ವಾಟ್ಸಪ್‌ ಚಾಟ್ ಅನ್ನು PDF ಫಾರ್ಮೇಟ್‌ಗೆ ಕನ್ವರ್ಟ್ ಮಾಡುವುದು ಹೇಗೆ ಗೊತ್ತಾ?

|

ಸದ್ಯ ವಿಶ್ವದಲ್ಲಿಯೇ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಒಳಗೊಂಡಿರುವ ವಾಟ್ಸಪ್‌ ಮೆಸೆಜ್ ಆಪ್ ತನ್ನ ಬಳಕೆದಾರರಿಗೆ ಈಗಾಗಲೇ ಸಾಕಷ್ಟು ಫೀಚರ್ಸ್‌ಗಳನ್ನು ಪರಿಚಯಿಸಿದೆ. ಟೆಕ್ಸ್ಟ್ ಮೆಸೆಜ್ ಸೇರಿದಂತೆ ಮೀಡಿಯಾ ಮೆಸೆಜ್ ಬ್ಯಾಕ್‌ಅಪ್ ಪಡೆದುಕೊಳ್ಳುವ ಅವಕಾಶವನ್ನು ನೀಡಿದ್ದು, ಬೇಕಿದ್ದರೇ ಅತೀ ಮುಖ್ಯ ಎನಿಸುವ ಮೆಸೆಜ್‌ಗಳನ್ನು ಪಿಡಿಎಫ್‌ ಮಾದರಿಗೆ ವರ್ಗಾವಣೆ ಸಹ ಮಾಡಿಕೊಳ್ಳಬಹುದಾದ ಆಯ್ಕೆ ಇದೆ.

ಫೇಸ್‌ಬುಕ್ ಒಡೆತನ

ಹೌದು, ಫೇಸ್‌ಬುಕ್ ಒಡೆತನದ ವಾಟ್ಸಪ್‌ ಆಪ್‌ನಲ್ಲಿ ಬಳಕೆದಾರರು ಚಾಟ್‌(ಮೆಸೆಜ್‌) ಅನ್ನು ಬ್ಯಾಕ್‌ಅಪ್‌ ಪಡೆಯಬಹುದು, ಹಾಗೆಯೇ ಮೇಲ್‌ಗೆ ಸೆಂಡ್ ಸಹ ಮಾಡಬಹುದಾಗಿದೆ. ಆದರೆ ಚಾಟ್ ಫಾರ್ಮೇಟ್ .txt ಮಾದರಿಯಲ್ಲಿರುತ್ತದೆ. ಆ ಚಾಟ್‌ ಅನ್ನು ಬಳಕೆದಾರರು ಪಿಡಿಎಫ್‌ ಫಾರ್ಮೇಟ್‌ಗೆ ಕನ್ವರ್ಟ್‌ ಮಾಡಿಕೊಳ್ಳಬಹುದು. ಹಾಗಾದರೇ ವಾಟ್ಸಪ್ ಚಾಟ್ ಅನ್ನು ಪಿಡಿಎಫ್‌ ಫಾರ್ಮೇಟ್‌ನಲ್ಲಿ ಎಕ್ಸ್‌ಪೋರ್ಟ್‌ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಪಿಡಿಎಫ್‌ನಲ್ಲಿ ವಾಟ್ಸಪ್ ಚಾಟ್

ಪಿಡಿಎಫ್‌ನಲ್ಲಿ ವಾಟ್ಸಪ್ ಚಾಟ್

ವಾಟ್ಸಪ್‌ ಚಾಟ್ ಅನ್ನು ಪಿಡಿಎಫ್‌ ಫಾರ್ಮೇಟ್‌ಗೆ ವರ್ಗಾಹಿಸಲು ಥರ್ಡ್‌ಪಾರ್ಟಿ ಆಪ್ಸ್ ಗಳ ನೆರವು ಅಗತ್ಯ ಇದೆ. ಅದಕ್ಕಾಗಿ ಆಂಡ್ರಾಯ್ಡ್ ಬಳಕೆದಾರರಿಗೆ WPS ಆಫೀಸ್‌ ಆಪ್‌ ಬೆಸ್ಟ್‌ ಆಯ್ಕೆ ಆಗಿದೆ. WPS ಆಫೀಸ್ ಟೆಕ್ಸ್ಟ್, ಪಿಡಿಎಫ್, ಜಿಪಿಜೆ ಸೇರಿದಂತೆ ಎಲ್ಲ ಬಗೆಯ ಫೈಲ್ ಫಾರ್ಮೇಟ್‌ಗಳ ಆಯ್ಕೆಯನ್ನು ಹೊಂದಿದ್ದು, ಹೀಗಾಗಿ ವಾಟ್ಸಪ್‌ ಚಾಟ್ ಅನ್ನು ಸುಲಭವಾಗಿ ಪಿಡಿಎಫ್‌ ಕನ್ವರ್ಟ್ ಮಾಡಬಹುದು.

