ಯೂಟ್ಯೂಬ್ ವೀಡಿಯೊಗಳನ್ನು ಎಮ್‌ಪಿ3 ಹಾಡನ್ನಾಗಿ ಪರಿವರ್ತಿಸುವುದು ಹೇಗೆ?

By Shwetha
|

ಯೂಟ್ಯೂಬ್ ಒಂದು ಜನಪ್ರಿಯ ವೀಡಿಯೊ ಸ್ಟ್ರೀಮಿಂಗ್ ಅಪ್ಲಿಕೇಶನ್ ಆಗಿದೆ. ಮ್ಯೂಸಿಕ್ ವೀಡಿಯೊಗಳಿಂದ ಹಿಡಿದು ಚಲನ ಚಿತ್ರದ ಟ್ರೈಲರ್‌ವರೆಗೆ ಲೈವ್ ಈವೆಂಟ್‌ಗಳು ಮತ್ತು ಕನ್ಸರ್ಟ್‌ಗಳನ್ನು ನಿಮಗೆ ನೀಡುತ್ತದೆ. ಇತ್ತೀಚೆಗೆ ತಾನೇ ಕಂಪೆನಿ ಆಫ್‌ಲೈನ್ ಪ್ಲೇಬ್ಯಾಕ್ ಅನ್ನು ಪ್ರಸ್ತುತಿಪಡಿಸಿದೆ. ಇದರಿಂದ ವೀಡಿಯೊಗಳನ್ನು ಡೌನ್‌ಲೋಡ್ ಮಾಡಿಕೊಂಡು ನಂತರ ಅವುಗಳನ್ನು ವೀಕ್ಷಿಸಬಹುದಾಗಿದೆ. ಇದಕ್ಕೆ ಇಂಟರ್ನೆಟ್ ಸಂಪರ್ಕದ ಅಗತ್ಯವಿರುವುದಿಲ್ಲ. ಆದರೆ ಅದೇ ವೀಡಿಯೊವನ್ನು ಎಮ್‌ಪಿ3 ಯನ್ನಾಗಿ ಪರಿವರ್ತಿಸಿ ಹಾಡು ಕೇಳಲು ಹೇಗೆ ಬಳಸಬಹುದು ಎಂಬುದನ್ನೇ ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ.

ಓದಿರಿ: ಸ್ಮಾರ್ಟ್‌ಫೋನ್ ಸ್ಫೋಟಗೊಳ್ಳಲು ಕಾರಣಗಳೇನು?

#1

#1

ಯೂಟ್ಯೂಬ್‌ಗೆ ಹೋಗಿ ಮತ್ತು ನೀವು ಕನ್‌ವರ್ಟ್ ಮಾಡಿಕೊಳ್ಳಬೇಕೆಂಬ ವೀಡಿಯೊಗಾಗಿ ನೋಡಿ. ಬ್ರೌಸರ್ ವಿಳಾಸ ಪಟ್ಟಿಯಿಂದ ಯುಆರ್‌ಎಲ್ ನಕಲಿಸಿ. ಕನ್‌ವರ್ಟರ್ ವೆಬ್‌ಸೈಟ್‌ನಲ್ಲಿ ಬಳಸಲು ಇದು ನಮಗೆ ಬೇಕು.

#2

#2

ಇದೀಗ, ClipConverter.cc ವೆಬ್‌ಸೈಟ್‌ನಲ್ಲಿ ಯೂಟ್ಯೂಬ್ ಯುಆರ್‌ಎಲ್ ಅನ್ನು ಪೇಸ್ಟ್ ಮಾಡಿ. ಈ ಬಾಕ್ಸ್‌ನ ಕೆಳಗೆ, ಆಡಿಯೊ ಕನ್‌ವರ್ಶನ್ ಸ್ವರೂಪವನ್ನು ಅಂದರೆ ಎಮ್‌ಪಿ3, ಎಎಸಿ, ಎಮ್4ಎ ಮತ್ತು ವೀಡಿಯೊ ಫಾರ್ಮ್ಯಾಟ್‌ಗಳಾದ 3GP, ಎಮ್‌ಪಿ4, ಎವಿಐ ಮತ್ತು ಎಮ್‌ಒವಿ ಯನ್ನು ಅನ್ನು ಕಾಣಬಹುದು. ವೀಡಿಯೊವನ್ನು ನೀವು ಕನ್‌ವರ್ಟ್ ಮಾಡಿಕೊಳ್ಳಬೇಕಾದ ಸ್ವರೂಪವನ್ನು ಆಯ್ಕೆಮಾಡಿ.

#3

#3

ಎಮ್‌ಪಿ3 ಅನ್ನು ಆಯ್ಕೆಮಾಡಿ ಮತ್ತು 'ಕಂಟಿನ್ಯೂ' ಕ್ಲಿಕ್ ಮಾಡಿ. ಕನ್‌ವರ್ಶನ್ ಸಂಪೂರ್ಣಗೊಂಡ ನಂತರ, ಪರದೆಯಲ್ಲಿ ಡೌನ್‌ಲೋಡ್ ಲಿಂಕ್ ಅನ್ನು ನೀವು ಪಡೆದುಕೊಳ್ಳುತ್ತೀರಿ. ಡೌನ್‌ಲೋಡ್ ಕ್ಲಿಕ್ ಮಾಡಿ ಮತ್ತು ನಿಮ್ಮ ಕಂಪ್ಯೂಟರ್‌ನಲ್ಲಿ ಕನ್‌ವರ್ಟ್ ಆದ ಎಮ್‌ಪಿ3 ಹಾಡು ಡೌನ್‌ಲೋಡ್ ಆಗಲು ಆರಂಭಗೊಳ್ಳುತ್ತದೆ.

