ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ವಿಂಡೋಸ್ 10 ಪಿಸಿಗೆ ಲಿಂಕ್ ಮಾಡುವುದು ಹೇಗೆ?

|

ಇದು ಸ್ಮಾರ್ಟ್‌ಫೋನ್‌ ಯುಗ. ಎಲ್ಲರ ಅಂಗೈನಲ್ಲೂ ಇಂದು ಸ್ಮಾರ್ಟ್‌ಫೋನ್‌ಗಳು ರಿಂಗಣಿಸುತ್ತಿವೆ. ಇದಲ್ಲದೆ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳನ್ನ ತಮ್ಮ ಪರ್ಸನಲ್‌ ಕಂಪ್ಯೂಟರ್‌ಗೂ ಕೂಡ ಕನೆಕ್ಟ್‌ ಮಾಡುವ ಮೂಲಕ ಕಂಟಿನ್ಯೂ ಕನೆಕ್ಟಿವಿಟಿಯನ್ನ ಹೊಂದಬಹುದಾಗಿದೆ. ಪಿಸಿ ಗಳ ಮೂಲಕವೇ ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್‌ಗಳನ್ನ ತೆರೆಯಬಹುದಾಗಿದೆ. ಹಾಗೇಯೇ ಆಪಲ್ ಬಳಕೆದಾರರು ಐಫೋನ್‌ಗಳು, ಐಪ್ಯಾಡ್‌ಗಳು ಮತ್ತು ಮ್ಯಾಕ್ ಸಾಧನಗಳಲ್ಲಿ ತಡೆರಹಿತ ಸಂಪರ್ಕವನ್ನು ಹೊಂದಬಹುದು. ಇದೇ ರೀತಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳನ್ನು ತಮ್ಮ ಪಿಸಿಗಳಲ್ಲಿ ಪ್ರವೇಶಿಸಬಹುದಾಗಿದೆ.

ಸ್ಮಾರ್ಟ್‌ಫೋನ್‌

ಹೌದು, ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರು ಕೂಡ ತಮ್ಮ ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್‌ಗಳನ್ನು ಪರ್ಸನಲ್‌ ಕಂಪ್ಯೂಟರ್‌ನಲ್ಲಿ ಪ್ರವೇಶಿಸಲು ಒಂದು ಮಾರ್ಗವಿದೆ. ಇದಕ್ಕಾಗಿ ನೀವು ಫೋನ್‌ನಲ್ಲಿ ಮೈಕ್ರೋಸಾಫ್ಟ್ ಫೋನ್ ಅಪ್ಲಿಕೇಶನ್ ಹೊಂದಿರಬೇಕಾಗುತ್ತದೆ. ಮೈಕ್ರೋಸಾಫ್ಟ್‌ನ ನಿಮ್ಮ ಫೋನ್ ಅಪ್ಲಿಕೇಶನ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಅವರ ಎಲ್ಲಾ ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್ ಮತ್ತು ಅವರ ವಿಂಡೋಸ್ 10-ಚಾಲಿತ ಪಿಸಿಗಳಲ್ಲಿ ಅವುಗಳ ಕ್ರಿಯಾತ್ಮಕತೆಯನ್ನು ಪ್ರವೇಶಿಸಲು ಅವಕಾಶ ನೀಡುತ್ತದೆ. ಇದನ್ನ ಕಾರ್ಯಗತಗೊಳಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಮಾರ್ಟ್‌ಫೋನ್‌

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರು ತಮ್ಮ ಪರ್ಸನಲ್‌ ಕಂಪ್ಯೂಟರ್‌ಗಳಿಂದ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು ಮಾತ್ರವಲ್ಲ, ಅವರು ತಮ್ಮ ಫೋನ್‌ನ ನೊಟೀಫಿಕೇಶನ್‌ಗಳನ್ನು ಸಹ ಸ್ವೀಕರಿಸಬಹುದಾಗಿದೆ. ಅಷ್ಟೇ ಅಲ್ಲ ಅವುಗಳನ್ನ ನಿರ್ವಹಿಸಬಹುದು. ಜೊತೆಗೆ ತಮ್ಮ ಪಿಸಿಗಳಿಂದ ಮೊಬೈಲ್ ಅಪ್ಲಿಕೇಶನ್‌ಗಳನ್ನು ಸಹ ಪ್ರವೇಶಿಸಬಹುದು. ಲ್ಯಾಪ್‌ಟಾಪ್‌ ಮೂಲಕ ಪಠ್ಯ ಸಂದೇಶಗಳನ್ನು ಓದಬಹುದು ಮತ್ತು ರಿಪ್ಲೇ ಮಾಡಬಹುದು. ಅಲ್ಲದೆ ಅವರ Android ಸ್ಮಾರ್ಟ್‌ಫೋನ್‌ಗಳ ನಡುವೆ ಫೈಲ್‌ಗಳನ್ನು ಶೇರ್‌ ಮಾಡಲು ಸಹ ಅವಕಾಶವಿದೆ. ಇದನ್ನ ಮಾಡುವುದು ಹೇಗೆ ಅನ್ನೊದನ್ನ ಹಂತಹಂತವಾಗಿ ತಿಳಿಯೋಣ ಬನ್ನಿರಿ.

