ಸ್ಮಾರ್ಟ್‌ಫೋನ್ ಸ್ಫೋಟಗೊಳ್ಳಲು ಕಾರಣಗಳೇನು?

By Shwetha
|

ಫೋನ್ ಚಾರ್ಜ್ ಮಾಡುತ್ತಿರುವಾಗ ಫೋನ್ ಸ್ಫೋಟಗೊಂಡಿರುವ ಸುದ್ದಿಗಳನ್ನು ನಾವು ಕೇಳಿರುತ್ತೇವೆ, ಓದಿರುತ್ತೇವೆ. ಗ್ಯಾಲಕ್ಸಿ ಎಸ್4 ಸ್ಮಾರ್ಟ್‌ಫೋನ್‌ನಿಂದ ಉಂಟಾದ ಬೆಂಕಿ, ಅಂತೆಯೇ ಮಲಗಿದ ಸಂದರ್ಭದಲ್ಲಿ ಫೋನ್ ಚಾರ್ಜ್‌ನಲ್ಲಿದ್ದಾಗ ಉಂಟಾದ ಸ್ಫೋಟ ಮೊದಲಾದ ಸುದ್ದಿಗಳ ಬಗ್ಗೆ ನೀವು ಮಾಹಿತಿ ಪಡೆದಿರುತ್ತೀರಿ ಅಲ್ಲವೇ?

ಸ್ಮಾರ್ಟ್‌ಫೋನ್‌ಗಳು ಸ್ಫೋಟಗೊಳ್ಳಲು ಕಾರಣ ಬ್ಯಾಟರಿ ವಿನ್ಯಾಸದಲ್ಲಿರುವ ದೋಷವಾಗಿದೆ. ತಪ್ಪಾದ ಬ್ಯಾಟರಿ ದೋಷ ಕೂಡ ಫೋನ್‌ಗೆ ಹಾನಿಯುಂಟು ಮಾಡುವ ಸಾಧ್ಯತೆ ಇರುತ್ತದೆ. ಇನ್ನು ಫೋನ್ ಚಾರ್ಜರ್ ಕೂಡ ದೋಷವನ್ನು ಹೊಂದಿದ್ದರೆ ಸ್ಮಾರ್ಟ್‌ಫೋನ್ ಸ್ಫೋಟಗೊಳ್ಳುತ್ತದೆ. ಆದ್ದರಿಂದ ಫೋನ್ ಬ್ಯಾಟರಿ ಮತ್ತು ಚಾರ್ಜರ್‌ನಿಂದ ಸ್ಫೋಟದ ಅಪಾಯಗಳು ಉಂಟಾಗುತ್ತಿರುತ್ತದೆ.

ಓದಿರಿ: ಫೋನ್ ಬ್ಯಾಟರಿ ಉಳಿಸುವ ಟಾಪ್ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು

ಇಂದಿನ ಲೇಖನದಲ್ಲಿ ಸ್ಮಾರ್ಟ್‌ಫೋನ್ ಬ್ಯಾಟರಿ ಏಕೆ ಸ್ಫೋಟಗೊಳ್ಳುತ್ತದೆ ಮತ್ತು ಅವುಗಳು ಸ್ಫೋಟಗೊಳ್ಳದಂತೆ ತಡೆಯುವುದು ಹೇಗೆ ಎಂಬುದನ್ನು ಕುರಿತ ಮಾಹಿತಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ.

#1

#1

ಲಿಥಿಯಮ್ ಬ್ಯಾಟರಿಗಳು ಥರ್ಮಲ್ ರನ್‌ವೇಯಂತಹ ಸಮಸ್ಯೆಗಳನ್ನು ಹೊಂದಿದ್ದು, ಇದು ಹೆಚ್ಚು ಬಿಸಿಯಾದಂತೆ ಸ್ಫೋಟಗೊಳ್ಳುವ ಅಪಾಯವಿರುತ್ತದೆ. ಈ ಕಾರಣದಿಂದಾಗಿ, ಸ್ಮಾರ್ಟ್‌ಫೋನ್ ತಯಾರಕರು ಹೆಚ್ಚು ಚಾರ್ಜ್‌ನಿಂದ ಬ್ಯಾಟರಿಯನ್ನು ಸಂರಕ್ಷಿಸುವ ವಿಧಾನಗಳನ್ನು ಅಳವಡಿಸಬೇಕಾಗಿದ್ದು ಇದರಿಂದ ಫೋನ್ ಸ್ಫೋಟವನ್ನು ತಡೆಗಟ್ಟಬಹುದಾಗಿದೆ.

