Subscribe to Gizbot

ಶೀಘ್ರವಾಗಿ ರಿಲಾಯನ್ಸ್ ಜಿಯೋ 4G ಸಿಮ್ ಖರೀದಿ ಹೇಗೆ? 15 ನಿಮಿಷದಲ್ಲಿ ಆಕ್ಟಿವೇಟ್ ಹೇಗೆ?

Written By:

ರಿಲಾಯನ್ಸ್ ಜಿಯೋ 4G ಇಂದಿಗೂ ಸಹ ಹೆಡ್‌ಲೈನ್‌ ಪಡೆಯುತ್ತಲೇ ಇದೆ. ಡಿಸೆಂಬರ್ 31, 2016 ರವರೆಗೂ ಸಹ ಪುನಃ ಹೆಡ್‌ಲೈನ್‌ ಪಡೆಯುತ್ತಲೇ ಇರುತ್ತದೆ. ಕಾರಣ ರಿಲಾಯನ್ಸ್ ಜಿಯೋ ಟ್ಯಾರಿಫ್‌ ಪ್ಲಾನ್‌ಗಳು ಭಾರತದ ಟೆಲಿಕಾಂ ಇತಿಹಾಸದಲ್ಲೇ ಇದುವರೆಗೂ ಇರಲ್ಲಿಲ್ಲ. ಅಂತಹ ಕಡಿಮೆ ಬೆಲೆಯ ಟ್ಯಾರಿಫ್ ಪ್ಲಾನ್‌ಗಳನ್ನು ನೀಡುತ್ತಿದೆ.

ರಿಲಾಯನ್ಸ್ ಜಿಯೋ ಸಿಮ್ ಖರೀದಿಗೆ ಮುನ್ನ ತಿಳಿಯಲೇಬೇಕಾದ 5 ಆಘಾತಕಾರಿ ಸತ್ಯಗಳು

ಅತಿ ಬೇಗ ಜಿಯೋ 4G ಸಿಮ್ ಖರೀದಿ ಹೇಗೆ? 15 ನಿಮಿಷದಲ್ಲಿ ಆಕ್ಟಿವೇಟ್ ಹೇಗೆ?

ಅಂದಹಾಗೆ ರಿಲಾಯನ್ಸ್ ಜಿಯೋದ ಉತ್ತಮ ಮತ್ತು ಕಡಿಮೆ ಬೆಲೆಯ ಟ್ಯಾರಿಫ್‌ ಪ್ಲಾನ್‌ಗಳು ಮತ್ತು ಡಿಸೆಂಬರ್‌ ಅಂತ್ಯದ ವರೆಗಿನ ಉಚಿತ 4G ಡಾಟಾ, ವಾಯ್ಸ್ ಕರೆ, ಎಸ್‌ಎಂಎಸ್‌ ಮತ್ತು ರಾತ್ರಿ ಡಾಟಾ ಆಫರ್‌ನಿಂದ ಸಿಮ್‌ಗೆ ಬೇಡಿಕೆ ಹೆಚ್ಚಿದ್ದು, ಖರೀದಿಸಲು ಸಾಧ್ಯವೇ ಆಗದ ಪರಿಸ್ಥಿತಿ ಉದ್ಭವಿಸಿದೆ. ಇನ್ನೊಂದು ಕಡೆ ಈಗಾಗಲೇ ಸಿಮ್ ಪಡೆದಿರುವವರು ಆಕ್ಟಿವೇಶನ್ ತಡವಾಗುತ್ತಿರುವ ಬಗ್ಗೆ ದೂರು ಹೊಂದಿದ್ದಾರೆ.

ಅಂದಹಾಗೆ ಸಿಮ್ ಆಕ್ಟಿವೇಶನ್ ತಡವಾಗುವುದರ ಸಮಸ್ಯೆಗೆ ಪರಿಹಾರವಾಗಿ, ರಿಲಾಯನ್ಸ್ eKYC ಪ್ರಕ್ರಿಯೆ ಲಾಂಚ್‌ ಮಾಡಿದೆ. ಜಸ್ಟ್‌ ನಿಮ್ಮ ಆಧಾರ್‌ ಕಾರ್ಡ್‌ ಇದ್ರೆ ಸಾಕು. ಇತರೆ ಯಾವುದೇ ಡಾಕ್ಯುಮೆಂಟ್‌ಗಳು ಅಗತ್ಯವಿಲ್ಲ.

