Subscribe to Gizbot

ರಿಲಾಯನ್ಸ್ ಜಿಯೋ ಡಾಟಾ ಬಳಕೆ ಚೆಕ್‌ ಮಾಡುವುದು ಹೇಗೆ?

Written By:

ರಿಲಾಯನ್ಸ್ ಜಿಯೋ ಅಧಿಕೃತವಾಗಿ ಪ್ರಿವೀವ್‌ ಆಫರ್, 'ಪ್ರಪಂಚದ ಚೀಪೆಸ್ಟ್ ಟ್ಯಾರಿಫ್ ಪ್ಯಾಕ್‌ಗಳನ್ನು, ಇಂಟರ್ನೆಟ್‌ ಮತ್ತು ವಾಯ್ಸ್ ಕರೆಗಳಿಗಾಗಿ ಬಿಡುಗಡೆ ಮಾಡಿದೆ'. ಆದ್ದರಿಂದ ರಿಲಾಯನ್ಸ್ ಜಿಯೋ 4G ಸಿಮ್‌ ಖರೀದಿಯನ್ನು ಬ್ಲಾಕ್‌ಬಾಸ್ಟರ್ ಎಂದು ಕರೆಯುವುದು ಸಹ ಒಂದು ಕ್ರೇಜ್‌ ಆಗಿಬಿಟ್ಟಿದೆ.

ಅಂದಹಾಗೆ 90 ದಿನಗಳವರೆಗೆ ಅನ್‌ಲಿಮಿಟೆಡ್(Unlimited) 4G ಇಂಟರ್ನೆಟ್‌ ಸಬ್‌ಸ್ಕ್ರಿಪ್ಶನ್‌ ಅನ್ನು ಅತೀ ಕಡಿಮೆ ಬೆಲೆಗೆ(Cheap Price) ನೀಡಿರುವುದರಿಂದ ಭಾರತದ ಟೆಲಿಕಾಂ ಬಳಕೆದಾರರಿಗೆ 'ಉಚಿತ ಇಂಟರ್ನೆಟ್ ಟ್ರಾಫಿಕ್‌ ಸುನಾಮಿ' ಅನುಭವವಾಗಲಿದೆ. ಅಂದಹಾಗೆ ವಿಶೇಷವಾಗಿ ನೀವು ಬಳಸುವ ಡಾಟಾದ ಬಗ್ಗೆ ಗಮನಹರಿಸುವುದು ಸೂಕ್ತವಾಗಿದೆ. ಕಾರಣ ರಿಲಾಯನ್ಸ್ ಜಿಯೋ 'ವೆಲ್ಕಮ್‌ ಆಫರ್‌ನಲ್ಲಿ ಲಿಮಿಟೆಡ್ 4G ಡಾಟಾ ನೀಡುತ್ತಿದೆ.

ಶೀಘ್ರವಾಗಿ ರಿಲಾಯನ್ಸ್ ಜಿಯೋ 4G ಸಿಮ್ ಖರೀದಿ ಹೇಗೆ? 15 ನಿಮಿಷದಲ್ಲಿ ಆಕ್ಟಿವೇಟ್ ಹೇಗೆ?

ಗಿಜ್‌ಬಾಟ್‌ನ ಇಂದಿನ ಲೇಖನದಲ್ಲಿ ರಿಲಾಯನ್ಸ್ ಜಿಯೋ(Jio) 4G ಇಂದ ಬಳಸುವ ಡಾಟಾ ಬಳಕೆಯನ್ನು ಟ್ರ್ಯಾಕ್‌ ಮಾಡುವುದು ಹೇಗೆ ಎಂದು ತಿಳಿಸುತ್ತಿದ್ದೇವೆ. ಈ ಸರಳ ಟ್ರಿಕ್ಸ್ ಅನ್ನು ತಿಳಿಯಲು ಲೇಖನದ ಸ್ಲೈಡರ್‌ಗಳನ್ನು ಓದಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೈಜಿಯೋ ಆಪ್‌ ಡೌನ್‌ಲೋಡ್ ಮಾಡಿ

ಮೈಜಿಯೋ ಆಪ್‌ ಡೌನ್‌ಲೋಡ್ ಮಾಡಿ

ಮೈಜಿಯೋ ಆಪ್‌ ಅನ್ನು ಗೂಗಲ್‌ ಪ್ಲೇ ಸ್ಟೋರ್‌ ಅಥವಾ ಆಪಲ್‌ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಿ.

