ಇಂಟರ್ನೆಟ್ ಬಳಕೆಯ ಪ್ರಮಾಣವನ್ನು ಕುಗ್ಗಿಸುವುದು ಹೇಗೆ?

Written By:

ನೀವು ರಜಾದಿನಗಳನ್ನು ಕಳೆಯುತ್ತಿದ್ದೀರಿ ಎಂದಾದಲ್ಲಿ ನಿಮ್ಮ ಫೋನ್‌ನ ಡೇಟಾವನ್ನು ನೀವು ನಷ್ಟಗೊಳ್ಳುವುದು ಖಂಡಿತ. ಅದರಲ್ಲೂ ನೀವು ಆಂಡ್ರಾಯ್ಡ್ ಆಧಾರಿತ ಫೋನ್ ಅನ್ನು ಹೊಂದಿದ್ದೀರಿ ಎಂದಾದಲ್ಲಿ ಡೇಟಾ ವಿನಿಯೋಗ ಹೆಚ್ಚಾಗಿರುತ್ತದೆ.

ಇದನ್ನೂ ಓದಿ: ಸಿಲಿಕಾನ್ ಕಣಿವೆಯಲ್ಲಿನ ಟೆಕ್ ಕಂಪನಿಗಳ ವಿಹಂಗಮ ನೋಟ

ಇನ್ನು ಹೆಚ್ಚು ಜನಪ್ರಿಯಗೊಳ್ಳುತ್ತಿರುವ 3ಜಿ ಮತ್ತು ಅನಿಯಮಿತ ಮೊಬೈಲ್ ಕೊಡುಗೆಗಳು ಅಂತರ್ಜಾಲದ ಮಹತ್ವವನ್ನು ಫೋನ್ ಬಳಕೆದಾರರಲ್ಲಿ ಹೆಚ್ಚಿಸುತ್ತಿದ್ದು ಫೋನ್‌ನಲ್ಲಿ ಇಂಟರ್ನೆಟ್ ಸಂಪರ್ಕವನ್ನು ಬಳಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇನ್ನು ನೀವು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಪ್ರಾರಂಭಿಸಿದಂತೆ ಫೋನ್‌ನಲ್ಲಿ ಡೇಟಾ ಬಳಕೆ ಹೆಚ್ಚಾಗುತ್ತದೆ ಇದರಿಂದ ಖರ್ಚೂ ಅಧಿಕವಾಗುತ್ತದೆ. ಹಾಗಿದ್ದರೆ ಈ ಖರ್ಚಿಗೆ ಕಡಿವಾಣ ಹಾಕುವುದು ಹೇಗೆ ಮತ್ತು ಡೇಟಾವನ್ನು ಮಿತಿಯಲ್ಲಿ ಬಳಸುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಉಚಿತ ವೈಫೈ ಬಳಕೆ

ಉಚಿತ ವೈಫೈ ಬಳಕೆ

ಇಂಟರ್ನೆಟ್ ಬಳಕೆಯ ಪ್ರಮಾಣವನ್ನು ಕುಗ್ಗಿಸುವುದು ಹೇಗೆ?

ಲಭ್ಯವಿರುವ ಪ್ರದೇಶದಲ್ಲಿ ಉಚಿತ ವೈಫೈಯನ್ನು ಬಳಸುವ ಮೂಲಕ ಫೋನ್ ಅಂತರ್ಜಾಲ ಬಳಕೆಯನ್ನು ಮಿತಿಗೊಳಿಸಬಹುದು. ಕೆಲವೊಂದು ಪ್ರದೇಶಗಳು ಈ ಲಭ್ಯತೆಯನ್ನು ಒಳಗೊಂಡಿದೆ.

ಯೂಟ್ಯೂಬ್ ಅಪ್‌ಲೋಡ್ ಬೇಡ

ಯೂಟ್ಯೂಬ್ ಅಪ್‌ಲೋಡ್ ಬೇಡ

ಇಂಟರ್ನೆಟ್ ಬಳಕೆಯ ಪ್ರಮಾಣವನ್ನು ಕುಗ್ಗಿಸುವುದು ಹೇಗೆ?