#2

#2

ಈ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಹೆಚ್ಚು ತೆಳುವಾಗಿದ್ದು ಬ್ಯಾಟರಿಗಳನ್ನು ಕೂಡ ಇದೇ ಮಾದರಿಯಲ್ಲಿ ತಯಾರಿಸಲಾಗುತ್ತಿದೆ. ಇದರಿಂದಾಗಿ ಬ್ಯಾಟರಿಗಳಿಗೆ ಧನಾತ್ಮಕ ಮತ್ತು ಋಣಾತ್ಮಕ ಪ್ಲೇಟ್‌ಗಳನ್ನು ಪತ್ಯೇಕವಾಗಿ ಇರಿಸಿಕೊಳ್ಳಲು ಸ್ಥಳದ ಅಭಾವ ಉಂಟಾಗುತ್ತಿದೆ. ಈ ಎರಡು ಪ್ಲೇಟ್‌ಗಳ ನಡುವೆ ಏನಾದರೂ ಸಂಭವಿಸಿದಲ್ಲಿ ಇದು ಸಮಸ್ಯೆಯನ್ನು ಉಂಟುಮಾಡಬಹುದು, ವಿಶೇಷವಾಗಿ ಅಗತ್ಯ ಪ್ರಮಾಣಗಳಿಗೆ ಬ್ಯಾಟರಿಯನ್ನು ವಿನ್ಯಾಸಗೊಳಿಸದೇ ಇದ್ದ ಸಂದರ್ಭದಲ್ಲಿ.

#3

#3

ಬ್ಯಾಟರಿ ತಯಾರಿಕೆಯು ಎಲ್ಲಾ ನಿಯಮಗಳನ್ನು ಪೂರೈಸುವಂತಿರಬೇಕು ಮತ್ತು ಸ್ಮಾರ್ಟ್‌ಫೋನ್ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡಿರವಬೇಕು. ಆದರೆ ಕೆಲವು ತಯಾರಕರು ಹಣ ಉಳಿಸುವ ಉದ್ದೇಶದಿಂದಾಗಿ ಬ್ಯಾಟರಿ ಓವರ್ ಹೀಟ್‌ನ ಸಂರಕ್ಷಣೆಯ ಬಗ್ಗೆ ಗಮನ ತೆಗೆದುಕೊಳ್ಳುವುದಿಲ್ಲ. ಅವರ ಈ ನಿರ್ಲಕ್ಷ್ಯತನದಿಂದಾಗಿ ದೊಡ್ಡ ಅನಾಹುತವೇ ಸಂಭವಿಸುತ್ತದೆ ಇಂತಹುದ್ದರಲ್ಲಿ ಬಳಕೆದಾರರು ರಾತ್ರಿ ಪೂರ್ತಿ ಚಾರ್ಜ್ ಮಾಡುವ ಅಭ್ಯಾಸವನ್ನಿಟ್ಟುಕೊಂಡಿರುತ್ತಾರೆ ಎಂದಾದಲ್ಲಿ ಅಂತಹವರಿಗೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿರುತ್ತದೆ.

