ಸ್ಮಾರ್ಟ್‌ಫೋನ್‌ ಅನ್ನು ಅಮೆಜಾನ್ ಫೈರ್ ಟಿವಿಯ ರಿಮೋಟ್ ಆಗಿ ಬಳಸುವುದು ಹೇಗೆ?

|

ಸದ್ಯ ಇಂಟರ್ನೆಟ್ ಆಧಾರಿತ ಮನರಂಜನಾ ಡಿವೈಸ್‌ಗಳಿಗೆ ಡಿಮ್ಯಾಂಡ್‌ ಜಾಸ್ತಿ ಇದೆ. ಆ ಪೈಕಿ ಅಮೆಜಾನ್ ಸಂಸ್ಥೆಯ ಫೈರ್‌ ಟಿವಿ ಸ್ಟಿಕ್ ಡಿವೈಸ್‌ ಬಹುತೇಕ ಗ್ರಾಹಕರನ್ನು ಸೆಳೆದಿದೆ. ಈ ಅಮೆಜಾನ್ ಫೈರ್‌ ಟಿವಿ ಸ್ಟಿಕ್ ಡಿವೈಸ್‌ ಇಂಟರ್ನೆಟ್ ಸೇವೆಗಳನ್ನು ಒದಗಿಸುತ್ತದೆ ಹಾಗೂ 4K ಗುಣಮಟ್ಟ ಪಡೆದಿದೆ. ಇನ್ನು ಈ ಡಿವೈಸ್‌ ಅನ್ನು ವಾಯಿಸ್‌ ಕಂಟ್ರೋಲ್ ಹಾಗೂ ರಿಮೋಟ್ ಕಂಟ್ರೋಲ್ ಸೌಲಭ್ಯವನ್ನು ಪಡೆದಿದೆ.

ಅಮೆಜಾನ್ ಫೈರ್ ಟಿವಿ ಸ್ಟಿಕ್

ಹೌದು, ಅಮೆಜಾನ್ ಫೈರ್ ಟಿವಿ ಸ್ಟಿಕ್ ಆಕರ್ಷಕ ಸೇವೆಗಳನ್ನು ಒಳಗೊಂಡಿದ್ದು, ಅಲೆಕ್ಸಾ ವಾಯಿಸ್‌ ಅಸಿಸ್ಟಂಟ್‌ ಸೌಲಭ್ಯವನ್ನು ಹೊಂದಿದೆ. ಅಮೆಜಾನ್ ಫೈರ್‌ ಟಿವಿ ಸ್ಟಿಕ್ ನಲ್ಲಿ 4K ಗುಣಮಟ್ಟದ ವಿಡಿಯೊ ವೀಕ್ಷಣೆ ಮಾಡಬಹುದಾಗಿದೆ. ಇದರ ಬಳಕೆಯು ಸುಲಭವಾಗಿದ್ದು, ರಿಮೋಟ್ ಹಾಗೂ ವಾಯಿಸ್ ಮೂಲಕ ಸಹ ನಿಯಂತ್ರಿಸಬಹುದಾಗಿದೆ. ವಿಶೇಷ ಅಮೆಜಾನ್ ಫೈರ್ ಟಿವಿ ರಿಮೋಟ್ ಕಂಟ್ರೋಲ್ ಕಳೆದುಕೊಂಡಿದ್ದರೇ, ಅಮೆಜಾನ್ ಫೈರ್ ಟಿವಿ ಸ್ಟಿಕ್ ನಿಯಂತ್ರಿಸಲು ಸ್ಮಾರ್ಟ್‌ಫೋನ್ ಅನ್ನು ರಿಮೋಟ್ ಆಗಿಯೂ ಬಳಕೆ ಮಾಡಬಹುದಾಗಿದೆ. ಹೇಗೆ ಅಂತೀರಾ ಮುಂದೆ ಓದಿರಿ.

ಈ ಹಂತಗಳನ್ನು ಅನುಸರಿಸಿ

ಈ ಹಂತಗಳನ್ನು ಅನುಸರಿಸಿ

ಹಂತ 1: ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಿಂದ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅಮೆಜಾನ್ ಫೈರ್ ಟಿವಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.

