ಫೇಸ್‌ಬುಕ್ ಜಾಹೀರಾತುಗಳ ಕಿರಿಕಿರಿ ತಪ್ಪಿಸಿಕೊಳ್ಳಲು ಏನು ಮಾಡಬೇಕು?

|

ಫೇಸ್‌ಬುಕ್‌ನ ಆದಾಯದ ಮೂಲವೇ ಜಾಹಿರಾತು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ನೀವು ಫೇಸ್‌ಬುಕ್ ಟೈಮ್‌ಲೈನ್ ಸ್ಕ್ರಾಲ್ ಮಾಡುತ್ತಿರುವಾಗ ಹಲವಾರು ಜಾಹೀರಾತುಗಳು ನಿಮ್ಮ ಗಮನ ಸೆಳೆಯುತ್ತಿರುತ್ತವೆ. ಅವುಗಳಲ್ಲಿ ಹಲವು ಜಾಹಿರಾತುಗಳು ನಿಮಗೆ ಇಷ್ಟವಾಗದಿರಬಹುದು ಮತ್ತು ಕೆಲ ಜಾಹಿರಾತುಗಳು ನಿಮಗೆ ಇಷ್ಟವಾಗಬಹುದು. ಒಟ್ಟಿನಲ್ಲಿ ಫೇಸ್‌ಬುಕ್‌ ನಿಮಗೆ ಜಾಹಿರಾತುಗಳನ್ನು ನೋಡಲೇಬೇಕಾದ ಅನಿವಾರ್ಹತೆ ನಿಮಗಿರುತ್ತದೆ. ಆದರೆ, ನಿಮಗೆ ಕಿರಿ ಉಂಟುಮಾಡುವಂತಹ ಜಾಹಿರಾತುಗಳನ್ನು ನೋಡುವ ಅವಶ್ಯಕತೆ ಮಾತ್ರ ಇಲ್ಲ.!

ಜಾಹಿರಾತುಗಳು

ಹೌದು, ನೀವು ಇಂಟರ್‌ನೆಟ್‌ನಲ್ಲಿ ಏನೇ ಜಾಲಾಡಿದರೂ ಆ ಬಗ್ಗೆ ನಿಮಗೆ ಫೇಸ್‌ಬುಕ್‌ನಲ್ಲಿ ಜಾಹಿರಾತುಗಳು ಕಾಣಿಸಿಕೊಳ್ಳುವುದು ಸರ್ವೆ ಸಾಮಾನ್ಯ. ಈ ಇಂಟರ್ನೆಟ್ ಯುಗದಲ್ಲಿ ಎಲ್ಲ ವಿಷಯಗಳೂ ಒಂದಕ್ಕೊಂದು ಸಂಬಂಧ ಹೊಂದಿದ್ದು, ನೀವು ಜಾಲಾಡಿದ, ಕ್ಲಿಕ್ಕಿಸಿದ, ಆಸಕ್ತಿ ತೋರಿಸಿದ ವಿಷಯಗಳೆಲ್ಲವೂ ಪದೇ ಪದೇ ನಿಮ್ಮ ಕಣ್ಣಿಗೆ ಬೀಳುತ್ತಿರುತ್ತವೆ. ಇದು ಯಾವಾಗಲೂ ಕಿರಿಕಿರಿ ವಿಷಯವೇ. ಹಾಗಾಗಿ, ನಿರ್ದಿಷ್ಟ ಜಾಹೀರಾತು ಯಾಕೆ ನಿಮ್ಮ ಟೈಮ್‌ಲೈನ್‌ನಲ್ಲಿ ಕಾಣಿಸುತ್ತದೆ ಎಂದು ಮತ್ತು ಅದನ್ನು ನೀವು ಕಾಣದಂತೆ ಮಾಡಲು ಆಯ್ಕೆಯೊಂದನ್ನು ನೀಡಲಾಗಿದೆ.

