ವಾಟ್ಸಪ್‌ನಲ್ಲಿ GIF ಕ್ಲಿಪ್ ಸೆಂಡ್ ಮಾಡುವುದು ಹೇಗೆ ಗೊತ್ತಾ?

|

ಅತೀ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ವಾಟ್ಸಪ್ ಸದ್ಯ ಟ್ರೆಂಡಿಂಗ್‌ನಲ್ಲಿರುವ ಇನ್‌ಸ್ಟಂಟ್ ಮೆಸೆಜಿಂಗ್ ಆಪ್ ಆಗಿದೆ. ಬಳಕೆದಾರರ ಅನುಕೂಲಕ್ಕಾಗಿ ನಿರಂತರ ಅಪ್‌ಡೇಟ್ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಮುನ್ನಡೆದಿರುವ ವಾಟ್ಸಪ್ ಮೀಡಿಯಾ ಫೈಲ್‌ ಟ್ರಾನ್ಸಫರ್‌ಗೂ ಅತ್ಯುತ್ತಮ ಪ್ಲಾಟ್‌ಫಾರ್ಮ್ ಆಗಿದೆ. ಹಾಗೆಯೇ ವಾಟ್ಸಪ್‌ನಲ್ಲಿ ಬಳಕೆದಾರರು GIF ಮಾದರಿಯ ಫೈಲ್‌ ಸಹ ಸೆಂಡ್ ಮಾಡಬಹುದಾಗಿದೆ.

GIF ಮಾದರಿಯ ಫೈಲ್

ಹೌದು, ಪ್ರಸ್ತುತ GIF ಮಾದರಿಯ ಫೈಲ್‌ಗಳನ್ನು ಹೆಚ್ಚಿನ ಬಳಕೆದಾರರು ಬಳಕೆಮಾಡುತ್ತಿದ್ದಾರೆ. ತ್ವರಿತವಾಗಿ ಶೇರ್ ಮಾಡಲು ಜಿಐಎಫ್ ಫೈಲ್‌ ಪೂರಕವಾಗಿದ್ದು, ಫೋಟೊ ಹಾಗೂ ವಿಡಿಯೊ ಫೈಲ್‌ಗಳಿಂಗಿಂತ ಅಟ್ರ್ಯಾಕ್ಟಿವ್ ಅನಿಸುತ್ತವೆ. ಇನ್ನು GIF ಫೀಚರ್ ಆಂಡ್ರಾಯ್ಡ್ ಮತ್ತು ಐಒಎಸ್ ಎರಡು ಓಎಸ್‌ ಮಾದರಿಯ ವಾಟ್ಸಾಪ್ ಬಳಕೆದಾರರಿಗೆ ಲಭ್ಯವಿದೆ. ಬಳಕೆದಾರರು ತಮ್ಮ ಗ್ಯಾಲರಿಯಲ್ಲಿರುವ ವಿಡಿಯೊವನ್ನು GIF ಮಾಡಿ ಕಳುಹಿಸಬಹುದಾಗಿದೆ. ಹಾಗದರೇ ವಾಟ್ಸಪ್‌ನಲ್ಲಿ GIF ಫೈಲ್ ಸೆಂಡ್ ಮಾಡುವುದು ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ವಾಟ್ಸಾಪ್‌ನಲ್ಲಿ ವಿಡಿಯೊಗಳನ್ನು GIF ಮಾಡಿ ಸೆಂಡ್ ಮಾಡಲು ಈ ಹಂತ ಅನುಸರಿಸಿ

ವಾಟ್ಸಾಪ್‌ನಲ್ಲಿ ವಿಡಿಯೊಗಳನ್ನು GIF ಮಾಡಿ ಸೆಂಡ್ ಮಾಡಲು ಈ ಹಂತ ಅನುಸರಿಸಿ

ಹಂತ 1: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್ ಮೆಸೆಂಜರ್ ತೆರೆಯಿರಿ.

ಹಂತ 2: ನೀವು GIF ಗಳನ್ನು ಕಳುಹಿಸಲು ಬಯಸುವ ಸಂಪರ್ಕ ಅಥವಾ ಗುಂಪು ವಿಂಡೋವನ್ನು ಆಯ್ಕೆಮಾಡಿ ಮತ್ತು ತೆರೆಯಿರಿ.

ಚಾಟ್ ಬಾಕ್ಸ್

ಹಂತ 3: ಚಾಟ್ ಬಾಕ್ಸ್‌ನಲ್ಲಿರುವ ಲಗತ್ತು ಐಕಾನ್ ಕ್ಲಿಕ್ ಮಾಡಿ.

ಹಂತ 4: ನೀವು GIF ಮಾಡಲು ಬಯಸುವ ನಿಮ್ಮ ಫೋನ್ ಗ್ಯಾಲರಿಯಿಂದ ವೀಡಿಯೊವನ್ನು ಆರಿಸಿ.

ವೀಡಿಯೊವನ್ನು ಟ್ರಿಮ್ಮಿಂಗ್

ಹಂತ 5: ವಾಟ್ಸಾಪ್ ನಿಮಗೆ ವೀಡಿಯೊದ ಪೂರ್ವವೀಕ್ಷಣೆಯನ್ನು ತೋರಿಸುತ್ತದೆ. ನಿರ್ದಿಷ್ಟ ವೀಡಿಯೊವನ್ನು ಟ್ರಿಮ್ಮಿಂಗ್ ಅಥವಾ ಕ್ಲಿಪಿಂಗ್ ಮಾಡುವ ಆಯ್ಕೆಯನ್ನು ಸಹ ಬಳಕೆದಾರರು ಹೊಂದಿದ್ದಾರೆ.

ಹಂತ 6: GIF ಬಾಕ್ಸ್ ಟ್ಯಾಪ್ ಮಾಡಿ ಮತ್ತು ವಾಟ್ಸಾಪ್ ಸ್ವಯಂಚಾಲಿತವಾಗಿ ವೀಡಿಯೊವನ್ನು GIF ಆಗಿ ಪರಿವರ್ತಿಸುತ್ತದೆ.

ಹೆಡ್‌ಲೈನ್‌ ಮತ್ತು ಎಮೋಜಿ

ಹಂತ 7: ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ನೀವು ವೀಡಿಯೊದ ಗಾತ್ರವನ್ನು ಕಡಿಮೆ ಮಾಡಬಹುದು.

ಹಂತ 8: ನಿಮ್ಮ ಸಂಪರ್ಕಗಳಿಗೆ ಕಳುಹಿಸುವ ಮೊದಲು ನೀವು ಟೆಕ್ಸ್ಟ್, ಹೆಡ್‌ಲೈನ್‌ ಮತ್ತು ಎಮೋಜಿಗಳನ್ನು ಸಹ GIF ಗೆ ಸೇರಿಸಬಹುದು.

ಹಂತ 9: ನಂತರ GIF ಫೈಲ್ ಸೆಂಡ್ ಮಾಡಬಹುದು.

Most Read Articles
Best Mobiles in India

English summary
GIFs are more expressive than usual photos and texts that we exchange with our contacts on WhatsApp.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X