ಹಂತ 2: ನಿಮ್ಮ ಸ್ಮಾರ್ಟ್‌ಫೋನ್ ವೈ-ಫೈ ಮೂಲಕ ಕಾರ್ಯನಿರ್ವಹಿಸುವಾಗ ನಿಮ್ಮ ಅಮೆಜಾನ್ ಫೈರ್ ಟಿವಿಯಂತೆಯೇ ಅದೇ ವೈ-ಫೈ ನೆಟ್‌ವರ್ಕ್‌ಗೆ ಸಂಪರ್ಕಗೊಂಡಿದೆ ಎಂದು ಖಚಿತಪಡಿಸಿಕೊಳ್ಳಿ.

ಅಪ್ಲಿಕೇಶನ್ ತೆರೆಯಿರಿ

ಹಂತ 3: ಡೌನ್‌ಲೋಡ್ ಮಾಡಿದ ನಂತರ, ಅಪ್ಲಿಕೇಶನ್ ತೆರೆಯಿರಿ. ಇದು ನಿಮ್ಮ ಅಮೆಜಾನ್ ಖಾತೆಗೆ ಸೈನ್ ಇನ್ ಮಾಡಲು ಕೇಳುತ್ತದೆ.

ಹಂತ 4: ನಿಮ್ಮ ಅಮೆಜಾನ್ ಖಾತೆಯನ್ನು ಬಳಸಿಕೊಂಡು ನೀವು ಲಾಗ್-ಇನ್ ಆಗುತ್ತಿರುವಾಗ, ಸ್ಮಾರ್ಟ್‌ಫೋನ್ ಬಳಸಿ ನೀವು ನಿಯಂತ್ರಿಸಬಹುದಾದ ಹತ್ತಿರದ ಫೈರ್ ಟಿವಿ ಸಾಧನಗಳ ಲಿಸ್ಟ್‌ ಅಪ್ಲಿಕೇಶನ್ ಈಗ ನಿಮಗೆ ಕಾಣಿಸುತ್ತದೆ.

ಎಕ್ಸ್‌ಟ್ರನಲ್ ರಿಮೋಟ್

ಹಂತ 5: ನೀವು ನಿಯಂತ್ರಿಸಲು ಬಯಸುವ ಸಾಧನವನ್ನು ಟ್ಯಾಪ್ ಮಾಡಿ. ನೀವು ಅದನ್ನು ಮಾಡಿದ ತಕ್ಷಣ, ಟಿವಿ ನಾಲ್ಕು ಅಂಕಿಯ ಕೋಡ್ ಅನ್ನು ತೋರಿಸುತ್ತದೆ. ಡಿವೈಸ್‌ದೊಂದಿಗೆ ಕನೆಕ್ಟ್ ಮಾಡಲು ಅದೇ ಕೋಡ್ ಅನ್ನು ಅಪ್ಲಿಕೇಶನ್‌ಗೆ ನಮೂದಿಸಿ.

ಹಂತ 6: ಕನೆಕ್ಟ್ ಆದ ನಂತರ, ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಫೈರ್ ಟಿವಿ ರಿಮೋಟ್‌ನಂತೆ ಬಳಸಲು ನಿಮಗೆ ಸಾಧ್ಯವಾಗುತ್ತದೆ. ಟಚ್-ಪ್ಯಾಡ್ ನಂತಹ ಪ್ರದೇಶವಿದೆ, ಅದನ್ನು ನೀವು ಮೇಲಕ್ಕೆ, ಕೆಳಕ್ಕೆ, ಎಡಕ್ಕೆ ಮತ್ತು ಬಲಕ್ಕೆ ಸ್ವೈಪ್ ಮಾಡಬಹುದು. ಎಕ್ಸ್‌ಟ್ರನಲ್ ರಿಮೋಟ್‌ನಂತೆಯೇ ಪ್ಲೇ / ವಿರಾಮ ಮತ್ತು ಫಾಸ್ಟ್ ಫಾರ್ವರ್ಡ್ ಬಟನ್‌ಗಳ ಜೊತೆಗೆ ಬ್ಯಾಕ್ ಬಟನ್, ಬಟನ್ ಬಟನ್ ಮತ್ತು ಮೆನು ಬಟನ್ ಸಹ ಇದೆ.

Best Mobiles in India

English summary
You can follow this step-by-step guide to control your Amazon Fire TV with your smartphone as a remote control.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X