ಆಸಕ್ತಿ ಹೊಂದಿದ್ದೀರಿ

ನೀವು ಯಾವ ಯಾವ ವಿಷಯದಲ್ಲಿ ಆಸಕ್ತಿ ಹೊಂದಿದ್ದೀರಿ ಎಂಬುದರ ಮೇಲೆಯೇ ನೀವು ಜಾಹಿರಾತುಗಳನ್ನು ಪಡೆಯುವಂತಹ ಆಯ್ಕೆ ಇದಾಗಿದೆ. ಉದಾಹರಣೆಗೆ, ನೀವು ಟೈಮ್‌ಲೈನಿನಲ್ಲಿ ‘Sponsored ಅಥವಾ ಪ್ರಾಯೋಜಿತ' ಎಂದು ನಿಮ್ಮ ಟೈಮ್‌ಲೈನ್‌ನಲ್ಲಿ ಕಾಣುವ ಜಾಹೀರಾತುಗಳನ್ನು ನೋಡಬಹುದು. ಇವುಗಳು ಯಾಕೆ ಟೈಮ್‌ಲೈನ್‌ನಲ್ಲಿ ಕಾಣಿಸುತ್ತದೆ ಎಂಬುದಕ್ಕೆ ಆ ಜಾಹೀರಾತು ಪುಟದ ಬಲಭಾಗದಲ್ಲಿ ಮೆನು ಕ್ಲಿಕ್ ಮಾಡಿದರೆ ಕಾರಣವೂ ಸಿಗುತ್ತದೆ. ಇಷ್ಟೇ ಅಲ್ಲದೆ ನಿಮ್ಮ ಆಸಕ್ತಿಗೆ ತಕ್ಕಂತಿರುವ ಜಾಹೀರಾತುಗಳು ಕಾಣುವಂತೆ ಮಾಡಬಹುದು.

Your interest

ಫೇಸ್‌ಬುಕ್‌ಗೆ ಲಾಗಿನ್ ಆಗಿ ಸೆಟ್ಟಿಂಗ್ಸ್ ಕ್ಲಿಕ್ ಮಾಡಿ ಅಲ್ಲಿ ಎಡಭಾಗದಲ್ಲಿ Ads ವಿಭಾಗ ಕ್ಲಿಕ್ ಮಾಡಿದರೆ, Your interest ಕ್ಲಿಕ್ ಮಾಡಿದರೆ ನೀವು ಯಾವ ಯಾವ ವಿಷಯದಲ್ಲಿ ಆಸಕ್ತಿ ಹೊಂದಿದ್ದೀರಿ ಎಂಬ ಪಟ್ಟಿಯನ್ನೇ ಫೇಸ್‌ಬುಕ್ ನಿಮ್ಮ ಮುಂದಿಡುತ್ತದೆ. ಉದಾಹರಣೆಗೆ Action Films ಎಂಬ ವಿಷಯ ಡಿಸ್‌ಪ್ಲೇ ಆಗಿದೆ ಎಂದಿಟ್ಟುಕೊಳ್ಳಿ. ಇದು ಯಾಕೆ ಬಂತು ಎಂಬುದು ನಿಮ್ಮ ಪ್ರಶ್ನೆಯಾದರೆ ಆ ಟಾಪಿಕ್ ಪೇಜ್‌ನ ಮೇಲೆ ಮೌಸ್ ಇಡಿ. ಕಾರಣ ಅಲ್ಲಿ ಡಿಸ್‌ಪ್ಲೇ ಆಗುತ್ತದೆ. ನಿಮಗೆ ಈ ಟಾಪಿಕ್ ಬೇಡ ಅಂದರೆ ಟಾಪಿಕ್ ಪೇಜ್‌ ಮೇಲೆ ರಿಮೂವ್ ಎಂಬ ಆಪ್ಶನ್ ಇದೆ.

ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ.