#4

#4

ವೀಡಿಯೊ ಯುಆರ್‌ಎಲ್ ಪಡೆದುಕೊಳ್ಳಿ ಮತ್ತು ಸೆಕ್ಶನ್‌ನಲ್ಲಿ ಪೇಸ್ಟ್ ಮಾಡಿಕೊಳ್ಳಿ
ಈ ಪ್ರಕ್ರಿಯೆಯೂ ಒಂದೇ ರೀತಿಯದ್ದಾಗಿದೆ. ಬ್ರೌಸರ್ ಆಧಾರಿತ ಸೇವೆಯ ಬದಲಿಗೆ ಡೆಸ್ಕ್‌ಟಾಪ್ ಪ್ರೊಗ್ರಾಮ್ ಅನ್ನು ನಿಮಗೆ ಚಾಲನೆ ಮಾಡಿಕೊಳ್ಳಬಹುದಾಗಿದೆ. ಯೂಟ್ಯೂಬ್‌ಗೆ ಹೋಗಿ ಮತ್ತು ಕನ್‌ವರ್ಟ್ ಮಾಡಬೇಕಾದ ವೀಡಿಯೊವನ್ನು ಕಂಡುಕೊಳ್ಳಿ. ಯುಆರ್ಎಲ್ ಕಾಲಮ್‌ನಲ್ಲಿ ಯುಆರ್‌ಎಲ್ ಕಾಪಿ ಮಾಡಿ ಮತ್ತು ಪೇಸ್ಟ್ ಮಾಡಿ.

#5

#5

ಇಲ್ಲಿ ನಿಮಗೆ ಸಾಕಷ್ಟು ವೀಡಿಯೊ ಸ್ವರೂಪಗಳು ದೊರೆಯುತ್ತದೆ. ಪ್ರತಿಯೊಂದು ನಿಮ್ಮ ಡಿವೈಸ್‌ಗೆ ಯೂಟ್ಯೂಬ್ ವೀಡಿಯೊಗಳನ್ನು ಆಡಿಯೊ ಸ್ವರೂಪದಲ್ಲಿ ಕನ್‌ವರ್ಟ್ ಮಾಡಲು ನೆರವಾಗಲಿದೆ. ನಿಮ್ಮ ಐಫೋನ್, ಐಪ್ಯಾಡ್, ಟ್ಯಾಬ್ಲೆಟ್ಸ್ ಮತ್ತು ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳಿಗೆ ವೀಡಿಯೊವನ್ನು ಕನ್‌ವರ್ಟ್ ಮಾಡಿಕೊಳ್ಳಬಹುದಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ನೀವು ಅರಿಯಲೇಬೇಕಾದ ಟಾಪ್ ಕೀಬೋರ್ಡ್ ಶಾರ್ಟ್‌ಕಟ್ಸ್</a><br /><a href=ಉಚಿತವಾಗಿ ಕಾರ್ಟೂನ್‌ ನೋಡಲು ಟಾಪ್‌ 10 ವೆಬ್‌ಸೈಟ್‌ಗಳು
ಚಾರ್ಜರ್, ಕರೆಂಟ್ ಜಂಜಾಟವಿಲ್ಲದೆಯೇ ಫೋನ್ ಚಾರ್ಜ್ ಮಾಡುವುದು ಹೇಗೆ?" title="ನೀವು ಅರಿಯಲೇಬೇಕಾದ ಟಾಪ್ ಕೀಬೋರ್ಡ್ ಶಾರ್ಟ್‌ಕಟ್ಸ್
ಉಚಿತವಾಗಿ ಕಾರ್ಟೂನ್‌ ನೋಡಲು ಟಾಪ್‌ 10 ವೆಬ್‌ಸೈಟ್‌ಗಳು
ಚಾರ್ಜರ್, ಕರೆಂಟ್ ಜಂಜಾಟವಿಲ್ಲದೆಯೇ ಫೋನ್ ಚಾರ್ಜ್ ಮಾಡುವುದು ಹೇಗೆ?" />ನೀವು ಅರಿಯಲೇಬೇಕಾದ ಟಾಪ್ ಕೀಬೋರ್ಡ್ ಶಾರ್ಟ್‌ಕಟ್ಸ್
ಉಚಿತವಾಗಿ ಕಾರ್ಟೂನ್‌ ನೋಡಲು ಟಾಪ್‌ 10 ವೆಬ್‌ಸೈಟ್‌ಗಳು
ಚಾರ್ಜರ್, ಕರೆಂಟ್ ಜಂಜಾಟವಿಲ್ಲದೆಯೇ ಫೋನ್ ಚಾರ್ಜ್ ಮಾಡುವುದು ಹೇಗೆ?

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
There are two ways to convert YouTube videos to MP3 on your PC – you can either use web based services or you could download native, free to use programs.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X