ಯೂಟ್ಯೂಬ್‌ನಲ್ಲಿ ವೀಡಿಯೊಗಳನ್ನು ಅಪ್‌ಲೋಡ್ ಮಾಡುವುದೂ ಕೂಡ ಡೇಟಾವನ್ನು ನುಂಗಿಹಾಕುತ್ತದೆ. ನಿಮ್ಮ ವೈರ್‌ಲೆಸ್ ಸಂಪರ್ಕದ ಮಿತಿಯಲ್ಲೇ ಯೂಟ್ಯೂಬ್ ವೀಡಿಯೊಗಳನ್ನು ಅಪ್‌ಲೋಡ್ ಮಾಡಿ

ಮ್ಯೂಸಿಕ್ ಸ್ಟ್ರೀಮಿಂಗ್ ಬಳಕೆ ಕಡಿಮೆಮಾಡಿ

ಮ್ಯೂಸಿಕ್ ಸ್ಟ್ರೀಮಿಂಗ್ ಬಳಕೆ ಕಡಿಮೆಮಾಡಿ

ಇಂಟರ್ನೆಟ್ ಬಳಕೆಯ ಪ್ರಮಾಣವನ್ನು ಕುಗ್ಗಿಸುವುದು ಹೇಗೆ?

ಪ್ರಯಾಣದಲ್ಲಿರುವಾಗ ಹಾಡು ಆಸ್ವಾದಿಸುವುದು ಸರ್ವೇ ಸಾಮಾನ್ಯ. ಆ ಸಮಯದಲ್ಲಿ ನೀವು ಹಾಡನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳುತ್ತೀರಿ. ಈ ರೀತಿಯ ಡೌನ್‌ಲೋಡ್‌ಗಳ ಮೇಲೆ ಹಿಡಿತವನ್ನು ಸಾಧಿಸಿ.

ವೀಡಿಯೊ ಚಾಟ್ಸ್ ಬೇಡ

ವೀಡಿಯೊ ಚಾಟ್ಸ್ ಬೇಡ

ಇಂಟರ್ನೆಟ್ ಬಳಕೆಯ ಪ್ರಮಾಣವನ್ನು ಕುಗ್ಗಿಸುವುದು ಹೇಗೆ?

ಆದಷ್ಟು ವೀಡಿಯೊ ಚಾಟ್‌ಗಳ ಬಳಕೆಯನ್ನು ಕಡಿಮೆ ಮಾಡಿ ಇದರಿಂದ ಬಳಕೆಯಾಗುವ ಅಂತರ್ಜಾಲ ಪ್ರಮಾಣ ಕೂಡ ಕಡಿಮೆಯಾಗುತ್ತದೆ.

ಆನ್‌ಲೈನ್ ಗೇಮಿಂಗ್ ಕಡಿಮೆ ಮಾಡಿ

ಆನ್‌ಲೈನ್ ಗೇಮಿಂಗ್ ಕಡಿಮೆ ಮಾಡಿ

ಇಂಟರ್ನೆಟ್ ಬಳಕೆಯ ಪ್ರಮಾಣವನ್ನು ಕುಗ್ಗಿಸುವುದು ಹೇಗೆ?

ಆನ್‌ಲೈನ್‌ ಗೇಮಿಂಗ್‌ಗಳನ್ನು ಆಡುವುದು ಫೋನ್‌ನ ಅಂತರ್ಜಾಲ ಮಟ್ಟವನ್ನು ಕುಗ್ಗಿಸುತ್ತದೆ.

ಹಿನ್ನಲೆಯಲ್ಲಿರುವ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸುವುದು

ಹಿನ್ನಲೆಯಲ್ಲಿರುವ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸುವುದು

ಇಂಟರ್ನೆಟ್ ಬಳಕೆಯ ಪ್ರಮಾಣವನ್ನು ಕುಗ್ಗಿಸುವುದು ಹೇಗೆ?

ಕೆಲವೊಂದು ಅಂತರ್ಜಾಲ ಮಟ್ಟವನ್ನು ಕುಗ್ಗಿಸುವ ಅಪ್ಲಿಕೇಶನ್‌ಗಳು ನಿಮಗೂ ತಿಳಿಯದೇ ಫೋನ್‌ನಲ್ಲಿ ಚಾಲನೆಯಾಗುತ್ತಿರುತ್ತದೆ. ಇಂತಹ ಅಪ್ಲಿಕೇಶನ್‌ಗಳ ಮೇಲೆ ಕಡಿವಾಣ ಹಾಕಿ.

ಹಸ್ತಚಾಲಿತವಾಗಿ ಡೇಟಾ ನಿಷ್ಕ್ರಿಯಗೊಳಿಸಿ

ಹಸ್ತಚಾಲಿತವಾಗಿ ಡೇಟಾ ನಿಷ್ಕ್ರಿಯಗೊಳಿಸಿ

ಇಂಟರ್ನೆಟ್ ಬಳಕೆಯ ಪ್ರಮಾಣವನ್ನು ಕುಗ್ಗಿಸುವುದು ಹೇಗೆ?