ಇನ್ನು ನೀವು ಅಲ್ಲಿ Advertisers and businesses ಕ್ಲಿಕ್ ಮಾಡಿದರೆ. ಅಲ್ಲಿ ನೀವು ಲೈಕ್ ಮಾಡಿದ ಬ್ರಾಂಡ್‌ಗಳು ಮಾತ್ರ ಅಲ್ಲ ನೀವು ಶಾಪಿಂಗ್ ಮಾಡುವ ಹೊತ್ತಲ್ಲಿ ಶೇರ್ ಮಾಡಿದ ನಿಮ್ಮ ಫೋನ್, ಇಮೇಲ್ ಖಾತೆ ಎಲ್ಲವನ್ನು ಆಧರಿಸಿ ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ. ನೀವು ರಿಲಯನ್ಸ್‌ನಲ್ಲಿ ಶಾಪಿಂಗ್ ಮಾಡಿದಾಗ ನಿಮ್ಮ ಫೋನ್‌ ಸಂಖ್ಯೆ ಕೊಟ್ಟಿರುತ್ತೀರಿ. ಅದೇ ಫೋನ್ ಸಂಖ್ಯೆ ನಿಮ್ಮ ಫೇಸ್‌ಬುಕ್‌ನೊಂದಿಗೆ ಲಿಂಕ್ ಹೊಂದಿದ್ದರೆ ನಿಮ್ಮ ಫೇಸ್‌ಬುಕ್ ಪುಟದಲ್ಲಿ ರಿಲಯನ್ಸ್ ಮಾರುವಂತಹ ಅಥವಾ ಅವರು ನೀಡುವ ಜಾಹೀರಾತು ಕಾಣಿಸಿಕೊಳ್ಳುತ್ತದೆ.

ಜಾಹಿರಾತು ಕಿರಿಕಿರಿ

ಈಗ ಫೇಸ್‌ಬುಕ್‌ನಲ್ಲಿ ಬರುವ ಜಾಹಿರಾತು ಕಿರಿಕಿರಿಯನ್ನು ತಪ್ಪಿಕೊಳ್ಳಲು Ad Settings ಕ್ಲಿಕ್ ಮಾಡಿ. ಇದನ್ನು ಕ್ಲಿಕ್ ಮಾಡಿದರೆ ನಿಮ್ಮ ಟೈಮ್‌ಲೈನ್‌ನಲ್ಲಿ ಯಾವ ರೀತಿಯ ಜಾಹೀರಾತುಗಳು ಕಾಣಿಸಿಕೊಳ್ಳಬೇಕು ಅಥವಾ ಬೇಡ ಎಂಬುದನ್ನು ನೀವೇ ನಿಯಂತ್ರಿಸಬಹುದು. ಜಾಹೀರಾತು ಸೆಟ್ಟಿಂಗ್ಸ್‌ನಲ್ಲಿ ಯಾವ ರೀತಿಯ ಜಾಹೀರಾತುಗಳಿಗೆ ಅನುಮತಿ ನೀಡಬೇಕು ಎಂಬ ಆಪ್ಶನ್ ಇರುತ್ತದೆ. ಇದಕ್ಕೆ ನೀವು ಅನುಮತಿ ನಿರಾಕರಿಸಿದರೆ ನಿರ್ದಿಷ್ಟ ವಿಭಾಗದ ಜಾಹೀರಾತುಗಳು ಕಾಣಿಸಿಕೊಳ್ಳುವುದಿಲ್ಲ. ಅಲ್ಲಿ ತಾತ್ಕಾಲಿಕ ಅಥವಾ ಶಾಶ್ವತ ಆಯ್ಕೆ ನಿಮಗೆ ಬಿಟ್ಟಿದ್ದು.

Best Mobiles in India

English summary
Click at the top right of Facebook and select Settings. Click Ads. Scroll down and click Ad settings. Click Ads based on data from partners and review your choice in this setting. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X