ರಿಲಾಯನ್ಸ್ ಜಿಯೋ ಸಿಮ್ ಆಕ್ಟಿವೇಟ್ ಮಾಡಿ ಬಳಸಲು ಈ 5 ಅಂಶಗಳು ಅತ್ಯಗತ್ಯ

ಅತಿ ಬೇಗ ಜಿಯೋ 4G ಸಿಮ್ ಖರೀದಿ ಹೇಗೆ? 15 ನಿಮಿಷದಲ್ಲಿ ಆಕ್ಟಿವೇಟ್ ಹೇಗೆ?

ಸಿಮ್‌ ಆಕ್ಟಿವೇಶನ್‌ಗಾಗಿ ರಿಲಾಯನ್ಸ್ ಡಿಜಿಟಲ್‌ ಸ್ಟೊರ್‌ಗೆ ಹೋಗಿ ಐಡಿ ಪ್ರೂಫ್‌ಗಳನ್ನು ಕೈಯಲ್ಲಿ ಹಿಡಿದು ಸಾಲಿನಲ್ಲಿ ನಿಲ್ಲುವ ಸಾಂಪ್ರದಾಯಿಕ ಪ್ರಕ್ರಿಯೆ ಅಗತ್ಯವಿಲ್ಲ. eKYC ಪ್ರೊಸೆಸ್‌ಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಆಕ್ಟಿವೇಶನ್‌ಗೆ ನೀಡಿದರೆ ಸಾಕು.

ಅತಿ ಬೇಗ ಜಿಯೋ 4G ಸಿಮ್ ಖರೀದಿ ಹೇಗೆ? 15 ನಿಮಿಷದಲ್ಲಿ ಆಕ್ಟಿವೇಟ್ ಹೇಗೆ?

ಅತೀ ಶೀಘ್ರದಲ್ಲಿ, ಸಾಧ್ಯವಾದಷ್ಟು ಬೇಗ ಜಿಯೋ ಸಿಮ್‌ ಪಡೆಯುವುದು ಹೇಗೆ ಎಂದು ತಿಳಿಯಿರಿ. ಕೆಳಗಿನ ಎರಡು ಹಂತಗಳನ್ನು ತಕ್ಷಣ ಜಿಯೋ 4G ಸಿಮ್‌ ಪಡೆಯಲು ನಿರ್ವಹಸಿ. 15 ನಿಮಿಷಗಳಲ್ಲಿ ಸಿಮ್‌ ಆಕ್ಟಿವೇಶನ್ ಆಗುತ್ತದೆ.

* eKYC ಪ್ರೊಸೆಸ್ ಮೂಲಕ ಮಾತ್ರ ಜಿಯೋ(Jio) 4G ಸಿಮ್ ನೀಡುವ ರಿಲಾಯನ್ಸ್ ಡಿಜಿಟಲ್‌ ಸ್ಟೋರ್‌ ಅಥವಾ ಜಿಯೋ ಸಿಮ್‌ ನೀಡುವ ನಿಮ್ಮ ಸಿಮೀಪದ ಯಾವುದೇ ಸ್ಟೋರ್‌ಗೆ ಭೇಟಿ ನೀಡಿ.
* ಒಮ್ಮೆ ನೀವು ಆಧಾರ್‌ ಕಾರ್ಡ್ ನಂಬರ್‌ ನೀಡಿದರೆ, ಸಿಮ್ ನೀಡುವವರು ನಿಮ್ಮ ಫಿಂಗರ್‌ಪ್ರಿಂಟ್‌ ವೇರಿಫಿಕೇಶನ್ ಕೇಳುತ್ತಾರೆ. ಎಲ್ಲಾ ಪರಿಶೀಲನೆ ಮ್ಯಾಚ್ ಆದಲ್ಲಿ ಜಿಯೋ 4G ಸಿಮ್‌ ನೀಡುತ್ತಾರೆ. 15 ನಿಮಿಷಗಳಲ್ಲಿ ಸಿಮ್‌ ಆಕ್ಟಿವೇಶನ್ ಆಗುತ್ತದೆ.

ಈ 8 ಹಂತಗಳನ್ನು ಪಾಲಿಸಿ ಯಾವುದೇ ಆಂಡ್ರಾಯ್ಡ್‌ನಲ್ಲಿ ಜಿಯೋ 4G ಸಿಮ್ ಬಳಸಿ

 

English summary
How to Get Reliance Jio 4G SIM Instantly, acitvate within 15 minute. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot