ನಿಮ್ಮ ಲ್ಯಾಪ್‌ಟಾಪ್‌ ಅನ್ನು ಟಿವಿಗೆ ಸಂಪರ್ಕಪಡಿಸುವುದು ಹೇಗೆ?

Posted By:

ನಿಮ್ಮ ಹಾಲ್‌ನಲ್ಲಿರುವ ದೊಡ್ಡ ಎಚ್‌ಡಿ ಟಿವಿಯನ್ನು ಬದಿಗಿರಿಸಿ ನಿಮ್ಮ ಸಣ್ಣ ಪರದೆಯ ಲ್ಯಾಪ್‌ಟಾಪ್‌ನಲ್ಲಿ ಚಿತ್ರವನ್ನು ನೋಡುವುದೆಂದರೆ ಎಷ್ಟೊಂದು ಯಾತನೆ ಅಲ್ಲವೇ? ನಿಮ್ಮ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ನಲ್ಲಿ ಚಿತ್ರವನ್ನು ಡೌನ್‌ಲೋಡ್ ಮಾಡಿದ ನಂತರ ಎಲ್ಲರೂ ಅನುಭವಿಸುವಂತಹ ಫಜೀತಿ ಇದೇ ಆಗಿದೆ.

ನಿಮ್ಮ ಇತ್ತೀಚಿನ ಡಿಜಿಟಲ್ ಫೋಟೋಗಳನ್ನು ಸ್ನೇಹಿತರಿಗೆ ತೋರಿಸುವಾಗ ಕೂಡ ಇದೇ ಸಂಭವಿಸುತ್ತದೆ. ಹದಿನೈದು ಇಂಚಿನ ಟಿವಿ ಪರದೆ ಅನಾವಶ್ಯಕವಾಗಿ ಬಿದ್ದಿರುತ್ತದೆ. ಹಾಗಿದ್ದರೆ ನಿಮ್ಮ ಲ್ಯಾಪ್‌ಟಾಪ್‌ಗಳನ್ನು ಟಿವಿಗೆ ಸಂಪರ್ಕಿಸುವ ಮೂಲಕ ಅದರ ಪ್ರಯೋಜನವನ್ನು ಪಡೆದುಕೊಳ್ಳುವುದು ಹೇಗೆಂಬುದನ್ನು ನಾವಿಲ್ಲಿ ಸರಳ ವಿಧಾನದ ಮೂಲಕ ತೋರಿಸಿಕೊಡುತ್ತಿದ್ದೇವೆ. ಯೂಟ್ಯೂಬ್ ವೀಡಿಯೊಗಳ ಚಾಲನೆಯಲ್ಲಿ ಕೂಡ ಈ ಲ್ಯಾಪ್‌ಟಾಪ್‌ಗಳನ್ನು ಟಿವಿಗೆ ಸಂಪರ್ಕಪಡಿಸುವುದು ಹೆಚ್ಚು ಪ್ರಯೋಜನಕಾರಿಯಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಂಪರ್ಕವನ್ನು ಅರಿತುಕೊಳ್ಳುವುದು

#1

ನಿಮ್ಮ ಲ್ಯಾಪ್‌ಟಾಪ್ ಈ ಸಂಪರ್ಕ ವ್ಯವಸ್ಥೆಯನ್ನು ಹಿಂಭಾಗದಲ್ಲಿ ಹೊಂದಿರುತ್ತದೆ. ನೀವು ಮ್ಯಾಕ್‌ಬುಕ್ ಅನ್ನು ಟಿವಿಗೆ ಸಂಪರ್ಕಪಡಿಸುತ್ತಿದ್ದೀರಿ ಎಂದಾದಲ್ಲಿ ಈ ಸರಳ ಮಾರ್ಗದರ್ಶಿ ನಿಮಗೆ ನೆರವಾಗುತ್ತದೆ.

ನಿಮ್ಮ ಟಿವಿಯ ಇನ್‌ಪುಟ್ ಪೋರ್ಟ್

#2

ನಿಮ್ಮ ಟಿವಿ ಸ್ಟ್ಯಾಂಡರ್ಡ್ ಡೆಫಿನೇಶನ್ ಅಥವಾ ಹೆ ಡೆಫಿನೇಶನ್ನೇ ಎಂಬುದನ್ನು ಮೊದಲು ಅರಿತುಕೊಳ್ಳಿ. ವೀಡಿಯೊ ಇನ್‌ಪುಟ್ ಪೋರ್ಟ್‌ಗಳು ಸಾಧಾರಣವಾಗಿ ಟಿವಿಯ ಹಿಂಭಾಗದಲ್ಲಿ ಇರುತ್ತದೆ. ಕೆಲವೊಮ್ಮೆ ಬದಿಯಲ್ಲಿ ಕೂಡ ಇದು ಕಂಡುಬರುತ್ತದೆ.

ಸರಿಯಾದ ವೀಡಿಯೊ ಕೇಬಲ್

#3

ಹೆಚ್ಚಿನ ಗುಣಮಟ್ಟದ ಸಂಪರ್ಕವನ್ನು ಸಂಪರ್ಕಿಸಿ. ಹೊಸ ಲ್ಯಾಪ್‌ಟಾಪ್‌ಗಳು ಮತ್ತು ಎಚ್‌ಡಿ ಟಿವಿಗಳಿಗೆ ಎಚ್‌ಡಿಎಮ್ಐ ಒಂದು ಪ್ರಮಾಣಿತ ಸಂಪರ್ಕವಾಗಿದೆ. ನಿಮ್ಮ ಲ್ಯಾಪ್‌ಟಾಪ್‌ನ ಔಟ್‌ಪುಟ್ ಪೋರ್ಟ್ ಮತ್ತು ಟಿವಿಯ ಇನ್‌ಪುಟ್ ಪೋರ್ಟ್ ವಿಭಿನ್ನವಾಗಿದ್ದರೆ, ನಿಮಗೆ ಅಡಾಪ್ಟರ್ ಕೇಬಲ್‌ನ ಅಗತ್ಯವಿರುತ್ತದೆ.

ಅಗತ್ಯವಿದ್ದಲ್ಲಿ ಆಡಿಯೊ ಕೇಬಲ್ ಅನ್ನು ಪಡೆದುಕೊಳ್ಳಿ

#4

ಕೆಲವು ಕಂಪ್ಯೂಟರ್‌ಗಳು ಮತ್ತು ಹೈ ಡಿಫಿನೀಶನ್ ಟಿವಿಗಳನ್ನು ಟಿವಿಯ ಆಡಿಯೊ ಮತ್ತು ವೀಡಿಯೊಗೆ ಸಂಪರ್ಕಪಡಿಸಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about How to connect your laptop to tv.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot