ವಿ ಟೆಲಿಕಾಂನ ವ್ಯಾಲಿಡಿಟಿ, ಡೇಟಾ ಬ್ಯಾಲೆನ್ಸ್‌ ಚೆಕ್‌ ಮಾಡುವುದು ಹೇಗೆ ಗೊತ್ತಾ?

|

ವೊಡಾಫೋನ್ ಐಡಿಯಾ (Vi) ಪ್ರಮುಖ ಟೆಲಿಕಾಂ ಆಪರೇಟರ್‌ಗಳಲ್ಲಿ ಒಂದಾಗಿದೆ. ಹಲವು ಆಕರ್ಷಕ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳ ಮೂಲಕ ವಿ ಟೆಲಿಕಾಂ ಜಿಯೋ ಮತ್ತು ಏರ್‌ಟೆಲ್‌ ಟೆಲಿಕಾಂಗಳಿಗೆ ಪೈಪೋಟಿ ನೀಡಿದೆ. ಇನ್ನು ವಿ ಟೆಲಿಕಾಂ ಬಳಕೆದಾರರ ಅನುಕೂಲಕ್ಕಾಗಿ ಡೇಟಾ ಬ್ಯಾಲೆನ್ಸ್‌, ಯೋಜನೆಯ ಮಾಹಿತಿ, ವಾಯಿಸ್ ಕರೆ, ವ್ಯಾಲಿಡಿಟಿ, ಎಸ್‌ಎಮ್‌ಎಸ್‌ ಪ್ರಯೋಜನಗಳನ್ನು ಪರಿಶೀಲಿಸಲು ಅವಕಾಶ ಮಾಡಿಕೊಟ್ಟಿದೆ.

ಎಸ್‌ಎಮ್‌ಎಸ್‌

ವೊಡಾಫೋನ್ ಐಡಿಯಾ ಟೆಲಿಕಾಂ ಬ್ಯಾಲೆನ್ಸ್‌ ಮಾಹಿತಿ ಪಡೆಯಲು ಬಳಕೆದಾರರಿಗೆ ಆಯ್ಕೆ ನೀಡಿದೆ. ಅದಕ್ಕಾಗಿ ಕೆಲವೊಂದು USSD ಕೋಡ್ ನೀಡಿದೆ. ಆ ಮೂಲಕ ಗ್ರಾಹಕರು ಡೇಟಾ, ಎಸ್‌ಎಮ್‌ಎಸ್‌, ಪ್ಲ್ಯಾನ್ ವ್ಯಾಲಿಡಿಟಿ ಮಾಹಿತಿಗಳನ್ನು ಸುಲಭವಾಗಿ ತಿಳಿಯಬಹುದಾಗಿದೆ. ಆದರೆ ಕೆಲವೊಮ್ಮೆ ಬ್ಯಾಲೆನ್ಸ್‌ ಪರಿಶೀಲನೆ ಮಾಡುವಾಗ ತಕ್ಷಣಕ್ಕೆ USSD ಕೋಡ್‌ಗಳು ನೆನಪಿಗೆ ಬರುವುದಿಲ್ಲ. ಹೀಗಾಗಿ ಕೆಲವು ಬಳಕೆದಾರರಿಗೆ ಬ್ಯಾಲೆನ್ಸ್‌ ತಿಳಿದುಕೊಳ್ಳುವುದು ಕೆಲವೊಮ್ಮೆ ಕಷ್ಟವಾಗುತ್ತದೆ. ಹಾಗಾದರೇ ವೊಡಾಫೋನ್ ಐಡಿಯಾ ಬ್ಯಾಲೆನ್ಸ್‌ ಚೆಕ್ ಮಾಡುವುದು ಹೇಗೆ ಎನ್ನುವುದನ್ನು ಮುಂದೆ ತಿಳಿಯೋಣ ಬನ್ನಿರಿ.

USSD ಕೋಡ್ ಬಳಸಿ ವಿ ಸಂಖ್ಯೆಯ ಬ್ಯಾಲೆನ್ಸ್ ತಿಳಿಯಲು ಹೀಗೆ ಮಾಡಿ

USSD ಕೋಡ್ ಬಳಸಿ ವಿ ಸಂಖ್ಯೆಯ ಬ್ಯಾಲೆನ್ಸ್ ತಿಳಿಯಲು ಹೀಗೆ ಮಾಡಿ

- *199*2*1# - ಈ USSD ಕೋಡ್ ಅನ್ನು ವಿ ಟೆಲಿಕಾಂ ಸಂಖ್ಯೆಗೆ ಮುಖ್ಯ ಬ್ಯಾಲೆನ್ಸ್ ಪರಿಶೀಲಿಸಲು ಬಳಸಬಹುದು. ಕೋಡ್ ನಿಮಗೆ ಎಲ್ಲಾ ಬ್ಯಾಲೆನ್ಸ್ ಮತ್ತು ನಿಮ್ಮ ಸಂಖ್ಯೆಯ ವ್ಯಾಲಿಡಿಟಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ.