ಪಿಡಿಎಫ್‌ಗೆ ಕನ್ವರ್ಟ್‌ ಮಾಡುವುದು ಹೇಗೆ

ಪಿಡಿಎಫ್‌ಗೆ ಕನ್ವರ್ಟ್‌ ಮಾಡುವುದು ಹೇಗೆ

ವಾಟ್ಸಪ್‌ನಲ್ಲಿ ಚಾಟ್ ಬ್ಯಾಕ್‌ಅಪ್ ಪಡೆಯುವ ಸೌಲಭ್ಯ ಇದೆ. ಅದು ಟೆಕ್ಸ್ಟ್‌ ಫಾರ್ಮೇಟ್‌ನಲ್ಲಿ ಇರುತ್ತದೆ. ಥರ್ಡ್‌ಪಾರ್ಟಿ ಆಪ್ ಬಳಸಿ ಚಾಟ್ ಅನ್ನು ಪಿಡಿಎಫ್‌ ಮಾದರಿಯ ವರ್ಗಾಯಿಸಬಹುದು. ಅದಕ್ಕಾಗಿ ಈ ಹಂತಗಳನ್ನು ಅನುಸರಿಸಿರಿ.
* ಆಂಡ್ರಾಯ್ಡ್‌ ಫೋನಿನಲ್ಲಿ WPS ಆಫೀಸ್‌ ಆಪ್ ಇನ್‌ಸ್ಟಾಲ್ ಮಾಡಿಕೊಳ್ಳಿ.
* ಇನ್‌ಸ್ಟಾಲ್ ನಂತರ ವಾಟ್ಸಪ್ ಆಪ್ ತೆರೆಯಿರಿ
* ಪಿಡಿಎಫ್‌ಗೆ ಎಕ್ಸ್‌ಪೋರ್ಟ್‌ ಮಾಡುವ ಚಾಟ್‌ ಅನ್ನು ತೆರೆಯಿರಿ.
* ಆಗ ಬಲಭಾಗದಲ್ಲಿ ಮೂರು ಡಾಟ್‌ಗಳ ಆಯ್ಕೆ ಒತ್ತಿರಿ.
* ಪಾಪ್‌ಅಪ್‌ ವಿಂಡೊ ಕಾಣಿಸುತ್ತದೆ. ಆಗ ವಿತ್‌ಔಟ್‌ ಮೀಡಿಯಾ ಆಯ್ಕೆ ಸೆಲೆಕ್ಟ್ ಮಾಡಿರಿ.
* ಆಗ ಶೇರ್ ಆಯ್ಕೆ ಕಾಣಿಸುತ್ತದೆ. ಜಿ-ಮೇಲ್ ಆಯ್ಕೆ ಮಾಡಿರಿ.
* ಆ ಫೈಲ್‌ ನಿಮ್ಮ ಇ-ಮೇಲ್‌ ಮಾಡಿಕೊಂಡು, ಡೌನ್‌ಲೋಡ್ ಮಾಡಿಕೊಳ್ಳಿ.
* ಡೌನ್‌ಲೋಡ್ ಆಗಿರುವ ವಾಟ್ಸಪ್ ಚಾಟ್ ಟೆಕ್ಸ್ಟ್ ಅನ್ನು WPS ಆಫೀಸ್‌ ಆಪ್‌ ಮೂಲಕ ತೆರೆಯಿರಿ
* ಇಲ್ಲಿ ಪಿಡಿಎಫ್‌ ಫಾರ್ಮೇಟ್‌ಗೆ ಎಕ್ಸ್‌ಪೋರ್ಟ್ ಮಾಡುವ ಆಯ್ಕೆ ಸಿಗಲಿದೆ.

Best Mobiles in India

English summary
WPS Office can easily be used which is available on Play Store and is the best suite app of Android. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X