ನಿಮ್ಮ ಖಾತೆ ರಿಜಿಸ್ಟರ್ ಮಾಡಿ

ನಿಮ್ಮ ಖಾತೆ ರಿಜಿಸ್ಟರ್ ಮಾಡಿ

ಮೊಬೈಲ್‌ ನಂಬರ್ ಮತ್ತು ಇಮೇಲ್‌ ಐಡಿಯಿಂದ ಮೈಜಿಯೋ ಖಾತೆಯನ್ನು ಕ್ರಿಯೇಟ್ ಮಾಡಿ. ನೀವು ವೇರಿಫಿಕೇಶನ್ ಮೇಲ್ ಅನ್ನು ಪಡೆಯುತ್ತೀರಿ. ಅದನ್ನು ರೀಡೈರೆಕ್ಟ್ ಮಾಡುವ ಮುಖಾಂತರ ಜಿಯೋ ಐಡಿ ಮತ್ತು ಪಾಸ್‌ವರ್ಡ್ ಸೆಟ್‌ ಮಾಡಿ.
ಜಿಯೋ ಖಾತೆಗೆ ಲಾಗಿನ್‌ ಆಗಿ.

 ಡಾಟಾ ಬಳಕೆ ಚೆಕ್‌ ಮಾಡಿ

ಡಾಟಾ ಬಳಕೆ ಚೆಕ್‌ ಮಾಡಿ

ಮೈಜಿಯೋ ಆಪ್‌ನಲ್ಲಿ 'Data' ಆಪ್ಶನ್‌ ಕ್ಲಿಕ್ ಮಾಡಿ ನೀವು ಬಳಸಿರುವ ಡಾಟಾವನ್ನು ನೋಡಿ. ಈ ಜಿಯೋ ಖಾತೆಗೆ ಲಾಗಿನ್‌ ಆಗಿ ಎಲ್ಲಾ ವಿವಿಧ ಜಿಯೋ ಖಾತೆಗಳನ್ನು ನಿರ್ವಹಿಸಬಹುದು.

ಎಸ್‌ಎಂಎಸ್‌ ಸೆಂಟ್ ಅಗುತ್ತದೆ

ಎಸ್‌ಎಂಎಸ್‌ ಸೆಂಟ್ ಅಗುತ್ತದೆ

ಮೈಜಿಯೋ ಆಪ್‌ನಲ್ಲಿ ರಿಲಾಯನ್ಸ್ ಜಿಯೋ ರಿಯಲ್‌ ಟೈಮ್‌ ಬಿಲ್ಲಿಂಗ್‌ ಪ್ಲಾನ್‌ ಅನ್ನು ಪರಿಚಯಿಸಿದೆ. ಅಂದರೆ ನೀವು ಅತೀ ಶೀಘ್ರವಾಗಿ ಡಾಟಾ ಸ್ವಿಚ್‌ ಆಫ್‌ ಮಾಡಿದರೆ, ಅದೇ ಕ್ಷಣದಲ್ಲಿ ನೀವು ಬಳಸಿದ ಡಾಟಾ ಎಷ್ಟು ಎಂಬುದರ ಬಗ್ಗೆ ಮೆಸೇಜ್‌ ಬರುತ್ತದೆ.

ಎಸ್‌ಎಂಎಸ್‌ ಸೆಂಡ್ ಮಾಡಿ

ಎಸ್‌ಎಂಎಸ್‌ ಸೆಂಡ್ ಮಾಡಿ

*333# ಡಯಲ್‌ ಮಾಡಿ ಸೂಚಿಸುವ ನಂಬರ್‌ಗಳನ್ನು ಪ್ರೆಸ್‌ ಮಾಡಿ. ನಂತರ ಒಟ್ಟಾರೆ ಬಳಸಿದ ಡಾಟಾದ ಬಗ್ಗೆ ಮೆಸೇಜ್‌ ಬರುತ್ತದೆ. ಅಥವಾ "MBAL' ಎಂದು ಟೈಪಿಸಿ ಟಾಲ್ ಫ್ರೀ ನಂಬರ್‌ 55333 ಗೆ ಕಳುಹಿಸಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
How to Check Your Reliance Jio Data Usage SIMPLE TRICKS. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot