್‌ ಮೆನುವಿನಲ್ಲಿ About ವಿಭಾಗಕ್ಕೆ ಹೋಗಿ.

ಹಂತ 3: IMEI ಪಡೆಯಲು IMEI> Status ಆಯ್ಕೆಮಾಡಿ ಮತ್ತು ನಂತರ ನಿಮ್ಮ ಫೋನ್‌ನ ಯೂನಿಕ್‌ IMEI ಸಂಖ್ಯೆಯನ್ನು ನೋಡಲು ಕೆಳಗೆ ಸ್ಕ್ರಾಲ್ ಮಾಡಿ.

ಐಫೋನ್‌ನಲ್ಲಿ IMEI ಅನ್ನು ಪರಿಶೀಲಿಸುವುದು ಹೇಗೆ?

ಐಫೋನ್‌ನಲ್ಲಿ IMEI ಅನ್ನು ಪರಿಶೀಲಿಸುವುದು ಹೇಗೆ?

ಹಂತ 1: ಮೊದಲು ನಿಮ್ಮ ಐಫೋನ್ ಅನ್ಲಾಕ್ ಮಾಡಿ ಮತ್ತು ಸೆಟ್ಟಿಂಗ್ಸ್‌ ಮೆನುಗೆ ಹೋಗಿ

ಹಂತ 2: ನಂತರ ಸಾಮಾನ್ಯ ಆಯ್ಕೆಗೆ ಹೋಗಿ

ಹಂತ 3: About ಕ್ಲಿಕ್ ಮಾಡಿ ನಂತರ IMEI ಗೆ ಸ್ಕ್ರಾಲ್ ಮಾಡಿ.

IMEI ಸಂಖ್ಯೆ ಪರಿಶೀಲಿಸುವ ಇತರೆ ಮಾರ್ಗಗಳು!

IMEI ಸಂಖ್ಯೆ ಪರಿಶೀಲಿಸುವ ಇತರೆ ಮಾರ್ಗಗಳು!

ನಿಮ್ಮ ಮೊಬೈಲ್ ಫೋನ್ ಅನ್ನು ನೀವು ಕಳೆದುಕೊಂಡಿದ್ದರೆ ಮತ್ತು ಬಿಲ್ ಅಥವಾ ಚಿಲ್ಲರೆ ಪೆಟ್ಟಿಗೆಯನ್ನು ಹೊಂದಿಲ್ಲದಿದ್ದರೆ, ನೀವು IMEI ಸಂಕ್ಯೆ ಪಡೆಯಲು ಇನ್ನೊಂದು ಮಾರ್ಗವನ್ನು ಅನುಸರಿಸಬಹುದಾಗಿದೆ.

ಹಂತ 1: Android ಫೋನ್‌ಗೆ ಲಿಂಕ್ ಮಾಡಲಾದ Google ಖಾತೆಯನ್ನು ಬಳಸಿಕೊಂಡು Google ಡ್ಯಾಶ್‌ಬೋರ್ಡ್‌ಗೆ ಲಾಗ್ ಇನ್ ಮಾಡಿ.

ಹಂತ 2: ನಂತರ ನೀವು ಹಸಿರು ರೋಬೋಟ್ ಲೋಗೋದ ಪಕ್ಕದಲ್ಲಿರುವ ಆಂಡ್ರಾಯ್ಡ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ.

ಹಂತ 3: ಇದು ಈಗ ಅವರ IMEI ಸಂಖ್ಯೆಗಳೊಂದಿಗೆ ಖಾತೆಗೆ ನೋಂದಾಯಿಸಲಾದ ಡಿವೈಸ್‌ಗಳ ಪಟ್ಟಿಯನ್ನು ಬಹಿರಂಗಪಡಿಸುತ್ತದೆ.

Best Mobiles in India

English summary
Every mobile device omes with IMEI or International Mobile Station Equipment Identity number.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X