#4

#4

ತಯಾರಕರ ಒರಿಜಿನಲ್ ಬ್ಯಾಟರಿಗಳನ್ನು ಮಾತ್ರವೇ ಬಳಸಿ ರೀಪ್ಲೇಸ್‌ಮೆಂಟನ್ನು ಮಾಡಿ. ಮಾರುಕಟ್ಟೆಯಲ್ಲಿ ನಿಮ್ಮ ಫೋನ್‌ಗಳಿಗೆ ಕಡಿಮೆ ದರದ ಬ್ಯಾಟರಿಗಳು ಲಭ್ಯವಾಗುತ್ತವೆ, ಆದರೆ ನಕಲಿ ಬ್ಯಾಟರಿಗಳನ್ನು ಬಳಸದೇ ಅಸಲಿ ಬ್ಯಾಟರಿಗಳನ್ನು ಮಾತ್ರ ಬಳಸಿ.

#5

#5

ಬಿಸಿಯಾದ ಸ್ಥಳಗಳಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಇರಿಸಬೇಡಿ, ವಿಶೇಷವಾಗಿ ಅದನ್ನು ಚಾರ್ಜ್‌ನಲ್ಲಿರಿಸಿದ್ದಾಗ. ಇನ್ನಷ್ಟು ತಾಮಪಾನವು ಓವರ್ ಹೀಟಿಂಗ್ ಸಮಸ್ಯೆಯನ್ನು ಇನ್ನಷ್ಟು ಅಪಾಯಕಾರಿಯಾಗಿಸಬಹುದು.

#6

#6

ನಿಮ್ಮ ಫೋನ್ ಅನ್ನು ಚಾರ್ಜ್ ಮಾಡುತ್ತಿರುವಾಗ ಫೋನ್ ಬಳಸಿದಲ್ಲಿ ಬ್ಯಾಟರಿ ಇನ್ನಷ್ಟು ಬಿಸಿಯಾಗುತ್ತದೆ, ಇದರಿಂದ ಫೋನ್ ಸ್ಫೋಟಗೊಳ್ಳುವ ಅಪಾಯ ತೀವ್ರವಾಗಿರುತ್ತದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಒಂದೇ ಆಂಡ್ರಾಯ್ಡ್ ಡಿವೈಸ್‌ನಲ್ಲಿ ಎರಡು ವಾಟ್ಸಾಪ್ ಖಾತೆಗಳನ್ನು ಬಳಸುವುದು ಹೇಗೆ?</a><br /><a href=ಮನೆಯ ವೈಫೈ ಸುಧಾರಣೆಗೆ 5 ಟಿಪ್ಸ್‌ಗಳು
ವಾಟ್ಸಾಪ್‌ನಲ್ಲಿ ಹಣ ಕಳುಹಿಸುವುದು ಮತ್ತು ಸ್ವೀಕರಿಸುವುದು ಹೇಗೆ?" title="ಒಂದೇ ಆಂಡ್ರಾಯ್ಡ್ ಡಿವೈಸ್‌ನಲ್ಲಿ ಎರಡು ವಾಟ್ಸಾಪ್ ಖಾತೆಗಳನ್ನು ಬಳಸುವುದು ಹೇಗೆ?
ಮನೆಯ ವೈಫೈ ಸುಧಾರಣೆಗೆ 5 ಟಿಪ್ಸ್‌ಗಳು
ವಾಟ್ಸಾಪ್‌ನಲ್ಲಿ ಹಣ ಕಳುಹಿಸುವುದು ಮತ್ತು ಸ್ವೀಕರಿಸುವುದು ಹೇಗೆ?" />ಒಂದೇ ಆಂಡ್ರಾಯ್ಡ್ ಡಿವೈಸ್‌ನಲ್ಲಿ ಎರಡು ವಾಟ್ಸಾಪ್ ಖಾತೆಗಳನ್ನು ಬಳಸುವುದು ಹೇಗೆ?
ಮನೆಯ ವೈಫೈ ಸುಧಾರಣೆಗೆ 5 ಟಿಪ್ಸ್‌ಗಳು
ವಾಟ್ಸಾಪ್‌ನಲ್ಲಿ ಹಣ ಕಳುಹಿಸುವುದು ಮತ್ತು ಸ್ವೀಕರಿಸುವುದು ಹೇಗೆ?

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
This post will give you all the information on why, the smartphone battery gets busted and how to stop them getting exploded. Read on to know more.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X