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ಪರ್ಸನಲ್‌ ಕಂಪ್ಯೂಟರ್‌ ಅನ್ನು ಸೆಟ್‌ ಮಾಡುವುದು ಹೇಗೆ?

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ಪರ್ಸನಲ್‌ ಕಂಪ್ಯೂಟರ್‌ ಅನ್ನು ಸೆಟ್‌ ಮಾಡುವುದು ಹೇಗೆ?

ಹಂತ 1: ಕಂಪ್ಯೂಟರ್‌ನ ಟಾಸ್ಕ್‌ಬಾರ್‌ನಲ್ಲಿ ಸರ್ಚ್‌ Your ಫೋನ್‌ ಅನ್ನು ಹುಡುಕಿ.

ಹಂತ 2: ನಿಮ್ಮ ಫೋನ್ ಅಪ್ಲಿಕೇಶನ್ ಆಯ್ಕೆಮಾಡಿ.

ಹಂತ 3: ನಿಮ್ಮ ಮೈಕ್ರೋಸಾಫ್ಟ್ ಖಾತೆಗೆ ಸೈನ್ ಇನ್ ಮಾಡಿ.

ನಿಮ್ಮ Android ಸ್ಮಾರ್ಟ್‌ಫೋನ್ ಅನ್ನು ಸೆಟ್‌ ಮಾಡುವುದು ಹೇಗೆ ?

ನಿಮ್ಮ Android ಸ್ಮಾರ್ಟ್‌ಫೋನ್ ಅನ್ನು ಸೆಟ್‌ ಮಾಡುವುದು ಹೇಗೆ ?

ಹಂತ 1: ನಿಮ್ಮ ಫೋನ್‌ನಲ್ಲಿ ಬ್ರೌಸರ್ ತೆರೆಯಿರಿ, www.aka.ms/yourpc ಎಂದು ಟೈಪ್ ಮಾಡಿ.

ಹಂತ 2: ನಿಮ್ಮ ಫೋನ್ ಕಂಪ್ಯಾನಿಯನ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.

ಹಂತ 3: ನಿಮ್ಮ ಫೋನ್ ಕಂಪ್ಯಾನಿಯನ್ ಅನ್ನು ಇನ್‌ಸ್ಟಾಲ್‌ ಮಾಡಿ ನಂತರ ಅಪ್ಲಿಕೇಶನ್ ತೆರೆಯಿರಿ.

ಹಂತ 4: ಮಾರ್ಗದರ್ಶಿ ಹೊಂದಿಸುವ ಪ್ರಕ್ರಿಯೆಯನ್ನು ಅನುಸರಿಸಿ.

ಹಂತ 5: ನಿಮ್ಮ ಫೋನ್ ಕಂಪ್ಯಾನಿಯನ್ ಅಪ್ಲಿಕೇಶನ್‌ಗೆ ಸೈನ್ ಇನ್ ಮಾಡಲು ಸೂಚಿಸಿದರೆ, ನಿಮ್ಮ PC ಯಲ್ಲಿ ನೀವು ಬಳಸುತ್ತಿರುವ ಅದೇ Microsoft ಖಾತೆಯನ್ನು ಬಳಸಬೇಕು. ಈ ಮೂಲಕ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರ ಪಿಸಿಯಲ್ಲೂ ತಮ್ಮ ಅಪ್ಲಿಕೇಶನ್‌ಗಳನ್ನು ಬಳಸಲು ಸಾಧ್ಯವಾಗಲಿದೆ.

Most Read Articles
Best Mobiles in India

English summary
Users can not only make and receive calls from their PCs, but they can also receive and manage their phone’s notifications, access their mobile apps from their PCs and read and reply to text messages from their PCs.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X