- *121# - ಈ ಕೋಡ್ ಅನ್ನು ಬಳಸಿಕೊಂಡು ಮುಖ್ಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು ನೀವು ಈ ಕೋಡ್ ಅನ್ನು ಸಹ ಬಳಸಬಹುದು.

ವಿ ಆಪ್‌ ಬಳಸಿ ವಿ ಸಂಖ್ಯೆಯ ಬ್ಯಾಲೆನ್ಸ್ ತಿಳಿಯಲು ಹೀಗೆ ಮಾಡಿ

ವಿ ಆಪ್‌ ಬಳಸಿ ವಿ ಸಂಖ್ಯೆಯ ಬ್ಯಾಲೆನ್ಸ್ ತಿಳಿಯಲು ಹೀಗೆ ಮಾಡಿ

ವಿ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಬ್ಯಾಲೆನ್ಸ್ ಮತ್ತು ವ್ಯಾಲಿಡಿಟಿ ಅನ್ನು ಪರಿಶೀಲಿಸಬಹುದು.
* ಗೂಗಲ್‌ ಪ್ಲೇ ಸ್ಟೋರ್ (Google Play Store) ಅಪ್ಲಿಕೇಶನ್ ತೆರೆಯಿರಿ ಮತ್ತು ವಿ ಅಪ್ಲಿಕೇಶನ್ ಅನ್ನು ಸರ್ಚ್ ಮಾಡಿ.
* ಡೌನ್‌ಲೋಡ್ ಅಪ್ಲಿಕೇಶನ್ ಅನ್ನು ಕ್ಲಿಕ್ ಮಾಡಿ ಮತ್ತು ಅದನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್‌ ಮಾಡಿ.
* ಅಪ್ಲಿಕೇಶನ್ ತೆರೆಯಿರಿ ಮತ್ತು ನಿಮ್ಮ ವೊಡಾಫೋನ್ ಐಡಿಯಾ ಸಂಖ್ಯೆಯನ್ನು ನಮೂದಿಸುವ ಮೂಲಕ ಲಾಗ್ ಇನ್ ಮಾಡಿ.
* ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ನೀವು OTP ಅನ್ನು ಪಡೆಯುತ್ತೀರಿ. ಲಾಗ್ ಇನ್ ಮಾಡಲು ಅದನ್ನು ನಮೂದಿಸಿ.
* ನಿಮ್ಮ ಸಂಖ್ಯೆಯ ಮುಖ್ಯ ಬ್ಯಾಲೆನ್ಸ್ ಮತ್ತು ವ್ಯಾಲಿಡಿಟಿ ಅನ್ನು ಅಪ್ಲಿಕೇಶನ್‌ನ ಮುಖಪುಟ ಪರದೆಯಲ್ಲಿ ಪ್ರದರ್ಶಿಸಲಾಗುತ್ತದೆ.

ವಿ ಟೆಲಿಕಾಂ 699ರೂ. ಪ್ರಿಪೇಯ್ಡ್‌ ಪ್ಲಾನ್‌

ವಿ ಟೆಲಿಕಾಂ 699ರೂ. ಪ್ರಿಪೇಯ್ಡ್‌ ಪ್ಲಾನ್‌

ವಿ ಟೆಲಿಕಾಂನ 699ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 3 GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯ ದೊರೆಯಲಿದೆ. ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಸಿಗಲಿದೆ. ಹೆಚ್ಚುವರಿಯಾಗಿ ವೀಕೆಂಡ್ ಡೇಟಾ ರೋಲ್ ಓವರ್ ಪ್ರಯೋಜನ ಜೊತೆಗೆ ವಿ ಆಪ್ಸ್‌ ಸಹ ಲಭ್ಯವಾಗಲಿದೆ.

ವಿ ಟೆಲಿಕಾಂನ 3099ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ವಿ ಟೆಲಿಕಾಂನ 3099ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ ಸಹ ದೊರೆಯಲಿದೆ.

Best Mobiles in India

English summary
How to Check Vi Data, Talktime, Validity Using USSD Number.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X