ನಿಮಗೆ ಬೇಡದೇ ಇದ್ದ ಸಂದರ್ಭದಲ್ಲಿ ಡೇಟಾವನ್ನು ಆಫ್ ಮಾಡಿ ಇರಿಸಿ. ಸೆಟ್ಟಿಂಗ್ಸ್> ವೈರ್‌ಲೆಸ್ ಮತ್ತು ನೆಟ್‌ವರ್ಕ್ಸ್>ಮೋರ್>ಮೊಬೈಲ್ ನೆಟ್‌ವರ್ಕ್ಸ್>ಡೇಟಾ ಕನೆಕ್ಷನ್ ಇಲ್ಲಿಗೆ ಹೋಗಿ ಡೇಟಾ ಆಫ್ ಮಾಡಿ.

ಡೇಟಾ ಮಾನಿಟರ್ ಬಳಸಿ

ಡೇಟಾ ಮಾನಿಟರ್ ಬಳಸಿ

ಇಂಟರ್ನೆಟ್ ಬಳಕೆಯ ಪ್ರಮಾಣವನ್ನು ಕುಗ್ಗಿಸುವುದು ಹೇಗೆ?

ಆಂಡ್ರಾಯ್ಡ್ ಮೊಬೈಲ್ ಓಎಸ್ ಬಿಲ್ಟ್ ಇನ್ ಡೇಟಾ ಮಾನಿಟರ್ ಅನ್ನು ಹೊಂದಿದೆ. ಸೆಟ್ಟಿಂಗ್ಸ್> ವೈರ್‌ಲೆಸ್ ಮತ್ತು ನೆಟ್‌ವರ್ಕ್ಸ್>ಡೇಟಾ ಯೂಸೇಜ್ ಇದು ನಿಮಗೆ ಡೇಟಾ ಬಳಕೆಯ ಮಿತಿಯನ್ನು ತೋರಿಸುತ್ತದೆ.

ನಿಮಗೆ ಎಷ್ಟು ಡೇಟಾ ಬೇಕು ಎಂಬುದನ್ನು ಮನಗಾಣಿ

ನಿಮಗೆ ಎಷ್ಟು ಡೇಟಾ ಬೇಕು ಎಂಬುದನ್ನು ಮನಗಾಣಿ

ಇಂಟರ್ನೆಟ್ ಬಳಕೆಯ ಪ್ರಮಾಣವನ್ನು ಕುಗ್ಗಿಸುವುದು ಹೇಗೆ?

ಒಂದು ತಿಂಗಳಿಗೆ ನೀವು ಎಷ್ಟು ಡೇಟಾವನ್ನು ಖರ್ಚು ಮಾಡುತ್ತೀರಿ ಎಂಬುದನ್ನು ನಿರ್ಧರಿಸಿ. ನೀವು ಒಂದು ತಿಂಗಳು ನಿಮ್ಮೆಲ್ಲಾ ಡೇಟಾವನ್ನು ಬಳಸುತ್ತಿಲ್ಲ ಎಂದಾದಲ್ಲಿ ಕಡಿಮೆ ಯೋಜನೆಯನ್ನು ನಿಮ್ಮದಾಗಿಸಿಕೊಳ್ಳಿ.

ಆಫ್‌ಲೈನ್ ಮ್ಯಾಪ್ಸ್ ಬಳಸಿ

ಆಫ್‌ಲೈನ್ ಮ್ಯಾಪ್ಸ್ ಬಳಸಿ

ಇಂಟರ್ನೆಟ್ ಬಳಕೆಯ ಪ್ರಮಾಣವನ್ನು ಕುಗ್ಗಿಸುವುದು ಹೇಗೆ?

ಮ್ಯಾಪ್‌ಗಳನ್ನು ಆನ್‌ಲೈನ್‌ನಲ್ಲಿ ಪ್ರವೇಶಿಸುವುದು ಹೆಚ್ಚುವರಿ ಇಂಟರ್ನೆಟ್ ಸಂಪರ್ಕವನ್ನು ನುಂಗಿ ಹಾಕುತ್ತದೆ. ಆಂಡ್ರಾಯ್ಡ್ ಆಧಾರಿತ ಫೋನ್‌ಗಳಲ್ಲಿ ಮ್ಯಾಪ್‌ಗಳನ್ನು ಆಫ್‌ಲೈನ್‌ನಲ್ಲಿದ್ದಾಗ ಕೂಡ ಪ್ರವೇಶಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about How To Cut Down Data Usage on Your Smartphone: 10 Simple Ways.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot